JLMS 29 Aug

You might also like

Download as docx, pdf, or txt
Download as docx, pdf, or txt
You are on page 1of 7

ಜಯಾ ಶಂಕರ ಭಾವಗೋಚರ

ಶಿವಚಿದಂಬರ ಓಂಕಾರ.

ಶಿವ-ಅನಾಹತ, ಆಹತ ಓಂಕಾರ.(ಶಬ್ದವೇ ಘನೀಕೃತಗೊಂಡು ವಸ್ತುವಾಗಿದೆ. ನಾದ->ಬಿಂದು) sound-High vibration,


Matter-Low Vibrations)
ಶಂಕರ-ಭಾವಗೋಚರ
ರೂಪ-ಕಲ್ಪನೆ
ಸ್ವರೂಪ-ಸತ್ಯ, ಕಲ್ಪನೆಯಲ್ಲ (ಗುಹೇಶ್ವರ ಲಿಂಗ ಕಲ್ಪಿತವಲ್ಲ ನಿಲ್ಲಿರೊ)

ಭಾಜನ : ಆಶ್ರಯಸ್ಥಾನ, ಗುರಿ, ಊಟದ ತಟ್ಟೆ, ಪಾತ್ರೆ, ಗಂಗಾಳ

ಪರಿಯಾಣ : ಉಂಬ ಬಟ್ಟಲು, ಹರಿವಾಣ, ತಟ್ಟೆ, ತಳಿಗೆ, ಪಾತ್ರೆ, ಅಗಲವಾದ ಮಣ್ಣಿನ ಪಾತ್ರೆ
ಬೀಸರ : ವ್ಯರ್ಥ, ನಾಶ, ಅಳಿವು, ಕೇಡು

ಪರಿಯಾಣವೆ ಭಾಜನವೆಂಬರು; ಪರಿಯಾಣ ಭಾಜನವಲ್ಲ,


ಲಿಂಗಕ್ಕೆ ತನ್ನ ಮನವೆ ಭಾಜನ.
ಪ್ರಾಣವನು ಬೀಸರವೋಗಲೀಯದೆ ಮೀಸಲಾಗರ್ಪಿಸಬಲ್ಲಡೆ
ಕೂಡಿಕೊಂಡಿಪ್ಪ, ನಮ್ಮ ಕೂಡಲಸಂಗಮದೇವ.

ಮನ ಉಂಟೆ ಮರುಳೆ ಶಿವಯೋಗಿಗೆ ?


ಮತ್ತೊಂದು ಮನಮಗ್ನ ಉಂಟೆ ಶಿವಯೋಗಿಗೆ ?
ಇಲ್ಲದ ಮನವ ಉಂಟೆಂದು ನುಡಿದು, ಅಡಗಿಸಿದೆನೆಂಬ ಮಾತು
ಮನವ ನೆಲೆಮಾಡಿ ತೋರುತ್ತದೆ.
ಗುಹೇಶ್ವರನ ಅರಿದ ಶರಣಂಗೆ
ತೋರಲಿಲ್ಲ ಅಡಗಲಿಲ್ಲ ಕೇಳಾ.

ಜಾಗತಿಕ ಅನುಭಾವ ಮಂಟಪದಲ್ಲಿ ವಚನಾನುಭಾವದ ಕಾನ್ಫರೆನ್ಸ್ ಕಾಲ್ ನಲ್ಲಿ ಭಾಗಿಯಾಗಿರುವ ಎಲ್ಲ ಶರಣರಿಗೆ
ಶರಣಾರ್ಥಿಗಳು.

