M.tech Permission - Teju Kumar N

You might also like

Download as docx, pdf, or txt
Download as docx, pdf, or txt
You are on page 1of 6

ದಿನಾಂಕ: 1 ೭-07-2021

ಇಂದ,
ಶ್ರೀ ತೇಜು ಕುಮಾರ್‌ಎನ್‌,
ಸಹಾಯಕ ಇಂಜಿನಿಯರ್‌, ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ,
ಬೆಂಗಳೂರು
ಇವರಿಗೆ,
ನಿಬಂಧಕರು / ಪ್ರಧಾನ ಇಂಜಿನಿಯರ್
ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ,
ಬೆಂಗಳೂರು
ಮಾನ್ಯರೆ,
ವಿಷಯ ಶ್ರೀ. ತೇಜು ಕುಮಾರ್‌ ಎನ್‌, ಸಹಾಯಕ ಇಂಜಿನಿಯರ್‌ ಆದ ನನಗೆ ಭಾರತೀಯ ವಿಜ್ಞಾನ ಸಂಸ್ಥೆ,
: ಬೆಂಗಳೂರು (Indian Institute of Science, Bengaluru) ಇಲ್ಲಿನ ಕರ್ನಾಟಕ ಸರ್ಕಾರದ
ಪ್ರಾಯೋಜಕತ್ವದಲ್ಲಿ ನಿಯೋಜನೆ ಮೇರೆಗೆ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡಲು ಅನುಮತಿ ನೀಡುವ
ಕುರಿತು
*****
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ತಮ್ಮ ಕಚೇರಿಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ
ನಾನು ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ಇಲ್ಲಿ ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯಲ್ಲಿ ಕೆಲಸ
ನಿರ್ವಹಿಸುತ್ತಿರುವ ಇಂಜಿನಿಯರ್‌ಗಳಿಗಾಗಿ ಸರ್ಕಾರದ ಪ್ರಾಯೋಜಕತ್ವದಲ್ಲಿ ನೀಯೋಜನೆ ಮೇರೆಗೆ MTech in Civil
Engineering (Water Resources Engineering major) 2 ವರ್ಷಗಳ ಸ್ನಾತಕೋತ್ತರ ಪದವಿ ಕೋರ್ಸ್‍ಗಾಗಿ
ಅರ್ಜಿಯನ್ನು ಅಹ್ವಾನಿಸಿದ್ದರು. ನಾನು ಮಾರ್ಚ-2021 ರಲ್ಲಿ ಅರ್ಜಿ ಸಲ್ಲಿಸಿದ್ದು ಭಾರತೀಯ ವಿಜ್ಞಾನ ಸಂಸ್ಥೆಯ
ನಿಯಾಮವಳಿಯಂತೆ
ದಿನಾಂಕ:30-06-2021 ರಂದು ಆನ್ ಲೈನ್‌ ಸಂದರ್ಶನದಲ್ಲಿ ಭಾಗವಹಿಸಿರುತ್ತೇನೆ. ದಿನಾಂಕ: 16-07-2021 ರಂದು
ಭಾರತೀಯ ವಿಜ್ಞಾನ ಸಂಸ್ಥೆ ಯವರಿಂದ (ಇಮೇಲ್‌ ಮುಖೇನ) ನಾನು ಪ್ರಾಯೋಜಕತ್ವದ MTech in Civil
Engineering (Water Resources Engineering major) ಸ್ನಾತಕೋತ್ತರ ಕೋರ್ಸ್‌ಗೆ ಆಯ್ಕೆಯಾಗಿರುತ್ತೇನೆ
ಎಂದು ತಿಳಿಸಿರುತ್ತಾರೆ.

