Download as docx, pdf, or txt
Download as docx, pdf, or txt
You are on page 1of 16

||ಶ್ರೀಮಹಾಲಕ್ಷ್ಮೀ ಶ್ರೀ ಮಹಾಸರಸ್ವತೀ ಪೂಜಾ ವಿಧಾನ||

ಯಜಮಾನನು ಆಸನದ ಮೇಲೆ ಪೂರ್ವಕ್ಕೆ ಇಲ್ಲವೇ ಉತ್ತರಕ್ಕೆ ಮುಖ ಮಾಡಿ ಕೂಡಬೇಕು. ದೀಪ
ಹಚ್ಚಿಡಬೇಕು.
ಶ್ರೀ ಕುಲದೇವತಾಭ್ಯೋನಮಃ| ಮಾತಾ ಪಿತೃಭ್ಯಾಂ ನಮಃ| ಶ್ರೀ ಗುರುಭ್ಯೋ ನಮಃ| (ಆಸನದಲ್ಲಿ ಕುಳಿತು –
ದೀಪ ಹಚ್ಛಿ ದೇವರ ಬಲಗಡೆ ಇಡಬೇಕು. ಭಸ್ಮಧಾರಣೆ ಮಾಡಬೇಕು. ಹಣೆಗೆ ತಿಲಕ ಧರಿಸಬೇಕು.)
(ಗಂಟೆ ಒರೆಸಿ, ಶಂಖ ತೊಳೆದಿಡಬೇಕು)
ಆಚಮನಂ : ಓಂ| ಕೇಶವಾಯ ನಮಃ| ನಾರಾಯಣಾಯ ನಮಃ| ಮಾಧವಾಯ ನಮಃ| ಗೊವಿಂದಾಯ
ನಮಃ| ವಿ಼ಷ್ಣವೇ ನಮಃ| ಮಧುಸೂದನಾಯ ನಮಃ| ತ್ರಿವಿಕ್ರಮಾಯ ನಮಃ| ವಾಮನಾಯನಮಃ| ಶ್ರೀಧರಾಯ
ನಮಃ| ಹೃ಼ಷಿಕೇಶಾಯ ನಮಃ| ಪದ್ಮನಾಭಾಯ ನಮಃ| ದಾಮೋದರಾಯ ನಮಃ| ಸಂಕರ್ಷಣಾಯ ನಮಃ|
ವಾಸುದೇವಾಯ ನಮಃ| ಪ್ರದ್ಯುಮ್ನಾಯ ನಮಃ| ಅನಿರುಧ್ದಾಯ ನಮಃ| ಪುರುಷೋತ್ತಮಾಯ ನಮಃ|
ಅಧೋಕ್ಷಜಾಯ ನಮಃ| ನಾರಸಿಂಹಾಯ ನಮಃ| ಅಚ್ಯುತಾಯ ನಮಃ| ಜನಾರ್ದನಾಯ ನಮಃ|
ಉಪೇಂದ್ರಾಯ ನಮಃ| ಹರಯೇ ನಮಃ| ಶ್ರೀ ಕೃಷ್ಣಾಯ ನಮಃ ||

ಪ್ರಾಣಾಯಾಮ : ಪ್ರಣವಸ್ಯ ಪರಬ್ರಹ್ಮ ಋಷಿಃ ಪರಮಾತ್ಮಾ ದೇವತಾ| ದೈವೀ ಗಾಯತ್ರೀ ಛಂದಃ|


ಸಪ್ತಾನಾಂ ವ್ಯಾಹೃತೀನಾಂ| ವಿಶ್ವಾಮಿತ್ರ ಜಮದಗ್ನಿ ಭರದ್ವಾಜ ಗೌತಮ ಅತ್ರಿ ವಸಿಷ್ಠ ಕಶ್ಯಪಾ ಋಷಯಃ|
ಅಗ್ನಿ ವಾಯವ್ಯಾದಿತ್ಯ ಬ್ರಹಸ್ಪತಿ ವರುಣೇಂದ್ರ ವಿಶ್ವೇದೇವಾ ದೇವತಾಃ| ಗಾಯತ್ರ್ಯುಷ್ಣಿಕ್‌ ಬೃಹತೀ ಪಂಕ್ತಿ
ತ್ರಿಷ್ಟುಪ್‌ ಜಗತ್ಯಶ್ಚಂದಾಂಸಿ ಗಾಯತ್ರ್ಯಾಗಾಥಿನೋ ವಿಶ್ವಾಮಿತ್ರ ಋಷಿಃ| ಸವಿತಾ ದೇವತಾ| ಗಾಯತ್ರೀ
ಛಂದಃ| ಗಾಯತ್ರೀ ಶಿರಷಃ| ಪ್ರಜಾಪತಿ ಋಶಿಃ| ಬ್ರಹ್ಮಾಗ್ನಿ ವಾಯವ್ಯಾದಿತ್ಯಾ ದೇವತಾ| ಯಜುಶ್ಚಂದಃ |
ಪ್ರಾಣಾಯಾಮೇ ವಿನಿಯೋಗಃ|
ಓಂ ಭೂಃ| ಓಂ ಭುವಃ| ಓಂ ಸ್ವಃ| ಓಂ ಮಹಃ| ಓಂ ಜನಃ| ಓಂ ತಪಃ| ಓಂ ಸತ್ಯಂ| ಓಂ ತತ್ಸವಿತುರ್ವರೇಣ್ಯಂ|
ಭರ್ಗೋ ದೇವಸ್ಯ ಧೀಮಹಿ| ಧೀಯೋ ಯೋನಃ ‌ಪ್ರಚೋದಯಾತ್||‌ ಓಂ ಆಪೋ ಜ್ಯೋತಿ ರಸೋಮೃತಂ|
ಬ್ರಹ್ಮ ಭೂಭುವಃ ಸ್ವರೊಮ್|| ‌

ಭೂಮಿ ಪೂಜನಂ : ವಿಷ್ಣು ಶಕ್ತಿ ಸಮುತ್ಪನ್ನೆ ಶಂಖವರ್ಣೇ ಮಹೀತಲೆ| ಅನೇಕ ರತ್ನ ಸಂಪನ್ನೇ ಭೂಮಿದೇವಿ
ನಮೋಸ್ತುತೆ|| {ಹೂವು, ಗಂಧ, ಅಕ್ಷತೆ ಭೂಮಿಯ ಮೇಲೆ ಇಡಬೇಕು}

ದಿಕ್‌ ಪೂಜೆ : ಅಪಸರ್ಪಂತು ತೇ ಭೂತಾ ಏಭೂತಾ ಭುವಿಸಂಸ್ಢಿತಾ| ಏಭೂತಾ ವಿಘ್ನಕರ್ತಾರಾ


ತೇನಶ್ಯಂತು ಶಿವಾಙ್ಞಯ| ಭೂತಾನಿ ರಾಕ್ಷಸಾಮಾಪಿ ಏಚ ತಿಷ್ಟಂತಿ ಕೇಚನ| ತೇಸರ್ವೇ ವ್ಯಪಗಚ್ಚಂತು
ದೇವಪೂಜಾ ಕರೋಮ್ಯಹಂ|| {ಅಕ್ಷತೆಯನ್ನು ಎಲ್ಲ ದಿಕ್ಕುಗಳಿಗೂ ಹಾಕಬೇಕು}

