Download as docx, pdf, or txt
Download as docx, pdf, or txt
You are on page 1of 18

ಒಟ್ಟು 33 ಕಡೆಗಳಲ್ಲಿ , ವಚನಕಾರ ಅರಿವಿನ ಮಾರಿತಂದೆ , 31 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಲ್ಲು ಕಲ್ಲು ತಾಕಿದಲ್ಲಿ ಕಿಚ್ಚಿನ ಕಿಡಿಯಲ್ಲದೆ, ಹೆಂಟೆ ಶಿಲೆ ಹೋರಿದಲ್ಲಿವುಂಟೆ? ಅರಿದವನಲ್ಲಿ ಒಡಗೂಡುವ ಸುಖವಲ್ಲದೆ,
ಬರಿಯನಲ್ಲಿ, ಅರಿವು ಹೀನನಲ್ಲಿ, ಅರಿವಿನ ಕುರುಹ ಮರೆದಾಡುವನಲ್ಲಿ, ಸುರೆಯ ಮಡಕೆಯ ಪೂಜಿಸಿ ಕುಡಿವವನಂತಾಗಬೇಡ.
ಬರಿಯ ವಾಚಾಸಿದ್ಧಿಯಲ್ಲಿ ಅರಿದೆಹೆನೆಂದು ಅವ ಕೊಟ್ಟರಿವಿನ ಕುರುಹ ಮರೆಯಬೇಡ. ಆ ಮರೆಯಲ್ಲಿ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ ಅದೆ.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಕಲ್ಲು ಕಲ್ಲು ತಾಕಿದಲ್ಲಿ ಕಿಚ್ಚಿನ ಕಿಡಿಯಲ್ಲದೆ, ಹೆಂಟೆ ಶಿಲೆ ಹೋರಿದಲ್ಲಿವುಂಟೆ?


ಅರಿದವನಲ್ಲಿ ಒಡಗೂಡುವ ಸುಖವಲ್ಲದೆ,
ಬರಿಯನಲ್ಲಿ, ಅರಿವು ಹೀನನಲ್ಲಿ, ಅರಿವಿನ ಕುರುಹ ಮರೆದಾಡುವನಲ್ಲಿ,
ಸುರೆಯ ಮಡಕೆಯ ಪೂಜಿಸಿ ಕುಡಿವವನಂತಾಗಬೇಡ.
ಬರಿಯ ವಾಚಾಸಿದ್ಧಿಯಲ್ಲಿ ಅರಿದೆಹೆನೆಂದು
ಅವ ಕೊಟ್ಟರಿವಿನ ಕುರುಹ ಮರೆಯಬೇಡ.
ಆ ಮರೆಯಲ್ಲಿ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ ಅದೆ.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 358

ಮಲಯಜದ ಮಧ್ಯದಲ್ಲಿ ವಂಶ ಪುದಿದಿರೆ ಮುಟ್ಟದು ಗಂಧ ಅದೇಕೆ? ಮಧ್ಯದ ದ್ವಾರದ ಲಕ್ಷಣದಿಂದ, ಪಾದಪದ
ಜಾತಿಬ್ಥಿನ್ನದಿಂದ. ಆ ತೆರನನರಿದಲ್ಲಿ ಇದಿರಿಟ್ಟು ಕುರುಹು ಬ್ಥಿನ್ನವಾಯಿತ್ತು. ಆತ್ಮಂಗೆ ಅರಿವು ಸೂಜಿಯ ಮೊನೆಯಂತೆ ಕುರುಹು
ಹಿಂಗಿದ ದ್ವಾರದಂತೆ ಉಭಯವ ಭೇದಿಸಿ ಆ ದ್ವಾರದಲ್ಲಿ ಎಯ್ದುವ ನೂಲು ಮುಂದಳ ಹರಿಯ ಮುಚ್ಚುವಂತೆ ಕರುಹಿನ ಬ್ಥಿನ್ನ
ನಾಮನಷ್ಟವಾಗುತ್ತದೆ, ನಿಜತತ್ವದ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ,

--------------

ಅರಿವಿನ ಮಾರಿತಂದೆ

×
ಅರಿವಿನ ಮಾರಿತಂದೆ

ಮಲಯಜದ ಮಧ್ಯದಲ್ಲಿ ವಂಶ ಪುದಿದಿರೆ


ಮುಟ್ಟದು ಗಂಧ ಅದೇಕೆ?
ಮಧ್ಯದ ದ್ವಾರದ ಲಕ್ಷಣದಿಂದ, ಪಾದಪದ ಜಾತಿಬ್ಥಿನ್ನದಿಂದ.
ಆ ತೆರನನರಿದಲ್ಲಿ ಇದಿರಿಟ್ಟು ಕುರುಹು ಬ್ಥಿನ್ನವಾಯಿತ್ತು.
ಆತ್ಮಂಗೆ ಅರಿವು ಸೂಜಿಯ ಮೊನೆಯಂತೆ
ಕುರುಹು ಹಿಂಗಿದ ದ್ವಾರದಂತೆ
ಉಭಯವ ಭೇದಿಸಿ ಆ ದ್ವಾರದಲ್ಲಿ ಎಯ್ದುವ
ನೂಲು ಮುಂದಳ ಹರಿಯ ಮುಚ್ಚುವಂತೆ
ಕರುಹಿನ ಬ್ಥಿನ್ನ ನಾಮನಷ್ಟವಾಗುತ್ತದೆ,
ನಿಜತತ್ವದ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ,

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 351

ಆದಿ ಮಧ್ಯ ಅವಸಾನವರಿಯಬೇಕೆಂಬರು, ಆದಿಯಲ್ಲಿ ನಿಂದು, ಮಧ್ಯದಲ್ಲಿ ಕಂಡು, ಅವಸಾನದಲ್ಲಿ ಅರಿದು ಇರಬೇಕೆಂಬರು.
ಅರಿವುದು ಒಂದೊ ಮೂರೊ ಎಂದಲ್ಲಿ ನಿಂದಿತ್ತು. ನಿಂದುದ ಕಳೆದು ಸಂದ ಹರಿ, ಸದಾಶಿವಮೂರ್ತಿಲಿಂಗವನರಿವುದಕ್ಕೆ.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಆದಿ ಮಧ್ಯ ಅವಸಾನವರಿಯಬೇಕೆಂಬರು,


ಆದಿಯಲ್ಲಿ ನಿಂದು, ಮಧ್ಯದಲ್ಲಿ ಕಂಡು, ಅವಸಾನದಲ್ಲಿ ಅರಿದು ಇರಬೇಕೆಂಬರು.
ಅರಿವುದು ಒಂದೊ ಮೂರೊ ಎಂದಲ್ಲಿ ನಿಂದಿತ್ತು.
ನಿಂದುದ ಕಳೆದು ಸಂದ ಹರಿ, ಸದಾಶಿವಮೂರ್ತಿಲಿಂಗವನರಿವುದಕ್ಕೆ.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 551