ಸದರಿ ಕೋರ್ಸ್‍ನಲ್ಲಿ ಅಧ್ಯಯನ ಮಾಡುವುದರಿಂದ ಕಚೇರಿ ಕೆಲಸ ನಿರ್ವಹಿಸಲು ಹೆಚ್ಚಿನ ಜ್ಞಾನ ದೊರಯಬಹುದೆಂದು
ಮತ್ತು ಜಲಸಂಪನ್ಮೂಲ ನಿರ್ವಹಣೆಯಲ್ಲಿ ಉನ್ನತ ತಂತ್ರಜ್ಞಾನವನ್ನು ಅನ್ವಯಿಸಲು ಸಹಕಾರಿಯಾಗಲಿದೆ ಎಂದು
ಭಾವಿಸುತ್ತೇನೆ. ಸರ್ಕಾರದ ಆದೇಶ ಸಂಖ್ಯೆ: ಜಸಂಇ 137 ಸೇಸಕಿ 2010 ದಿನಾಂಕ: 25-09-2010 ರಲ್ಲಿ
ಜಲಸಂಪನ್ಮೂಲ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ನೌಕರರುಗಳನ್ನು ಸ್ನಾತಕೋತ್ತರ ಉನ್ನತ
ವ್ಯಾಸಂಗಕ್ಕಾಗಿ ನಿಯೋಜಿಸುವಂತಹ ಕೋರ್ಸಗಳನ್ನು ಗುರುತಿಸಿ ಆದೇಶಿಸಿದೆ. ಭಾರತೀಯ ವಿಜ್ಞಾನ ಸಂಸ್ಥೆ,
ಬೆಂಗಳೂರು ಇವರ MTech in Civil Engineering (Water Resources Engineering major)
ಸ್ನಾತಕೋತ್ತರ ಕೋರ್ಸ್‌ ಸದರಿ ಆದೇಶದಲ್ಲಿ ಗುರುತಿಸಲಾಗಿರುವ ಕೋರ್ಸ್‌ಗಳಲ್ಲಿ ಒಂದಾಗಿದೆ.

