Shuba deepa-WPS Office

You might also like

Download as txt, pdf, or txt
Download as txt, pdf, or txt
You are on page 1of 5

ಶುಭದೀಪದ ಲಕ್ಷಣಗಳು..

೧. ದೀಪದ ಪಾತ್ರೆ ಶುಭ್ರವಾಗದ್ದಷ್ಟೂ ದೀಪ ಹಚ್ಚುವವರ ಮನಸ್ಸು ಶುದ್ಧವಾಗಿರುತ್ತದೆ..

೨. ದೀಪವನ್ನು ಹಚ್ಚುವ ಜಾಗದಲ್ಲಿ ಗಾಳಿಯು ಮಂದಸ್ಮಿತವಾಗಿದ್ದರೆ, ತಂಗಾಳಿಯು ಬೀಸುತ್ತಿದ್ದರೆ, ಅಂತಹ ಮನೆಯಲ್ಲಿ ಶಾಂತಿಯಾದ
ವಾತಾವರಣ ಇದ್ದು, ನೆನೆದ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ ..
ಗಾಳಿಯು ಜೋರಾಗಿ ಬೀಸುತ್ತಿದ್ದರೆ ಆ ಮನೆಯಲ್ಲಿ ಬಂಧು ಬಳಗದವರಿಂದಲೇ ಸಮಸ್ಯೆ ಉಂಟಾಗುತ್ತವೆ..
ಶತ್ರುಗಳು ಜಾಸ್ತಿ.

೩.ದೀಪದ ಸ್ತಂಭವು ಎರಡೂ ಒಂದೇ ಸಮನಾಗಿರಬೇಕು,


ಒಂದು ಚಿಕ್ಕದು, ಒಂದು ದೊಡ್ಡದು ಇರಬಾರದು,
ಹೀಗೆ ಇದ್ದರೆ, ಆ ಮನೆಯಲ್ಲಿ ಗಂಡ ಹೆಂಡತಿ ಹೊಂದಾಣಿಕೆ ಇರೋದಿಲ್ಲ..
ಮಕ್ಕಳು ದಾರಿ ತಪ್ಪುವರು..

೪. ದೀಪದ ಸ್ತಂಭ ಭಿನ್ನವಾಗಿದ್ದರೆ, ಒಡೆದಿದ್ದರೆ, - ಆ ಮನೆಯಲ್ಲಿ ಇರುವವರಿಗೆ


ಕೆಲಸ ಕಾರ್ಯಗಳಲ್ಲಿ ತೀವ್ರ ಅನಾನುಕೂಲವಾಗಿ, ನಿತ್ಯ ರೋಗ ಭಾದೆ ಜಾಸ್ತಿಯಾಗಿ, ವೈದ್ಯರಿಂದಲೂ ವಾಸಿ ಮಾಡಲಿಕ್ಕೆ ಆಗದ
ಖಾಯಿಲೆಯಿಂದ ನರಳುತ್ತಾರೆ.., ಮನೆಯಲ್ಲಿ ಇರುವವರಿಗೆ ಶಾಂತಿ ನೆಮ್ಮದಿ ಇರುವುದಿಲ್ಲ ..

೫. ದೀಪದ ಸ್ತಂಭವು ಬೆಸುಗೆ ಮಾಡಿದ್ದರೆ, ಮನೆಯಲ್ಲಿ ಇರುವವರಿಗೆ ರಕ್ತಹೀನತೆ, B.P ಖಾಯಿಲೆಯು , ಚರ್ಮವ್ಯಾಧಿಗಳು
ಜಾಸ್ತಿಯಾಗುತ್ತದೆ..

" ದೇವರ ದೀಪಕ್ಕೆ ಉಪಯೋಗಿಸುವ "ಎಣ್ಣೆ"ಯ ವಿಚಾರ...

೧. ದೀಪಕ್ಕೆ ಉಪಯೋಗಿಸುವ ಎಣ್ಣೆಯು ದಪ್ಪವಿದ್ದರೆ (ಹರಳೆಣ್ಣೆಯ ತರಹ) , ಮನೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಗಳೂ ಬಹಳ
ನಿಧಾನವಾಗಿ ನಡೆಯುತ್ತದೆ..

೨. ದೀಪಕ್ಕೆ ಉಪಯೋಗಿಸುವ ಎಣ್ಣೆಯು ತೆಳುವಾಗಿದ್ದರೆ(ಕೊಬ್ಬರಿ ಎಣ್ಣೆ) ಮನೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಗಳೂ ಸುಸೂತ್ರವಾಗಿ
ನಡೆಯುತ್ತದೆ..
ಕಷ್ಟಗಳು ನಿವಾರಣೆಯಾಗುತ್ತದೆ ..

೩. ದೀಪಕ್ಕೆ ಉಪಯೋಗಿಸುವ ಎಣ್ಣೆಯು ಒಂದೇ ಎಣ್ಣೆಯಾಗಿದ್ದರೆ ಕೆಲಸ ಕಾರ್ಯಗಳು ಸುಸೂತ್ರವಾಗಿಯೂ, ಸುಗಮವಾಗಿಯೂ


ನಡೆಯುತ್ತದೆ..

೪. ದೀಪಕ್ಕೆ ಬಳಸುವ ಎಣ್ಣೆಯು ಮಿಶ್ರವಾಗಿದ್ದರೆ , ಎಲ್ಲಾ ತರಹದ ಎಣ್ಣೆ ಮಿಶ್ರ ಆಗಿದ್ದರೆ , ಆರಂಭದಲ್ಲಿ ಶುಭಸೂಚನೆ ಕಂಡರೂ ಮಧ್ಯದಲ್ಲಿ
ನಿಂತು ಹೋಗಿ, ಕೊನೆಯಲ್ಲಿ ಆದರೂ ಆಗಬಹುದು ಅಥವಾ ಆಗದೆಯೂ ಇರಬಹುದು, ಹೀಗೆ ಫಲ ಬರುವುದು..