ಹಾವು ಹುಲಿ ಕಳ್ಳರ ಭಯವೆಂದು ಹೇಳಿದವರ ಮೇಲೆ ನೋವುಂಟೆ? ನೋವಾದಡಾಗಲಿ, ಇದರಿಂದ ಎನಗೆ ಕೇಡಿಲ್ಲ. ಕಂಡು
ಸುಮ್ಮನಿದ್ದಡೆ, ಆ ಗುರುವಿನ ಸುಖದುಃಖ ಎನ್ನದಾಗಿ, ಸಮಯಕ್ಕಂಜಿದಡೆ ಎನ್ನ ಮಾಡುವ ಮಾಟ ಎನ್ನ ಕೇಡು, ಎನ್ನ ಅರಿವು
ಮರವೆಯಲ್ಲಿದ್ದಡೆ, ಭವದುಃಖಕ್ಕೆ ಬೀಜ. ಎನ್ನ ಕೈಯಲ್ಲಿ ಎನ್ನಂಗವ ತೊಳೆಯಬೇಕಲ್ಲದೆ ಅನ್ಯರಿಗೆ ಹೇಳಲೇಕಯ್ಯಾ? ಇಂತೀ
ಮೂರರೊದಗ ನಾ ಮಾಡಿ ಹಾನಿಯ ಪಡೆವುದಕ್ಕೇನು? ಅಂದಿಗೇನಾದಡಾಗಲಿ ಇಂದಿಗೆ ಶುದ್ಧ, ಸದಾಶಿವಮೂರ್ತಿಲಿಂಗದಲ್ಲಿ.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಹಾವು ಹುಲಿ ಕಳ್ಳರ ಭಯವೆಂದು ಹೇಳಿದವರ ಮೇಲೆ ನೋವುಂಟೆ?


ನೋವಾದಡಾಗಲಿ, ಇದರಿಂದ ಎನಗೆ ಕೇಡಿಲ್ಲ.
ಕಂಡು ಸುಮ್ಮನಿದ್ದಡೆ, ಆ ಗುರುವಿನ ಸುಖದುಃಖ ಎನ್ನದಾಗಿ,
ಸಮಯಕ್ಕಂಜಿದಡೆ ಎನ್ನ ಮಾಡುವ ಮಾಟ ಎನ್ನ ಕೇಡು,
ಎನ್ನ ಅರಿವು ಮರವೆಯಲ್ಲಿದ್ದಡೆ, ಭವದುಃಖಕ್ಕೆ ಬೀಜ.
ಎನ್ನ ಕೈಯಲ್ಲಿ ಎನ್ನಂಗವ ತೊಳೆಯಬೇಕಲ್ಲದೆ ಅನ್ಯರಿಗೆ ಹೇಳಲೇಕಯ್ಯಾ?
ಇಂತೀ ಮೂರರೊದಗ ನಾ ಮಾಡಿ ಹಾನಿಯ ಪಡೆವುದಕ್ಕೇನು?
ಅಂದಿಗೇನಾದಡಾಗಲಿ ಇಂದಿಗೆ ಶುದ್ಧ, ಸದಾಶಿವಮೂರ್ತಿಲಿಂಗದಲ್ಲಿ.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 404

ಕಾಯವುಳ್ಳನ್ನಕ್ಕ ಮಾಡುವುದು ಲಿಂಗಪೂಜೆಯ, ಜೀವವುಳ್ಳನ್ನಕ್ಕ ಅರಿವುದು ಅಭೇದ್ಯ ವಸ್ತುವ, ಉಭಯವ ಕಡೆಗಾಣಿಸಿ


ನಿಂದಲ್ಲಿ ಸದಾಶಿವಮೂರ್ತಿಲಿಂಗವೆಂದು ಕುರುಹಿಡಲಿಲ್ಲ.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಕಾಯವುಳ್ಳನ್ನಕ್ಕ ಮಾಡುವುದು ಲಿಂಗಪೂಜೆಯ,


ಜೀವವುಳ್ಳನ್ನಕ್ಕ ಅರಿವುದು ಅಭೇದ್ಯ ವಸ್ತುವ,
ಉಭಯವ ಕಡೆಗಾಣಿಸಿ ನಿಂದಲ್ಲಿ
ಸದಾಶಿವಮೂರ್ತಿಲಿಂಗವೆಂದು ಕುರುಹಿಡಲಿಲ್ಲ.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 572


ಚಿತ್ತದಲ್ಲಿ ನೆನೆದ ಲೆಕ್ಕವ ಇದಿರಿಟ್ಟು ಬರೆದಲ್ಲದೆ ಅರಿಯಬಾರದು. ಅರಿವು ಘನದಲ್ಲಿ ನಿಂದೆನೆಂದಡೆ ದೃಷ್ಟವಾದ ಲಿಂಗದಲ್ಲಿ
ನಿಂದಲ್ಲದೆ ಕಾಣಬಾರದು. ಹೀಗಲ್ಲದೆ, ಆಧ್ಯಾತ್ಮದಲ್ಲಿ ಹೊದ್ದಿನೋಡಿ ಕಂಡೆನೆಂಬ ಬದ್ಧರ ಮಾತ ಹೊದ್ದದಿರಬೇಕು,
ಸದಾಶಿವಮೂರ್ತಿಲಿಂಗವನರಿವುದಕ್ಕೆ.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಚಿತ್ತದಲ್ಲಿ ನೆನೆದ ಲೆಕ್ಕವ ಇದಿರಿಟ್ಟು ಬರೆದಲ್ಲದೆ ಅರಿಯಬಾರದು.


ಅರಿವು ಘನದಲ್ಲಿ ನಿಂದೆನೆಂದಡೆ ದೃಷ್ಟವಾದ ಲಿಂಗದಲ್ಲಿ ನಿಂದಲ್ಲದೆ ಕಾಣಬಾರದು.
ಹೀಗಲ್ಲದೆ, ಆಧ್ಯಾತ್ಮದಲ್ಲಿ ಹೊದ್ದಿನೋಡಿ ಕಂಡೆನೆಂಬ ಬದ್ಧರ ಮಾತ
ಹೊದ್ದದಿರಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 378

ಕಲ್ಲು ಮರ ಮಣ್ಣಿನ ಮರೆಯಲ್ಲಿ ಪೂಜಿಸಿಕೊಂಬುದು ವಸ್ತುವೇರಿ ತನ್ನ ಮನಸ್ಸಿನ ಗೊತ್ತಲ್ಲದೆ. ಅಲ್ಲಿಪ್ಪುದನರಿವ ಅರಿವು ತಾನೆ
ನಿಜವಸ್ತುವಾಗಿ ಬೆಳಗುತ್ತದೆ ಸದಾಶಿವಮೂರ್ತಿಲಿಂಗವೆಯಾಗಿ.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಕಲ್ಲು ಮರ ಮಣ್ಣಿನ ಮರೆಯಲ್ಲಿ ಪೂಜಿಸಿಕೊಂಬುದು ವಸ್ತುವೇರಿ


ತನ್ನ ಮನಸ್ಸಿನ ಗೊತ್ತಲ್ಲದೆ.
ಅಲ್ಲಿಪ್ಪುದನರಿವ ಅರಿವು ತಾನೆ ನಿಜವಸ್ತುವಾಗಿ ಬೆಳಗುತ್ತದೆ
ಸದಾಶಿವಮೂರ್ತಿಲಿಂಗವೆಯಾಗಿ.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 348


ಅರಿವು ಘಟದಲ್ಲಿ ನಿಂದು ನುಡಿವನ್ನಕ್ಕ ಗುರುಲಿಂಗಜಂಗಮದ ಪೂಜೆಯ ಮಾಡಬೇಕು. ನಾಮರೂಪು ಎಂಬನ್ನಕ್ಕ
ಉಭಯವನರಿಯಬೇಕು. ಸದಾಶಿವಮೂರ್ತಿಲಿಂಗವನರಿವುದಕ್ಕೆ.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಅರಿವು ಘಟದಲ್ಲಿ ನಿಂದು ನುಡಿವನ್ನಕ್ಕ