ಆಸನ ಪೂಜೆ :ಪೃಥ್ವೀತ್ವಯ ಧೃತಾಲೋಕಾ ದೇವಿತ್ವಂ ವಿಷ್ಣುನಾಧೃತಾ| ತ್ವಂಚ ಧಾರಯ ಮಾಂದೇವಿ


ಪವಿತ್ರಂ ಕುರುಚಾಸನಂ|| {ಹೂವು, ಅಕ್ಷತಾ, ಕೂಡುವ ಆಸನದ ಕೆಳಗೆ ಹಾಕಬೇಕು}

ದೇವತಾ ನಮಸ್ಕಾರ : ಶ್ರೀ ಮನ್ಮಹಾಗಣಾಧಿಪತಯೇ ನಮಃ| ಸುಮುಖಶ್ಚ್ಯೆಕ ದಂತಶ್ಚ ಕಪಿಲೋ ಗಜಕರ್ಣಃ|


ಲಂಬೋದರಶ್ಚ ವಿಕಲೋ ವಿಘ್ನನಾಶೋ ಗಣಾಧಿಪಃ| ಧೂಮ್ರಕೇತುರ್ಗಣಾಧ್ಯಕ್ಷೋ ಭಾಲಚಂದ್ರೋ
ಗಜಾನನಃ| ದ್ವಾದಶೈತಾನಿ ನಾಮಾನಿ ಯಃಪಠೇತ್‌ ಶ್ರುಣುಯಾದಪಿ| ವಿದ್ಯಾರಂಭೇ ವಿವಾಹೇಚ ಪ್ರವೇಶೇ
ನಿರ್ಗಮೇ ತಥಾ| ಸಂಗ್ರಾಮೇ ಸಂಕಟೇ ಚೈವ ವಿಘ್ನಸ್ತಸ್ಯ ನ ಜಾಯತೆ|| ಶುಕ್ಲಾಂಬರ ಧರಂ ವಿಷ್ಣುಂ
ಶಶಿವ‌ರ್ಣಂ ಚತುರ್ಭುಜಂ| ಪ್ರಸನ್ನ ವದನಂ ಧ್ಯಾಯೇತ್‌ ಸರ್ವ ವಿಘ್ನೋಪ ಶಾಂತಯೇ|| ಸರ್ವ ಮಂಗಲ
ಮಾಂಗಲ್ಯೆ ಶಿವೇ ಸರ್ವಾರ್ಥ ಸಾಧಿಕೇ| ಶರಣ್ಯೇ ತ್ರೈಂಬಕೇ ಗೌರೀ ನಾರಾಯಣೀ ‌ ನಮೋಸ್ತುತೆ|| ಸರ್ವದಾ
ಸರ್ವ ಕಾರ್ಯೇಷು ನಾಸ್ತಿ ತೇಷಾಮ ಮಂಗಲಂ| ಯೇಷಾಂ ಹೃದಿಸ್ತೋ ಭಗವಾನ್‌ ಮಂಗಲಾಯತನಂ
ಹರಿಃ| ತದೇವ ಲಗ್ನಂ ಸುದಿನಂ ತದೇವ| ತಾರಾಬಲಂ ಚಂದ್ರಬಲಂ ತದೇವ| ವಿದ್ಯಾ ಬಲಂ ದೈವ ಬಲಂ
ತದೇವ| ಲಕ್ಷ್ಮೀಪತೇ ತೇಂಘ್ರಿಯುಗಂ ಸ್ಮರಾಮಿ|| ಲಾಭ‌ಸ್ತೇಷಾಂ ಜಯಸ್ತೇಷಾಂ ಕುತಸ್ತೇಷಾಂ ಪರಾಜಯಃ|
ಏ಼ಷಾಂ ಇಂದೀವರ ಶ್ಯಾಮಂ ಹೃದಯಸ್ತೋ ಜನಾರ್ಧನಃ|| ವಿನಾಯಕಂ ಗುರುಂ ಭಾನುಂ ಬ್ರಹ್ಮ ವಿಷ್ಣು
ಮಹೇಶ್ವರಾನ್|‌ ಸರಸ್ವತೀಂ ಪ್ರಣಮ್ಯಾದೌ ಸರ್ವಕಾರ್ಯಾರ್ಥ ಸಿಧ್ದಯೇ| ಅಭೀಪ್ಸಿತಾರ್ಥ ಸಿಧ್ಯರ್ಥಂ
ಪೂಜಿತೋ ಯಃ ಸುರಾಸುರೈಃ| ಸರ್ವವಿಘ್ನ ಹರಸ್ತಸ್ಯೇ ಗಣಾಧಿಪತಯೇ ನಮಃ|| ಸರ್ವೇ ಇಷ್ಟಾರ್ಥ
ಕಾರ್ಯೇಷು ತ್ರಯಸ್ತ್ರ ಭುವನೇಶ್ವರಾಃ| ದೇವಾದಿ ಶಂತುನಃ ಸಿದ್ದಿಂ ಬ್ರಹ್ಮೇಶಾನ್‌ ಜನಾರ್ದನಾಃ| ಶ್ರೀ ಲಕ್ಷ್ಮೀ
ನಾರಾಯಣಾಭ್ಯಾಂ ನಮಃ| ಶ್ರೀ ಉಮಾ ಮಹೇಶ್ವರಾಭ್ಯಾಂ ನಮಃ| ಶ್ರೀ ವಾಣೀ ಹರಣ್ಯಗರ್ಭಾಭ್ಯಾಂ ನಮಃ|
ಶಚೀ ಪುರಂಧರಾಭ್ಯಾಂ ನಮಃ| ಮಾತಾ ಪಿತೃಭ್ಯಾಂ ನಮಃ| ಕುಲದೇವತಾಭ್ಯೋ ನಮಃ| ಇಷ್ಟದೇವತಾಭ್ಯೋ
ನಮಃ| ಗ್ರಾಮ ದೇವತಾಭ್ಯೋ ನಮಃ| ಸ್ಥಾನ ದೇವತಾಭ್ಯೊ ನಮಃ| ವಾಸ್ತು ದೇವತಾಭ್ಯೋ ನಮಃ|
ಆದಿತ್ಯಾದಿ ನವಗ್ರಹ ದೇವತಾಭ್ಯೋ ನಮಃ| ಸರ್ವೇಭ್ಯೋ ದೇವೇಭ್ಯೋ ನಮಃ| ಸರ್ವೇಭ್ಯೋ
ಬ್ರಾಹ್ಮಣೇಭ್ಯೋ ನಮೋ ನಮಃ| ನಿರ್ವಿಘ್ನ ಮಸ್ತು|| {ದೇವರಿಗೆ ಕೈ ಮುಗಿಯಬೇಕು}.

ದೇಶ ಕಾಲೋಚ್ಚಾರ : {ಎಡಗೈಯಲ್ಲಿ ಹೂವು, ಅಕ್ಷತಾ, ಮೇಲೆ ಬಲಗೈ ಬಲ ತೊಡೆಯ ಮೇಲೆ


ಇಟ್ಟುಕೊಂಡು} – ಓಂ ನಮಃ ಶುಭಾಭ್ಯಾಂ ಶುಭೇ ಶೋಭನೇ ಮೂಹೂರ್ತೇ, ಆದ್ಯಬ್ರಹ್ಮಣಃ, ದ್ವಿತೀಯ
ಪರಾರ್ಧೇ, ಶ್ರೀ ಶ್ವೇತ ವರಾಹಕಲ್ಪೇ, ವೈವಸ್ವತ ಮನ್ವಂತರೇ, ಕಲಿಯುಗೇ, ಪ್ರಥಮ ಚರಣೇ, ಭರತ
ವರ್ಷೇ, ಭರತ ಖಂಡೇ, ಜಂಬೂದ್ವೀಪೇ ದಂಡಕಾರಣ್ಯೇ ದೇಶೇ, ಗೋದಾವರ್ಯಾಃ, ದಕ್ಷಿಣೇ ತೀರೇ,
ಶಾಲಿವಾಹನ ಶಕೆ, ಬೌಧ್ದಾವತಾರೇ, ರಾಮಕ್ಷೇತ್ರೇ, ಅಸ್ಮಿನ್‌ ವರ್ತಮಾನೇ ವ್ಯಾವಹಾರಿಕೇ
ಚಾಂದ್ರಮಾನೇನ _____ಸಂವತ್ಸರಸ್ಯ _____ಆಯನೇ ____ಋತೌ ______ಮಾಸೇ ______ಪಕ್ಷೇ _____ತಿಥೌ
____ವಾಸರೇ ____ ದಿವಸ ನ಼಼ ಕ್ಷತ್ರೇ ಶುಭ ನಕ್ಷತ್ರೇ, ಶುಭ ಯೋಗೇ ಶುಭ ಕರಣೇ, ಎವಂಗುಣ ವಿಷೇಷಣ
ವಿಶಿಷ್ಟಾಯಾಂ, ಶುಭ ತಿಥೌ ____ಗೋತ್ರೋತ್ಪನ್ನಸ್ಯ ______ರಾಶಿ _____ ನಕ್ಷತ್ರೇ ____ಚರಣೇ ಜಾತಸ್ಯ
______ ನಾಮಧೇಯಸ್ಯ .....

ಸಂಕಲ್ಪ : ಮಮ ಆತ್ಮನಃ ಶ್ರುತಿ ಸ್ಮ್ರತಿ ಪುರಾಣೋಕ್ತ ಫಲಪ್ರಾಪ್ತ್ಯ್ರರ್ಥಂ ಅಸ್ಮಾಕಂ ಸಕುಟುಂಬಾನಾಂ


ಸಪರಿವಾರಾಣಾಂ ಕ್ಷೇಮ ಸ್ಥೈರ್ಯ ವೀರ್ಯ ವಿಜಯ ಅಭಯ ಆಯುಃ ಆರೋಗ್ಯ ಐಶ್ವರ್ಯ ಅಭಿವೃಧ್ಯರ್ಥಂ
ಸಮಸ್ತಾಭ್ಯುದಯಾರ್ಥಂಚ ಸಾಯಂಕಾಲೇ (ಪ್ರಾಥಃಕಾಲೇ) ಸಮಸ್ತ ಸನ್ಮಂಗಳಾವಾಪ್ತ್ಯರ್ಥಂ ಸೌಭಾಗ್ಯ
ಸಿಧ್ಧ್ಯರ್ಥಂ, ಮನೋಕಾಮನಾ ಸಿಧ್ಧ್ಯರ್ಥಂ, ಶ್ರೀ ಮಹಾಗಣಪತೀ, ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಸರಸ್ವತೀ
ಪ್ರೀತ್ಯರ್ಥಂ ಯಥಾ ಯಥಾಙ್ಞಾನೇನ ಮಿಲಿತೋಪಚಾರ ದ್ರವ್ಯೇ, ಧ್ಯಾನಾವಾಹನಾದಿ ಶೋಢಶೋಪಚಾರ
ಪೂಜಾಂ ಕರಿಷ್ಯೇ | ತದಾದೌ ನಿರ್ವಿಘ್ನತಾ ಸಿದ್ಯರ್ಥಂ ಮಹಾಗಣಪತಿ ಪೂಜಾಂಚ ಕರಿಶ್ಯೇ|| {ಹೂವು,
ಅಕ್ಷತಾ ನೀರು ಬಿಟ್ಟು ಸಂಕಲ್ಪ ಪೂರ್ಣ ಮಾಡಬೇಕು}