ಜಾಗತಿಕ ಅನುಭಾವ ಮಂಟಪದಲ್ಲಿ ದಿನಾಂಕ 29-08-2020, ಶನಿವಾರ 5 PM ರಿಂದ 6 PM ರ ವರೆಗೆ


ಜರುಗುವ ವಚನಾನುಭಾವದಲ್ಲಿ ಇಂಟರ್ನೆಟ್/ವೈಫೈ ಮೂಲಕ ಭಾಗವಹಿಸಲು ಕೆಳಗಿನ ಲಿಂಕ್ ನ್ನು ಒತ್ತಿರಿ.

https://join.freeconferencecall.com/shivasharana

ಡೈಯಲ್ ಮಾಡುವದರ ಮೂಲಕ ಕಾನ್ಫರೆನ್ಸ್ ಕಾಲ್ ನಲ್ಲಿ ಭಾಗವಹಿಸಲು:

ಶುಲ್ಕ ರಹಿತ ದೂರವಾಣಿ ಸಂಖ್ಯ: 0172 510 0945


ಮೀಟಿಂಗ ಅಕ್ಸೆಸ್ ಕೋಡ್: 119500#

Free Conference Call App install ಮಾಡಲು ಈ ಕೆಳಗಿನ ಲಿಂಕ್ ಒತ್ತಿ.

https://play.google.com/store/apps/details?id=com.freeconferencecall.fccmeetingclient

ಈ ವಾರದಂಚಿನ ವಿಷಯ: *ಗುರುಕರುಣಸ್ಥಲ*.

*ಅನುಭಾವಿಕ ಶಬ್ದಗಳು* : ತೋರಬಲ್ಲ ಗುರು, ಗುರುಪಥ, ಶರಣರ ಸಂಗ, ಗುರು ವಿಖ್ಯಾತ, ಗುರು, ಶಿಷ್ಯ ಸಂಬಂಧ,

ಎತ್ತಣಿಂದೆತ್ತ ಸಂಬಂಧ, ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ, ಹಿಂದಣ ಹಿಂದನು, ಮುಂದಣ ಮುಂದನು,
ಶ್ರೀಗುರುವಿನ ಚರಣ, ಶ್ರೀಗುರುರೂಪ-ಬಸವಣ್ಣ, ಶರಣಭರಿತ ಲಿಂಗವೆನಿಸಿದ ಬಸವಣ್ಣ, ಶ್ರೀಗುರುಕಾರುಣ್ಯ ಕಟಾಕ್ಷ,
ಗುರುಕರುಣ,

ಇದುವರೆಗೆ ನಾವು ಪಿಂಡಸ್ಥಲ ಮತ್ತು ಪಿಂಡಜ್ಞಾನ ಮತ್ತು ಮಾಯಾವಿಲಾಸ ವಿಡಂಬನಸ್ಥಲ, ಸಂಸಾರಹೇಯಸ್ಥಲದ


ವಚನಗಳನ್ನು ನೋಡಿದೆವು. ಇನ್ನು ಮುಂದೆ ಗುರುಕರುಣಸ್ಥಲದ ವಚನಗಳನ್ನು ನೋಡೋಣ.

*ಗುರುಕರುಣಸ್ಥಲ ವೆಂದರೇನು?.*
ಎಲ್ಲ ಕಷ್ಟಗಳಿಗೆ ಕಾರಣವಾದುದು ಭ್ರಮಾ, ಮಾಯೆ. ಅದು ಹೇಯ. ಅದನ್ನು ನಿವಾರಿಸಿ ತನ್ನ ನಿಜದ ಅರಿವಿನಲ್ಲಿ ನಿಲ್ಲಬೇಕೆಂಬ
ಜೀವಾತ್ಮನು ಗುರುವನ್ನು ಸಾರಿ ಆತನ ಕರುಣೆಯನ್ನು ಬಯಸುತ್ತಾನೆ. ಅದು ಗುರುಕರುಣಸ್ಥಲ.
ಆ ಗುರುವಿನ ಕರುಣೆ ಎರಡು ರೂಪದಲ್ಲಿ. ಒಂದು ಆತ್ಮ ಬೋಧ, ಎರಡು, ಶಿವಯೋಗ ಸಾಧನೆಗಾಗಿ ಇಷ್ಟಲಿಂಗ. ಅವುಗಳಲ್ಲಿ
ಆತ ತನ್ನ ನಿಜವ ನೋಡಿ ಸಂಸಾರ (ಭ್ರಮೆ) ವನ್ನು ಹೇಯಗೊಳಿಸಬೇಕು. ಅದಕ್ಕಾಗಿಯೇ ಮುಂದಿನ ಷಟಸ್ಥಲ ಮಾರ್ಗ.
ಇಲ್ಲಿಯವರೆಗಿರುವ ಐದು ಸ್ಥಲಗಳು ಷಟ್ ಸ್ಥಲಕ್ಕೆ ಪೀಠಿಕಾಸ್ಥಲಗಳಂತಿವೆ.

