Download as docx, pdf, or txt
Download as docx, pdf, or txt
You are on page 1of 1

ಗುರು-ದಕ್ಷಿಣೆ

ಗೌರವದಲೀವ ದಕ್ಷಿಣೆಯೆ
ಅದೇನು ಕಾಣಿಕೆಯೆ
ಜ್ಞಾನದಾ ಹರಿವಿಗೆ
ನೀಡುವ ಮನ್ನಣೆಯೆ
ಗುರುಪದಕೀವ ನೈವೇದ್ಯವೆ
ಸಾಲಧನದ ಥೈಲಿಯೆ
ಭಕುತಿಯಾ ವಂದನೆಯೆ
ಪ್ರೀತಿಯಾ ಕೊಡುಗೆಯೆ
ಏನೆಂದು ಹೇಳಬಹುದು
ಶಿಷ್ಯನು ಗುರುವಿಗೆ
ಕೃತಜ್ಞತೆಯಲಿ ಕೊಡಮಾಡುವುದನು
ಏನೆಂದು ಹೆಸರಿಸಬಹುದು
ಶಿಷ್ಯನ ಯಶಸ್ಸಿನ ತೋರಿಕೆಯೆ
ಸಿರಿತನದಾಡಂಬರವೆ
ಧನದ ಪ್ರದರ್ಶನವೆ
ಇವಾವುದೂ ಸಾಧುವೆನಿಸುವುದಿಲ್ಲ
ಗುರುಶಿಷ್ಯರದೊಂದು
ಅವಿನಾಭಾವ ಸಂಬಂಧ!
ತೊರೆಯೊಂದು ನದಿ ಸೇರುವಂತೆ
ಜರುಗುವ ಜ್ಞಾನ ಸಂವಹನ!
ಹಳ್ಳವು ಹೊಳೆಯ ಸೇರಿ
ಹೊಳೆಯಾಗಿ ಕೂಡಿ ಹರಿದರೆ
ಕೊಡುವುದೇನು ಪಡೆವುದೇನು!
ತೊರೆ ತೊರೆವುದಿಲ್ಲ
ಹೊಳೆಯೇನು ಕೇಳುವುದಿಲ್ಲ!
ಅಂದಹಾಗೆ....
ವಿದ್ಯಾರ್ಥಿಗಳೆಲ್ಲರು ಶಿಷ್ಯರೆನಿಸುವರೆ
ಶಿಕ್ಷಕರೆಲ್ಲರು ಗುರುವೆನಿಸುವರೆ
ಗುರು-ಶಿಷ್ಯರೆಂದರದು
ಸಾರ್ಥಕ ಸಮ್ಮಿಲನವಷ್ಟೆ...!!

ಶ್ರೀಕಂಠ ಕಡೂರು (The National College, Basavanagudi)


೫/೬/೨೦೨೨  ರವಿವಾರ

You might also like