ಗಣಪತಿ ಪೂಜನಂ : (ಅಡಿಕೆ ಬೆಟ್ಟ/ ಗಣಪತಿ ಮೂರ್ತಿಯನ್ನು ಸ್ಥಾಪಿಸಿ, ಧ್ಯಾನ, ಆವಾಹನ, ಆಸನ, ಪಾದ್ಯ,
ಇತ್ಯಾದಿಗಳಿಂದ ಪೂಜನ ಮಾಡಬೇಕು) ...ಆದೌ ನಿರ್ವಿಘ್ನತಾ ಸಿಧ್ಯರ್ಥಂ ಮಹಾಗಣಪತಿ ಸ್ಮರಣಂ ಚ
ಕರಿಷ್ಯೇ| ಓಂ ಗಣಾನಾಂತ್ವಾ ಗಣಪತಿಂ ಹವಾಮಹೇ ಕವಿಂ ಕವೀನಾಮುಪಶ್ರವಸ್ತಮಮ್|‌ ಜ್ಯೇಷ್ಠರಾಜಂ
ಬ್ರಹ್ಮಣಾಂ ಬ್ರಹ್ಮಣಸ್ಪತ ಆ ನಃ ಶೃಣ್ವನ್ನೂತಿ ಭಿಃ ಸೀದ ಸಾದನಮ್||‌ ಗಜಾನನಂ ಭೂತಗಣಾಧಿಸೇವಿತಂ
ಕಪಿತ್ಥ ಜಂಬೂ ಫಲಸಾರ ಭಕ್ಷಿತಂ| ಉಮಾಸುತಂ ಶೋಕ ವಿನಾಶಕಾರಣಂ ನಮಾಮಿ ವಿಘ್ನೇಶ್ವರ ಪಾದ
ಪಂಕಜಂ|| ಓಂ ಭೂರ್ಭುವಃ ಸ್ವಃ ಶ್ರೀ ಮನ್ನ್ಮಹಾಗಣಾಧಿಪತಯೇ ನಮಃ | ಧ್ಯಾನಂ ಸಮರ್ಪಯಾಮಿ| ಅಸ್ಮಿನ್‌
ಪೂಗೀ ಫಲೇ ಋದ್ದಿ ಬುದ್ಧಿ ‌ಸಹಿತಂ ಮಹಾಗಣಪತಿಂ ಸಾಂಗಂ ಸಪರಿವಾರಂ ಆವಾಹಯಾಮಿ|
ಓಂ ಭೂರ್ಭುವಃ ಸ್ವಃ ಶ್ರೀ ಮನ್ನ್ಮಹಾಗಣಾಧಿಪತಯೇ ನಮಃ – ಆವಾಹನಾರ್ಥೇ ಅಕ್ಷತಾಂ ಸಮರ್ಪಯಾಮಿ|
ಓಂ ಭೂರ್ಭುವಃ ಸ್ವಃ ಶ್ರೀ ಮನ್ನ್ಮಹಾಗಣಾಧಿಪತಯೇ ನಮಃ – ಆಸನಾರ್ಥೇ ಅಕ್ಷತಾಂ ಸಮರ್ಪಯಾಮಿ|
ಓಂ ಭೂರ್ಭುವಃ ಸ್ವಃ ಶ್ರೀ ಮನ್ನ್ಮಹಾಗಣಾಧಿಪತಯೇ ನಮಃ – ಪಾದಯೋ ಪಾದ್ಯಂ ಸಮರ್ಪಯಾಮಿ|
ಓಂ ಭೂರ್ಭುವಃ ಸ್ವಃ ಶ್ರೀ ಮನ್ನ್ಮಹಾಗಣಾಧಿಪತಯೇ ನಮಃ – ಹಸ್ತಯೋ ಅರ್ಘ್ಯಂ ಸಮರ್ಪಯಾಮಿ|
ಓಂ ಭೂರ್ಭುವಃ ಸ್ವಃ ಶ್ರೀ ಮನ್ನ್ಮಹಾಗಣಾಧಿಪತಯೇ ನಮಃ – ಮುಖೇ ಆಚಮನೀಯಂ ಸಮರ್ಪಯಾಮಿ|
ಓಂ ಭೂರ್ಭುವಃ ಸ್ವಃ ಶ್ರೀ ಮನ್ನ್ಮಹಾಗಣಾಧಿಪತಯೇ ನಮಃ – ಸ್ನಾನಂ ಸಮರ್ಪಯಾಮಿ|
ಓಂ ಭೂರ್ಭುವಃ ಸ್ವಃ ಶ್ರೀ ಮನ್ನ್ಮಹಾಗಣಾಧಿಪತಯೇ ನಮಃ – ವಸ್ತೋಪವಸ್ತ್ರಾರ್ಥೇ ಕಾರ್ಪಾಸ ವಸ್ತ್ರಂ
ಸಮರ್ಪಯಾಮಿ|
ಓಂ ಭೂರ್ಭುವಃ ಸ್ವಃ ಶ್ರೀ ಮನ್ನ್ಮಹಾಗಣಾಧಿಪತಯೇ ನಮಃ – ಯಙ ್ಞೋಪವೀತಾರ್ಥೇ ಅಕ್ಷತಾಂ
ಸಮರ್ಪಯಾಮಿ|
ಓಂ ಭೂರ್ಭುವಃ ಸ್ವಃ ಶ್ರೀ ಮನ್ನ್ಮಹಾಗಣಾಧಿಪತಯೇ ನಮಃ – ವಿಲೇಪನಾರ್ಥೇ ಚಂದನಂ ಸಮರ್ಪಯಾಮಿ|
ಓಂ ಭೂರ್ಭುವಃ ಸ್ವಃ ಶ್ರೀ ಮನ್ನ್ಮಹಾಗಣಾಧಿಪತಯೇ ನಮಃ – ಅಲಂಕಾರಾರ್ಥೇ ಅಕ್ಷತಂ ಸಮರ್ಪಯಾಮಿ|
ಋದ್ಧಿ-ಸಿದ್ಧಿಭ್ಯಾಂ ನಮಃ - - - - - - - - - ಹರಿದ್ರಾ ಕುಂಕುಮ ಸೌಭಾಗ್ಯ ದ್ರವ್ಯಂ ಸಮರ್ಪಯಾಮಿ|
ಓಂ ಭೂರ್ಭುವಃ ಸ್ವಃ ಶ್ರೀ ಮನ್ನ್ಮಹಾಗಣಾಧಿಪತಯೇ ನಮಃ - ಸಿಂಧೂರ ನಾನಾ ಪರಿಮಳ ದ್ರವ್ಯಾಣಿ
ಸಮರ್ಪಯಾಮಿ|
ಓಂ ಭೂರ್ಭುವಃ ಸ್ವಃ ಶ್ರೀ ಮನ್ನ್ಮಹಾಗಣಾಧಿಪತಯೇ ನಮಃ – ದೂರ್ವಾಂಕುರ ಪತ್ರ ಪುಷ್ಪಾಣಿ
ಸಮರ್ಪಯಾಮಿ|
ಓಂ ಭೂರ್ಭುವಃ ಸ್ವಃ ಶ್ರೀ ಮನ್ನ್ಮಹಾಗಣಾಧಿಪತಯೇ ನಮಃ – ಧೂಪಂ ಆಘ್ರಾಪಯಾಮಿ|
ಓಂ ಭೂರ್ಭುವಃ ಸ್ವಃ ಶ್ರೀ ಮನ್ನ್ಮಹಾಗಣಾಧಿಪತಯೇ ನಮಃ – ದೀಪಂ ದರ್ಶಯಾಮಿ|
ಓಂ ಭೂರ್ಭುವಃ ಸ್ವಃ ಶ್ರೀ ಮನ್ನ್ಮಹಾಗಣಾಧಿಪತಯೇ ನಮಃ ||

ಅಥಃ ನೈವೇದ್ಯಂ : {ಗಾಯತ್ರೀ ಮಂತ್ರ ಪೂರ್ವಕ ಪ್ರೋಕ್ಷಣ, ಪರಿಷಿಂಚನ ವಿಧಿ ಪೂರ್ವಕವಾಗಿ ನೈವೇದ್ಯ
ಮಾಡಬೇಕು} – ಗುಡ ಖಾದ್ಯ ನೈವೇದ್ಯಂ ಸಮರ್ಪಯಾಮಿ| ನೈವೇದ್ಯ ಮದ್ಧೇ ಪಾನೀಯಂ ಸಮರ್ಪಯಾಮಿ|
ಉತ್ತರಾಪೋಶನಂ ಸಮರ್ಪಯಾಮಿ| ಹಸ್ತಪ್ರಕ್ಷಾಲನಂ ಸಮರ್ಪಯಾಮಿ| ಮುಖಪ್ರಕ್ಷಾಲನಂ
ಸಮರ್ಪಯಾಮಿ| ಕರೋದ್ವರ್ಥನಾರ್ಥೇ ಚಂದನಂ ಸಮರ್ಪಯಾಮಿ | ಮುಖವಾಸಾರ್ಥೇ ಪೂಗೀ ಫಲ
ತಾಂಬೂಲಂ ಸುವರ್ಣ ಪುಷ್ಪ ದಕ್ಷಿಣಾಂ ಸಮರ್ಪಯಾಮಿ| ಓಂ ಭೂರ್ಭುವಃ ಸ್ವಃ ಶ್ರೀ
ಮನ್ನ್ಮಹಾಗಣಾಧಿಪತಯೇ ನಮಃ ಪ್ರದಕ್ಷಿಣಾಂ ಸಮರ್ಪಯಾಮಿ| ಸಾಷ್ಟಾಂಗ ನಮಸ್ಕಾರಂ
ಸಮರ್ಪಯಾಮಿ|

ಮಂತ್ರಪುಷ್ಪಂ : ಓಂ ಏಕದಂತಾಯ ವಿದ್ಮಹೇ| ವಕ್ರತುಂಡಾಯ ಧೀಮಹೀ| ತನ್ನೋ ದಂತೀ


ಪ್ರಚೋದಯಾತ್|‌ ಓಂ ಭೂರ್ಭುವಃ ಸ್ವಃ ಶ್ರೀ ಮನ್ನ್ಮಹಾಗಣಾಧಿಪತಯೇ ನಮಃ| ಮಂತ್ರಪುಷ್ಪಂ
ಸಮರ್ಪಯಾಮಿ| {ಹೂವು ಮತ್ತು ಅಕ್ಷತೆಯನ್ನು ಹಾಕಬೇಕು}
ಅಥ ಪ್ರಾರ್ಥನಾ : ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ| ನಿರ್ವಿಘ್ನಂ ಕುರುಮೇ ದೇವ
ಸರ್ವಕಾರ್ಯೇಷು ಸರ್ವದಾ| ಓಂ ಭೂರ್ಭುವಃ ಸ್ವಃ ಶ್ರೀ ಮನ್ನ್ಮಹಾಗಣಾಧಿಪತಯೇ ನಮಃ| ಪ್ರಾರ್ಥನಾಂ
ಸಮರ್ಪಯಾಮಿ| ಅನೇನ ಕೃತ ಪೂಜನೇನ ಶ್ರೀಮನ್‌ ಮಹಾಗಣಾಧಿಪತಿಃ ಪ್ರಿಯಂತಾಂ|| {ಒಂದು ಸವಟು
ನೀರನ್ನು ತಾಬಾಣದಲ್ಲಿ ಬಿಡಬೇಕು}
{{ಇಲ್ಲಿಗೆ ಗಣಪತಿ ಪೂಜೆ ಮುಗಿಯಿತು - ಹೀಗೆ ಗಣಪತಿ ಪೂಜೆ ಮಾಡಿದಾಗ ಉಳಿದೆಲ್ಲ ಪೂಜೆ ಮುಗಿದ ಮೇಲೆ
ಉತ್ತರ ಪೂಜೆ ಮಾಡಬೇಕು}}
-೦-೦-೦-೦-೦-