ಗುರುಲಿಂಗಜಂಗಮದ ಪೂಜೆಯ ಮಾಡಬೇಕು.
ನಾಮರೂಪು ಎಂಬನ್ನಕ್ಕ ಉಭಯವನರಿಯಬೇಕು.
ಸದಾಶಿವಮೂರ್ತಿಲಿಂಗವನರಿವುದಕ್ಕೆ.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 632

ಅಂಬರದಲ್ಲಿ ತೋರುವ ಚಾಪದ ಬಹುವರ್ಣದ ಸಂಭ್ರಮ ಕುಂಬ್ಥಿನಿಯ ಜಲದಲ್ಲಿ ತೋರುತ್ತಿರೆ ಉಭಯದಲ್ಲಿಯೂ ಬಯಲು. ಆ
ರಂಜನೆಯಂತೆ ಚಿತ್ತದ ಕಲೆ ಚಿತ್‍ಶಕ್ತಿಯ ಅರಿವು ಮತ್ರ್ಯರಿಗೆ ಅಗೋಚರ. ಚಿತ್ತಜನ ಬಿಲ್ಲನೆತ್ತುವಾತ ಅನಿತ್ಯದ
ಗೊತ್ತಿನಲೈದಾನೆ. ನಿತ್ಯದ ಗೊತ್ತ ಮುಟ್ಟಿ, ಉಭಯದ ಗೊತ್ತ ಬಚ್ಚಬಯಲಾಯಿತ್ತು. ಬಯಲ ಬೆಳಗಿನಲ್ಲಿ ಹೊಳಹುದೋರುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಅಂಬರದಲ್ಲಿ ತೋರುವ ಚಾಪದ ಬಹುವರ್ಣದ ಸಂಭ್ರಮ


ಕುಂಬ್ಥಿನಿಯ ಜಲದಲ್ಲಿ ತೋರುತ್ತಿರೆ ಉಭಯದಲ್ಲಿಯೂ ಬಯಲು.
ಆ ರಂಜನೆಯಂತೆ ಚಿತ್ತದ ಕಲೆ ಚಿತ್‍ಶಕ್ತಿಯ ಅರಿವು ಮತ್ರ್ಯರಿಗೆ ಅಗೋಚರ.
ಚಿತ್ತಜನ ಬಿಲ್ಲನೆತ್ತುವಾತ ಅನಿತ್ಯದ ಗೊತ್ತಿನಲೈದಾನೆ.
ನಿತ್ಯದ ಗೊತ್ತ ಮುಟ್ಟಿ, ಉಭಯದ ಗೊತ್ತ ಬಚ್ಚಬಯಲಾಯಿತ್ತು.
ಬಯಲ ಬೆಳಗಿನಲ್ಲಿ ಹೊಳಹುದೋರುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ.
ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 371

ಮಣ್ಣಿನೊಳಗೆ ಚಿನ್ನ ಹುಟ್ಟಿ ಮಣ್ಣ ಬಿಟ್ಟಂತಿರಬೇಕು, ಕಲ್ಲಿನೊಳಗೆ ಕಾಂತಿ ಹುಟ್ಟಿ [ಕಲ್ಲ] ಬಿಟ್ಟಂತಿರಬೇಕು, ಕ್ರೀ ಭಾವದಲ್ಲಿ ಅರಿವು
ನೆಲೆಗೊಂಡು. ಸಾಳಿಸಸಿಯ ತುದಿಯಲ್ಲಿ ತುಷ ಮೇಲುಗಳೆದು ನಿಂದಂತೆ, ಕ್ರೀ ನಿಂದು ಅರಿವು ತಲೆದೋರಬೇಕು,
ಸದಾಶಿವಮೂರ್ತಿಲಿಂಗವನರಿವುದಕ್ಕೆ.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಮಣ್ಣಿನೊಳಗೆ ಚಿನ್ನ ಹುಟ್ಟಿ ಮಣ್ಣ ಬಿಟ್ಟಂತಿರಬೇಕು,


ಕಲ್ಲಿನೊಳಗೆ ಕಾಂತಿ ಹುಟ್ಟಿ [ಕಲ್ಲ] ಬಿಟ್ಟಂತಿರಬೇಕು,
ಕ್ರೀ ಭಾವದಲ್ಲಿ ಅರಿವು ನೆಲೆಗೊಂಡು.
ಸಾಳಿಸಸಿಯ ತುದಿಯಲ್ಲಿ
ತುಷ ಮೇಲುಗಳೆದು ನಿಂದಂತೆ, ಕ್ರೀ ನಿಂದು ಅರಿವು ತಲೆದೋರಬೇಕು,
ಸದಾಶಿವಮೂರ್ತಿಲಿಂಗವನರಿವುದಕ್ಕೆ.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 631

ದಿನದಿನಕ್ಕೆ ಫಲರಸ ಬಲಿವಂತೆ ಮಾಡುವ ಕ್ರೀ ಸನ್ನದ್ಧನಾಗಿ, ಅರಿವ ಅರಿವು ಫಲರಸ ಬಲಿದು ಫಳವಾದಂತೆ ಕ್ರೀ ಜ್ಞಾನದಲ್ಲಿ
ನಿಂದು, ಜ್ಞಾನ ಕ್ರೀಯನವಗವಿಸಿದಲ್ಲಿ, ಉಭಯನಾಮ ನಷ್ಟವಾಯಿತ್ತು, ಸದಾಶಿವಮೂರ್ತಿಲಿಂಗವನರಿತಲ್ಲಿ.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ದಿನದಿನಕ್ಕೆ ಫಲರಸ ಬಲಿವಂತೆ ಮಾಡುವ ಕ್ರೀ ಸನ್ನದ್ಧನಾಗಿ,


ಅರಿವ ಅರಿವು ಫಲರಸ ಬಲಿದು ಫಳವಾದಂತೆ
ಕ್ರೀ ಜ್ಞಾನದಲ್ಲಿ ನಿಂದು, ಜ್ಞಾನ ಕ್ರೀಯನವಗವಿಸಿದಲ್ಲಿ,
ಉಭಯನಾಮ ನಷ್ಟವಾಯಿತ್ತು,
ಸದಾಶಿವಮೂರ್ತಿಲಿಂಗವನರಿತಲ್ಲಿ.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 628

ಗಂಧವನೊಳಕೊಂಡ ಕುಸುಮವ ಕೊಯ್ಯಬಹುದಲ್ಲದೆ ಗಂಧವನೊಳಕೊಂಡ ವಾಯುವ ಕೊಯ್ಯಬಹುದೆ?