*ಸೂತ್ರ*: ಸಂಸಾರವೆಂಬ ದುಸ್ಸಾರವ ಬೇರ್ಪಡಿಸಿ, ತನ್ನ ನಿಜವನೋಡಿಹೆನೆಂದಡೆ, ಇದಿರಿಟ್ಟಲ್ಲದೆ ತನ್ನ ಕಾಣಬಾರದಾಗಿ.


ಅದೆಂತೆಂದಡೆ: ತನ್ನ ಮುಖವ ತಾನೆ ನೋಡಿಹೆನೆಂಬವನು ಇದಿರೆ ಕನ್ನಡಿಯನುಂಟುಮಾಡಿಕೊಂಡು ನೋಡುವವನಂತೆ; ತನ್ನ
ಇದಿರೆ ಗುರುವನುಂಟುಮಾಡಿಕೊಂಡು, ಉಪಾಸ್ತಿಯ ಮಾಡಲು ಮುಂದೆ ಗುರುಕರುಣಸ್ಥಲವಾದುದು.
ಗುರುಕರುಣಸ್ಥಲ

*ನಿರ್ವಚಿಸಲ್ಪಡುವ ವಚನಗಳು:*

ಅರಿವೇ ಗುರುವಾದ ದೇವನ ಇರವು ಆತ್ಮಬೋಧ.

1. ಕಲ್ಲೊಳಗೆ ಹೊನ್ನುಂಟು, ಮರದೊಳಗೆ ಅಗ್ನಿಯುಂಟು,


ಹಾಲೊಳಗೆ ತುಪ್ಪವುಂಟು,
ಅಂತರ್ಯಾಮಿಯಲ್ಲಿ ಶಿವನಿಹನು.
ಇದೇನು ಕಾರಣ ಕತ್ತಲೆ ಕಾಣಬಾರದು,
ತೋರಬಲ್ಲ ಗುರು ಸುಳಿಯನು, ಕೂಡಲಸಂಗಮದೇವಾ

ಅಂತರ್ಯಾಮಿಯಾಗಿ ಶಿವ

ಗುರುವಿನ ಕರುಣೆ. ಶರಣರ ಸಂಗ.

2. ಮಡಕೆಯ ಮಾಡುವಡೆ ಮಣ್ಣೆ ಮೊದಲು,


ತೊಡಿಗೆಯ ಮಾಡುವಡೆ ಹೊನ್ನೆ ಮೊದಲು,
ಶಿವಪಥವನರಿವಡೆ ಗುರುಪಥವೆ ಮೊದಲು,
ಕೂಡಲಸಂಗಮದೇವರನರಿವಡೆ
ಶರಣರ ಸಂಗವೆ ಮೊದಲು.