ಆಸನ ವಿಧಿ : ಪೃಥ್ವೀತಿ ಮಂತ್ರಸ್ಯ ಮೇರು ಪೃಷ್ಠ ಋಷಿಃ ಕೂರ್ಮೋ ದೇವತಾ ಸುತಲಂ ಛಂದಃ
ಆಸನೋಪವೇಶನೇ ವಿನಿಯೋಗಃ| ಓಂ ಪೃಥ್ವೀತ್ವಯಾ ಧೃತಾಲೋಕಾ ದೇವಿತ್ವಂ ವಿಷ್ಣುನಾಧೃತಾ| ತ್ವಂಚ
ಧಾರಯ ಮಾಂ ದೇವಿ ಪವಿತ್ರಂ ಕುರುಚಾಸನಂ| (ಅಕ್ಷತಾ, ಹೂವು ದೇವರ ಮಣೆಯ ಕೆಳಗೆ ಹಾಕಬೇಕು).

ಕಲಶ ಪೂಜನಂ : (ಕಲಶಕ್ಕೆ ಶುಧ್ಧ ನೀರು ಹಾಕಿ, ಗಂಧ, ಹೂವು, ಅಕ್ಷತಾ, ಪತ್ರಿ ಹಾಕಿ, ಬಲ ಅಂಗೈಯನ್ನು
ಕಲಶದ ಮೇಲೆ ಇಟ್ಟು ಈ ಕೆಳಗಿನ ಮಂತ್ರ ಅನ್ನಬೇಕು) --- ಅಥಃ ಕಲಶ ಸ್ಥಾಪನಂಚ ಕರಿಷ್ಯೇ -- ಕಲಶಷ್ಯ
ಮುಖೇವಿಷ್ಣು| ಕಂಠೇ ರುದ್ರ ಸಮಾಶ್ರಿತ| ಮೂಲೇ ತತ್ರ ಸ್ಥಿತೋ ಬ್ರಹ್ಮಾ| ಮಧ್ಯೇ ಮಾತೃಗಂಗಾ ಸ್ಮೃತಾಃ|
ಕುಕ್ಷೌತು ಸಾಗರಾ ಸರ್ವೇ ಸಪ್ತ ದ್ವೀಪಾ ವಸುಂಧರಾ| ಋಗ್ವೇದೋ ಅಥ ಯಜುರ್ವೇದೋ ಸಾಮವೇದೋ
ಅಥರ್ವಣಃ|| ಅಂಗ್ಯೆಶ್ಚ ಸಹಿತಾ ಸರ್ವೇ ಕಲಶಂತು ಸಮಾಶ್ರಿತಾಃ| ಅತ್ರ ಗಾಯತ್ರೀ ಸಾವಿತ್ರೀ| ಶಾಂತಿ ಪುಷ್ಟಿ
ಕರೀ ತಥಾ| ಆಯಾಂತು ದೇವ ಪೂಜಾರ್ಥಂ ಅಭಿ಼ಷೇಕಾರ್ಥ ಸಿಧ್ಧಯೇ| ಗಂಗೇಚ ಯಮುನೇಚೈವ|
ಗೋದಾವರೀ ಸರಸ್ವತಿ| ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್‌ ಸನ್ನಿಧಿಂ ಕುರು|| ಶ್ರೀ ಕಲಶ
ದೇವತಾಭ್ಯೋನಮಃ| ಸರ್ವೋಪಚಾರಾರ್ಥೇ ಗಂಧಾಕ್ಷತ ಪತ್ರ ಪುಷ್ಪಾಣಿ ಸಮರ್ಪಯಾಮಿ||

ಶಂಖ ಪೂಜನಂ : ಓಂ ಶಂಖಂ ಚಂದ್ರಾರ್ಕ ದೈವತ್ಯಂ ವರುಣಂಚಾದಿ ದೈವತಂ| ಪೃಷ್ಠೇ ಪ್ರಜಾಪತಿ


ವಿದ್ಯಾದಗ್ರೇ ಗಂಗಾ ಸರಸ್ವತೀ|| ಪಾಂಚಜನ್ಯಾಯ ವಿದ್ಮಹೇ ಪಾವಮಾನಾಯ ಧೀಮಹಿ| ತಂ ನಃ ಶಂಖ
ಪ್ರಚೋದಯಾತ್||‌ ಶಂಖ ದೇವತಾಭ್ಯೋ ನಮಃ| ಸರ್ವೋಪಚಾರಾರ್ಥೇ ಗಂಧಪುಷ್ಪಂ ಸಮರ್ಪಯಾಮಿ||
{ಎಂದು ಶಂಖ ಪೂಜೆ ಮಾಡಿ ಅದರಲ್ಲಿ ಕಲಶೋದಕವನ್ನು ಹಾಕಿ ದೇವರ ಎಡಕ್ಕೆ ಇಡಬೇಕು}

ಘಂಟಾ ಪೂಜನಂ : ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಂ| ಕುರ್ವೇ ಘಂಟಾರವಂ ತತ್ರ


ದೇವತಾಹ್ವಾನ ಲಾಂಛನಂ| ಘಂಟಾಯೈನಮಃ| ಸರ್ವೋಪಚಾರಾರ್ಥೇ ಗಂಧಾಕ್ಷತ ಪತ್ರ ಪುಷ್ಪಾಣಿ
ಸಮರ್ಪಯಾಮಿ|| {ಹೂವು, ಗಂಧ, ಅಕ್ಷತಾ ಹಾಕಿ ಘಂಟೆ ಬಾರಿಸಬೇಕು ಮತ್ತು ದೇವರ ಬಲಕ್ಕೆ ಇಡಬೇಕು}

ದೀಪಪೂಜನಂ : ಭೋ ದೀಪ ಬ್ರಹ್ಮರೂಪಸ್ತ್ವಂ ಜ್ಯೋತಿಷಾಂ ಪ್ರಭುರವ್ಯಯಃ| ಆರೋಗ್ಯಂ ದೇಹಿ ಪುತ್ರಾಂಶ್ಚ


ಸರ್ವಾರ್ಥಾಂಶ್ಚ ಪ್ರಯಚ್ಚಮೇ|| ದೀಪ ದೇವತಾಭ್ಯೋ ನಮಃ| ಸರ್ವೋಪಚಾರಾರ್ಥೇ ಗಂಧಾಕ್ಷತ ಪತ್ರ
ಪುಷ್ಪಾಣಿ ಸಮರ್ಪಯಾಮಿ|| {ಹೂವು, ಗಂಧ, ಅಕ್ಷತ ದೀಪಕ್ಕೆ ಇಡಬೇಕು}

ಶುದ್ಧತಾ ವಿಧಿಃ : ಅಪವಿತ್ರ ಪವಿತ್ರೋವಾ ಸರ್ವಾವಸ್ಥಾಂ ಗತೋಪಿವಾ| ಯಃ ಸ್ಮರೇತ್‌ ಪುಂಡರಿಕಾಕ್ಷಂ


ಸಬಾಹ್ಯಾಭ್ಯಂತರಃ ಶುಚಿಃ || ಪೂಜಾ ದ್ರವ್ಯಾಣಿ ಸಂಪ್ರೋಕ್ಷ್ಯ| ಆತ್ಮಾನಾಂಚ ಪ್ರೋಕ್ಷಯೇತ್ ||‌
{ಶಂಖದಲ್ಲಿಯ ನೀರನ್ನು ಕಲಶದ ನೀರಿಗೆ ಹಾಕಿ ಆ ನೀರನ್ನು ಸೌಟಿನಲ್ಲಿ ತೆಗೆದುಕೊಂಡು ಪೂಜಾದ್ರವ್ಯ ಮತ್ತು
ತನ್ನ ಮೇಲೆ ಪ್ರೋಕ್ಷಿಸಬೇಕು}