ಘಟವಕೊಳಕೊಂಡಿದ್ದಾತ್ಮನನರಿಯಬಹುದೆ, ಆತ್ಮನನೊಳಕೊಂಡಿದ್ದ ಘಟವನರಿಯಬಹುದಲ್ಲದೆ ವಸ್ತು ಅಂಗವಾದಲ್ಲಿ
ಅರಿಯಬಹುದಲ್ಲದೆ ಅಂಗ ವಸ್ತುವಾದಲ್ಲಿ ಹಿಂಗಿ ಅರಿವಠಾವಿನ್ನಾವುದು? ಕುಸುಮಕ್ಕೆ ಕಡೆ ನಡು ಮೊದಲಲ್ಲದೆ ಗಂಧಕ್ಕೆ ಕಡೆ
ನಡು ಮೊದಲುಂಟೆ? ಅರಿವುದಕ್ಕೆ, ಅರುಹಿಸಿಕೊಂಬುದಕ್ಕೆ, ಕುರುಹನರಿತಲ್ಲಿಯೆ ಸದಾಶಿವಮೂರ್ತಿಲಿಂಗವೆಂಬ ರೂಪು
ನಿಂದಿತ್ತು.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಗಂಧವನೊಳಕೊಂಡ ಕುಸುಮವ ಕೊಯ್ಯಬಹುದಲ್ಲದೆ


ಗಂಧವನೊಳಕೊಂಡ ವಾಯುವ ಕೊಯ್ಯಬಹುದೆ?
ಘಟವಕೊಳಕೊಂಡಿದ್ದಾತ್ಮನನರಿಯಬಹುದೆ,
ಆತ್ಮನನೊಳಕೊಂಡಿದ್ದ ಘಟವನರಿಯಬಹುದಲ್ಲದೆ
ವಸ್ತು ಅಂಗವಾದಲ್ಲಿ ಅರಿಯಬಹುದಲ್ಲದೆ
ಅಂಗ ವಸ್ತುವಾದಲ್ಲಿ ಹಿಂಗಿ ಅರಿವಠಾವಿನ್ನಾವುದು?
ಕುಸುಮಕ್ಕೆ ಕಡೆ ನಡು ಮೊದಲಲ್ಲದೆ ಗಂಧಕ್ಕೆ ಕಡೆ ನಡು ಮೊದಲುಂಟೆ?
ಅರಿವುದಕ್ಕೆ, ಅರುಹಿಸಿಕೊಂಬುದಕ್ಕೆ, ಕುರುಹನರಿತಲ್ಲಿಯೆ
ಸದಾಶಿವಮೂರ್ತಿಲಿಂಗವೆಂಬ ರೂಪು ನಿಂದಿತ್ತು.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 575

ಹೃದಯದಲ್ಲಿ ತೋರುವ ಅರಿವು ತನ್ಮಯವಾಗಿ, ಇದಿರಿಟ್ಟ ಭಾವಕ್ಕೆ ನೆಲೆಗೊಂಡು, ಭಾವ ತುಂಬಿ ಕಂಗಳ ಮಧ್ಯದಲ್ಲಿ ಹಿಂಗದೆ
ನಿಶ್ಚೈಸಿ, ಅನಿಮಿಷನಂಗದಂತೆ, ಕೂರ್ಮನ ಸ್ನೇಹದಂತೆ, ಅಂಬು ಅಂಬುಜದಂತೆ, ಉಭಯ ಸಂಗದಲ್ಲಿ ನಿಸ್ಸಂಗನ ಬೆಳಗು
ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.

--------------
ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಹೃದಯದಲ್ಲಿ ತೋರುವ ಅರಿವು ತನ್ಮಯವಾಗಿ,


ಇದಿರಿಟ್ಟ ಭಾವಕ್ಕೆ ನೆಲೆಗೊಂಡು, ಭಾವ ತುಂಬಿ
ಕಂಗಳ ಮಧ್ಯದಲ್ಲಿ ಹಿಂಗದೆ ನಿಶ್ಚೈಸಿ,
ಅನಿಮಿಷನಂಗದಂತೆ, ಕೂರ್ಮನ ಸ್ನೇಹದಂತೆ, ಅಂಬು ಅಂಬುಜದಂತೆ,
ಉಭಯ ಸಂಗದಲ್ಲಿ ನಿಸ್ಸಂಗನ ಬೆಳಗು ತೋರುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 367

ಅಸಿಯ ಮೊನೆಯು ಮುರಿದಡೆ ಮಸೆದಡೆ ಮೊನೆಯಾಗದೆ ಅಯ್ಯಾ? ಅಸು ಮರೆದಡೆ ಆತ್ಮನನರಿದಡೆ ಕೇಡುಂಟೆ ಅಯ್ಯಾ?
ಮರೆವುದು ಅರಿವುದು ಎರಡುಳ್ಳನ್ನಕ್ಕ, ಮರೆಯದೆ ಪೂಜಿಸು ಸದಾಶಿವಮೂರ್ತಿಲಿಂಗವ.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಅಸಿಯ ಮೊನೆಯು ಮುರಿದಡೆ ಮಸೆದಡೆ ಮೊನೆಯಾಗದೆ ಅಯ್ಯಾ?


ಅಸು ಮರೆದಡೆ ಆತ್ಮನನರಿದಡೆ ಕೇಡುಂಟೆ ಅಯ್ಯಾ?
ಮರೆವುದು ಅರಿವುದು ಎರಡುಳ್ಳನ್ನಕ್ಕ,
ಮರೆಯದೆ ಪೂಜಿಸು ಸದಾಶಿವಮೂರ್ತಿಲಿಂಗವ.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 515

ಬೇರಿಗೆ ನೀರನೆರೆದಲ್ಲಿ ಆ ಗಿಡುವಿಗೆ ಕಡೆ ನಡು ಮೊದಲೆನ್ನದೆ ಸರ್ವಾಂಗವ ವೇಧಿಸಿ ಸಂಪನ್ನಿಕೆಯ ದೃಕ್ಕಿಂಗೆ ತೋರುವಂತೆ
ಚಿತ್ತುವಿನ ಎರಕ ನಿಜತತ್ವದ ಕುರುಹಿನಲ್ಲಿ ಪರಿಪೂರ್ಣವಾಗಿ ಸಂಪದ ತೋರುತ್ತದೆ. ಕುರಿತ ಕುರುಹಿನ ಮರೆಯಲ್ಲಿ ಅರಿವು
ನಿಂದು ಕುರುಹು ನಿಷ್ಪತ್ತಿಯಾಗುತ್ತದೆ ಎಂಬ ಸಂದೇಹ ನಿಂದಿತ್ತು. ಎಂಬುದನರಿತಾಗ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ.
--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಬೇರಿಗೆ ನೀರನೆರೆದಲ್ಲಿ
ಆ ಗಿಡುವಿಗೆ ಕಡೆ ನಡು ಮೊದಲೆನ್ನದೆ
ಸರ್ವಾಂಗವ ವೇಧಿಸಿ ಸಂಪನ್ನಿಕೆಯ ದೃಕ್ಕಿಂಗೆ ತೋರುವಂತೆ
ಚಿತ್ತುವಿನ ಎರಕ ನಿಜತತ್ವದ ಕುರುಹಿನಲ್ಲಿ ಪರಿಪೂರ್ಣವಾಗಿ ಸಂಪದ ತೋರುತ್ತದೆ.
ಕುರಿತ ಕುರುಹಿನ ಮರೆಯಲ್ಲಿ ಅರಿವು ನಿಂದು
ಕುರುಹು ನಿಷ್ಪತ್ತಿಯಾಗುತ್ತದೆ ಎಂಬ ಸಂದೇಹ ನಿಂದಿತ್ತು.
ಎಂಬುದನರಿತಾಗ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 362

ಪಂಚತತ್ವದಲ್ಲಿದ್ದು ಪರತತ್ವವನರಿಬೇಕು. ಅದಕ್ಕೆ ದೃಷ್ಟ; ಪಶುವಿನ ಹೊಟ್ಟೆಯಲ್ಲಿ ಕರುವಿದ್ದಡೆ ಕರೆವುದಕ್ಕೆ ಮನೋಹರವುಂಟೆ ?