// 2 //

ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ಇಲ್ಲಿ ನನಗೆ MTech in Civil Engineering (Water Resources
Engineering major) ಸ್ನಾತಕೋತ್ತರ ಪದವಿ 2 ವರ್ಷಗಳ ಅವಧಿಗೆ ಅಧ್ಯಯನ ಮಾಡಲು ಆಯ್ಕೆಯಾಗಿರುವುದರಿಂದ
ಸದರಿ ಸ್ನಾತಕೋತ್ತರ ಪದವಿ ಕೋರ್ಸಗೆ ನನ್ನನ್ನು 2 ವರ್ಷದ ಅವಧಿ ಅಂದರೆ ಆಗಸ್ಟ್-2021 ರಿಂದ ಜುಲೈ-2023
ಶೈಕ್ಷಣಿಕ ವರ್ಷ, ನಿಯೋಜಿಸಿಸಲು ಮತ್ತು ಕೋರ್ಸ್‍ನ ವೆಚ್ಚವನ್ನು ಭರಿಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ
ಪಡೆಯಲು ಪ್ರಸ್ತಾವನೆಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲು ಕೋರಲಾಗಿದೆ.
ತೇಜು ಕುಮಾರ್‌ಎನ್‌‌
ಸಹಾಯಕ ಇಂಜಿನಿಯರ್
ದಿನಾಂಕ: 1 ೭-07-2021
ಇಂದ,
ಶ್ರೀ ತೇಜು ಕುಮಾರ್‌ಎನ್‌,
ಸಹಾಯಕ ಇಂಜಿನಿಯರ್‌, ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ,
ಬೆಂಗಳೂರು
ಇವರಿಗೆ,
ಸರ್ಕಾರದ ಕಾರ್ಯದರ್ಶಿಗಳು,
ಜಲ ಸಂಪನ್ಮೂಲ ಇಲಾಖೆ, ವಿಕಾಸ ಸೌಧ,
ಬೆಂಗಳೂರು
“ಸಮುಚ್ಚಿತ ಮಾರ್ಗದಲ್ಲಿ”
ಮಾನ್ಯರೆ,
ವಿಷಯ: ಶ್ರೀ. ತೇಜು ಕುಮಾರ್‌ ಎನ್‌, ಸಹಾಯಕ ಇಂಜಿನಿಯರ್‌ ಆದ ನನಗೆ ಭಾರತೀಯ ವಿಜ್ಞಾನ ಸಂಸ್ಥೆ,
ಬೆಂಗಳೂರು (Indian Institute of Science, Bengaluru) ಇಲ್ಲಿನ ಕರ್ನಾಟಕ ಸರ್ಕಾರದ
ಪ್ರಾಯೋಜಕತ್ವದಲ್ಲಿ ನಿಯೋಜನೆ ಮೇರೆಗೆ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡಲು ಅನುಮತಿ
ನೀಡುವ ಕುರಿತು
ಉಲ್ಲೇಖ 1) ಸರ್ಕಾರದ ಆದೇಶ ಸಂ: ಜಸಂಇ:224:ಸೇಸಕಿ:2013 ದಿನಾಂಕ: 28-02-2014 & 15-03-2014
: 2) ವ್ಯವಸ್ಥಾಪಕ ನಿರ್ದೇಶಕರು, ಕೃಷ್ಣ ಭಾಗ್ಯ ಜಲ ನಿಗಮ ನಿಯಮತಿ, ಬೆಂಗಳೂರು ರವರ ಕಚೇರಿ
ಆದೇಶ ಸಂಖ್ಯೆ: ವ್ಯನಿ/ಕೃಭಾಜನಿನಿ/ಇ.ಎಸ್.ಬಿ/ಸ.ಇ-ಸ್ಥನಿ/2013-14/2291 ದಿನಾಂಕ: 20-03-
2014
3) ಮುಖ್ಯ ಇಂಜಿನಿಯರ್, ಜಲಸಂಪನ್ಮೂಲ ಅಭವೃದ್ಧಿ ಸಂಸ್ಥೆ, ಬೆಂಗಳೂರು ರವರ ಆದೇಶ ಸಂಖ್ಯೆ:
ಜಸಅ/39/ಇಎಸ್‍ಎಲ್/2016 ದಿನಾಂಕ: 04-03-2017
4) ಮುಖ್ಯ ಇಂಜಿನಿಯರ್, ಜಲಸಂಪನ್ಮೂಲ ಅಭವೃದ್ಧಿ ಸಂಸ್ಥೆ, ಬೆಂಗಳೂರು ರವರ ಜ್ಞಾಪನಾ ಪತ್ರ
ಸಂಖ್ಯೆ: ಜಸಅ/ಇಎಸ್‍ಎಂ/ಸ.ಇಂ/ವರ್ಗ/2016-17 ದಿನಾಂಕ: 04-07-2016
5) ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ಇವರಿಂದ ಇಮೇಲ್‌ಮುಖೇನ ದಿನಾಂಕ: 16-07-2021
ರಂದು ಸ್ವೀಕೃತವಾಗಿರುವ ಪ್ರಾಯೋಜಕತ್ವದ ಸ್ನಾತಕೋತ್ತರ ಪದವಿ ಆಯ್ಕೆ ಪತ್ರ
*****
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ ಪತ್ರ (1) ಮತ್ತು (2) ರ ಆದೇಶದ ಪತ್ರದಂತೆ ಕರ್ನಾಟಕ
ಲೋಕಸೇವಾ ಆಯೋಗದಿಂದ ನೇಮಕಾತಿ ಹೊಂದಿ, ಸಹಾಯಕ ಇಂಜಿನಿಯರ್ ಆಗಿ ಮುಖ್ಯ ಇಂಜಿನಿಯರ್‌ ರವರ
ಕಚೇರಿ, ಕೃ.ಭಾ.ಜ.ನಿ.ನಿ ಕಾಲುವೆ ವಲಯ-2, ರಾಂಪೂರ (ಪ.ಆ), ಸಿಂದಗಿ ತಾಲ್ಲೂಕು ವಿಜಯಪುರ ಜಿಲ್ಲೆ ಕಛೇರಿಯಲ್ಲಿ
ದಿನಾಂಕ:21-03-2014 ರ ಪೂರ್ವಾಹ್ನ ಕರ್ತವ್ಯಕ್ಕೆ ಹಾಜರಾಗಿರುತ್ತೇನೆ.
ಪುಟ-2 ಕ್ಕೆ
// 2 //
ಸದರಿ ಆದೇಶದಂತೆ ಎರಡು ವರ್ಷದ ಅವಧಿಗೆ ಪರೀಕ್ಷಣಾ ಅವಧಿಯಲ್ಲಿದ್ದು ಈ ಅವಧಿಯಲ್ಲಿ ಇಲಾಖೆಯ ವತಿಯಿಂದ
ಓರಿಯಂಟೇಷನ್ ತರಬೇತಿಯನ್ನು ಪೂರ್ಣಗೊಳಿಸಿದ್ದು ಇಲಾಖಾ ಪರೀಕ್ಷೆಗಳಾದ ಅಕೌಂಟ್ಸ್ ಹೈಯರ್, ಪಿ.ಡಬ್ಲ್ಯೂ.ಡಿ.
ಹೈಯರ್ ಭಾಗ-1 ಮತ್ತು ಭಾಗ-2 ಹಾಗು ಜನರಲ್ ಲಾ ಭಾಗ-1 ಮತ್ತು ಭಾಗ-2 ರಲ್ಲಿ ಸಕಾಲದಲ್ಲಿ ಉತ್ತೀರ್ಣನಾಗಿದ್ದು
ವಿವರಗಳು ಈ ಕೆಳಗಿನಂತಿವೆ.
ಉತ್ತೀರ್ಣರಾದ ವರ್ಷ/ ನೋಂದಣೆ ಪ್ರಮಾಣ ಪತ್ರ ಸಂಖ್ಯೆ/
ಕ್ರ.ಸಂ. ವಿಷಯ
ಅಧಿವೇಷನ ಸಂಖ್ಯೆ ದಿನಾಂಕ
1 ಅಕೌಂಟ್ಸ್ ಹೈಯರ್ 2014 / ಮೊದಲನೇಯ 108125 AA024777/ 15-10-2014
2 ಪಿ.ಡಬ್ಲ್ಯು.ಡಿ ಹೈಯರ್ ಭಾಗ-1 2014 / ಮೊದಲನೇಯ 108125 AA024777/ 15-10-2014
3 ಪಿ.ಡಬ್ಲ್ಯು.ಡಿ ಹೈಯರ್ ಭಾಗ-2 2014 / ಮೊದಲನೇಯ 108125 AA024777/ 15-10-2014
4 ಜನರಲ್ ಲಾ ಭಾಗ-1 2014 / ಮೊದಲನೇಯ 108125 AA024777/ 15-10-2014
5 ಜನರಲ್ ಲಾ ಭಾಗ-2 2014 / ಮೊದಲನೇಯ 108125 AA024777/ 15-10-2014