3. ಕಸ್ತೂರಿಯ ಮೃಗ ಬಂದು ಸುಳಿಯಿತ್ತಯ್ಯಾ,


ಸಕಲ ವಿಸ್ತಾರದ ರೂಹು ಬಂದು ನಿಂದಿತ್ತಯ್ಯಾ,
ಆವ ಗ್ರಹ ಬಂದು ಸೋಂಕಿತ್ತೆಂದರಿಯೆನಯ್ಯಾ
ಆವ ಗ್ರಹ ಬಂದು ಹಿಡಿಯಿತ್ತೆಂಬುದ ನಾನರಿಯೆನಯ್ಯಾ,
ಹೃದಯಕಮಲಮಧ್ಯದಲ್ಲಿ ಗುರುವನರಿದು ಪೂಜಿಸಿ,
ಗುರು ವಿಖ್ಯಾತನೆಂಬುದ ನಾನರಿದೆನಯ್ಯಾ.
ಗುಹೇಶ್ವರಲಿಂಗದಲ್ಲಿ ಹಿಂದಣ ಹುಟ್ಟಿರತು ಹೋದುದ ಕಂಡೆನಯ್ಯಾ.

4. ಗುರು, ಶಿಷ್ಯ ಸಂಬಂಧವನರಸಲೆಂದು ಹೋದಡೆ,


ತಾನೆ ಗುರುವಾದ ತಾನೆ ಶಿಷ್ಯನಾದ, ತಾನೆ ಲಿಂಗವಾದ.
ಗುಹೇಶ್ವರಾ ನಿಮ್ಮ ಶರಣನ ಕಾಯದ ಕೈಯಲ್ಲಿ ಲಿಂಗವ ಕೊಟ್ಟಡೆ,
ಭಾವ ಬತ್ತಲೆಯಾಯಿತ್ತು!

5. ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ?


ಬೆಟ್ಟದ ಮೇಲಣ ನೆಲ್ಲಿಯ ಕಾಯಿ ಸಮುದ್ರದೊಳಗಣ ಉಪ್ಪು,
ಎತ್ತಣಿಂದೆತ್ತ ಸಂಬಂಧವಯ್ಯಾ?
ಗುಹೇಶ್ವರಲಿಂಗಕ್ಕೆಯೂ ನಮಗೆಯೂ ಎತ್ತಣಿಂದೆತ್ತ ಸಂಬಂಧವಯ್ಯಾ.
6. ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ,
ಎನಗಿದು ಸೋಜಿಗ, ಎನಗಿದು ಸೋಜಿಗೆ!
ಅಹುದೆನಲಮ್ಮೆನು, ಅಲ್ಲೆನಲಮ್ಮೆನು,
ಗುಹೇಶ್ವರಲಿಂಗವು ನಿರಾಳ ನಿರಾಕಾರ ಬಯಲು ಆಕಾರವಾದಡೆ!

7. ಪಾತಾಳದಿಂದತ್ತ ಮಾತ ಬಲ್ಲವರಿಲ್ಲ,


ಗಗನದಿಂದ ಮೇಲೆ ಅನುಭಾವ ತಾನಿಲ್ಲ.
ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ;
ಹೊರಗಣ ಅರಿಯಬಲ್ಲವರಿಲ್ಲ.
ಹಿಂದಣ ಹಿಂದನು, ಮುಂದಣ ಮುಂದನು,
ತಂದು ತೋರಿದ ನಮ್ಮ ಗುಹೇಶ್ವರನು.

8. ಒಮ್ಮೆ ಶ್ರೀಗುರುವಿನ ಚರಣವ ನೆನೆಯಲೊಡನೆ


ಭವಬಂಧನ ಬಿಡುವುದು.
ಗುರುವೇ ಶರಣು ಗುರುಲಿಂಗವೇ ಶರಣು
ಹರಿಬ್ರಹ್ಮಾದಿಗಳಿಗಗೋಚರ ಕೂಡಲಚೆನ್ನಸಂಗನ
ತೋರಿದ ಬಸವಣ್ಣ ಗುರುವೇ ಶರಣು.