ಅದು ಭಿನ್ನಭಾವವಾಗಿ ಇದಿರಿಟ್ಟು ಉಂಡಲ್ಲದೆ ಮೊಲೆ ತೊರೆಯವು. ಆ ತೆರನನರಿದಲ್ಲಿ ಅರಿವುದಕ್ಕೊಂದು ಕುರುಹು ಬೇಕು.
ಬಲ್ಲಿದ ವೀರನೆಂದಡೂ ಅಲಗಿನ ಮೊನೆಯಿಲ್ಲದೆ ಗೆಲಬಹುದೆ ? ಆ ಅರಿವ ಚಿತ್ತ ಕುರುಹಿನ ಘಟದಲ್ಲಿದ್ದು ಅರಿವುತಿದ್ದಿಹಿತಾದ
ಕಾರಣ. ಇದನರಿತು ಆತ್ಮವಾದವೆಂದು ಎನಲಿಲ್ಲ. ಸದಾಶಿವಮೂರ್ತಿಲಿಂಗವನರಿವುದಕ್ಕೆ ಇದಿರಿಟ್ಟು ಕ[ಳೆ]ದುಳಿಯಬೇಕು.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಪಂಚತತ್ವದಲ್ಲಿದ್ದು ಪರತತ್ವವನರಿಬೇಕು.
ಅದಕ್ಕೆ ದೃಷ್ಟ;
ಪಶುವಿನ ಹೊಟ್ಟೆಯಲ್ಲಿ ಕರುವಿದ್ದಡೆ ಕರೆವುದಕ್ಕೆ ಮನೋಹರವುಂಟೆ ?
ಅದು ಭಿನ್ನಭಾವವಾಗಿ ಇದಿರಿಟ್ಟು ಉಂಡಲ್ಲದೆ ಮೊಲೆ ತೊರೆಯವು.
ಆ ತೆರನನರಿದಲ್ಲಿ ಅರಿವುದಕ್ಕೊಂದು ಕುರುಹು ಬೇಕು.
ಬಲ್ಲಿದ ವೀರನೆಂದಡೂ ಅಲಗಿನ ಮೊನೆಯಿಲ್ಲದೆ ಗೆಲಬಹುದೆ ?
ಆ ಅರಿವ ಚಿತ್ತ ಕುರುಹಿನ ಘಟದಲ್ಲಿದ್ದು ಅರಿವುತಿದ್ದಿಹಿತಾದ ಕಾರಣ.
ಇದನರಿತು ಆತ್ಮವಾದವೆಂದು ಎನಲಿಲ್ಲ.
ಸದಾಶಿವಮೂರ್ತಿಲಿಂಗವನರಿವುದಕ್ಕೆ ಇದಿರಿಟ್ಟು ಕ[ಳೆ]ದುಳಿಯಬೇಕು.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 491

ವೇದವ ನುಡಿವಲ್ಲಿ ವಿಪ್ರರು ಮತ್ತಾರೂ ಶೂದ್ರಜಾತಿ ಕೇಳದಂತೆ ನುಡಿವರದೇತಕ್ಕೆ ? ಅದು ಈಚೆಯ ಮಾತು.
ಕಂಡಕಂಡವರೊಡನೆ ಹೇಳಿಕೊಂಡಾಡುತ್ತಿಪ್ಪ ದಿವ್ಯಜ್ಞಾನ ಪರಮಪ್ರಕಾಶವ ಭಂಡರಿಗೇಕೆ ಸದಾಶಿವಮೂರ್ತಿಲಿಂಗದ ಅರಿವು ?

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ವೇದವ ನುಡಿವಲ್ಲಿ ವಿಪ್ರರು


ಮತ್ತಾರೂ ಶೂದ್ರಜಾತಿ ಕೇಳದಂತೆ ನುಡಿವರದೇತಕ್ಕೆ ?
ಅದು ಈಚೆಯ ಮಾತು.
ಕಂಡಕಂಡವರೊಡನೆ ಹೇಳಿಕೊಂಡಾಡುತ್ತಿಪ್ಪ
ದಿವ್ಯಜ್ಞಾನ ಪರಮಪ್ರಕಾಶವ
ಭಂಡರಿಗೇಕೆ ಸದಾಶಿವಮೂರ್ತಿಲಿಂಗದ ಅರಿವು ?

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 482

ಪಾತಾಳದ ನೀರ ಹುರಿ ಸಂಚದಿಂದ ಧರೆಗೆ ತಾಹಂತೆ ಅರಿವು ಆತ್ಮನಲ್ಲಿ ಅಡಗಿದ್ದುದ ತಂದೆಯಲ್ಲಾ! ಕರದಿ ಕುರುಹಾಗಿ,
ಅಡಗಿದೆಯಲ್ಲಾ! ಶೃಂಗಾರದ ನಿಳಯದ ಮುಚ್ಚುಳು ಕೀಲಿನಿಂದ ಕಡೆಗಾಣಿಸಿದಂತೆ ಅಡಗಿದೆಯಲ್ಲಾ! ಕುರುಹು ಬಿನ್ನವಿಲ್ಲದೆ
ಎನ್ನಡಗೂಡು, ಸದಾಶಿವಮೂರ್ತಿಲಿಂಗವೆ.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ
ಪಾತಾಳದ ನೀರ ಹುರಿ ಸಂಚದಿಂದ ಧರೆಗೆ ತಾಹಂತೆ
ಅರಿವು ಆತ್ಮನಲ್ಲಿ ಅಡಗಿದ್ದುದ ತಂದೆಯಲ್ಲಾ!
ಕರದಿ ಕುರುಹಾಗಿ, ಅಡಗಿದೆಯಲ್ಲಾ!
ಶೃಂಗಾರದ ನಿಳಯದ ಮುಚ್ಚುಳು
ಕೀಲಿನಿಂದ ಕಡೆಗಾಣಿಸಿದಂತೆ ಅಡಗಿದೆಯಲ್ಲಾ!
ಕುರುಹು ಬಿನ್ನವಿಲ್ಲದೆ ಎನ್ನಡಗೂಡು, ಸದಾಶಿವಮೂರ್ತಿಲಿಂಗವೆ.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 577

ವೇದವೇದಾಂತಂಗಳಿಂದ ಸಿದ್ಧಸಿದ್ಧಾಂತಂಗಳಿಂದ ಎಲ್ಲಿ ನೋಡಿದಡೂ ವಿಚಾರವೊಂದೆ ಭೇದ. ಅರಿದಲ್ಲಿ ಮಲಕ್ಕೆ ಹೊರಗು,