ಉಲ್ಲೇಖ ಪತ್ರ (4) ರಲ್ಲಿ ಮುಖ್ಯ ಇಂಜಿನಿಯರ್, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಬೆಂಗಳೂರು ರವರು 2 ವರ್ಷಗಳ
ಪರೀಕ್ಷಣಾ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿರುವುದಾಗಿ ಘೋಷಿಸಿರುತ್ತಾರೆ. ಮುಂದುವರಿದು ಉಲ್ಲೇಖಿತ ಪತ್ರ (೫)
ರಲ್ಲಿನ ಮುಖ್ಯ ಇಂಜಿನಿಯರ್, ಜಲಸಂಪನ್ಮೂಲ ಅಭವೃದ್ಧಿ ಸಂಸ್ಥೆ, ಜ್ಞಾಪನಾ ಪತ್ರದಂತೆ ದಿನಾಂಕ: 18-07-2016 ರ
ಪೂರ್ವಹ್ನಾದಿಂದ ನಿಬಂಧಕರು, ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ, ಬೆಂಗಳೂರು ಕಚೇರಿಯಲ್ಲಿ
ಸಹಾಯಕ ಇಂಜಿನಿಯರ್ ಹುದ್ದೆಗೆ ವರದಿ ಮಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿರುತ್ತೇನೆ ಹಾಗೂ ಯಾವುದೇ ಇಲಾಖಾ
ವಿಚಾರಣೆಯು ಬಾಕಿ ಇರುವುದಿಲ್ಲ.

ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ಇಲ್ಲಿ ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯಲ್ಲಿ ಕೆಲಸ
ನಿರ್ವಹಿಸುತ್ತಿರುವ ಇಂಜಿನಿಯರ್‌ಗಳಿಗಾಗಿ ಸರ್ಕಾರದ ಪ್ರಾಯೋಜಕತ್ವದಲ್ಲಿ ನೀಯೋಜನೆ ಮೇರೆಗೆ MTech in Civil
Engineering (Water Resources Engineering major) ಸಂಬಂಧಿಸಿದ 2 ವರ್ಷಗಳ ಸ್ನಾತಕೋತ್ತರ ಪದವಿ
ಕೋರ್ಸ್‍ಗಾಗಿ ಅರ್ಜಿಯನ್ನು ಅಹ್ವಾನಿಸಿದ್ದು ನಾನು ಮಾರ್ಚ-2021 ರಲ್ಲಿ ಅರ್ಜಿ ಸಲ್ಲಿಸಿರುತ್ತೇನೆ. ಭಾರತೀಯ ವಿಜ್ಞಾನ
ಸಂಸ್ಥೆಯ ನಿಯಾಮವಳಿಯಂತೆ ದಿನಾಂಕ: 30-06-2021 ರಂದು ಆನ್ ಲೈನ್‌ ಸಂದರ್ಶನದಲ್ಲಿ ಭಾಗವಹಿಸಿರುತ್ತೇನೆ.
ದಿನಾಂಕ: 16-07-2021 ರಂದು ಭಾರತೀಯ ವಿಜ್ಞಾನ ಸಂಸ್ಥೆ ಯವರಿಂದ ನಾನು ಪ್ರಾಯೋಜಕತ್ವದ MTech in Civil
Engineering (Water Resources Engineering major) ಸ್ನಾತಕೋತ್ತರ ಕೋರ್ಸ್‌ ಗೆ ಆಯ್ಕೆಯಾಗಿರುತ್ತೇನೆ
ಎಂದು ತಿಳಿಸಿರುತ್ತಾರೆ. ಸದರಿ ಸ್ನಾತಕೋತ್ತರ ಕೋರ್ಸ್‍ನಲ್ಲಿ ಅಧ್ಯಯನ ಮಾಡುವುದರಿಂದ ಕಚೇರಿ ಕೆಲಸ ನಿರ್ವಹಿಸಲು
ಹೆಚ್ಚಿನ ಜ್ಞಾನ ದೊರಯಬಹುದೆಂದು ಮತ್ತು ಜಲಸಂಪನ್ಮೂಲ ನಿರ್ವಹಣೆಯಲ್ಲಿ ಉನ್ನತ ತಂತ್ರಜ್ಞಾನವನ್ನು ಅನ್ವಯಿಸಲು
ಸಹಕಾರಿಯಾಗಲಿದೆ ಎಂದು ಭಾವಿಸುತ್ತೇನೆ.

ಪುಟ-3 ಕ್ಕೆ
// 3 //
ಸರ್ಕಾರದ ಆದೇಶ ಸಂಖ್ಯೆ: ಜಸಂಇ 137 ಸೇಸಕಿ 2010 ದಿನಾಂಕ: 25-09-2010 ರಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿ
ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ನೌಕರರುಗಳನ್ನು ಸ್ನಾತಕೋತ್ತರ ಉನ್ನತ ವ್ಯಾಸಂಗಕ್ಕಾಗಿ ನಿಯೋಜಿಸುವಂತಹ
ಕೋರ್ಸಗಳನ್ನು ಗುರುತಿಸಿ ಆದೇಶಿಸಿದೆ. ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ಇವರ MTech in Civil
Engineering (Water Resources Engineering major) ಸ್ನಾತಕೋತ್ತರ ಕೋರ್ಸ್‌ ಸದರಿ ಆದೇಶದಲ್ಲಿ
ಗುರುತಿಸಲಾಗಿರುವ ಕೋರ್ಸ್‌ಗಳಲ್ಲಿ ಒಂದಾಗಿದೆ.
ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ಇಲ್ಲಿ ನನಗೆ MTech in Civil Engineering (Water Resources
Engineering major) ಸ್ನಾತಕೋತ್ತರ ಪದವಿ 2 ವರ್ಷಗಳ ಅವಧಿಗೆ ಅಂದರೆ ಆಗಸ್ಟ್-2021 ರಿಂದ ಜುಲೈ-2023
ಶೈಕ್ಷಣಿಕ ವರ್ಷ, ಅಧ್ಯಯನ ಮಾಡಲು ಆಯ್ಕೆಯಾಗಿರುವುದರಿಂದ ಸದರಿ ಸ್ನಾತಕೋತ್ತರ ಪದವಿ ಕೋರ್ಸಗೆ ನನ್ನನ್ನು
ನಿಯೋಜಿಸಿ ಕೋರ್ಸ್‍ನ ವೆಚ್ಚವನ್ನು ಭರಿಸಲು ಈ ಮೂಲಕ ಕೋರಲಾಗಿದೆ.
ಧನ್ಯವಾದಗಳೊಂದಿಗೆ,
ತಮ್ಮ ವಿಶ್ವಾಸಿ