೫ . ದೀಪದ ಎಣ್ಣೆಯು ಮಲಿನವಾಗಿದ್ದರೆ ಮನೆಯಲ್ಲಿ ಇರುವವರಿಗೆ ರೋಗಭಾದೆ ಬರುತ್ತದೆ..

೬. ದೀಪದ ಎಣ್ಣೆಯು ಕಪ್ಪಾಗಿದ್ದರೆ ಮನೆಯಲ್ಲಿ ಇರುವವರಿಗೆ ತೇಜಸ್ಸು ಕಡಿಮೆಯಾಗುತ್ತದೆ..

೭. ದೀಪದ ಎಣ್ಣೆಯು ಪರಿಮಳದ ವಾಸನೆಯಿಂದ ಕೂಡಿದ್ದರೆ ಮನೆಯಲ್ಲಿ ಅಷ್ಟೈಶ್ವರ್ಯ ಹಾಗೂ ನವನಿಧಿಗಳು ಪ್ರಾಪ್ತಿಯಾಗುತ್ತದೆ..

೮. ದೀಪದ ಎಣ್ಣೆಯನ್ನು ಕಿಲುಬಿರುವ, ಬೆಸುಗೆ ಹಾಕಿಸಿರುವ, ಭಿನ್ನವಾಗಿರುವ ದೀಪಸ್ತಂಭಕ್ಕೆ ಹಾಕಿದರೆ,


ಅನಾರೋಗ್ಯ ಸಮಸ್ಯೆ, B.P. ಸಮಸ್ಯೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ, ರಕ್ತದ ಖಾಯಿಲೆಗಳು ಜಾಸ್ತಿಯಾಗುತ್ತದೆ ..

೧೦. ದೀಪಕ್ಕೆ ಬಿಸಿಎಣ್ಣೆ ಅಥವಾ ಬಿಸಿತುಪ್ಪ ಹಾಕಿದರೆ, ಮನೆಯಲ್ಲಿ ಕೂಗಾಟ, ಕೋಪ ಹಠ ಜಾಸ್ತಿಯಾಗುತ್ತದೆ ..

೧೧. ದೀಪದ ಎಣ್ಣೆಯು ತಂಪಾಗಿದ್ದರೆ ಮನೆಯಲ್ಲಿ ಶಾಂತಿ ವಾತಾವರಣ, ಇದ್ದು ಸುಖ ಸಂತೋಷ ನೆಮ್ಮದಿ ಇರುತ್ತದೆ..

೧೨. ದೀಪದ ಎಣ್ಣೆಯು ಕಲ್ಮಶವಿಲ್ಲದೆ ಎಷ್ಟು ಶುದ್ಧಿಯಾಗಿರುವುದೋ ಅಷ್ಟೂ ಶುಭಫಲ ಉಂಟಾಗುತ್ತದೆ..


ಅಂತಾ ಎಣ್ಣೆಯಿಂದ ಮನೆಯಲ್ಲಿ ದೀಪ ಹಚ್ಚಿದರೆ, ಆ ಮನೆಗೆ ದೇವರ ಹಾಗೂ ಗುರುಗಳ ಅನುಗ್ರಹ ಉಂಟಾಗಿ, ಬಹಳ ಚೆನ್ನಾಗಿ
ನಡೆಯುತ್ತದೆ..
ಯಾವುದೇ ತರಹದ ಗಲಾಟೆ, ಗಂಡಾಂತರಗಳು ಅಪಮೃತ್ಯುಗಳು ಬರುವುದಿಲ್ಲ...

ಮತ್ತೊಮ್ಮೆ ..

"ಕೊಬ್ಬರಿ ಎಣ್ಣೆ" ಯ ದೀಪದ ಮಹತ್ವಗಳು..

೧. ಯಾರ ಮನೆಯಲ್ಲಿ ಕೊಬ್ಬರಿ ಎಣ್ಣೆಯಿಂದ ದೇವರಿಗೆ ದೀಪ ಹಚ್ಚುತ್ತಾರೋ , ಆ ಮನೆಯಲ್ಲಿ ಶುಭಕಾರ್ಯಗಳು ಬಹಳ ಬೇಗ
ಜರುಗುತ್ತವೆ..

೨. ಯಾರು ಕುಲದೇವತೆಗೆ ಕೊಬ್ಬರಿ ಎಣ್ಣೆಯನ್ನು ಹಾಕಿ ನಂದಾದೀಪ ಹಚ್ಚಿತ್ತಾರೋ ಅವರ ಮನೆಯಲ್ಲಿ ಸಿರಿ ಸಂಪತ್ತು ವೃದ್ಧಿಯಾಗುತ್ತದೆ..

೩. ಮದುವೆಯಾಗದ ಗಂಡು/ಹೆಣ್ಣು ಮಕ್ಕಳು ಕಾತ್ಯಾಯನೀ ಪೂಜೆ ಮಾಡುವಾಗ ದೇವರ ದೀಪಕ್ಕೆ ಕೊಬ್ಬರಿ ಎಣ್ಣೆಯಿಂದ ದೀಪ ಹಚ್ವಿದರೆ
ಶೀಘ್ರದಲ್ಲಿಯೇ ವಿವಾಹ ನಿಶ್ಚಯವು ಆಗುತ್ತದೆ..

೪. ಮಂಗಳವಾರ ಶ್ರೀ ಸುಬ್ರಹ್ಮಣ್ಯ ಪೂಜಿಸುವಾಗ ಕೊಬ್ಬರಿ ಎಣ್ಣೆಯ ದೀಪ ಹಚ್ವಿದರೆ ಮಕ್ಕಳು ಇಲ್ಲದವರಿಗೆ ಸಂತಾನಭಾಗ್ಯವಾಗುತ್ತದೆ..
(ಸರಿಯಾದ ಪೂಜಾ ವಿಧಾನ ತಿಳಿದು ಮಾಡಬೇಕು)

