Download as docx, pdf, or txt
Download as docx, pdf, or txt
You are on page 1of 5

ಜೀವ ದಯೆ

ರಂಗ ಮತ್ತು ಸಾಧಿಕ್ ಇಬ್ಬರೂ ಜೀವದ ಗೆಳೆಯರು. ಅವರಿಬ್ಬರ


ಆಸಕ್ತಿ, ಅಭಿರುಚಿಗಳು ಒಂದೇ ಆಗಿದ್ದವು. ದಿನಾಲು ಸೈಕಲ್ ಸವಾರಿ
ಮಾಡುತ್ತ ಶಾಲೆಗೆ ಹೋಗುವುದೆಂದರೆ ಅವರಿಗೆ ಎಲ್ಲಿಲ್ಲದ ಖುಷಿ.ranga
mathu saadhik ebbaru jeevada geleyaru. Avaribbara
aasakthi, abhiruchigalu onde aagiddavu. Dinaalu
saikal sawaari maadutta shaalege hoguvudendare
avarige yellillada khushi.
ಅವರು ಶಾಲೆಗೆ ಹೋಗುವ ದಾರಿಯಲ್ಲಿ ಒಂದು ಚಿಕ್ಕ ಕಾಡು. ಆ
ಕಾಡಿನಲ್ಲಿ ಒಂದು ನೇರಳೇ ಮರವಿತ್ತು. ನೇರಳೆ ಮರದ ಹಣ್ಣು
ತಿನ್ನುವುದೆಂದರೆ ರಂಗ ಮತ್ತು ಸಾಧಿಕ್ ರಿಗೆ ತುಂಬಾ ಸಂತಸ.
Avaru shaalege hoguva daariyalli ondu chikka kaadu.
Aa kaadinalli ondu nerale maravithu. Nerale marada
hannu tinnuvudendare ranga mathu saadik rige
tumba santhasa
ಒಂದು ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿ, ರಂಗ ಮತ್ತು
ಸಾಧಿಕ್ ಇಬ್ಬರು ನೇರಳೆ ಮರದ ಬುಡಕ್ಕೆ ತಲುಪಿದರು. ಆಗ ಅಲ್ಲಿಯೇ
ಒಣ ಕಟ್ಟಿಗೆಗಳನ್ನು ಆರಿಸುತ್ತಿದ್ದ ಅಜ್ಜಿಯೊಬ್ಬರು, "ಹುಷಾರು ಮಕ್ಕಳೇ,
ಮರ ಜಾರುತ್ತೆ , ಜೋಪಾನ” ಎಂದು ಹೇಳಿದರು. ಅದಕ್ಕೆ ರಂಗ,
ಸಾಧಿಕ್ "ಆಯ್ತಜ್ಜಿ , ನೀವೇನೂ ಚಿಂತೆ ಮಾಡಬೇಡಿ” ಎಂದರು. ರಂಗ
ಮರ ಹತ್ತಲು ಪ್ರಾರಂಭಿಸಿದನು. ಸಾಧಿಕ್ ನೇರಳೆ ಹಣ್ಣನ್ನು ಕ್ಯಾಚ್
ಹಿಡಿಯಲು ಸಿದ್ಧವಾಗಿ ನಿಂತನು.ondu shanivaara madhyanha
shale mugisi, ranga mathu saadik ebbaru nerale
marada budakke talupidaru.aaga alliye ona
kattigegalannu aarisuttidda ajjiyobbaru , husharu
makkale, mara jaarutte jopaana yendu helidaru.
Adakke randa , saadik aaythajji , neevenuu chinthe
maadabedi yendaru ranga mara hattalu
praarambhisidanu. Saadik nerale hannannu kyaach
hidiyalu siddavaagi ninthanu.
ಅಷ್ಟರಲ್ಲಿ "ಅಯ್ಯೋ, ಅಪ್ಪಾ... ಯಾರಾದ್ರೂ ನನ್ನ ಬದುಕಿಸ್ರೋ" ಎಂದು
ಅಜ್ಜಿ ಕೂಗಿದ ಸದ್ದು ಕೇಳಿಸಿತು. Ashtaralli ayyo appaa …
yaaraadhruu nanna badukisro yendu ajji koogida
saddu kelisithu
ಸಾಧಿಕ್ ಕೂಡಲೆ ಅತ್ತ ಕಡೆ ಓಡಿದ.