ಅಥ ಧ್ಯಾನಂ : ಅನಂತರ ಶ್ರೀ ಮಹಾಲಕ್ಷ್ಮೀಯ ಹಣೆ ಮುಟ್ಟಿ ನಮಸ್ಕರಿಸಬೇಕು. ಒಂದೇ ಲಕ್ಷ್ಮೀಂ


ಪರಶಿವಮಯಿಂ ಶುದ್ಧ ಜಾಂಬೂನದಾಭಾಂ| ತೇಜೋರೂಪಾಂ ಕನಕವಸನಾಂ ಸರ್ವಭೂ
಼ ಷೋಜ್ವಲಾಂಶಿಂ|
ಬೀಜಾಪೂರಂ ಕನಕ ಕಲಶಂ ಹೇಮಪದ್ಮಂ ದಧಾನಾ ಮಾದ್ಯಾಶಕ್ತಿಂ ಸಕಲ ಜನನೀಂ ವಿಷ್ಣುವಾಮಾಂಕ
ಸಂಸ್ಥಾಮ್|‌ಶ್ರೀ ಮಹಾಲಕ್ಷೈ ನಮಃ ಧ್ಯಾನಂ ಸಮರ್ಪಯಾಮಿ||
ಗಜಾನನಂ ಭೂಗಣಾದಿಸೇವಿತಂ ಕಪಿತ್ಥ ಜಂಬೂಫಲಸಾರ ಭಕ್ಷಿತಂ| ಉಮಾಸುತಂ ಶೋಕವಿನಾಶಕಾರಣಂ
ನಮಾಮಿ ವಿಘ್ನೇಶ್ವರ ಪಾದಪಂಕಜಂ || ಧ್ಯಾಯಾಮಿ ಧ್ಯಾನಂ ಸಮರ್ಪಯಾಮಿ || {ಕೈ ಮುಗಿಯಬೇಕು}
{ಆಮೇಲೆ ದೇವರ ಪ್ರತಿಮೆಗಳನ್ನು ಒಂದು ತಾಬಾಣದಲ್ಲಿಟ್ಟು ಮಣೆಯ ಮೇಲಿಟ್ಟುಕೊಳ್ಳಬೇಕು}
ಷೋಡಶೋಪಚಾರ ಪೂಜನಂ : ದೇವಿ ದೇವಿ ಸಮಾಗಚ್ಚ ಪ್ರಾರ್ಥಯೇಹಂ ಜಗನ್ಮಯೇ| ಇಮಾಂ ಮಯಾ
ಕೃತಾಂ ಪೂಜಾಂ ಗ್ರಹಾಣ ಸುರಸತ್ತಮೇ| ಶ್ರೀ ಮಹಾಲಕ್ಷ್ಮೀದೇವೈ ನಮಃ| ಆವಾಹನಾರ್ಥೇ ಅಕ್ಷತಾಂ
ಸಮರ್ಪಯಾಮಿ||
- ಆಸನೇ ಸ್ವರ್ಣ ರತ್ನಾಢ್ಯೇ ಸರ್ವಶೋಭಾ ಸಮನ್ವಿತೆ| ಉಪವಿಶ್ಯ ಜಗನ್ಮಾತಃ ಪ್ರಸಾದಾಭಿ ಮುಖೀ ಭವ|
ಶ್ರೀ ಮಹಾಲಕ್ಷ್ಮೀದೇವೈ ನಮಃ| ಆಸನಾರ್ಥೇ ಅಕ್ಷತಾಂ ಸಮರ್ಪಯಾಮಿ||
- ಇದಂ ಗಂಗಾಜಲಂ ಸಮ್ಯಕ್‌ ಸುವರ್ಣಕಲಶಸ್ಥಿತಂ| ಪಾದ್ಯಾರ್ಥಂತೇ ಪ್ರಯಚ್ಚಾಮಿ ಪಾಲಯಾಮಿ
ಪದಾಂಬುಜಂ| ಶ್ರೀ ಮಹಾಲಕ್ಷ್ಮೀದೇವೈ ನಮಃ| ಪಾದಯೋಃ ಪಾದ್ಯಂ ಸಮರ್ಪಯಾಮಿ|| (ದೇವರ
ಪಾದಗಳಮೇಲೆ ನೀರನ್ನು ಹಾಕಬೇಕು)

- ಗಂಧ ಪುಷ್ಪಾಕ್ಷತಾರಕ್ತ ಪುಷ್ಪಸ್ತೋಮ ಸಮನ್ವಿತಂ ಸುವರ್ಣಪಾತ್ರೇ ಗ್ರಹಾಣಾರ್ಘ್ಯಂ ಸಮೋಸ್ತುತೆ|| ಶ್ರೀ


ಮಹಾಲಕ್ಷ್ಮೀದೇವೈ ನಮಃ| ಹಸ್ತಯೋ ಅರ್ಘ್ಯಂ ಸಮರ್ಪಯಾಮಿ ||
- ಕರ್ಪೂರ ರೇಖಾ ಮೃಗಮಧೈ ಸುವಾಸೈ ಉಪಶೋಭಿತಂ| ಗ್ರಹಣಾಚಮನೀಹಂ ಚ ಶಿಶಿರಂ ವಿಮಲಂ
ಆಚಮನೀಯಂ ಸಮರ್ಪಯಾಮಿ||

- ನದೀನರ ಸಮಧ್ಭೂತಂ ಪವಿತ್ರಂ ನಿರ್ಮಲಂ ಜಲಂ| ಸ್ನಾನಾರ್ಥಂತೇ ಪ್ರಯಚ್ಛಾಮಿ ಪ್ರಸೀದ ವಿಷ್ಣುವಲ್ಲಭೆ


ಸ್ನಾನಂ ಸಮರ್ಪಯಾಮಿ|| (ಎಂದು ಕಲಶದಲ್ಲಿಯ ನೀರಿನಿಂದ ಜಲಾಭಿಷೇಕ ಮಾಡಬೇಕು)
ಇದಾದ ನಂತರ- ಶ್ರೀ ಮಹಾಲಕ್ಷ್ಮೀ ದೇವತಾಭ್ಯೋನಮಃ ಮಾಂಗಲಿಕ ಸ್ನಾನಾರ್ಥ್ಯೇ ಉಷ್ಣೋದಕ ಸ್ನಾನಂ
ಸಮರ್ಪಯಾಮಿ|| (ಎಂದು ಉಷ್ಣ ನೀರಿನಿಂದ ಸ್ನಾನ ಮಾಡಿಸಬೇಕು)
(ಆಮೇಲೆ ದೇವರನ್ನು ಮಡಿ ವಸ್ತ್ರದಿಂದ ಒರೆಸಿ ಪ್ರತಿಷ್ಟಾಪಿಸಬೇಕು).
ಅಥ ಪಂಚಾಮೃತ ಸ್ನಾನಂ : - (ಕ್ಷೀರ(ಪಯ)= ಹಾಲು; ದಧಿ= ಮೊಸರು; ಘೃತ= ತುಪ್ಪ; ಮಧು=ಜೇನುತುಪ್ಪ;
ಶರ್ಕರ= ಸಕ್ಕರೆ)—
ಅಥ ಪಂಚಾಮೃತ ಸ್ನಾನಂ ಕರಿಷ್ಯೇ - ಪಂಚಾಮೃತೇನ ಸ್ವಪನಂ ಕರಿಷ್ಯೇ| ಭಕ್ತವತ್ಸಲೆ ಪಯೋದಧಿ
ಘೃತಂಚೈವ ಮಾಷಿಕಂ ಶರ್ಕರಾಯುತಂ| ಪಂಚಾಮೃತ ಸ್ನಾನಂ ಸಮರ್ಪಯಾಮಿ|| (ಆಮೇಲೆ
ಪಂಚಾಮೃತವನ್ನು ತೆಗೆದು ಬೇರೆ ಪಾತ್ರೆಯಲ್ಲಿ ಇಡಬೇಕು)
ಇದಾದ ನಂತರ - ಪಂಚಾಮೃತ ಸ್ನಾನಾನಂತರೇಣ ಶುಧ್ಧೋದಕ ಸ್ನಾನಂ ಸಮರ್ಪಯಾಮಿ- (ಎಂದು
ನೀರನ್ನು ಹಾಕಿ ದೇವರನ್ನು ಸ್ವಚ್ಚಗೊಳಿಸಬೇಕು)

ಮಹಾ ಅಭಿಷೇಕ : (ಶುಧ್ಧೋದಕ ಸ್ನಾನಂ) -- ಶ್ರೀಮಹಾಲಕ್ಷ್ಮೀ ದೇವತಾಭ್ಯೋ ನಮಃ| | ಮಹಾ ಅಭಿಷೇಕ


ಸ್ನಾನಂ ಸಮರ್ಪಯಾಮಿ| ಮಂದಾಕಿನ್ಯಾ ಸಮಾನೀತಂ ಹೇಮಾಂ ಬೂರುಹವಾಸಿತಂ| ಸ್ನಾನಾರ್ಥಂತೆ
ಮಯಾದತ್ತಂ ಗ್ರಹಾಣ ವಿಷ್ಣುಪ್ರಿಯೇ|| (ದೇವರ ಮೂರ್ತಿಯ ಮೇಲೆ ಕಲಶದ ನೀರನ್ನು ಶಂಖದಿಂದ ಸ್ನಾನ
ಮಾಡಿಸುತ್ತ ಶ್ರೀ ಸೂಕ್ತ ಇತ್ಯಾದಿಗಳನ್ನು ಪಠಿಸುತ್ತ ಜಲಾಭಿಷೇಕ ಮಾಡಬೇಕು. ಆಮೇಲೆ ಆ ಜಲವನ್ನು
ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಬೇಕು -- ತೀರ್ಥ. --- ಇದಾದ ಮೇಲೆ ದೇವರನ್ನು ಮಡಿ ವಸ್ತ್ರದಿಂದ
ಒರೆಸಿ ಪ್ರತಿಷ್ಠಾಪಿಸಿ ಹೂವು, ಅಕ್ಷತೆ ಹಾಕಬೇಕು) ಓಂ ಶ್ರೀಮಹಾಲಕ್ಷ್ಮೀ ದೇವತಾಭ್ಯೋ ನಮಃ
ಸುಪ್ರತಿಷ್ಠಿತಮಸ್ತು||

ವಸ್ತ್ರಂ :: ಕೌಶೇಯ ವಸನಂ ದಿವ್ಯಂ ಕಂಚುಕ್ಯಾಚ ಸಮನ್ವಿತಂ| ಉಪವಸ್ತ್ರೇಣ ಸಮನ್ವಿತಂ ಗ್ರಹಾಣ


ವಿಷ್ಣುಪ್ರಿಯೇ| ಶ್ರೀಮಹಾಲಕ್ಷ್ಮೀ ದೇವತಾಭ್ಯೋ ನಮಃ| ವಸ್ತ್ರೋಪವಸ್ತ್ರಾರ್ಥೆ ಕಾರ್ಪಾಸ (ಗೆಜ್ಜೆ ವಸ್ತ್ರ) ವಸ್ತ್ರಂ
ಸಮರ್ಪಯಾಮಿ|