(ತೇಜು ಕುಮಾರ್‌ಎನ್‌)
ಸಹಾಯಕ ಇಂಜಿನಿಯರ್‌
ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ,
ಬೆಂಗಳೂರು
ಅಡಕಗಳು
1) ಮನವಿ ಪತ್ರ
2) ನೇಮಕಾತಿ ಆದೇಶದ ಪ್ರತಿ
3) ಸರ್ಕಾರದ ಆದೇಶದ ಪ್ರತಿ
4) ಎಸ್.ಎಸ್.ಎಲ್.ಸಿ ಅಂಕಪಟ್ಟಿಯ ಪ್ರತಿ
5) ಬಿ.ಇ (ಸಿವಿಲ್) ಪದವಿಯ ಅಂಕಪಟ್ಟಿಯ ಪ್ರತಿಗಳು
6) ಬಿ.ಇ (ಸಿವಿಲ್) ಪದವಿಯ ಪ್ರಮಾಣ ಪತ್ರದ ಪ್ರತಿ
7) ಇಲಾಖಾ ಪರೀಕ್ಷೆಯ ಅಂಕಪಟ್ಟಿಯ ಪ್ರತಿ
8) ಓರಿಯಂಟೇಷನ್ ತರಬೇತಿಯ ಪ್ರಮಾಣ ಪತ್ರದ ಪ್ರತಿ
9) ಇಲಾಖಾ ವಿಚಾರಣೆ ಬಗ್ಗೆ ಪ್ರಮಾಣ ಪತ್ರ
10) ಸೇವಾ ದೃಢೀಕರಣ ಪತ್ರ
11) ಅಂತಿಮ ಇಚ್ಚಾ ಪತ್ರ
12) ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ಇವರ ದಿನಾಂಕ:16-07-2021 ರ ಇಮೇಲ್

ಅಂತಿಮ ಇಚ್ಚಾ ಪತ್ರದ ನಮೂನೆ


(ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ಇಲ್ಲಿ ಪ್ರಾಯೋಜಕತ್ವದಲ್ಲಿ ನಿಯೋಜನೆ ಮೇರೆಗೆ ಸ್ನಾತಕೋತ್ತರ ಪದವಿ
ಅಧ್ಯಯನ ನಡೆಸಲು ಇಚ್ಚಾ ಪತ್ರ)

ತೇಜು ಕುಮಾರ್‌ ಎನ್ ಆದ ನಾನು ಜಲಸಂಪನ್ನೂಲ ಇಲಾಖೆಯಲ್ಲಿ ವತಿಯಿಂದ ನೇಮಕಗೊಂಡು ನಿಬಂಧಕರು /


ಪ್ರಧಾನ ಇಂಜಿನಿಯರ್ ರವರ ಕಚೇರಿ, ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ, ಬೆಂಗಳುರು ಇಲ್ಲಿ
ಸಹಾಯಕ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿರುತ್ತೇನೆ.

ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ಇಲ್ಲಿ ಸರ್ಕಾರದ ವತಿಯಿಂದ ನೇಮಕಗೊಂಡು ಕೆಲಸ ನಿರ್ವಹಿಸತ್ತಿರುವ
ಇಂಜಿನಿಯರ್‌ಗಳಿಗಾಗಿ ನೀಯೋಜನೆ ಮೇರೆಗೆ ಸರ್ಕಾರದ ಪ್ರಾಯೋಜಕತ್ವದಲ್ಲಿ MTech in Civil Engineering
(Water Resources Engineering major) ಸಂಬಂಧಿಸಿದಂತೆ 2 ವರ್ಷಗಳ ಸ್ನಾತಕೋತ್ತರ ಪದವಿ ಕೋರ್ಸ್
ನಡೆಸುತ್ತಿದ್ದು ಸದರಿ ಸಂಸ್ಥೆಯಲ್ಲಿ ಸರ್ಕಾರದ ಪ್ರಾಯೋಜಕತ್ವದಲ್ಲಿ ನಿಯೋಜನೆ ಮೇರೆಗೆ ಸ್ನಾತಕೋತ್ತರ ಪದವಿಯನ್ನು 2
ವರ್ಷಗಳ ಅವಧಿಗೆ ಅಂದರೆ ಆಗಸ್ಟ್-2021 ರಿಂದ ಜುಲೈ-2023 ಶೈಕ್ಷಣಿಕ ವರ್ಷ, ಅಧ್ಯಯನ ನಡೆಸಲು ಸಲ್ಲಿಸುತ್ತಿರುವ
ಅಂತಿಮ ಇಚ್ಚಾ ಪತ್ರವಾಗಿರುತ್ತದೆ.