ಮರೆದಲ್ಲಿ ಮಲಕ್ಕೆ ಒಳಗು. ಅರಿವು ಮರವೆ ನಿಂದಲ್ಲಿ ಸದಾಶಿವಮೂರ್ತಿಲಿಂಗದ ಬೆಳಗು.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ವೇದವೇದಾಂತಂಗಳಿಂದ ಸಿದ್ಧಸಿದ್ಧಾಂತಂಗಳಿಂದ
ಎಲ್ಲಿ ನೋಡಿದಡೂ ವಿಚಾರವೊಂದೆ ಭೇದ.
ಅರಿದಲ್ಲಿ ಮಲಕ್ಕೆ ಹೊರಗು, ಮರೆದಲ್ಲಿ ಮಲಕ್ಕೆ ಒಳಗು.
ಅರಿವು ಮರವೆ ನಿಂದಲ್ಲಿ ಸದಾಶಿವಮೂರ್ತಿಲಿಂಗದ ಬೆಳಗು.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 565

ಧರೆಯ ಹಾವು ಆಕಾಶದೊಳಗಳ ಕಪ್ಪೆ ಒಳಗೂಡಿ ಒರುಮೆಯಾಗಿ, ಹಾವು ಗಾರುಡನ ನುಂಗಿ, ಕಪ್ಪೆ ಹಿಡಿವ ಜೋಗಿಯ ನುಂಗಿ,
ಮತ್ತೆ ಕಪ್ಪೆಗೆ ಸರ್ಪಗೆ ವಿರೋಧವಾಗಿ, ಕಪ್ಪೆ ಜೋಗಿಯನುಗುಳಿ, ಸರ್ಪನ ನುಂಗಿತ್ತು. ಕಪ್ಪೆಯ ವಿಷ ತಾಗಿ ಜೋಗಿ ಮತ್ತನಾದ.
ಇಂತೀ ಭೇದದಿಂದ ಅರಿವು ತಾನೆ; ಸದಾಶಿವಮೂರ್ತಿಲಿಂಗವು ತಾನು ತಾನೆ.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ
ಧರೆಯ ಹಾವು ಆಕಾಶದೊಳಗಳ ಕಪ್ಪೆ ಒಳಗೂಡಿ ಒರುಮೆಯಾಗಿ,
ಹಾವು ಗಾರುಡನ ನುಂಗಿ, ಕಪ್ಪೆ ಹಿಡಿವ ಜೋಗಿಯ ನುಂಗಿ,
ಮತ್ತೆ ಕಪ್ಪೆಗೆ ಸರ್ಪಗೆ ವಿರೋಧವಾಗಿ,
ಕಪ್ಪೆ ಜೋಗಿಯನುಗುಳಿ, ಸರ್ಪನ ನುಂಗಿತ್ತು.
ಕಪ್ಪೆಯ ವಿಷ ತಾಗಿ ಜೋಗಿ ಮತ್ತನಾದ.
ಇಂತೀ ಭೇದದಿಂದ ಅರಿವು ತಾನೆ;
ಸದಾಶಿವಮೂರ್ತಿಲಿಂಗವು ತಾನು ತಾನೆ.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 451

ರಾಜಸ ತಾಮಸ ಸಾತ್ವಿಕವನರಿದು ಪೂಜಿಸಿಕೊಂಬುದು ಗುರುಚರದ ಇರವು. ಕೊಟ್ಟಿಹರೆಂದು ಬೇಡದೆ, ಇಕ್ಕಿಹರೆಂದು


ಉಣ್ಣದೆ, ಭಕ್ತನಲ್ಲಿ ಅರಿದು ಬಂದುದ ಅನುಕರಿಸಿ ಮರವೆಯಿಂದ ಬಂದುದ ತೆರದರಿಸಿನವ ಮಾಡಿ, ಉಭಯಕ್ಕೆ ಕೇಡಿಲ್ಲದಂತೆ
ಇಪ್ಪುದು ಗುರುಚರದ ಇರವು, ಸದಾಶಿವಮೂರ್ತಿಲಿಂಗದ ಅರಿವು.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ರಾಜಸ ತಾಮಸ ಸಾತ್ವಿಕವನರಿದು ಪೂಜಿಸಿಕೊಂಬುದು ಗುರುಚರದ ಇರವು.


ಕೊಟ್ಟಿಹರೆಂದು ಬೇಡದೆ, ಇಕ್ಕಿಹರೆಂದು ಉಣ್ಣದೆ,
ಭಕ್ತನಲ್ಲಿ ಅರಿದು ಬಂದುದ ಅನುಕರಿಸಿ
ಮರವೆಯಿಂದ ಬಂದುದ ತೆರದರಿಸಿನವ ಮಾಡಿ,
ಉಭಯಕ್ಕೆ ಕೇಡಿಲ್ಲದಂತೆ ಇಪ್ಪುದು ಗುರುಚರದ ಇರವು,
ಸದಾಶಿವಮೂರ್ತಿಲಿಂಗದ ಅರಿವು.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 621

ಅರುಣಕಿರಣ ಮಂದಿರದ ಕಂಡಿಯಲ್ಲಿ ತೋರುತ್ತದೆ, ಆ ಘಟದಲ್ಲಿ ಎಡೆಯಾಡುವ ``ಅಣೋರಣೀಯಾನ್ ಎಂಬಂತೆ,


ಅಂಗಮಧ್ಯದ ಚಿತ್ತದ ದ್ವಾರದಲ್ಲಿ ಅರಿದಡೆ ತಾಕುವ ಜ್ಞಾನ. ``ಅಣೋರಣಿಯಾನ್ ಎಂಬುದರಿದ ತನ್ನಯ ಅರಿವು ನಿಂದ
ಘಟದಲ್ಲಿ ಬೆಳಗುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.

--------------
ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಅರುಣಕಿರಣ ಮಂದಿರದ ಕಂಡಿಯಲ್ಲಿ ತೋರುತ್ತದೆ,


ಆ ಘಟದಲ್ಲಿ ಎಡೆಯಾಡುವ ``ಅಣೋರಣೀಯಾನ್ ಎಂಬಂತೆ,
ಅಂಗಮಧ್ಯದ ಚಿತ್ತದ ದ್ವಾರದಲ್ಲಿ ಅರಿದಡೆ ತಾಕುವ ಜ್ಞಾನ.
``ಅಣೋರಣಿಯಾನ್ ಎಂಬುದರಿದ ತನ್ನಯ ಅರಿವು
ನಿಂದ ಘಟದಲ್ಲಿ ಬೆಳಗುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 352

ಅರಿವಾಗ ಆ ತನುವಿನಲ್ಲಿದ್ದೆ ಅರಿಯಿತ್ತು, ಮರೆವಾಗ ಆ ತನುವಿನಲ್ಲಿದ್ದೆ ಮರೆಯಿತ್ತು. ಅರಿವು ಮರವೆ ಎರಡಾಯಿತ್ತು, ಉಭಯವ
ತಾಳಿದ ಘಟವೊಂದಾಯಿತ್ತು, ಇಂತೀ ಭೇದ. ವಿಷಬೇರಿನಂತೆ ಸಂಚಾರಕ್ಕೆ ಒಳಗಾದುದು ವಿಷಮಯವಾಯಿತ್ತು.
ಗೌಪ್ಯಕೊಳಗಾದುದು ಅಮೃತಮಯವಾಯಿತ್ತು . ಇಂತೀ ಸಂಚಾರವುಳ್ಳನ್ನಕ್ಕ ಸಂಚಿತ ಕರ್ಮ, ಸಂಚಾರ ನಿಲೆ ಆತ್ಮ
ನಿರ್ಮುಕ್ತವಾದಲ್ಲಿಯೆ ಸದಾಶಿವಮೂರ್ತಿಲಿಂಗವು ತಾನೆ.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಅರಿವಾಗ ಆ ತನುವಿನಲ್ಲಿದ್ದೆ ಅರಿಯಿತ್ತು,