ಗಂಧಂ:: ಇದಂ ಗಂಧಂ ಮಹಾದಿವ್ಯಂ ಕುಂಕುಮೇನ ಸಮನ್ವಿತಂ| ವಿಲೇಪನಾರ್ಥಂ ಮಯಾದತ್ತಂ ಗ್ರಹಾಣ


ವರದಾಭವ| ಓಂ ಶ್ರೀಮಹಾಲಕ್ಷ್ಮೀ ದೇವೈ ನಮಃ| ಗಂಧಂ ಸಮರ್ಪಯಾಮಿ|
ಹರಿದ್ರಾ ಸ್ವರ್ಣವರ್ಣಾಭಾ ಸರ್ವ ಸೌಭಾಗ್ಯದಾಯಿನೀ| ಸರ್ವಾಲಂಕಾರ ಮುಖ್ಯಾಹಿ ದೇವತ್ವಂ
ಪ್ರತಿಗೃಹ್ಯತಾಂ| ಓಂ ಶ್ರೀಮಹಾಲಕ್ಷ್ಮೀ ದೇವೈ ನಮಃ| ಹರಿದ್ರಾಂ ಸಮರ್ಪಯಾಮಿ|| {ಅರಿಷಿಣ}

ಹರಿದ್ರಾ ಚೂರ್ಣ ಸಂಯುಕ್ತಂ ಕುಂಕುಮಂ ಕಾಮದಾಯಕಂ| ವಸ್ತ್ರಾಲಂಕರಣಂ ಸರ್ವಂ ದೇವಿತ್ವಂ


ಪ್ರತಿಗೃಹ್ಯತಾಂ|| ಓಂ ಶ್ರೀಮಹಾಲಕ್ಷ್ಮೀ ದೇವೈ ನಮಃ| ಕುಂಕುಮಂ ಸಮರ್ಪಯಾಮಿ||

ಕಜ್ಜಲಂ (ಕಾಡಿಗೆ) ಕಾಮದಂ ರಮ್ಯಂ ಕಾಮಿನೀಕಾಮಸಂಭವಂ| ನೇತ್ರಯೋರ್ಭುಷಣಾರ್ಥಾಯ ಕಜ್ಜಲಂ


ಪ್ರತಿಗೃಹ್ಯತಾಂ|| ಓಂ ಶ್ರೀಮಹಾಲಕ್ಷ್ಮೀ ದೇವೈ ನಮಃ| ಕಜ್ಜಲಂ ಸಮರ್ಪಯಾಮಿ|| {ಎಂದು ಒಂದು
ಎಲೆಯಮೇಲೆತುಪ್ಪ ಸವರಿ ದೀಪದ ಮೇಲೆ ಹಿಡಿದು ಕಾಡಿಗೆಯನ್ನು ದೊರಕಿಸಿ ದೇವರಿಗೆ ಹಚ್ಚಬೇಕು}

ಅಥ ನಾಮ ಪೂಜಾಂಚ ಕರಿಷ್ಯೇ :: ನಾನಾವಿಧಾನಿ ಮಾಲ್ಯಾನಿ ಸುಗಂಧಿನಿ ಹರಿಪ್ರಿಯೇ ಗ್ರಹಾಣ ದೇವಿತ್ವಂ


ಪ್ರಸಾದಾಭಿ ಮುಖೀಭವ| ನಾನಾ ವಿಧಾನಿ ಪುಷ್ಪಾಣಿ ಸಮರ್ಪಯಾಮಿ||
(ಇಲ್ಲಿ ಅಷ್ಟೋತ್ತರ ಇಲ್ಲವೇ ಇತರೇ ನಾಮಾವಳಿಯೊಂದಿಗೆ ಹೂಗಳನ್ನು ಮತ್ತು ಅಕ್ಷತೆಗಳನ್ನು ಅರ್ಪಿಸಬೇಕು).

ಧೂಪಂ : ವನಸ್ಪತಿ ರಸೋದ್ಭೂತಂ ನಾನಾ ಗಂಧ ಸಮನ್ವಿತಂ| ದಶಾಂಗ ಸಹಿತಂ ದಿವ್ಯಂ ಧೂಪ ದೇವಿ
ಗ್ರಹಸ್ವಭೋ| ಓಂ ಶ್ರೀಮಹಾಲಕ್ಷ್ಮೀ ದೇವೈ ನಮಃ| ಧೂಪಮಾಘ್ರಾಪಯಾಮಿ||

ದೀಪಂ : ದೀಪಂ ತೇಜೋಹರಂ ಜ್ಯೋತ್ಸ್ನಾ ಙ್ಞಾನಸಂ ಬೊಧಕಂ ಶುಭಂ ಗ್ರಹಾಣ ಮಾತಸ್ತ್ವಂ ಅಪರಾಧ
ಶತಾಪಹಂ|| ಓಂ ಶ್ರೀಮಹಾಲಕ್ಷ್ಮೀ ದೇವೈ ನಮಃ| ದೀಪಂ ದರ್ಶಯಾಮಿ||

ನೈವೇದ್ಯಂ : ನಾನಾ ವಿಧಾನಿ ಭಕ್ಷ್ಯಾಣಿ ವ್ಯಂಜನಾನಿ ಹರಿಪ್ರಿಯೆ| ಗ್ರಹಾಣಿ ದೇವಿ ನೈವೇದ್ಯಂ ಸುಖದಂ
ಸರ್ವದೇಹಿನಾಂ (ನೈವೇದ್ಯಂ ಸಮರ್ಪಯಾಮಿ| ಗಂಗೋದಕಂ ಸಮಾನೀತಂ ಪಾನೀಯಂ ಜಲಮುತ್ತುಮಂ
ಸ್ವೀಕರುಷ್ವ ಪ್ರಾಶನಂ ದೇವಿ ವರದಾಭವ ಕಮಲಜೆ|| ಮಧ್ಯೇ ಪಾನೀಯಂ ಸಮರ್ಪಯಾಮಿ||
ಉತ್ತರಾಪೋಷನಂ ಸಮರ್ಪಯಾಮಿ| ಹಸ್ತ ಪ್ರಕ್ಷಾಲನಂ ಸಮರ್ಪಯಾಮಿ| ಆಚಮನಂ ಕರೋದ್ವೈರ್ತನಂ
ಸಮರ್ಪಯಾಮಿ||
ಓಂ ಪ್ರಾಣಾಯ ಸ್ವಾಹಾ| ಓಂ ಅಪಾನಾಯ ಸ್ವಾಹಾ| ಓಂ ವ್ಯಾನಾಯ ಸ್ವಾಹಾ| ಓಂ ಉದಾನಾಯ ಸ್ವಾಹಾ|
ಓಂ ಸಮಾನಾಯ ಸ್ವಾಹಾ| ಓಂ ಬ್ರಹ್ಮಣೇ ಸ್ವಾಹಾ| ಓಂ ಶ್ರೀಮಹಾಲಕ್ಷ್ಮೀ ದೇವೈ ನಮಃ| ನೈವೇದ್ಯಂ
ಸಮರ್ಪಯಾಮಿ|| (ಎಂದು ಪಠಿಸುತ್ತ ಬಲಗೈಯ ಐದೂ ಬೆರಳುಗಳ ತುದಿಗಳಿಂದ ನೈವೇದ್ಯದ
ಸುವಾಸನೆಯನ್ನು ದೇವರತ್ತ ಕೊಂಡೌಯ್ಯಬೇಕು -- ಅಥವಾ -- ಕೈ ಜೋಡಿಸಿ ದೇವರಿಗೆ ನೈವೇದ್ಯವನ್ನು
ಅರ್ಪಿಸಬೇಕು).
ನೈವೇದ್ಯ ಮಧ್ಯೇ ಪಾನೀಯಂ ಸಮಾರ್ಪಯಾಮಿ| ಉತ್ತರಾಪೋಶನಂ ಸಮಾರ್ಪಯಾಮಿ| ಹಸ್ತಪ್ರಕ್ಷಾಲನಂ
ಸಮಾರ್ಪಯಾಮಿ| ಮುಖ ಪ್ರಕ್ಷಾಲನಂ ಸಮಾರ್ಪಯಾಮಿ| ಕರೋದ್ವರ್ತನಾರ್ಥೇ ಚಂದನಂ
ಸಮಾರ್ಪಯಾಮಿ| {ಎಂದು ಕೈಯಿಂದ ಒಂದುತೀರ್ಥ ಸೌಟು ನೀರು ಬಿಟ್ಟು ದೇವರಿಗೆ ಗಂಧ ಹಚ್ಚಬೇಕು}

ಫಲಾರ್ಪಣ :: ರಂಭಾಫಲಂ ದಾಡಿಮಂಚ ಖರ್ಜುರಂ ಮಾತುಲಿಂಗಕಂ| ಗೃಹ್ಯತಾಂ ದೇವಿ ಕೇಳಾದಿ


ಫಲಾದಿ ವಿಷ್ಣು ವಲ್ಲಭೆ| ಓಂ ಶ್ರೀಮಹಾಲಕ್ಷ್ಮೀ ದೇವೈ ನಮಃ| ನಾನಾವಿಧಾನಿ ಫಲಾನಿ ಸಮರ್ಪಯಾಮಿ||

ತಾಂಬೂಲ : ಪೂಗೀಫಲ ಮಹದ್ದಿವ್ಯಂ ನಾಗವಲ್ಲೀದಲೈರ್ಯುತಂ| ಕರ್ಪೂರೈಲಾ ಸಮಾಯುಕ್ತಂ ತಾಂಬೂಲಂ


ಪ್ರತಿಗೃಹ್ಯತಾಂ|| ಓಂ ಶ್ರೀಮಹಾಲಕ್ಷ್ಮೀ ದೇವೈ ನಮಃ| ಮುಖವಾಸಾರ್ತೇ ತಾಂಬೂಲಂ
ಸಮರ್ಪಯಾಮಿ|| ಎಂದು ಎರಡು ವೀಳ್ಯದೆಲೆಗಳಮೇಲೆ ಅಡಿಕೆ ಮತ್ತು ನಾಣ್ಯವನ್ನಿಟ್ಟು ಅಕ್ಷತೆ ಹಾಕಿ ದೇವರ
ಮೇಲೆಯೂ ಅಕ್ಷತೆ ಹಾಕಬೇಕು}