೫. ಅಶ್ವಥ ಮರದ ಕೆಳಗೆ ಇರುವ ನಾಗರಕಲ್ಲಿಗೆ ತನಿ ಎರೆಯುವಾಗ ಶ್ರೀ ಅಶ್ವತ್ಥ ನಾರಾಯಣ ಸ್ವಾಮಿಗೆ ಕೊಬ್ಬರಿ ಎಣ್ಣೆಯ ದೀಪ ಹಚ್ಚಿದರೆ
ದಾಂಪತ್ಯ ಕಲಹ ನಿವಾರಣೆಯಾಗುತ್ತದೆ..
(ಅಷ್ಟೋತ್ತರ, ಸಂಕಲ್ಪ ಬೇರೆ ರೀತಿ ಇರುತ್ತದೆ)

೬. ಜಾತಕದಲ್ಲಿ ಕುಜದೋಷ ಜಾಸ್ತಿ ಇರುವವರು ಮಂಗಳವಾರ ಅಥವಾ ಶುಕ್ರವಾರ ದೇವಿ ಪೂಜೆ ಮಾಡಿ "ಒಬ್ಬಟ್ಟು" ನೈವೇದ್ಯ ಮಾಡಿ,
ಮೊರದ ಬಾಗಿನವನ್ನು ದಾನ ಮಾಡಿದರೆ ಕುಜದೋಷ ನಿವಾರಣೆಯಾಗುತ್ತದೆ..
(ಪ್ರಾಯಶ್ಚಿತ್ತ ಸಂಕಲ್ಪ , ತಾಂಬೂಲದ ದಾನ ಮಾಡಬೇಕು)

೭. ಹೋಮದ ಪೂರ್ಣಾಹುತಿಗೆ "ರೇಷ್ಮೆವಸ್ತ್ರ" ವನ್ನು ಕೊಬ್ಬರಿ ಎಣ್ಣೆಯಲ್ಲಿ ನೆನೆಸಿ ಹೋಮಕುಂಡಕ್ಕೆ ಹಾಕಿದರೆ ಅಷ್ಟನಿಧಿ, ನವನಿಧಿ
ಪ್ರಾಪ್ತಿಯಾಗುತ್ತದೆ..

೮. ಪ್ರೀತಿಸಿ ಮದುವೆಯಾಗಲು ಬಯಸುವ ಹುಡುಗ/ಹುಡುಗಿಗೆ ವಿಶೇಷ ಫಲ, ಇಷ್ಟಾರ್ಥ ಸಿದ್ಧಿಯಾಗುತ್ತದೆ.


(ಪೂಜಾ ವಿಧಾನ ತಿಳಿಸಿಲ್ಲ,)

೯. ಪ್ರತೀ ಶನಿವಾರದ ದಿವಸ "ಶ್ರೀನಿವಾಸ" ದೇವರಿಗೆ ಮನೆಯಲ್ಲಿ ಯಾರು ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಿ, ತುಳಸೀಹಾರ ಹಾಕಿ
ಪೂಜಿಸುತ್ತಾರೋ ಅವರಿಗೆ ಜೀವಮಾನಪರ್ಯಂತ ಹಣದ ಸಮಸ್ಯೆ ಬರುವುದಿಲ್ಲ..
(ವಿಶೇಷ ಸ್ತೋತ್ರ, ಸಂಕಲ್ಪ, ನೈವೇದ್ಯ ಮುಖ್ಯ)

೧೦. ಹೆಣ್ಣು ಮಕ್ಕಳ ಮದುವೆಗೆ ಬೇಕಾದ ಹಣ ಒದಗಿ ಬರುತ್ತದೆ..

೧೧. ಪಿತೃಶ್ರಾದ್ಧದ ಸಮಯದಲ್ಲಿ ಕೊಬ್ಬರಿ ಎಣ್ಣೆ ದೀಪವನ್ನು "ವಿಷ್ಣುಪಾದ" ದ ಮುಂದೆ ಹಚ್ಚಿಟ್ಟರೆ ಸಮಸ್ತ ಪಿತೃದೋಷ
ನಿವಾರಣೆಯಾಗುತ್ತದೆ..

೧೨. ಸಾಲದ ಸಮಸ್ಯೆ ನಿವಾರಣೆ, ಹಣ ಕೊಡಬೇಕಾದವರು ತಾವಾಗಿಯೇ ಬಂದು ಕೊಡುತ್ತಾರೆ..


(ತಿಳಿದು ಮಾಡಿ).

"ದೇವರ ದೀಪಕ್ಕೆ ವಿಶೇಷ ಎಣ್ಣೆಗಳು"

"ಇಪ್ಪೆ ಎಣ್ಣೆ"ಯು ದೇವರಿಗೆ ತುಂಬಾ ತುಂಬಾ ಶ್ರೇಷ್ಠ..


ಇದರಿಂದ ಮನೆಯಲ್ಲಿ ದುಃಖ, ದಾರಿದ್ರ್ಯ, ಬಡತನ, ಧನದರಿದ್ರ , ಅನ್ನದರಿದ್ರ, ನಿತ್ಯದರಿದ್ರ, ಹಾಗೂ ಸಾಲದ ಭಾದೆ
ನಿವಾರಣೆಯಾಗುತ್ತದೆ ..
ಗೃಹಕಲಹವು ನಿಂತುಹೋಗುತ್ತದೆ ..
ದೇವರ ಅನುಗ್ರಹ ಹಾಗೂ ಗುರುಗಳ ಅನುಗ್ರಹ ಎಂದೆಂದೂ ಇದ್ದು, ಶುಭಕಾರ್ಯಗಳು ಯಾವುದೇ ತೊಂದರೆ ಇರದೆ ಸುಸೂತ್ರವಾಗಿ
ನಡೆಯುತ್ತದೆ..

ಈ ಎಣ್ಣೆಯ ಬೆಲೆ ಜಾಸ್ತಿ..

೨. "ಗಂಧದ ಎಣ್ಣೆ" ಯನ್ನು ದೀಪಕ್ಕೆ ಉಪಯೋಗಿಸಿದರೆ, ಸಾಲದ ಭಾದೆ ಇರುವುದಿಲ್ಲ, ಮನೆಯು ದಿನೇ ದಿನೇ ಅಭಿವೃದ್ಧಿ ಹೊಂದಿ ಧನ-
ಕನಕ-ವಸ್ತು, ವಾಹನಗಳು ಹೆಚ್ಚಾಗುತ್ತವೆ..
ಮನೆಯಲ್ಲಿ ಹಿರಿಯರಿಗೆ ಗೌರವ ಜಾಸ್ತಿಯಾಗುತ್ತದೆ ..
ರೋಗಭಾದೆ, ಶತೃಭಾಧೆ ನಿವಾರಣೆಯಾಗುತ್ತದೆ ..