ಮರೆವಾಗ ಆ ತನುವಿನಲ್ಲಿದ್ದೆ ಮರೆಯಿತ್ತು.
ಅರಿವು ಮರವೆ ಎರಡಾಯಿತ್ತು,
ಉಭಯವ ತಾಳಿದ ಘಟವೊಂದಾಯಿತ್ತು,
ಇಂತೀ ಭೇದ.
ವಿಷಬೇರಿನಂತೆ ಸಂಚಾರಕ್ಕೆ ಒಳಗಾದುದು ವಿಷಮಯವಾಯಿತ್ತು.
ಗೌಪ್ಯಕೊಳಗಾದುದು ಅಮೃತಮಯವಾಯಿತ್ತು .
ಇಂತೀ ಸಂಚಾರವುಳ್ಳನ್ನಕ್ಕ ಸಂಚಿತ ಕರ್ಮ,
ಸಂಚಾರ ನಿಲೆ ಆತ್ಮ ನಿರ್ಮುಕ್ತವಾದಲ್ಲಿಯೆ
ಸದಾಶಿವಮೂರ್ತಿಲಿಂಗವು ತಾನೆ.
ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 516

ಮಹಾವಾರಿಧಿಯ ತೆರೆಯ ಮಧ್ಯದಲ್ಲಿ ಹುಟ್ಟುವ ಹೊಂದುವ ದಿನಮಣಿಯ ಭೇದದಂತೆ, ತನ್ನ ಚಿತ್ತದ ಅರಿವು ಮರವೆ
ಕುರುಹೆಂದು ಪ್ರಮಾಳಿಸದೆ, ಅರಿವೆಂದು ನಿರ್ಧರಿಸದೆ ಎರಡರ ಭೇದದಲ್ಲಿ ಕಂಡು ನಿಂದ ಉಳುಮೆ ಬೆಳಗುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ,

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಮಹಾವಾರಿಧಿಯ ತೆರೆಯ ಮಧ್ಯದಲ್ಲಿ


ಹುಟ್ಟುವ ಹೊಂದುವ ದಿನಮಣಿಯ ಭೇದದಂತೆ,
ತನ್ನ ಚಿತ್ತದ ಅರಿವು ಮರವೆ
ಕುರುಹೆಂದು ಪ್ರಮಾಳಿಸದೆ, ಅರಿವೆಂದು ನಿರ್ಧರಿಸದೆ
ಎರಡರ ಭೇದದಲ್ಲಿ ಕಂಡು ನಿಂದ ಉಳುಮೆ ಬೆಳಗುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ,

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 355

ಭಕ್ತಂಗೆ ವಿಶ್ವಾಸ, ಗುರುವಿಂಗೆ ಅರಿವು, ಉಭಯದ ಭೇದವೊಂದೆಯಾದ ಕಾರಣ. ಕಾಯಜೀವದ ತೆರದಂತೆ, ಕಾಯದ
ರುಜೆಯ ಜೀವ ಅನುಭವಿಸುವಂತೆ, ಉಭಯ ನಿರ್ಧಾರವಾಗಿಯಲ್ಲದೆ, ಸದಾಶಿವಮೂರ್ತಿಲಿಂಗವನರಿಯಬಾರದು.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಭಕ್ತಂಗೆ ವಿಶ್ವಾಸ, ಗುರುವಿಂಗೆ ಅರಿವು,


ಉಭಯದ ಭೇದವೊಂದೆಯಾದ ಕಾರಣ.
ಕಾಯಜೀವದ ತೆರದಂತೆ, ಕಾಯದ ರುಜೆಯ ಜೀವ ಅನುಭವಿಸುವಂತೆ,
ಉಭಯ ನಿರ್ಧಾರವಾಗಿಯಲ್ಲದೆ,
ಸದಾಶಿವಮೂರ್ತಿಲಿಂಗವನರಿಯಬಾರದು.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 625

ಹರಿವ ಸಕಟಿಂಗೆ ಕಡೆಗೀಲು ಕಡೆಯಾದಲ್ಲಿ ಆ ಗಾಲಿ ಅಡಿಯಿಡಬಲ್ಲುದೆ? ಕುರುಹಿನ ಮೂರ್ತಿಯಲ್ಲಿ ಅರಿವು ಒಡಗೂಡದಿರೆ ಆ
ಜ್ಞಾನ ಹಿಂದ ಮರೆದು ಮುಂದಕ್ಕಡಿಯಿಡಲಿಲ್ಲ. ತಡಿಯಲ್ಲಿ ನಿಂದು ಮಡುವಿನಲ್ಲಿದ್ದ ಹರುಗೋಲಕ್ಕೆ ಅಡಿಯಿಟ್ಟು ಅದುವೊಡಗೂಡಿ
ಎಯ್ದುವಂತೆ ಕುರುಹಿನ ತಡಿ, ಮರವೆಯ ಮಡು, ಮಾಡುವ ವರ್ತಕ ಹರುಗೋಲಾಗಿ, ಅರಿಕೆ ಅಂಬಿಗನಾಗಿ ಸಂಸಾರ
ಸಾಗರವ ದಾಂಟಿ, ಆ ತಡಿಯ ಮರೆಯಲದೆ ನಿಜನೆಮ್ಮುಗೆಯ ಕಳೆಬೆಳಗು ಬೆಳಗುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಹರಿವ ಸಕಟಿಂಗೆ ಕಡೆಗೀಲು ಕಡೆಯಾದಲ್ಲಿ ಆ ಗಾಲಿ ಅಡಿಯಿಡಬಲ್ಲುದೆ?


ಕುರುಹಿನ ಮೂರ್ತಿಯಲ್ಲಿ ಅರಿವು ಒಡಗೂಡದಿರೆ
ಆ ಜ್ಞಾನ ಹಿಂದ ಮರೆದು ಮುಂದಕ್ಕಡಿಯಿಡಲಿಲ್ಲ.
ತಡಿಯಲ್ಲಿ ನಿಂದು ಮಡುವಿನಲ್ಲಿದ್ದ ಹರುಗೋಲಕ್ಕೆ ಅಡಿಯಿಟ್ಟು
ಅದುವೊಡಗೂಡಿ ಎಯ್ದುವಂತೆ
ಕುರುಹಿನ ತಡಿ, ಮರವೆಯ ಮಡು, ಮಾಡುವ ವರ್ತಕ ಹರುಗೋಲಾಗಿ,
ಅರಿಕೆ ಅಂಬಿಗನಾಗಿ ಸಂಸಾರ ಸಾಗರವ ದಾಂಟಿ,
ಆ ತಡಿಯ ಮರೆಯಲದೆ ನಿಜನೆಮ್ಮುಗೆಯ ಕಳೆಬೆಳಗು ಬೆಳಗುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 364

ಶರೀರಘಟಕ್ಕೆ ಶಿಲೆಮೂರ್ತಿ ವಸ್ತುವಾಯಿತ್ತು, ಆತ್ಮಘಟಕ್ಕೆ ಅರಿವುಮೂರ್ತಿ ವಸ್ತುವಾಯಿತ್ತು. ನೇಮಘಟ ನಿತ್ಯಲಿಂಗವನರಿತು,


ನಿತ್ಯಲಿಂಗ ಅನಿತ್ಯಲಿಂಗವನರಿತು, ಅನಿತ್ಯ ಚಿತ್ಪ್ರಕಾಶವನೆಯ್ದಿ ಅದರ ಮರೆಯಲ್ಲಿ ಕುಡಿವೆಳಗು ತೋರುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ.