ದಕ್ಷಿಣಾಂ : ಹಿರಣ್ಯಗರ್ಭಗರ್ಭಸ್ಥಂ ಹೇಮಬೀಜಂ ವಿಭಾವಸೋಃ| ಅನಂತ ಪುಣ್ಯ ಫಲಪದಮತಃ ಶಾಂತಿಂ


ಪ್ರಯಚ್ಚಮೇ| ಓಂ ಶ್ರೀಮಹಾಲಕ್ಷ್ಮೀ ದೇವೈ ನಮಃ| ದಕ್ಷಿಣಾಂ ಸಮರ್ಪಯಾಮಿ||
ಮಂಗಳಾರತಿ : ಚಂದ್ರಾದಿತೌ ಚ ಧರಣೀರ್ವಿದ್ಯುಅಗ್ನಿಸ್ತಥ್ಯೇವಚ| ತ್ವಮೇವ ಸರ್ವ ಜ್ಯೋತೀಂಷಿ ಆರ್ತಿಕ್ಯಂ
ಪ್ರತಿಗೃಹ್ಯತಾಂ|| (ಎಂದು ಉಚ್ಚರಿಸುತ್ತ ದೇವರಿಗೆ ಆರತಿ ಬೆಳಗಬೇಕು. ಇಲ್ಲಿ ಆರತಿ ಪದಗಳನ್ನು
ಅನ್ನಬಹುದು).
ಅಥಃ ಮಂತ್ರಪುಷ್ಪಂ : ಮಹಾಲಕ್ಷ್ಮೇಚ ವಿದ್ಮಹೇ ವಿಷ್ಣು ಪತ್ನೀಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್|‌
ಮಂತ್ರ ಪುಷ್ಪಂ ಸಮರ್ಪಯಾಮಿ|| (ಎಂದು ದೇವರಿಗೆ ಅಕ್ಷತಾ ಹೂವು ಅರ್ಪಿಸಬೇಕು).

ಪ್ರಾರ್ಥನೆ :: ನಮೋದೇವ್ಯೈ ಮಹಾದೇವ್ಯೈ ಶಿವಾಯ್ಯೆ ಸತತಂ ನಮಃ| ನಮಃ ಪ್ರಕೃತ್ಯೇ


ಭದ್ರಾಯ್ಯೆನೀಯತಾಃ ಪ್ರಣತಾಸ್ಮತಾಮ್|‌ ಪ್ರಾರ್ಥನಾಂ ಸಮರ್ಪಯಾಮಿ||

ಪ್ರದಕ್ಷಿಣಾಂ : ಯಾನಿಕಾನಿ-ಚ-ಪಾಪಾನಿ ಜನ್ಮಾಂತರ ಕೃತಾನಿ ಚ| ತಾನಿತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ


ಪದೇ| | ಓಂ ಶ್ರೀಮಹಾಲಕ್ಷ್ಮೀ ದೇವೈ ನಮಃ| ಪ್ರದಕ್ಷಿಣಾಂ ನಮಸ್ಕಾರಂ ಸಮರ್ಪಯಾಮಿ||

ಯಸ್ಯ ಸ್ಮೃತ್ಯಾ ಚ ನಾಮೋಕ್ತ್ಯಾ ತಪಃ ಪೂಜಾ ಕ್ರಿಯಾದಿಷು| ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ
ವಂದೇ ತಮಚ್ಯುತಂ| ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಜನಾರ್ದನ| ಯತ್ಕೃತಂತು ಮಯಾದೇವಿ
ಪರಿಪೂರ್ಣಂ ತದಸ್ತುಮೇ||
ಅನೇನ ಯಥಾ ಙ್ಞಾನೇನ ಯಥಾ ಮಿಲಿತೋಪಚಾರ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜನೇನ
ಶ್ರೀ ಮಾಹಾಲಕ್ಷ್ಮೀ ಪ್ರೀಯಂತಾಂ| ಶ್ರೀ ಕೃಷ್ಣಾರ್ಪಣಮಸ್ತು||

ಪೂಜಾಕಾಲೇ ಮಂತ್ರ, ತಂತ್ರ, ಸ್ವರ ವರ್ಣ ಲೋಪದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯ ಮಂತ್ರ


ಜಪಮಹಂ ಕರಿಷ್ಯೇ| ಓಂ ಅಚ್ಯುತಾಯನಮಃ| ಓಂ ಅನಂತಾಯ ನಮಃ| ಓಂ ಗೋವಿಂದಾಯ ನಮಃ| ಓಂ
ಅಚ್ಯುತಾನಂತ ಗೋವಿಂದೇಭ್ಯೋ ನಮೋ ನಮಃ| ಕರ್ಮಾಂತೇ ಆಚಮೇತ್‌(ಒಂದುಸಾರಿ)||

ಉತ್ತರ ಪೂಜಾ : (ಅಡಿಕೆಯಲ್ಲಿ/ಮೂರ್ತಿಯ ಆವಾಹಿತ ಅಣಪತಿಗಾಗಿ ಮಾತ್ರ) ----


ಆಚಮನ : ಓಂ ಕೇಶವಾಯ ನಮಃ| ನಾರಾಯಣಾಯ ನಮಃ| ....................................ಶ್ರೀಕೃಷ್ಣಾಯ
ನಮಃ||
ಓಂ ಶ್ರೀಮನ್ಮಹಾಗಣಾಧಿಪತಯೇ ನಮಃ - ಗಂಧಂ ಸಮರ್ಪಯಾಮಿ|
ಓಂ ಶ್ರೀಮನ್ಮಹಾಗಣಾಧಿಪತಯೇ ನಮಃ - ಅಕ್ಷತಾಂ ಸಮರ್ಪಯಾಮಿ|
ಓಂ ಶ್ರೀಮನ್ಮಹಾಗಣಾಧಿಪತಯೇ ನಮಃ - ಪತ್ರ ಪುಷ್ಪಂ ಸಮರ್ಪಯಾಮಿ|
ಓಂ ಶ್ರೀಮನ್ಮಹಾಗಣಾಧಿಪತಯೇ ನಮಃ - ಧೂಪಮಾಘ್ರಾಪಯಾಮಿ|
ಓಂ ಶ್ರೀಮನ್ಮಹಾಗಣಾಧಿಪತಯೇ ನಮಃ - ದೀಪಂ ದರ್ಶಯಾಮಿ|
ಓಂ ಶ್ರೀಮನ್ಮಹಾಗಣಾಧಿಪತಯೇ ನಮಃ - ನೈವೇದ್ಯಂ ಸಮರ್ಪಯಾಮಿ|
ಯಾಂತು ದೇವಗಣಾಃ ಸರ್ವೇ ಪೂಜಾಮಾದಾಯ ಪಾರ್ಥೀವಿಂ| ಇಷ್ಟ ಕಾಮ್ಯಾರ್ಥ ಸಿಧ್ಯರ್ಥಂ
ಪುನರಾಗಮನಾಯಚ||
{ಎಂದು ಸ್ಥಾಪಿತ ಗಣಪತಿ ದೇವರನ್ನು ಅಲ್ಲಾಡಿಸಿ ವಿಸರ್ಜಿಸಬೇಕು}

ಶಾಂತಿ ಮಂತ್ರ : ಓಂ ಸಹನಾವವತು| ಸಹನೌಭುನಕ್ತು| ಸಹವೀರ್ಯಂ ಕರವಾವಹೈ|


ತೇಜಸ್ವಿನಾವಧೀತಮಸ್ತು| ಮಾವಿದ್ವಿಷಾವಹೈ|| ಓಂ ಶಾಂತಿಃ ಶಾಂತಿಃ ಶಾಂತಿಃ||
========================================================================