Saadhik koodale atta kade odida
ರಂಗ ಗಾಬರಿಯಿಂದ ಮರ ಇಳಿದು ಬಂದ.
Ranga ghabariyinda mara elidu banda
"ಏನಾಯ್ತು ಅಜ್ಜಿ ಯಾಕೆ ಕೂಗಿಕೊಂಡೆ?" ಎಂದು ಆತುರದಿಂದ ಕೇಳಿದ.
Yenaithu ajji yaake koogikonde ? yendu
aathuradinda kelida.
ಅಜ್ಜಿ ತಮ್ಮ ಕಾಲಿನ ಕಡೆಗೊಮ್ಮೆ, ಪೊದೆಯ ಕಡೆಗೊಮ್ಮೆ ಕೈ
ತೋರಿಸುತ್ತ ’ಹಾವು....!ಹಾವು....!’ ಎಂದು ಕೂಗಿಕೊಂಡರು.
Ajji tamma kaalina kadegomme , podeya
kadegomme kai torisutta haavu …..!haavu….! yendu
koogikondaru
ತಕ್ಷಣ ಸಾಧಿಕ್, ಅಜ್ಜಿ ಕೈತೋರಿಸಿದ ಕಡೆಗೆ ಹೋಗಿ ಹಾವನ್ನು ಹುಡುಕ
ತೊಡಗಿದ.takshana saadhik , ajji kai torisida kadege
hogi haavannu huduka todagida
ರಂಗ ಅಜ್ಜಿಯ ಕಾಲನ್ನು ನೋಡಿ ಅಲ್ಲೇ ಇದ್ದ ಗಿಡದ ಬಳ್ಳಿಯಿಂದ
ಹಾವಿನ ವಿಷ ಅಜ್ಜಿಯ ಮೈಯೆಲ್ಲ ಹರಡದಂತೆ ಗಾಯದ ಮೇಲ್ಬಾಗದಲ್ಲಿ
ಗಟ್ಟಿಯಾಗಿ ಕಟ್ಟುಹಾಕಿದ.ranga ajjiya kaalannu nodi alle
edda gidada balliyinda haavina visha ajjiya maiyella
haradadanthe gaayada melbhagadalli gattiyaagi
kattu haakida. ಅಷ್ಟರಲ್ಲಿ ಸಾಧಿಕ್ ಪೊದೆಯಲ್ಲಿ ಹರಿದಾಡುತ್ತಿದ್ದ
ಹಾವನ್ನು ಕಂಡು " ರಂಗ ಬಾರೋ ಇಲ್ಲಿ, ಹಾವು ಸಿಕ್ಕಿದೆ.
ಸಾಯಿಸೋಣ" ಎಂದ.ashtaralli saadhik podeyalli
haridaaduttidda haavannu kandu ranga baaro elli ,
haavu sikkide
. ಅದಕ್ಕೆ ರಂಗ " ಅಜ್ಜಿಯನ್ನು ಆಸ್ಪತ್ರೆಗೆ ಕೊಂಡೊಯ್ಯೋದು ಬಿಟ್ಟು
ಹಾವು ಸಾಯಿಸುತ್ತಾನಂತೆ.adakke ranga ajjiyannu
aaspathrege kondoyyodu bittu haavu
saayisuttaananthe.
ತಲೆ ಕೆಟ್ಟಿದೆಯೇನೋ ನಿಂಗೆ?" ಎನ್ನುತ್ತಾ ಅಜ್ಜಿಯನ್ನು ಸೈಕಲಿನಲ್ಲಿ ಎತ್ತಿ
ಕೂರಿಸಿ ಸರಸರನೆ ಹೊರಟನು. ರಂಗ ಬೈದಿದ್ದಕ್ಕೆ ಬೇಸರಗೊಂಡ
ಸಾಧಿಕ್ ಮುಖ ಸಪ್ಪಗೆ ಮಾಡಿ ಮನೆಗೆ ಹೋದನು.
