Download as doc, pdf, or txt
Download as doc, pdf, or txt
You are on page 1of 3

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ:- ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯ ವಹಾರಗಳ ಇಲಾಖೆಯ 14 ಉಪ


ನಿರ್ದೇಶಕರ ಹುದ್ದೆಗಳನ್ನು ಜಂಟಿ ನಿರ್ದೇಶಕರ ಹುದ್ದೆಗೆ ಉನ್ನ ತೀಕರಿಸುವ ಬಗ್ಗೆ ಆದೇಶ.

ಓದಲಾಗಿದೆ:-1) ಸರ್ಕಾರದ ಅಧಿಸೂಚನೆ ಸಂಖ್ಯೆ ಆನಾಸ 153 ಇಎಫ್ ಟಿ 2009: ದಿನಾಂಕ :


10.08.2012
2) ಆಯುಕ್ತರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯ ವಹಾರಗಳ
ಇಲಾಖೆ, ಇವರ ಪತ್ರ ಸಂಖ್ಯೆ:ಸಿಎಫ್ ಎಸ್/ ಇಎದಗ(1)/38/2013-14; ದಿನಾಂಕ
18.05.2015, ಮತ್ತು 03.09.2015.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ:(1) ರ ದಿನಾಂಕ 10/08/2012 ರ ಸರ್ಕಾರದ ಅಧಿಸೂಚನೆಯನ್ವ ಯ


ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯ ವಹಾರಗಳ ಇಲಾಖೆಯ ವೃಂದ ಮತ್ತು ನೇಮಕಾತಿ
ನಿಯಮಾವಳಿಗಳು ಜಾರಿಯಾಗಿದ್ದು , ಇಲಾಖೆಯಲ್ಲಿ 42 ಉಪ ನಿರ್ದೇಶಕರ ಹುದ್ದೆಗಳು
ಮಂಜೂರಾಗಿರುತ್ತದೆ. ಕಳೆದ 1997 ರಿಂದ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ
ಅಧಿಕಾರಿಗಳು ಯಾವುದೇ ಮುಂಬಡ್ತಿ ಇಲ್ಲ ದೆ ಒಂದೇ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು , ಈ ಪೈಕಿ
ಇಲಾಖೆಯಲ್ಲಿರುವ ಒಂದು ಜಂಟಿ ನಿರ್ದೇಶಕರ ಹುದ್ದೆಗೆ ಒಬ್ಬ ಉಪ ನಿರ್ದೇಶಕರು ಮಾತ್ರ ಮುಂಬಡ್ತಿ
ಹೊಂದಿರುತ್ತಾರೆ. ಇಲಾಖೆಯ ಕೆಲಸ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ
ದೃಷ್ಟಿಯಿಂದ; ಸಾರ್ವಜನಿಕ ವಿತರಣಾ ಪದ್ದ ತಿಯನ್ನು ಇನ್ನ ಷ್ಟು ಚುರುಕುಗೊಳಿಸುವ ದೃಷ್ಟಿಯಿಂದ; ಅವಶ್ಯ
ವಸ್ತು ಗಳ ಕಾಯ್ದೆ ಮತ್ತು ಇನ್ನಿತರೆ ಕಾಯ್ದೆಗಳನ್ನು ಹೆಚ್ಚು ಜವಾಬ್ದಾರಿಯುತವಾಗಿ ಜಾರಿಗೆ ತರುವ ದೃಷ್ಟಿಯಿಂದ
ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ “ಅನ್ನ ಭಾಗ್ಯ ” ಯೋಜನೆಯ ಯಶಸ್ವಿ
ಅನುಷ್ಠಾನದ ದೃಷ್ಟಿಯಿಂದ, ರಾಜ್ಯ ದಲ್ಲಿನ ಮಹಾನಗರ ಪಾಲಿಕೆಗಳು ಇರುವ 11 ಜಿಲ್ಲೆಗಳ 11 ಉಪ
ನಿರ್ದೇಶಕರ ಹುದ್ದೆಗಳನ್ನು ಹಾಗೂ ಕೇಂದ್ರ ಕಛೇರಿಯ 03 ಉಪ ನಿರ್ದೇಶಕರ ಹುದ್ದೆಗಳನ್ನು ಹೀಗೆ ಒಟ್ಟು 14
ಉಪ ನಿರ್ದೇಶಕರ ಹುದ್ದೆಗಳನ್ನು ವೇತನ ಶ್ರೇಣಿ ರೂ. 40,050-56,550 ರಲ್ಲಿ ಜಂಟಿ ನಿರ್ದೇಶಕರ
ಹುದ್ದೆಗಳನ್ನಾಗಿ ಉನ್ನ ತಿಕರಿಸುವಂತೆ ಈ ರೀತಿ 14 ಉಪ ನಿರ್ದೇಶಕರ್ ಹುದ್ದೆಗಳನ್ನು ಜಂಟಿ ನಿರ್ದೇಶಕರ
ಹುದ್ದೆಗೆ ಉನ್ನ ತಿಕರಿಸಿದಲ್ಲಿ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ ವೆಂದು ತಿಳಿಸಿ 14 ಉಪ
ನಿರ್ದೇಶಕರ ಹುದ್ದೆಗಳನ್ನು ಜಂಟಿ ನಿರ್ದೇಶಕರ ಹುದ್ದೆಗಳನ್ನಾಗಿ ಉನ್ನ ತೀಕರಿಸುವಂತೆ ಕೋರಿ ಮೇಲೆ
ಓದಲಾದ ಕ್ರಮ ಸಂಖ್ಯೆ:(2) ರಲ್ಲಿನ ದಿನಾಂಕ:18.05.2015 ಮತ್ತು 03.09.2015 ರ ಪತ್ರಗಳಲ್ಲಿ ಆಯುಕ್ತರು
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯ ವಹಾರಗಳ ಇಲಾಖೆ, ಇವರು ಪ್ರಸ್ತಾವನೆ ಸಲ್ಲಿಸಿದ್ದಾರೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯ ವಹಾರಗಳ ಇಲಾಖೆಯಲ್ಲಿ ಪ್ರಸ್ತು ತ ಒಂದು
ಜಂಟಿ ನಿರ್ದೇಶಕರ ಹುದ್ದೆ ಮಾತ್ರ ಇದ್ದು , 1997 ರಿಂದ ಉಪ ನಿರ್ದೇಶಕರ ಹುದ್ದೆಯಲ್ಲಿ ಕೆಲಸ
ನಿರ್ವಹಿಸುತ್ತಿರುವ ಅಧಿಕಾರಿಗಳು ಯಾವುದೇ ಮುಂಬಡ್ತಿ ಇಲ್ಲ ದೆ ಒಂದೇ ಹುದ್ದೆಯಲ್ಲಿ ಕರ್ತವ್ಯ
ನಿರ್ವಹಿಸುತ್ತಿರುವುದನ್ನು ಹಾಗೂ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ ವೆಂಬುದನ್ನು
ಗಮನದಲ್ಲಿರಿಸಿಕೊಂದು ಸದರಿ ಇಲಾಖೆಯ ಕಾರ್ಯವ್ಯಾಪ್ತಿ ಮತ್ತು ಜವಾಬ್ದಾರಿಯಲ್ಲಿ ಸಮಗ್ರ ಬದಲಾವಣೆ
ಆಗಿರುವುದರಿಂದ ಹಾಗೂ ಆಡಳಿತಾತ್ಮ ಕ ದೃಷ್ಟಿಯಿಂದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ
ವ್ಯ ವಹಾರಗಳ ಇಲಾಖೆಯಲ್ಲಿನ ಮಂಜೂರಾದ 14 ಉಪ ನಿರ್ದೇಶಕರ ಹುದ್ದೆಗಳನ್ನು ಜಂಟಿ ನಿರ್ದೇಶಕರ
ಹುದ್ದೆಗೆ ಉನ್ನ ತೀಕರಿಸಲು ಸರ್ಕಾರವು ಕೂಲಂಕುಷವಾಗಿ ಪರಿಶೀಲಿಸಿ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ ಆನಾಸ 309 ಆಇಸೇ 2014, ಬೆಂಗಳೂರು ದಿನಾಂಕ:17.10.2015

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು


ಗ್ರಾಹಕರ ವ್ಯ ವಹಾರಗಳ ಇಲಾಖೆಯಲ್ಲಿನ ಮಂಜೂರಾದ ಈ ಕೆಳಕಂಡ 14 ಉಪ ನಿರ್ದೇಶಕರ ಹುದ್ದೆಗಳನ್ನು
ಆಡಳಿತಾತ್ಮ ಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ವೇತನ ಶ್ರೇಣಿ ರೂ.40,050-56,550 ಹೊಂದುವ
ಜಂಟಿ ನಿರ್ದೇಶಕರ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ
ಉನ್ನ ತೀಕರಿಸಲಾಗಿದೆ.