ಆಶೀರ್ವಾದ ಮಂತ್ರ : ಶತಂಜೀವ ಶರದೋ ವರ್ಧಮಾನಃ ಶತಂ ಹೇಮಂತಾನ್‌ ಶತಮುವ ಸಂತಾನ್|‌


ಶತಮಿಂದ್ರಾಗ್ನೇ ಸವಿತಾ ಬ್ರಹಸ್ಪತಿಃ ಶತಾಯುಷಾಃ ಹವಿಕ್ಷೇಮಂ ಪುನರ್ದುಹೋ| ಆಹಾರ್ಷಂತ್ವಾ ವಿದಂತ್ವಾ
ಪುನರಾಗಾತ್‌ ಪುನರ್ನವಾ| ಸರ್ವಾಂಗ ಸರ್ವಂತೇ ಚಕ್ಷುಃ ಸರ್ವಮಾಯುಶ್ಚತೇ ವಿದಂ|| ಶತಮಾನಂ ಭವತಿ
ಶತಾಯುಃ ಪುರುಷಶ್ಯತೇನ್ದ್ರಿಯ ಆಯುಷ್ಯೇವೇನ್ದ್ರಿಯೇ ಪ್ರತಿತಿಷ್ಠತಿ||
ಸ್ತ್ರೀಯರಿಗೆ : ಸುಮಂಗಲಿರಿಯಂ ವಧೂರಿಮಾಂಸಮೇತ ಪಶ್ಯತ| ಸೌಭಾಗ್ಯಮಸ್ಮೇ ದತ್ತಾಯಾಸ್ತಂ
ವಿಪರೇತನ| ಅತ್ರೇಯಥಾ ಅನುಸೂಯಾಸ್ಯಾ ವಸಿಷ್ಠಸ್ಯಾಪ್ಯ ಅರುಂಧತಿ| ಕೌಶಿಕಸ್ಯ ಯಥಾಸತೀ ತಥಾತ್ವ
ಮಪಿ ಭರ್ತರಿ|| ಧೀರ್ಘಮಾಯುರಸ್ತು||
ಮಕ್ಕಳಿಗೆ : ದೀರ್ಘಮಾಯುಃಶ್ರೇಯಃ ಶಾಂತಿಃ ಪುಷ್ಠಿಃ ತುಷ್ಠಿರಸ್ತು||
=====================================================================================
ಭೋಜನಕ್ಕೆ ಕೂಡ್ರುವ ಮುನ್ನ : (ಎಲ್ಲಾ ಪದಾರ್ಥಬಡಿಸಿದ ಮೇಲೆ ಎಲೆಗಳಿಗೆ ಗಂಧದ ನೀರನ್ನು ಗಾಯತ್ರೀ
ಮಂತ್ರದಿಂದ ಪ್ರೋಕ್ಷಿಸಬೇಕು) --- ಪ್ರಜಾಪತೇ ನತ್ಯದೇತಾನ್ಯನ್ನೋ ವಿಶ್ವಾಜಾತಾನಿ ಪರಿತಾಬಭೂವ
ಯತ್ಕಾಮಾಸ್ತೇ ಜುಹುಮಸ್ತನ್ನೋ ಅಸ್ತು ವಯಂ ಶ್ಯಾಮ ಪತಯೋ ರಯೀಣಾಂ| ಏಕೋ ವಿಷ್ಣುಃ
ಮಹದ್ಭೂತಂ ಪ್ರಥಗ್‌ ಭೂತಾನ್ಯನೇಕಶಃ| ತ್ರೀನ್‌ಲೋಕಾನ್‌ವ್ಯಾಪ್ಯ ಭೂತಾತ್ಮಾ ಭುಂಕ್ತೇ ವಿಶ್ವ ಭುಗವ್ಯಹಃ|
ಅನೇನ ಬ್ರಾಹ್ಮಣ ಸುವಾಸಿನಿ ಸಮಾರಾಧನೇನ ಶ್ರೀ ಇಷ್ಟದೇವತಾ ಕುಲದೇವತಾಃ ಪ್ರಿಯಂತಾಂ|
ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ| ಶರಣ್ಯೇ ತ್ರಿಯಂಬಕೇ ಗೌರೀ ನಾರಾಯಣೀ
ನಮೋಸ್ತುತೇ| ಸುವಾಸಿನ್ಯಃ ಪ್ರಿಯಂತಾಂ ಯಂತುನದಯೊ ವರ್ಷಂತು ಪರ್ಜನ್ಯಾಃ ಸುಪಿಪ್ಪಲಾ ಓಷಧಯೋ
ಭವಂತು| ಅನ್ನವತಾಂ ಓದನವತಾಂ ಮಾಮಿಕ್ಷಮತಾಂ ಏಷಾಗಂ ರಾಜಾಭೂಯಾಸಂ ಓದನಮಭೃವತೇ
ಪರಮೇಷ್ಠಿವಾ ಏಷಃ| ಯತೋದನ ಪರಮಾಮೇವೈನಂ ಶ್ರೀಯಂ ಗಮಯತಿ| ನಮಃ ಪಾರ್ವತೀಪತೇ
ಹರಹರ ಮಹಾದೇವ||
========================================================================

|| ಶ್ರೀ ಅಷ್ಟಲಕ್ಷ್ಮೀ ಸ್ತೋತ್ರಮ್‌ ||

ಸುಮನಸ ವಂದಿತ ಸುಂದರಿ ಮಾಧವಿ ಚಂದ್ರ ಸಹೋದರಿ ಹೇಮಮಯೇ | ಮುನಿಗಣ ಮಂಡಿತ ಮೋಕ್ಷಪ್ರದಾಯಿನಿ ಮಂಜುಳ
ಭಾಷಿಣಿ ವೇದನುತೇ || ಪಂಕಜವಾಸಿನಿ ದೇವಸುಪೂಜಿತೇ ಸದ್ಗುಣವರ್ಷಿಣಿ ಶಾಂತಿಯುತೇ | ಜಯ ಜಯಹೇ ಮಧುಸೂದನ ಕಾಮಿನಿ
ಶ್ರೀ ಆದಿಲಕ್ಷ್ಮೀ ಸದಾ ಪಾಲಯಮಾಂ ||

ಆಯಿಕಲಿಕಲ್ಮಷನಾಶಿನಿ ಕಾಮಿನಿ ವೈದಿಕರೂಪಿಣಿ ವೇದಮಯೇ | ಕ್ಷೀರಸಮುದ್ಭವ ಮಂಗಳ ರೂಪಿಣಿ ಮಂತ್ರನಿವಾಸಿನಿ ಮಂತ್ರನುತೇ


|| ಮಂಗಳದಾಯಿನಿ ಅಂಬುಜವಾಸಿನಿ ದೇವಗಣಾಶ್ರಿತ ಪಾದಯುತೇ ಜಯ ಜಯಹೇ ಮಧುಸೂದನ ಕಾಮಿನಿ ಶ್ರೀ ಧಾನ್ಯಲಕ್ಷ್ಮೀ ಸದಾ
ಪಾಲಯಮಾಂ ||
ಜಯವರವರ್ಣಿನಿ ವೈಷ್ಣವಿಭಾರ್ಗವಿ ಮಂತ್ರ ಸ್ವರೂಪಿಣಿ ಮಂತ್ರಮಯೇ | ಸುರಗಣಪೂಜಿತೇ ಶೀಘ್ರಫಲಪ್ರದೇ ಜ್ಞಾನವಿಕಾಸಿನಿ
ಶಾಸ್ತ್ರನುತೇ || ಭವಭಯಹಾರಿಣಿ ಪಾಪವಿಮೋಚನಿ ಸಾಧುಜನಾಶ್ರಿತ ಪಾದಯುತೇ | ಜಯ ಜಯಹೇ ಮಧುಸೂದನ ಕಾಮಿನಿ ಶ್ರೀ
ಧೈರ್ಯಲಕ್ಷ್ಮೀ ಸದಾ ಪಾಲಯಮಾಂ ||

ಜಯ ಜಯ ದುರ್ಗತಿ ನಾಶಿನಿ ಕಾಮಿನಿ ಸರ್ವ ಫಲಪ್ರದ ಶಾಸ್ತ್ರಮಯೇ | ರಥಗಜತುರಗಪದಾತಿ ಸಮಾವೃತ ಪರಿಜನ ಮಂಡಿತ
ಲೋಕನುತೇ || ಹರಿಹರಬ್ರಹ್ಮ ಸುಪೂಜಿತ ಸೇವಿತ ತಾಪನಿವಾರಿಣಿ ಪಾದಯುತೇ | ಜಯ ಜಯಹೇ ಮಧುಸೂದನ ಕಾಮಿನಿ ಶ್ರೀ
ಗಜಲಕ್ಷ್ಮೀ ಸದಾ ಪಾಲಯಮಾಂ ||

ಆಯಿಖಗವಾಹಿನಿ ಮೋಹಿನಿ ಚಕ್ರಿಣಿ ರಾಗವಿವರ್ಧಿನಿ ಜ್ಞಾನಮಯೇ | ಗುಣಗಣವಾರಿಧಿ ಲೋಕಹಿತೈಷಿಣಿ ಸ್ವರ ಸಪ್ತ ಭೂಷಿತ
ಗಾನನುತೇ || ಸಕಲ ಸುರಾಸುರ ದೇವ ಮುನೀಶ್ವರ ಮಾನವ ವಂದಿತ ಪಾದಯುತೇ | ಜಯ ಜಯಹೇ ಮಧುಸೂದನ ಕಾಮಿನಿ ಶ್ರೀ
ಸಂತಾನಲಕ್ಷ್ಮೀ ಸದಾ ಪಾಲಯಮಾಂ ||

ಜಯಕಮಲಾಸಿನಿ ಸದ್ಗುಣದಾಯಿನಿ ಜ್ಞಾನವಿಕಾಸಿನಿ ಜ್ಞಾನಮಯೇ | ಅನುದಿನಮರ್ಚಿತ ಕುಂಕುಮಧೂಸರ ಭೂಷಿತವಾಸಿತ


ವಾದ್ಯನುತೇ || ಕನಕಧರಾಸ್ತುತಿ ವೈಭವ ವಂದಿತ ಶಂಕರ ದೇಶಿಕ ಮಾನ್ಯಪದೇ | ಜಯ ಜಯಹೇ ಮಧುಸೂದನ ಕಾಮಿನಿ ಶ್ರೀ
ವಿಜಯಲಕ್ಷ್ಮೀ ಸದಾ ಪಾಲಯಮಾಂ ||

ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ ಶೋಕವಿನಾಶಿನಿ ರತ್ನಮಯೇ | ಮಣಿಮಯ ಭೂಷಿತ ಕರ್ಣವಿಭೂಷಣ ಶಾಂತಿಸಮಾವೃತ
ಹಾಸ್ಯಮುಖೇ || ನವನಿಧಿ ದಾಯಿನಿ ಕಲಿಮಲಹಾರಿಣಿ ಕಾಮಿತ ಫಲಪ್ರದ ಹಸ್ತಯುತೇ | ಜಯ ಜಯಹೇ ಮಧುಸೂದನ ಕಾಮಿನಿ ಶ್ರೀ
ವಿದ್ಯಾಲಕ್ಷ್ಮೀ ಸದಾ ಪಾಲಯಮಾಂ ||

ಧಿಮಿ ಧಿಮಿ ದಿಂಧಿಮಿ ದಿಂಧಿಮಿ ದಿಂಧಿಮಿ ದುಂದುಭಿ ನಾದ ಸಂಪೂರ್ಣಮಯೇ | ಘುಮ ಘುಮ ಘುಂಘುಮ ಘುಂಘುಮ ಘುಂಘುಮ
ಶಂಖನಿನಾದ ಸುವಾದ್ಯನುತೇ || ವೇದಪುರಾಣೇತಿಹಾಸ ಸುಪೂಜಿತೇ ವೈದಿಕಮಾರ್ಗ ಪ್ರದರ್ಶಯುತೇ | ಜಯ ಜಯಹೇ
ಮಧುಸೂದನ ಕಾಮಿನಿ ಶ್ರೀ ಧನಲಕ್ಷ್ಮೀ ರೂಪೇಣ ಸದಾ ಪಾಲಯಮಾಂ ||

------- ೦೦೦೦೦ -------

You might also like