Tale kettideyeno ninge ? yennutta ajjiyannu
saikalnalli yethi koorisi sarasarane horatanu. Ranga
baididdakke besaragondu saadhik mukha sappage
maadi manege hodanu
ರಂಗ ಅಜ್ಜಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದನು. ವೈದ್ಯರು
ರಂಗನ ಬಳಿ, ’ಅಜ್ಜಿಗೆ ಕಚ್ಚಿರುವ ಹಾವು ವಿಷದ ಹಾವಲ್ಲ , ಹಾಗಾಗಿ
ಅಜ್ಜಿಗೆ ಅಪಾಯವೇನಿಲ್ಲ’ ಎಂದರು.ranga ajjige aaspatreyalli
chikithse kodisidanu. Vaidyaru rangana bali , ajjige
kacchiruva haavu vishada haavalla, haagaagi ajjige
apaayavenilla yendaru.
ರಂಗನಿಗೆ ಸಮಾಧಾನವಾಯಿತು .
Ranganige samaadhaanavaayithu.
ಅನಂತರ ಅಜ್ಜಿಯನ್ನು ಅವರ ಮನೆಗೆ ಬಿಟ್ಟು ತನ್ನ ಮನೆಗೆ ತೆರಳಿದರು.
Anathara ajjiyannu avara manege bittu tanna
manege teralidanu.
ಅಷ್ಟರಲ್ಲಿ ಅಲ್ಲಿಗೆ ಬಂದ ಸಾಧಿಕ್ ಕೋಪದಿಂದ" ಹಾವನ್ನು ಸಾಯಿಸುವ
ಎಂದಿದ್ದಕ್ಕೆ ನೀನು ನನ್ನನ್ನು ಗದರಿದ್ದೇಕೆ ? ಹಾವನ್ನು ಹಾಗೆ ಬಿಟ್ಟರೆ ಅದು
ಇನ್ನಷ್ಟು ಜನರಿಗೆ ಕಚ್ಚಿ ತೊಂದರೆ ಮಾಡುವುದಿಲ್ಲವೇ?" ಎಂದ.
Ashtaralli allege banda saadhik kopadinda haavannu
saayisuva yendiddakke neenu nannanu
gadhariddeke ? haavannu haage bittare adu
ennashtu janarige kacchi tondare maaduvudillave ?
yenda.ರಂಗ ಅವನನ್ನು ಸಮಾಧಾನಪಡಿಸುತ್ತಾ " ನೋಡು ಸಾಧಿಕ್,
ಹಾವನ್ನು ಸಾಯಿಸುವುದಕ್ಕಿಂತ ಅಜ್ಜಿಯ ಪ್ರಾಣ ಉಳಿಸುವುದು
ಮುಖ್ಯವಾಗಿತ್ತು.ranga avanannna samaadhanapadisutta
nodu saadhik ,haavannu sayisuvudakkintha ajjiya
praana ulisuvudu mukhyavaagithu.
ಹಾಗಾಗಿ ನಿನಗೆ ಬೈದೆ.haagagi ninage baide.
ಮೇಲಾಗಿ ಹಾವನ್ನು ಕೊಲ್ಲುವ ಹಕ್ಕು ನಮಗಿಲ್ಲ ಅಲ್ಲವೇ?" ಎಂದು ರಂಗ
ಹೇಳಿದಾಗ ಸಾಧಿಕ್ ನಿಗೆ ತನ್ನ ತಪ್ಪಿನ ಅರಿವಾಯಿತು.
Melaagi haavannu kolluva hakku namagilla allave ?
yendu ranga helidaaga saadhik nige tanna tappina
arivaayithu.
ರಂಗ, "ನಿನ್ನ ಮೇಲೆ ವಿನಾ ಕಾರಣ ಕೋಪಮಾಡಿಕೊಂಡೆ.
ಇನ್ನು ಮುಂದೆ ಹೀಗೆ ಮಾಡುವುದಿಲ್ಲ" ಎಂದು ಸಾಧಿಕ್, ರಂಗನನ್ನು
ಆಲಂಗಿಸಿಕೊಂಡನು. Ranga, ninna mele vinaa kaarana
kopamaadikonde.ennu munde heege maaduvudilla
yendu saadhik , ranganannu aalangisidhanu.

You might also like