9. ಹರ ತನ್ನ ರೂಪ ತೋರಬೇಕೆಂದು, ಶ್ರೀಗುರುರೂಪಾಗಿ ಮರ್ತ್ಯಕ್ಕೆ ಬಂದು


ಮನಸ್ಥಲಕ್ಕೆ ಮಂತ್ರವಾದ, ತನುಸ್ಥಲಕ್ಕೆ ಪ್ರಸಾದವಾದ,
ಕರಸ್ಥಲಕ್ಕೆ ಲಿಂಗವಾದ ಪ್ರಾಣಸ್ಥಲಕ್ಕೆ ಜಂಗಮವಾದ
ಇಂತೀ ಚತುರ್ವಿಧ ಸ್ಥಲದಲಿ ಸಾಹಿತ್ಯವಾದನಯ್ಯಾ
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನು.

10. ಮಾಂಸಪಿಂಡವೆಂದೆನಿಸದೆ ಮಂತ್ರಪಿಂಡವೆಂದೆನಿಸಿದ ಬಸವಣ್ಣ.


ವಾಯುಪ್ರಾಣಿಯೆಂದೆನಿಸದೆ ಲಿಂಗಪ್ರಾಣಿಯೆಂದೆನಿಸಿದ ಬಸವಣ್ಣ,
ಜಗಭರಿತನೆಂಬ ಶಬ್ದಕ್ಕೆ ಅಂಗವಿಸದೆ, ಶರಣಭರಿತ ಲಿಂಗವೆನಿಸಿದ
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನು.

11. ಶ್ರೀಗುರುಕಾರುಣ್ಯ ಕಟಾಕ್ಷದಲ್ಲಿ ಉತ್ಪತ್ಯವಾದ ಅಜಾತಂಗೆ


ಜಾತಿಸೂತಕ, ಜನನಸೂತಕ, ಪ್ರೇತಸೂತಕ, ರಜಸ್ಸೂತಕ ಉಚ್ಛಿಷ್ಟ ಸೂತಕವಿಲ್ಲ.
ಉಟೆಂಬವಂಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪ್ರಸಾದವಿಲ್ಲವಯ್ಯಾ
ಕೂಡಲಚೆನ್ನಸಂಗಯ್ಯ.

12. ಗುರು ಕರುಣಿಸೆ ಬಿಟ್ಟಿತ್ತು ಮಾಯೆ,


ಗುರು ಕರುಣಿಸೆ ಬಿಟ್ಟಿತ್ತು ಮರವೆ,
ಗುರು ಕರುಣಿಸೆ ಬಿಟ್ಟಿತ್ತು ಪ್ರಪಂಚ,
ಕೂಡಲಚೆನ್ನಸಂಗಮದೇವಾ
ಗುರು ಕರುಣಿಸೆ ಬಿಟ್ಟಿತ್ತು ಎನ್ನ ಕರ್ಮಪಾಶ

13. ಜನಿತವಿಲ್ಲದೆ ನಿರ್ಜನಿತನಾದೆ


ಸ್ಥೂಲ ಸೂಕ್ಷಮದಲ್ಲಿ ನಿತ್ಯನಾದೆ
ನಿಮ್ಮ ಘನವ ನೋಡಲ್ಕೆ ನಿಗಮಕ್ಕಭೇದ್ಯನು
ಗುರುಕರುಣದಿಂದ ಎನ್ನ ಕರಸ್ಥಲಕ್ಕೆ ಬಂದೆ
ಕಪಿಲಸಿದ್ಧಮಲ್ಲಿಕಾರ್ಜುನ.

14. ಅನುಪಮನೆ, ನಿನ್ನ ಹವಣಿಸಲಿಕ್ಕರಿದಯ್ಯಾ


ಘನತರವೆನಿಸುವ ಸಾಯಜ್ಯಪದವ ಮೀರಿದ,
ಶಬ್ದ ಹಲವ ಮೀರಿದ ಬ್ರಹ್ಮ.
ಗುರುಕರುಣದಿಂದ ಕಂಡೆ ಪರಮಪದವ.
ಗುರುವೇ, ಮದ್ಗುರುವೇ, ಸದ್ಗುರುವೇ, ತ್ರಿಜಗದ್ಗುರುವೇ,
ಗುರುವೇ, ಕಪಿಲಸಿದ್ಧಮಲ್ಲಿಕಾರ್ಜುನಾ.