--------------

ಅರಿವಿನ ಮಾರಿತಂದೆ
×

ಅರಿವಿನ ಮಾರಿತಂದೆ

ಶರೀರಘಟಕ್ಕೆ ಶಿಲೆಮೂರ್ತಿ ವಸ್ತುವಾಯಿತ್ತು,


ಆತ್ಮಘಟಕ್ಕೆ ಅರಿವುಮೂರ್ತಿ ವಸ್ತುವಾಯಿತ್ತು.
ನೇಮಘಟ ನಿತ್ಯಲಿಂಗವನರಿತು, ನಿತ್ಯಲಿಂಗ ಅನಿತ್ಯಲಿಂಗವನರಿತು,
ಅನಿತ್ಯ ಚಿತ್ಪ್ರಕಾಶವನೆಯ್ದಿ
ಅದರ ಮರೆಯಲ್ಲಿ ಕುಡಿವೆಳಗು ತೋರುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 360

ಹಾಲು ಬತ್ತಿದ ಹಸುವಿಂಗೆ ಕರುವ ಬಿಟ್ಟಡೆ ಒದೆಯುವುದಲ್ಲದೆ ಉಣಲೀಸುವುದೆ? ಅರಿವು ನಷ್ಟವಾದವ ಕ್ರೀಯ ಬಲ್ಲನೆ?
ಕ್ರೀಯೆಂಬುದೆ ಹಸು, ಅರಿವೆಂಬುದೆ ಹಾಲು, ಬಯಕೆಯೆಂಬುದೆ ಕರು. ಇಂತೀ ತ್ರಿವಿಧವನರಿದಲ್ಲಿ ಸದಾಶಿವಮೂರ್ತಿಲಿಂಗವು
ತಾನೆ.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಹಾಲು ಬತ್ತಿದ ಹಸುವಿಂಗೆ ಕರುವ ಬಿಟ್ಟಡೆ ಒದೆಯುವುದಲ್ಲದೆ ಉಣಲೀಸುವುದೆ?


ಅರಿವು ನಷ್ಟವಾದವ ಕ್ರೀಯ ಬಲ್ಲನೆ?
ಕ್ರೀಯೆಂಬುದೆ ಹಸು, ಅರಿವೆಂಬುದೆ ಹಾಲು, ಬಯಕೆಯೆಂಬುದೆ ಕರು.
ಇಂತೀ ತ್ರಿವಿಧವನರಿದಲ್ಲಿ ಸದಾಶಿವಮೂರ್ತಿಲಿಂಗವು ತಾನೆ.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 496

ಶರೀರ ದಹನ ಮುಖವೆಲ್ಲವು ರುದ್ರತತ್ವ ಆಧೀನವಾಗಿಹುದು. ಶರೀರಮುಖ ಸಮಾಧಿ ಆಧೀನವಾಗಿಹುದೆಲ್ಲವು


ವಿಷ್ಣುಪಕ್ಷವಾಗಿಹವು. ಇಂತೀ ಉಭಯ ಲಯವನರಿತಲ್ಲಿ ಪೂರ್ವಕಕ್ಷೆಯಾಗಿಹುದು. ಇಂತೀ ಭೇದಂಗಳನರಿತು ಹೊರಗಾಗಿ
ನಿಂದಲ್ಲಿ ಸದಾಶಿವಮೂರ್ತಿಲಿಂಗದ ಅರಿವು ಒಳಗಾಗಿಹುದು.

--------------
ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಶರೀರ ದಹನ ಮುಖವೆಲ್ಲವು ರುದ್ರತತ್ವ ಆಧೀನವಾಗಿಹುದು.


ಶರೀರಮುಖ ಸಮಾಧಿ ಆಧೀನವಾಗಿಹುದೆಲ್ಲವು ವಿಷ್ಣುಪಕ್ಷವಾಗಿಹವು.
ಇಂತೀ ಉಭಯ ಲಯವನರಿತಲ್ಲಿ ಪೂರ್ವಕಕ್ಷೆಯಾಗಿಹುದು.
ಇಂತೀ ಭೇದಂಗಳನರಿತು ಹೊರಗಾಗಿ ನಿಂದಲ್ಲಿ
ಸದಾಶಿವಮೂರ್ತಿಲಿಂಗದ ಅರಿವು ಒಳಗಾಗಿಹುದು.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 596

ಸ್ಥೂಲದಲ್ಲಿ ಸಿಕ್ಕಿ, ಸೂಕ್ಷ್ಮದಲ್ಲಿ ಕಂಡು, ಕಾರಣದಲ್ಲಿ ಅರಿವುದು ಒಂದೊ ಮೂರೊ ಎಂಬುದನರಿತಲ್ಲಿ


ಸದಾಶಿವಮೂರ್ತಿಲಿಂಗಸಂಗವಾದುದು.

--------------

ಅರಿವಿನ ಮಾರಿತಂದೆ

ಅರಿವಿನ ಮಾರಿತಂದೆ

ಸ್ಥೂಲದಲ್ಲಿ ಸಿಕ್ಕಿ, ಸೂಕ್ಷ್ಮದಲ್ಲಿ ಕಂಡು, ಕಾರಣದಲ್ಲಿ ಅರಿವುದು


ಒಂದೊ ಮೂರೊ ಎಂಬುದನರಿತಲ್ಲಿ
ಸದಾಶಿವಮೂರ್ತಿಲಿಂಗಸಂಗವಾದುದು.

ಸಮಗ್ರ ವಚನ ಸಂಪುಟ: 6   ವಚನದ ಸಂಖ್ಯೆ: 607

ವಚನರಚನೆಯ ಬಲ್ಲ ಅರುಹಿರಿಯರೆಲ್ಲರು ಮೂರುಳ್ಳವನ ಬಾಗಿಲ ಕಾಯಿದೈಧಾರೆ. ಹೇಳಿ ಕೇಳಿ


ಬಲ್ಲತನವಾದೆಹೆನೆಂಬವರೆಲ್ಲರು ಬಾಗಿಲಲ್ಲಿಯೆ ಸಿಕ್ಕಿದರು. ಸ್ಥಾವರಾದಿಗಳು ಮೊದಲಾಗಿ ಇದಿರಿಟ್ಟ ಕುರುಹೆಲ್ಲವು
ತಾವಿದ್ದಠಾವಿಗೆ ತಂದುಕೊಂಬವರಿಂದ ಕಡೆಯೆ ಅರಿವುಳ್ಳ ಜ್ಞಾನಿಗಳೆಂಬವರು ? ಇದು ಕಾರಣ, ಸಂಚಿತ ಅಗಾಮಿ ಪ್ರಾರಬ್ಧ
ಎಲ್ಲಿದ್ದಡೂ ತಪ್ಪದು. ಹಲುಬಿ ಹರಿದಾಡಬೇಡ, ಸದಾಶಿವಮೂರ್ತಿಲಿಂಗವ ಒಲವರವಿಲ್ಲದೆ ನೆರೆ ನಂಬು.

--------------
ಅರಿವಿನ ಮಾರಿತಂದೆ

You might also like