೩. ದೇವರ ದೀಪಕ್ಕೆ ಎಳ್ಳೆಣ್ಣೆ ಉಪಯೋಗಿಸಿದರೆ ಕಷ್ಟಗಳು ದಿನಕ್ರಮೇಣ ಕಡಿಮೆಯಾಗುತ್ತದೆ ..


ದೇಹದ ಆರೋಗ್ಯವು ದಿನೇ ದಿನೇ ಸುಧಾರಿಸುತ್ತದೆ..
ಉದರ ವ್ಯಾಧಿಗಳು ನಿವಾರಣೆಯಾಗುತ್ತದೆ , ಕಣ್ಣಿಗೆ ಸಂಬಂಧಿಸಿದ ಖಾಯಿಲೆ ನಿವಾರಣೆಯಾಗುತ್ತದೆ ..

೪. ಕೋರ್ಟು ತಕರಾರು ಇದ್ದ ಪಕ್ಷದಲ್ಲಿ ಆ ದಿವಸ ದೇವರಿಗೆ "ಮೆರುದಾನಿ ಎಣ್ಣೆ "ಯಲ್ಲಿ ದೀಪ ಹಚ್ಚಿದರೆ, ವ್ಯಾಜ್ಯದಲ್ಲಿ ಜಯ ಸಿದ್ಧ..
ಸತ್ಯಕ್ಕೆ ಜಯವಾಗುತ್ತದೆ ..
"ದೀಪದ ಬತ್ತಿಯ ವಿಚಾರಗಳು"..

೧. ದೀಪದ ಬತ್ತಿಯು ಕೊಳೆಯಿಂದ ಕೂಡಿದ್ದರೆ, ಮನೆಯಲ್ಲಿ ಇರುವವರಿಗೆ ಜ್ಞಾಪಕಶಕ್ತಿ ಕಡಿಮೆ ಇದ್ದು, ತುಂಬಾ ಯೋಚನೆ ಮಾಡಿ ಆರೋಗ್ಯ
ಕೆಡಿಸಿಕೊಳ್ಳುತ್ತಾರೆ..

೨. ದೀಪದ ಬತ್ತಿಯು ಕಪ್ಪಾಗಿದ್ದರೆ, ಜೀವನದಲ್ಲಿ ಕಷ್ಟವನ್ನು ಅನುಭವಿಸಬೇಕಾಗುತ್ತದೆ ..

೩. ದೀಪದ ಬತ್ತಿಯು ಹಾಲಿನಂತೆ ಬೆಳ್ಳಗೆ ಇದ್ದರೆ ಜೀವನದಲ್ಲಿ ಸಮಸ್ತ ಕಾರ್ಯಗಳೂ ಸುಸೂತ್ರವಾಗಿ ನಡೆಯುತ್ತವೆ..

೪. ದೀಪದ ಬತ್ತಿಯು ತುಂಬಾ ಚಿಕ್ಕದಾಗಿದ್ದರೆ, ಜಿಪುಣತನ ಬರುತ್ತದೆ, ಮನೆಯಲ್ಲಿ ಕೋಪ ಜಗಳ ಜಾಸ್ತಿ ಇರುತ್ತದೆ..

೫. ದೀಪದ ಬತ್ತಿಯು ಕೃತಕ ಬಣ್ಣಗಳಿಂದ ಕೂಡಿದ್ದರೆ ದೇಹಕ್ಕೆ ಅಗೋಚರ ರೋಗಗಳು ಮತ್ತು ಚರ್ಮವ್ಯಾಧಿಗಳು ಬರುತ್ತವೆ..

೬. ದೀಪದ ಬತ್ತಿಯು ಬಹಳ ಗಟ್ಟಿಯಾಗಿದ್ದಾರೆ, ಸಂಸಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಬಾಳುತ್ತಾರೆ.

೭. ಬತ್ತಿಯು ೨ ಕ್ಕಿಂತ ಜಾಸ್ತಿ ಇದ್ದರೆ, ದೇವರ, ಗುರುಗಳ ಅನುಗ್ರಹ ಎಂದೆಂದೂ ಇದ್ದು, ಗೆಳೆಯರ ಸಹಾಯ ದೊರೆಯುವುದಲ್ಲದೆ,
ಸಕಲ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತವೆ..

೮. ಒಂದೊಂದು ದೀಪಕ್ಕೆ ಒಂದೊಂದು ಬತ್ತಿಯಂತೆ ಎರಡು ದೀಪಕ್ಕೆ ಹಚ್ಚಿದರೆ ಮನೆಯಲ್ಲಿ ಸುಖ ಸಂತೋಷ ಇರುತ್ತದೆ..

1+1=2 ಹಚ್ಚಿದರೆ ಸಂಸಾರದಲ್ಲಿ ಸುಖ ಶಾಂತಿ ಇರುತ್ತದೆ..

2+2=4 ಬತ್ತಿ ಹಚ್ಚಿದರೆ, ಮನೆಯಲ್ಲಿ ಎಲ್ಲರೂ ಕ್ಷೇಮವಾಗಿರುತ್ತಾರೆ, ವ್ಯಾಪಾರ ವ್ಯವಹಾರದಲ್ಲಿ ಲಾಭವಾಗುತ್ತದೆ..


ಮಕ್ಕಳು ವಿದ್ಯಾವಂತರಾಗುತ್ತಾರೆ..

3+3=6 ಬತ್ತಿ ಹಚ್ಚಿದರೆ, ಮನೆಯಲ್ಲಿ ಶುಭ ಕಾರ್ಯಗಳು ಎಂದೆಂದೂ ನಡೆಯುತ್ತವೆ.., ಮಹಾಲಕ್ಷ್ಮಿಯ ಅನುಗ್ರಹ ಎಂದೆಂದೂ ಇದ್ದು,
ಸಾಲದ ಸಮಸ್ಯೆ ನಿವಾರಣೆಯಾಗುತ್ತದೆ ..