ದಿನಾಂಕ:
ಸ್ಥಳ: ಬೆಂಗಳೂರು

(ತೇಜು ಕುಮಾರ್‌ಎನ್‌)
ಸಹಾಯಕ ಇಂಜಿನಿಯರ್‌
ನಿಬಂಧಕರು/ಪ್ರಧಾನ ಇಂಜಿನಿಯವರ್‌ರವರ ಕಚೇರಿ,
ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ
ಬೆಂಗಳೂರು

ಇಲಾಖಾ ವಿಚಾರಣಾ ಪ್ರಮಾಣ ಪತ್ರ


ಶ್ರೀ. ತೇಜು ಕುಮಾರ್‌ ಎನ್, ಪದನಾಮ: ಸಹಾಯಕ ಇಂಜಿನಯರ್ ಇವರ ಸೇವಾ ಪುಸ್ತಕವನ್ನು ಪರಿಶೀಲಿಸಲಾಗಿ
ದಿನಾಂಕ: 21-03-2014 ರಿಂದ ಇಲ್ಲಿಯವರೆಗೆ ಯಾವುದೇ ಇಲಾಖಾ ವಿಚಾರಣೆ ಇರುವುದೆಲ್ಲವೆಂದು ಮತ್ತು ಇಲಾಖಾ
ವಿಚಾರಣೆಯನ್ನು ಹೂಡಲು ಉದ್ದೇಶಿಸಿರುವುದಿಲ್ಲವೆಂದು ಹಾಗು ಯಾವುದೇ ಅಮಾನತ್ತು / ಶಿಕ್ಷೆಗೆ ಒಳಪಟ್ಟಿರುವುದಿಲ್ಲವೆಂದು
ದೃಢೀಕರಿಸಲಾಗಿದೆ.

ದಿನಾಂಕ:
ಸ್ಥಳ: ಬೆಂಗಳೂರು

ನಿಬಂಧಕರು/ಪ್ರಧಾನ ಇಂಜಿನಿಯವರ್‌,
ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ
ಬೆಂಗಳೂರು
ಸೇವಾ ದೃಢೀಕರಣ ಪ್ರಮಾಣ ಪತ್ರ

ಶ್ರೀ. ತೇಜು ಕುಮಾರ್ ಎನ್, ಪದನಾಮ: ಸಹಾಯಕ ಇಂಜಿನಯರ್ ಇವರ ಸೇವಾ ಪುಸ್ತಕವನ್ನು ಪರಿಶೀಲಿಸಲಾಗಿ
ದಿನಾಂಕ: 21-03-2014 ರಿಂದ ಇಲ್ಲಿಯವರೆಗೆ ಯಾವುದೇ ವಿಧವಾದ ಗೈರು ಹಾಜರಿಯಾಗಲೀ ಅಥವಾ
ನಿಲಂಬನೆಯಲ್ಲಾಗಲೀ ಇರುವುದಿಲ್ಲವೆಂದು ಹಾಗು ತೃಪ್ತಿಕರವಾಗಿ ಸೇವೆಯನ್ನು ಪೂರೈಸಿರುತ್ತಾರೆಂದು
ದೃಢೀಕರಿಸಲಾಗಿದೆ.

ದಿನಾಂಕ:
ಸ್ಥಳ: ಬೆಂಗಳೂರು

ನಿಬಂಧಕರು/ಪ್ರಧಾನ ಇಂಜಿನಿಯವರ್‌,
ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ
ಬೆಂಗಳೂರು

You might also like