15. ಜಲದಲ್ಲಿ ಉದಯಿಸಿ ಮತ್ತೆ ಜಲವು ತಾನಲ್ಲ;


ಜಲವೆಂದಿಪ್ಪುದೀ ಲೋಕವೆಲ್ಲಾ.
ಪರಮಗುರು ಬಸವಣ್ಣ ಜಗವ ಪಾಲಿಸ ಬರಲು
ಎನ್ನ ಪರಿಭವದ ದಂದುಗ ಹರಿಯಿತ್ತಯ್ಯಾ.
ಆ ಸುದ್ದಿಯನರಿಯದೆ ಅನೇಕ ಜಡರುಗಳೆಲ್ಲ
ಬೇಕಾದ ಪರಿಯಲ್ಲಿ ನುಡಿವುತ್ತಿಹರು.
ಸತ್ತಪ್ರಾಣಿಯನ್ನೆತ್ತಿ ಒಪ್ಪಿಪ್ಪ ನಿಶ್ಚಯವು
ಮತ್ರ್ಯದವರಿಗುಂಟೆ ಶಿವಗಲ್ಲದೆ?
ಶಿವಗುರು ಬಸವಣ್ಣ, ಬಸವಗುರು ಶಿವನಾಗಿ,
ದೆಸೆಗೆಟ್ಟ ದೇವತಾಪಶುಗಳಿಗೆ ಪಶುಪತಿಯಾದನು.
ಬಸವಣ್ಣನ ನೆನಹು ಸುಖಸಮುದ್ರವಯ್ಯಾ!
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಬಸವಣ್ಣನ ತೋರಿರಾಗಿ ಬದುಕಿದೆನಯ್ಯಾ ಪ್ರಭುವೆ.

16. ನಿರಾಳದಿಂದ ಸಹಜವಾಯಿತ್ತು.


ಸಹಜದಿಂದ ಸೃಷ್ಟಿಯಾಯಿತ್ತು.
ಸೃಷ್ಟಿಯಿಂದ ಸಂಸಾರವಾಯಿತ್ತು.
ಸಂಸಾರದಿಂದ ಅಜಾÕ ನವಾಯಿತ್ತು.
ಆಜ್ಞಾನದಿಂದ ಬಳಲುವ ಜೀವರ,
ಬಳಲಿಕೆಯ ತೊಲಗಿಸಲು ಜ್ಞಾನವಾಯಿತ್ತು.
ಜ್ಞಾನದಿಂದಲಾಯಿತ್ತು ಗುರುಕರುಣ.
ಗುರುಕರುಣದಿಂದಲಾಯಿತ್ತು ಸುಮನ.
ಸುಮನದಿಂದಲಾಯಿತ್ತು ಶಿವಧ್ಯಾನ.
ಶಿವಧ್ಯಾನದಿಂದಲಾಯಿತ್ತು ನಿರ್ದೇಹ
ನಿರ್ದೇಹದಿಂದಲಾಯಿತ್ತು ಸಾಯುಜ್ಯ.
ಸಾಯುಜ್ಯದಿಂದಲಾಯಿತ್ತು ಸರ್ವಶೂನ್ಯ.
ಆ ಸರ್ವಶೂನ್ಯದಲ್ಲೊಡಗೂಡಿ ನಿಂದಾತಂಗೆ,
ಮರಳಿ ಜನ್ಮ ಉಂಟೆ ಹೇಳಾ?,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.