4+4=8 ಬತ್ತಿ ಹಚ್ಚಿದರೆ, ಮನೆಯಲ್ಲಿ ರೋಗಭಾದೆ ಇಲ್ಲದೆ ಎಲ್ಲರೂ ಆರೋಗ್ಯವಂತರಾಗಿ ಇರುತ್ತಾರೆ..


ಅಪಮೃತ್ಯು, ಅಪಘಾತ ಭಯ ದೂರವಾಗುತ್ತದೆ..

5+5=10 ಬತ್ತಿ ಹಚ್ಚಿದರೆ, ಮನೆಯಲ್ಲಿ ದೇವರ ಗುರುಗಳ ಅನುಗ್ರಹ, ಆಶೀರ್ವಾದ ಎಂದೆಂದೂ ಇದ್ದು, ಸಕಲ ಕಾರ್ಯಗಳೂ
ಸುಸೂತ್ರವಾಗಿ ನಡೆಯುತ್ತವೆ..
ಮನೆಯಲ್ಲಿ ಸುಖ ಸಂತೋಷ ನೆಮ್ಮದಿ ಇರುತ್ತದೆ, ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..
ಜಾತಕದ ಸರ್ವ ಶಾಪಗಳು ನಿವಾರಣೆಯಾಗುತ್ತದೆ ..

ಬೆಳ್ಳಿಯ ದೀಪಗಳ ವಿಶೇಷತೆಗಳು..

೧. ಯಾರ ಮನೆಯಲ್ಲಿ ದೇವರಿಗೆ ಬೆಳ್ಳಿಯ ದೀಪದಲ್ಲಿ ಹಸುವಿನ ತುಪ್ಪ, ಕೊಬ್ಬರೀ ಎಣ್ಣೆ, ಅಥವ ಸೂರ್ಯಕಾಂತಿ ಎಣ್ಣೆಯಿಂದ ಯಾರು
ದೀಪವನ್ನು ಹಚ್ಚುತ್ತಾರೆಯೋ, ಅವರಿಗೂ ಮತ್ತು ಆ ಮನೆಯವರಿಗೂ ಅಷ್ಟನಿಧಿ ಹಾಗೂ ನವನಿಧಿ ಪ್ರಾಪ್ತಿಯಾಗುತ್ತದೆ..
ದೀಪ ದುರ್ಗಾ ದೇವಿ ಮತ್ತು ಮಹಾಲಕ್ಷ್ಮಿಯು ಅನುಗ್ರಹವಾಗಿ, ಉತ್ತಮ ಜೀವನ ನಡೆಸುತ್ತಾರೆ..
ಅಂತಹ ಮನೆಯಲ್ಲಿ ಶಾಂತಿ ನೆಮ್ಮದಿಯ ವಾತಾವರಣವಿರುತ್ತದೆ..

೨. ಯಾರ ಮನೆಯಲ್ಲಿ ಶ್ರೀ ಬಲಮುರಿ ಗಣೇಶನ ಮುಂದೆ, ಶ್ರೀ ಚಕ್ರೇಶ್ವರೀ ದೇವಿ, ಶ್ರೀ ರಾಜರಾಜೇಶ್ವರೀ ದೇವಿ, ಶ್ರೀ ಲಲಿತಾ ತ್ರಿಪುರ
ಸುಂದರೀ ದೇವಿ ಅಥವಾ ಶ್ರೀ ಲಕ್ಷ್ಮೀ ನಾರಾಯಣ, ಸಾಲಿಗ್ರಾಮ ದೇವರಿಗೇ ಆಗಲಿ , ಬಲಮುರಿ ಶಂಖದ ಮುಂದೆಯೇ ಆಗಲಿ ಹಚ್ಚಿದರೆ,
ನೆನೆದ ಕಾರ್ಯಗಳು ಬಹಳ ಬೇಗ ಆಗುತ್ತವೆ..
ಇಷ್ಟಾರ್ಥ ಸಿದ್ಧಿಯಾಗುತ್ತದೆ.., ಅಧಿಕ ಲಾಭವಾಗುತ್ತದೆ ...

ದೀಪದ ಮುಖಗಳು ಅಥವಾ ಬತ್ತಿಗಳು....

ಒಂದು ಮುಖ ಅಥವ ಬತ್ತಿಯಿಂದ : ಮಧ್ಯಮ ಲಾಭವಾಗುತ್ತದೆ ..,

ಎರಡು ಮುಖದಿಂದ : ಕುಟುಂಬದಲ್ಲಿ ಒಗ್ಗಟ್ಟು ಇರುತ್ತದೆ..,

ತ್ರಿಮುಖದಿಂದ : ಸಂತಾನ ಭಾಗ್ಯ ಮತ್ತು ಉತ್ತಮ ಸಂತಾನವಾಗುತ್ತದೆ, ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..!,

ಚತುರ್ಮುಖದಿಂದ : ಧನಸಂಪತ್ತು ಹಾಗೂ ಐಶ್ವರ್ಯ ಭಾಗ್ಯಗಳು ಲಭಿಸುತ್ತವೆ..

ಪಂಚಮುಖದಿಂದ : ಸಂಪತ್ತು ಮತ್ತು ಅಧಿಕ ಲಾಭವಾಗುತ್ತದೆ, ನೆಮ್ಮದಿ ..


..

ಬತ್ತಿಯ ಸಂಖ್ಯೆಗಳು ಮತ್ತು ಮಹತ್ವಗಳು......

ಒಂದೊಂದು ದೀಪಕ್ಕೆ ಒಂದರಂತೆ ಎರಡು ದೀಪ ಹಚ್ಚಿದರೆ


ಮನೆಯಲ್ಲಿ ಸುಖ ಸಂತೋಷ ಎಂದೆಂದೂ ಇರುತ್ತದೆ ..