1. ಬೆಳಗಾವಿ ಜಿಲ್ಲೆಯ ಉಪ ನಿರ್ದೇಷಕರ ಹುದ್ದೆ


2. ಮೈಸೂರು ಜಿಲ್ಲೆಯ ಉಪ ನಿರ್ದೇಷಕರ ಹುದ್ದೆ
3. ಕಲಬುರ್ಗಿ ಜಿಲ್ಲೆಯ ಉಪ ನಿರ್ದೇಷಕರ ಹುದ್ದೆ
4. ದಾವಣಗೆರೆ ಜಿಲ್ಲೆಯ ಉಪ ನಿರ್ದೇಷಕರ ಹುದ್ದೆ
5. ಬಳ್ಳಾರಿ ಜಿಲ್ಲೆಯ ಉಪ ನಿರ್ದೇಷಕರ ಹುದ್ದೆ
6. ಧಾರವಾಡ ಜಿಲ್ಲೆಯ ಉಪ ನಿರ್ದೇಷಕರ ಹುದ್ದೆ
7 ದಕ್ಷಿಣ ಕನ್ನ ಡ ಜಿಲ್ಲೆಯ ಉಪ ನಿರ್ದೇಷಕರ ಹುದ್ದೆ
8. ತುಮಕೂರು ಜಿಲ್ಲೆಯ ಉಪ ನಿರ್ದೇಷಕರ ಹುದ್ದೆ
9. ಶಿವಮೊಗ್ಗ ಜಿಲ್ಲೆಯ ಉಪ ನಿರ್ದೇಷಕರ ಹುದ್ದೆ
10. ವಿಜಯಪುರ ಜಿಲ್ಲೆಯ ಉಪ ನಿರ್ದೇಷಕರ ಹುದ್ದೆ
11. ಬೆಂಗಳೂರು ನಗರ ಜಿಲ್ಲೆಯ ಉಪ ನಿರ್ದೇಷಕರ ಹುದ್ದೆ
12. ಬೆಂಗಳೂರು ಕೇಂದ್ರ ಕಛೇರಿಯಲ್ಲಿರುವ ಉಪ ನಿರ್ದೇಷಕರ (ಸಂ.ವಿ) ಹುದ್ದೆ
13. ಬೆಂಗಳೂರು ಕೇಂದ್ರ ಕಛೇರಿಯಲ್ಲಿರುವ ಉಪ ನಿರ್ದೇಷಕರ (ನಾಸ ಮತ್ತು ಗ್ರಾವ್ಯ ) ಹುದ್ದೆ
14. ಬೆಂಗಳೂರು ಕೇಂದ್ರ ಕಛೇರಿಯಲ್ಲಿರುವ ಉಪ ನಿರ್ದೇಷಕರ (ಮಾಹಿತಿ ತಂತ್ರಜ್ಞಾನ) ಹುದ್ದೆ
ಈ ಆದೇಶವನ್ನು ಆರ್ಥಿಕ ಇಲಾಖೆಯು ಟಿಪ್ಪ ಣಿ ಸಂಖ್ಯೆ: ಆಇ 631 ವೆಚ್ಚ – 5/2015
ದಿನಾಂಕ:05.08.2015 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯ ಪಾಲರ


ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ
ಸಹಿ/-
(ಎಸ್.ಎನ್.ಕೃಷ್ಣ ಮೂರ್ತಿ)
ಸರ್ಕಾರದ ಉಪ ಕಾರ್ಯದರ್ಶಿ,
ಆಹಾರ, ನಾಗರಿಕ ಸರಬರಾಜು
ಮತ್ತು ಗ್ರಾಹಕರ ವ್ಯ ವಹಾರಗಳ
ಇಲಾಖೆ.
ಇವರಿಗೆ:-
xxx xxx xxx xxx xxx
xxx xxx xxx xxx xxx
xxx xxx xxx xxx xxx
xxx xxx xxx xxx xxx

You might also like