17. ಗುರುವಿನ ಕರುಣದಿಂದ ಲಿಂಗವ ಕಂಡೆ, ಜಂಗಮನ ಕಂಡೆ.


ಗುರುವಿನ ಕರುಣದಿಂದ ಪಾದೋದಕವ ಕಂಡೆ, ಪ್ರಸಾದವ ಕಂಡೆ.
ಗುರುವಿನ ಕರುಣದಿಂದ ಸಜ್ಜನ ಸದ್ಭಕ್ತರ ಸದ್ಗೋಷ್ಠಿಯ ಕಂಡೆ.
ಚೆನ್ನಮಲ್ಲಿಕಾರ್ಜುನಯ್ಯಾ,
ನಾ ಹುಟ್ಟಲೊಡನೆ ಶ್ರೀಗುರು ವಿಭೂತಿಯ ಪಟ್ಟವ ಕಟ್ಟಿ ಲಿಂಗಸ್ವಾಯತವ
ಮಾಡಿದನಾಗಿ ಧನ್ಯಳಾದೆನು.
18. ಶಿವ, ಗುರುವೆಂದು ಬಲ್ಲಾತನೆ ಗುರು.
ಶಿವ, ಲಿಂಗವೆಂದು ಬಲ್ಲಾತನೆ ಗುರು.
ಶಿವ, ಜಂಗಮವೆಂದು ಬಲ್ಲಾತನೆ ಗುರು.
ಶಿವ, ಪ್ರಸಾದವೆಂದು ಬಲ್ಲಾತನೆ ಗುರು.
ಶಿವ, ಆಚಾರವೆಂದು ಬಲ್ಲಾತನೆ ಗುರು.
ಇಂತೀ ಪಂಚವಿಧವೆ ಪಂಚಬ್ರಹ್ಮವೆಂದರಿದ
ಮಹಾ ಮಹಿಮ ಸಂಗನಬಸವಣ್ಣನು,
ಎನಗೆಯೂ ಗುರು, ನಿನಗೆಯೂ ಗುರು,
ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರಾ.

19. ಸಂಸಾರಸಂಗದಲ್ಲಿರ್ದೆ ನೋಡಾ ನಾನು.


ಸಂಸಾರ ನಿಸ್ಸಾರವೆಂದು ತೋರಿದನೆನಗೆ ಶ್ರೀಗುರು.
ಅಂಗವಿಕಾರದ ಸಂಗವ ನಿಲಿಸಿ,
ಲಿಂಗವನಂಗದ ಮೇಲೆ ಸ್ಥಾಪ್ಯವ ಮಾಡಿದನೆನ್ನ ಗುರು,
ಹಿಂದಣ ಜನ್ಮವ ತೊಡೆದು, ಮುಂದಣ ಪಥವ ತೋರಿದನೆನ್ನ ತಂದೆ.
ಚೆನ್ನಮಲ್ಲಿಕಾರ್ಜುನನ ನಿಜವ ತೋರಿದನೆನ್ನ ಗುರು.

20. ಸತ್ತಾತ ಗುರು, ಹೊತ್ತಾತ ಲಿಂಗವು,


ಎತ್ತಿಕೊಂಡಾತ ಜಂಗಮವೆಂದೆಂಬೆನಯ್ಯ.
ಸತ್ತವನೊಬ್ಬ, ಹೊತ್ತವನೊಬ್ಬ,
ಎತ್ತಿಕೊಂಡವನೊಬ್ಬನೆಂಬನ್ನಕ್ಕರ ಕತ್ತಲೆ ಹರಿಯದಯ್ಯ.
ಆತ್ತವರಮರರು, ನಿತ್ಯವಾದುದು ಪ್ರಸಾದ,
ಪರಿಪೂರ್ಣವಾದುದು ಪಾದಜಲ.
ಇದರರ್ಥವ ಬಲ್ಲರೆ ಸತ್ತಹಾಗಿರಬೇಕು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.

You might also like