2+2 =4 ಬತ್ತಿ ಹಚ್ಚಿದರೆ, ಮನೆಯಲ್ಲಿ ಎಲ್ಲರೂ ಕ್ಷೇಮವಾಗಿರುತ್ತಾರೆ..

3+3 =6 ಬತ್ತಿ ಹಚ್ಚಿದರೆ, ಮನೆಯಲ್ಲಿ ಶುಭ ಕಾರ್ಯಗಳು ಎಂದೆಂದೂ ನಡೆಯುತ್ತಿರುತ್ತದೆ ..

4+4=8 ಬತ್ತಿ ಹಚ್ಚಿದರೆ, ಮನೆಯಲ್ಲಿ ರೋಗಭಾದೆ ಇಲ್ಲದೇ ಆರೋಗ್ಯವಂತರಾಗಿ ಆಗುತ್ತಾರೆ..

5+5=10 ಬತ್ತಿ ಹಚ್ಚಿದರೆ, ಮನೆಯಲ್ಲಿ ದೇವರ ಮತ್ತು ಗುರುಗಳ ಅನುಗ್ರಹದಿಂದ ಸಕಲ ಕಾರ್ಯಗಳೂ ನಡೆದೂ ಮನೆಯಲ್ಲಿ ಸುಖ
ಸಂತೋಷಗಳು ಸಿಗುತ್ತವೆ..
(ಸಂಗ್ರಹ : ದೇವರ ದೀಪಗಳು)

"ಹಿತ್ತಾಳೆ" ದೀಪದಿಂದ ದೇವರಿಗೆ ದೀಪ ಹಚ್ಚಿದರೆ ಏನು ಫಲ..?

೧. ಯಾರ ಮನೆಯಲ್ಲಿ ದೇವರಿಗೆ ಹಿತ್ತಾಳೆ ದೀಪವನ್ನು ಹಚ್ವುತ್ತಾರೆಯೋ ಆ ಮನೆಯಲ್ಲಿ ದೇವರಿಗೆ ತೇಜಸ್ಸು ಜಾಸ್ತಿಯಾಗುತ್ತದೆ, ಮನೆಗೆ
ದೈವಬಲ ಬರುವುದು..

೨. ಯಾರ ಮನೆಯಲ್ಲಿ ದೇವರಿಗೆ ಹಿತ್ತಾಳೆ ದೀಪ ಹಚ್ಚಿ ದೇವರನ್ನು ಪೂಜಿಸುತ್ತಾರೋ ಆ ಮನೆಯಲ್ಲಿ ರೋಗಭಾದೆಗಳು, ಅಪಮೃತ್ಯುಗಳು
ಬರುವುದಿಲ್ಲ..!

೪. ಯಾರ ಮನೆಯಲ್ಲಿ ಸಂಕಲ್ಪ ಸಮೇತ ಹಿತ್ತಾಳೆ ದೀಪವನ್ನು ಹಚ್ಚಿ, ದೀಪಕ್ಕೆ ಪೂಜಿಸಿ, ದೇವರ ಪೂಜೆ ಮಾಡುತ್ತಾರೋ, ಆ ಮನೆಯಲ್ಲಿ
ನ ಸರ್ವ ವಿವಾಹ ದೋಷ ನಿವಾರಣೆಯಾಗಿ, ವಿಘ್ನಗಳು ನಿವಾರಣೆಯಾಗಿ ವಿವಾಹ ಯೋಗವು ಬರುತ್ತದೆ..!

೬. ಮಂತ್ರಸಿದ್ಧಿ ಬೇಕೆನ್ನುವರು ಹಿತ್ತಾಳೆ ದೀಪ ಹಚ್ಚಿ ಪೂಜಿಸಿದರೆ ಮಂತ್ರವು ಬೇಗ ಸಿದ್ಧಿಯಾಗುವುದು..!

“ದೇವರ ದೀಪ” ಹಚ್ಚೋವಾಗ ಯಾವಾಗಲು ಕುಳಿತು ಹಚ್ಚಬೇಕು‌..!


“ಮನೆಯಲ್ಲಿ ” ಬೆಣ್ಣೆ” ಕಾಯಿಸಿದ ತುಪ್ಪದಿಂದ ದೇವರಿಗೆ ದೀಪ ಹಚ್ಚಿದರೆ , ಆ ಮನೆಯಲ್ಲಿ ಅಭಿಷ್ಟ ಸಿದ್ಧಿಗಳು ಲಭಿಸುತ್ತವೆ..
ಲಕ್ಷ್ಮೀಕಟಾಕ್ಷ ಎಂದೆಂದೂ ಇರುತ್ತದೆ.‌
.!

೧. “ತುಪ್ಪದ ದೀಪಗಳನ್ನು” ಸುಬ್ರಹ್ಮಣ್ಯ ಸ್ವಾಮಿ, ಸರ್ಪದೇವತೆಗಳ ಮುಂದೆ ಹಚ್ಚಿದರೆ , ಆ ಕುಟುಂಬದವರಿಗೆ ಎಂದೂ ಸರ್ಪದೋಷಗಳು
ಬರುವುದುಲ್ಲ..!

೨. “ಮಹಾಗಣಪತಿಗೆ” ೨೧ ದಿನ ತುಪ್ಪದ ದೀಪ ಹಚ್ಚಿದರೆ ನೆನೆದ ಕಾರ್ಯಗಳು ನೆರವೇರುತ್ತವೆ‌‌..

೩. ದೇವಿ ದೇವಾಲಯಗಳಲ್ಲಿ ಮಂಗಳವಾರ ಮತ್ತು ಶುಕ್ರವಾರ “ತುಪ್ಪದ ದೀಪ” ಹಚ್ಚಿ ಪ್ರಾರ್ಥಿಸಿದರೆ “ಕುಜದೋಷ”
ನಿವಾರಣೆಯಾಗುತ್ತದೆ..

೩. ಶ್ರೀಚಕ್ರ ದೇವತೆಗಳಿಗೆ, ಗಾಯತ್ರೀದೇವಿಗೆ, ಕಾಮಾಕ್ಷಿ ದೇವಿಗೆ, ಮೀನಾಕ್ಷಿ ದೇವಿ, ತ್ರಿಪುರಸುಂದರಿ ದೇವಿ .. ಇತ್ಯಾದಿ ದೇವತೆಗಳಿಗೆ
“ತುಪ್ಪದ ದೀಪ” ಹಚ್ಚಿದರೆ “ನೆನೆದ ಕಾರ್ಯಗಳು” ಕ್ಷಿಪ್ರವಾಗಿ ನೆರವೇರುತ್ತವೆ..!

೫. ” ಶ್ರೀ ರಾಮನವಮಿ” ದಿವಸ “ಶ್ರೀ ರಾಮಚಂದ್ರ” ದೇವರಿಗೆ “ತುಪ್ಪದ ದೀಪ” ಹಚ್ಚಿ ಯಾರು ಪೂಜಿಸುತ್ತಾರೋ , ಅವರ
ಮನೆಯಲ್ಲಿ ಅಣ್ಣ ತಮ್ಮಂದಿರ ಕಲಹಗಳು ಇರುವುದಿಲ್ಲ..!

೬. “ಶ್ರೀ ಕೃಷ್ಣಾಷ್ಟಮಿ” ದಿವಸ “ಶ್ರೀ ಕೃಷ್ಣನಿಗೆ” ತುಪ್ಪದ ದೀಪ ಹಚ್ಚಿ , “ಶ್ರೀ ಕೃಷ್ಣ ಸಹಸ್ರನಾಮ” ಹೇಳುತ್ತಾರೋ, ಅವರಿಗೆ ಪುತ್ರ
ಸಂತಾನವಾಗುತ್ತದೆ..!
ಮಕ್ಕಳಿರುವವರು ಓದಿದರೆ ಮಕ್ಕಳು ಆರೋಗ್ಯವಾಗಿದ್ದು ಸನ್ಮಾರ್ಗದಲ್ಲಿ ನಡೆಯುತ್ತಾರೆ‌..!

೭. ಯಾರಿಗೆ ಮಕ್ಕಳು ಆಗಿ ಹೋಗುತ್ತಿರುತ್ತವೆಯೋ ಮತ್ತು ಮಕ್ಕಳು ಬದುಕುವುದಿಲ್ಲವೋ, ಅಂಥವರು “ಸಂತಾನ ಗೋಪಾಲಕೃಷ್ಣ”
ಸ್ವಾಮಿಗೆ, ತುಪ್ಪದ ದೀಪವನ್ನು ಹಚ್ಚಿ, “ಸಂತಾನಗೋಪಾಲಕೃಷ್ಣ” ಸ್ವಾಮಿ‌ಯ ಮೂಲಮಂತ್ರವನ್ನು ಭಕ್ತಿಯಿಂದ “ಜಪ” ಮಾಡಿದರೆ,
ಅವರಿಗೆ “ಒಂದು ವರ್ಷದ ಒಳಗೆ ಪುತ್ರಸಂತಾನ ಪ್ರಾಪ್ತಿಯಾಗುತ್ತದೆ ಮತ್ತು ಮಗುವು ಆಯುಷ್ಯವಂತನಾಗಿ ಇರುತ್ತಾರೆ…!

೮. ” ಸ್ತ್ರೀ ಸಂತಾನ” ಬೇಕೆಂದು ಅಪೇಕ್ಷೆ ಪಡುವವರು, “ಶ್ರೀ ದುರ್ಗಾ ಸಪ್ತಶತಿ” ಪಾರಾಯಣ ಮಾಡುವಾಗ “ತುಪ್ಪದದೀಪ” ಹಚ್ಚಿ
ಪ್ರಾರ್ಥನೆಯನ್ನು ಮಾಡುತ್ತಾರೋ ಅವರಿಗೆ, ಸಂವತ್ರದೊಳಗೆ ದೈವಭಕ್ತಳಾದ “ಸ್ತ್ರೀ” ಸಂತಾನವಾಗುತ್ತದೆ…!
೯. ಯಾರಿಗೆ “ಸಂತಾನಭಾಗ್ಯ” ಇರುವುದಿಲ್ಲವೋ , ಅಂಥವರು ” ಶ್ರೀ ಷಷ್ಠೀದೇವತೆ” ಪೂಜೆ ಮಾಡಿ , ತುಪ್ಪದ ದೀಪ ಹಚ್ಚಿ,
ಷೋಡಶೋಪಚಾರ ಪೂಜೆ ಮಾಡಿ, ಭಕ್ತಿಯಿಂದ ಪ್ರಸಾದ ಸ್ವೀಕರಿಸಿದರೆ, ದೈವಸಂಕಲ್ಪದಿಂದ ಸಂತಾನಭಾಗ್ಯವಾಗುತ್ತದೆ.

೧೦. ಇಷ್ಟದೇವತೆ ಮತ್ರು ಕುಲದೇವತೆಯ ಮುಂದೆ ಯಾರು ತುಪ್ಪದ ದೀಪ ಹಚ್ಚಿ ಪೂಜಿಸುತ್ತಾರೋ, ಅವರ ಮನೆಯು ಉತ್ತರೋತ್ತರ
ಅಭಿವೃದ್ಧಿಯಾಗುತ್ತದೆ..

೧೧. ನವರಾತ್ರಿ ಸಮಯದಲ್ಲಿ ದೇವಿಗೆ ತುಪ್ಪದ ದೀಪ ಹಚ್ಚಿ ಯಾರು ಪೂಜಿಸುತ್ತಾರೋ, ಅವರಿಗಿರುವ ಸಕಲ ಶತೃಕಾಟವು
ನಿವಾರಣೆಯಾಗುತ್ತದೆ.. ಸಕಲ ದುಃಖಗಳಿಂದ ಬಿಡುಗಡೆ ಹೊಂದುತ್ತಾರೆ..

೧೨. ಆಶ್ವೀಜ ಮಾಸ , ಕೃಷ್ಣಪಕ್ಷ, ಅಮವಾಸ್ಯೆಯ ದಿವಸ(ದೀಪಾವಳಿ ಅಮಾವಾಸ್ಯೆ) ಯಲ್ಲಿ ಯಾರು ಸಾಯಂಕಾಲ “ಗೋಧೂಳಿ”
ಲಗ್ನದಲ್ಲಿ “ಶ್ರೀಮಹಾಲಕ್ಷ್ಮೀ” ದೇವಿಗೆ ತುಪ್ಪದ ದೀಪ ಹಚ್ಚಿ , ಶಾಸ್ತ್ರೋಕ್ತವಾಗಿ ಪೂಜಿಸಿ, ಸಿಹಿ ತಿಂಡಿ ನೈವೇದ್ಯ ಮಾಡಿ, ಮಕ್ಕಳಿಗೆ
ಹಂಚುತ್ತಾರೋ, ಅಂಥವರಿಗೆ ಮತ್ತು ಆ ಮನೆಯವರಿಗೆ, ವರ್ಷಪೂರ್ತಿ ಹಣಕಾಸಿನ ಸಮಸ್ಯೆ ಬರದೆ ನೆಮ್ಮದಿಯಾಗಿ ಜೀವನ
ಮಾಡುತ್ತಾರೆ..

ಓಂ ಅಸತೋಮ ಸದ್ಗಮಯ,
ತಮಸೋಮ ಜ್ಯೋತಿರ್ಗಮಯ
ಮೃತ್ಯೋರ್ಮ ಅಮೃತಂಗಮಯ
ಓಂ ಶಾಂತಿ ಶಾಂತಿ ಶಾಂತಿ:

ಕತ್ತಲೆಯನ್ನು ಹಿ೦ದಕ್ಕೆ ಬಿಟ್ಟು ಬೆಳಕನ್ನು ಪಡೆಯುವತ್ತ – ಪಡೆದ ಬೆಳಕನ್ನು ಎಲ್ಲರೊ೦ದಿಗೆ ಹ೦ಚಿಕೊ೦ಡು ಬದುಕಬೇಕೆ೦ಬ ಸನ್ಮಸನ್ನು
ಪಡೆಯುವತ್ತ, ಸಮಸ್ತ ಜೀವಿಗಳ ಮೇಲೆ ದೃಷ್ಟಿ ನೆಟ್ಟಿರಬೇಕು.

ಕತ್ತಲೆ ಋಣಾತ್ಮಕವಾದರೆ, ಬೆಳಕು ಧನಾತ್ಮಕ. ದೀಪ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಬೆಳಕು. ಬೆಳಕು ಜೀವನದ ಅಂಧಕಾರವನ್ನು
ತೊಡೆದುಹಾಕುತ್ತದೆ. ಬೆಳಕು ಎಂದರೆ ಜ್ಞಾನದ ಸಂಕೇತ. ಇಂತಹ ಬೆಳಕು ಎಂದಾಕ್ಷಣ ನಮಗೆ ನೆನಪಾಗುವುದೇ ದೀಪ. ದೀಪಕ್ಕೊಂದು
ಅಜ್ಞಾತ ಹಾಗೂ ಅಗಾಧ ಶಕ್ತಿಯಿದೆ. ಬೆಳಗುವ ದೀಪ ಮನಸ್ಸಿನ ಕತ್ತಲೆಯನ್ನು ದೂರಗೊಳಿಸುತ್ತದೆ ಮತ್ತು ಎಲ್ಲಾ ಕಲ್ಮಶಗಳನ್ನೂ ದೂರ
ಸರಿಸಿ ಶಾಂತಿ ಮೂಡಿಸುವ ಶಕ್ತಿ ದೀಪಕ್ಕಿದೆ.

ದೀಪ ಎಂದರೆ ಶಾಂತಿ, ದೀಪ ಎಂದರೆ ಸಮೃದ್ಧಿ, ದೀಪ ಎಂದರೆ ಬೆಳಕು, ದೀಪ ಎಂದರೆ ಆರೋಗ್ಯ, ದೀಪ ಎಂದರೆ ಸಂಪತ್ತು, ದೀಪ
ಎಂದರೆ ಪ್ರಖರತೆ.. ಹೀಗೆ ದೀಪ ಜೀವನದ ಒಂದು ಸಕಾರಾತ್ಮಕ ಬೆಳವಣಿಗೆ. ಇಂಥಹ ದೀಪವನ್ನು ಬೆಳಗಿಸುವುದು ದಿನವೂ ನಿಮ್ಮ
ಜೀವನಕ್ಕೊಂದು ಸಂತೋಷ, ನೆಮ್ಮದಿ, ಶಾಂತಿಯನ್ನು ತರಬಲ್ಲುದು.

ದೇವರ ಧ್ಯಾನ, ಪ್ರಾರ್ಥನೆಯಲ್ಲಿ ದೊಡ್ಡ ಶಕ್ತಿಯಿದೆ. ಪ್ರಾರ್ಥನೆಯ ಮೂಲಕ ತನ್ನ ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ಶಾಂತಿ, ಸೌಭಾಗ್ಯ
ದೊರೆಯುತ್ತದೆ. ಮನೆಯಲ್ಲಿ ದೀಪ ಹಚ್ಚುವುದರಿಂದ ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ಮಹತ್ವದ
ಪ್ರಾಮುಖ್ಯತೆ ಇದೆ. ಯಾವುದೇ ಕಾರ್ಯಕ್ರಮ ಅಥವಾ ಪೂಜಾ ಕೈಂಕರ್ಯಗಳನ್ನು ನಡೆಸಬೇಕಾದರೆ ಆ ಕಾರ್ಯಕ್ರಮ, ಪೂಜೆ
ನಡೆಯುವುದು ದೀಪ ಬೆಳಗುವ ಮೂಲಕವೇ. ಮನೆಯಲ್ಲಿ ದೀಪ ಹಚ್ಚುವುದರಿಂದ ಅಲ್ಲಿನ ವಾತಾವರಣ ಶಾಂತಿ, ನೆಮ್ಮದಿ ಹಾಗೂ
ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ, ಇದು ವೈಜ್ಞಾನಿಕವಾಗಿಯೂ ಧೃಢವಾಗಿದೆ.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

You might also like