Download as docx, pdf, or txt
Download as docx, pdf, or txt
You are on page 1of 5

ಜಿಲ್ಲಾ ಪಂಚಾಯತ್, ತುಮಕೂರು

ಲೆಕ್ಕಶಾಖೆ
ಸಂ:ಜಿಪಂತು/ಮುಲೆಅ/ಲೆಶಾ-2/ಅಡ್‌ಹಾಕ್‌/01/2021-22
ದಿನಾಂಕ:18-02-2022
ಗೆ,
ಕಾರ್ಯನಿರ್ವಾಹಕ ಅಧಿಕಾರಿ,
ತಾಲ್ಲೂಕು ಪಂಚಾಯತ್‌,
ಮಧುಗಿರಿ.

ವಿಷ ಗ್ರಾಮ ಪಂಚಾಯಿತಿ ಲೆಕ್ಕ


ಯ: ಪರಿಶೋಧನಾ ವರದಿಗಳ 2017, 2018
& 2019 ನೇ ಸಾಲಿನ ಆಕ್ಷೇಪಣೆ ಮತ್ತು

ವಸೂಲಾತಿ ಕಂಡಿಕೆಗಳ
ತೀರುವಳಿ ಕುರಿತು
ಉಲ ಮುಖ್ಯ ಕಾರ್ಯನಿರ್ವಾಹಕ
್ಲೇ ಅಧಿಕಾರಿಯವರ ಅ.ಜ್ಞಾಪತ್ರ
ಖ: ಸಂ:ಜಿಪಂತು/ಮುಲೆಅ/ಲೆಶಾ-2/ಅಡ್‌
ಹಾಕ್/01/2021-22‌, ದಿನಾಂಕ:06-01-2022
*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ,


ಉಲ್ಲೇಖಿತ ಅಧಿಕೃತ ಜ್ಞಾಪನದಲ್ಲಿ ಮಧುಗಿರಿ
ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮ
ಪಂಚಾಯಿತಿಗಳ ಆಕ್ಷೇಪಣೆ ಮತ್ತು ವಸೂಲಾತಿ
ಪ್ರಗತಿ ಕುರಿತಂತೆ ದಿನಾಂಕ:01-02-2022 ರಂದು ಅಡಹಾಕ್‌
ಸಮಿತಿ ಪರಿಶೀಲನಾ ಸಭೆಯನ್ನು
ಕಾರಣಾಂತರದಿಂದ ಮುಂದೂಡಲಾಗಿದ್ದು ಈ
ಪರಿಶೀಲನಾ ಸಭೆಯ ದಿನಾಂಕವನ್ನು 25-02-2022 ಕ್ಕೆ
ಬೆಳಗ್ಗೆ 11.00 ಗಂಟೆಗೆ ಪುನರ್‌ ನಿಗಧಿಪಡಿಸಲಾಗಿದ್ದು,
ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು
ಪಂಚಾಯತ್‌, ಮಧುಗಿರಿ ಇವರು ತಮ್ಮ
ಅಧಿನದಲ್ಲಿರುವ ಗ್ರಾಮ ಪಂಚಾಯತ್‌ ಅಭಿವೃದ್ಧಿ
ಅಧಿಕಾರಿಗಳು ತಪ್ಪದೇ ಖುದ್ದಾಗಿ ಮಾಹಿತಿ ಮತ್ತು
ದಾಖಲೆಗಳೊಂದಿಗೆ ಸಭೆಗೆ ಹಾಜರಾಗಲು
ಸೂಚಿಸುವಂತೆ ತಿಳಿಸಲಾಗಿದೆ.
ತಮ್ಮ ವಿಶ್ವಾಸಿ,

ಮುಖ್ಯ
ಲೆಕ್ಕಾಧಿಕಾರಿ,
ಜಿಲ್ಲಾ
ಪಂಚಾಯತ್‌,
ತುಮಕೂರು
ಜಿಲ್ಲಾ ಪಂಚಾಯತ್, ತುಮಕೂರು
ಲೆಕ್ಕಶಾಖೆ
ಸಂ:ಜಿಪಂತು/ಮುಲೆಅ/ಲೆಅ-2/ಲೆಶಾ-2/ಲೆಕ್ಕ ಪರಿಶೋಧನೆ/2021-22 ದಿನಾಂಕ:18-02-2022

ಗೆ,
ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು,
ತಾಲ್ಲೂಕು ಪಂಚಾಯತ್‌

ವಿಷಯ: ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ ವತಿಯಿಂದ
ಕೈಗೊಳ್ಳುತ್ತಿರುವ ಗ್ರಾಮ ಪಂಚಾಯತಿಗಳ ಕಾರ್ಯಕ್ಷಮತೆ ಲೆಕ್ಕ ಪರಿಶೋಧನೆಗೆ
ಸಹಕಾರ ನೀಡುವ ಬಗ್ಗೆ

ಉಲ್ಲೇಖ: ಆಂತರಿಕ ಆರ್ಥಿಕ ಸಲಹೆಗಾರರು ಹಾಗೂ ಪದನಿಮಿತ್ತ ಸರ್ಕಾರದ ಉಪ


ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆ, ಬೆಂಗಳೂರು
ಇವರ ಪತ್ರ ಸಂ:ಗ್ರಾಅಪ/24/ಎಎಆರ್/2021,‌ ದಿನಾಂಕ:03-02-2022
*****
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದನ್ವಯ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು
ಲೆಕ್ಕ ಪತ್ರ ಇಲಾಖೆಯ ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಕಚೇರಿಗಳು ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕ್ಷಮತೆ ಲೆಕ್ಕ
ಪರಿಶೋಧನೆಯನ್ನು ಕೈಗೊಳ್ಳುತ್ತಿದ್ದು ಸದರಿ ಕಾರ್ಯಕ್ಷಮತೆ ಲೆಕ್ಕ ಪರಿಶೋಧನೆಗೆ ಅಗತ್ಯ ದಾಖಲೆ,
ಮಾಹಿತಿಯನ್ನುನೀಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು/ಕಾರ್ಯದಾರ್ಶಿಗಳು ಖುದ್ದಾಗಿ ಹಾಜರಿದ್ದು ಸೂಕ್ತ
ನಿರ್ದೇಶನ ನೀಡುವಂತೆ ಸೂಚಿಸಿದೆ.

ತಮ್ಮ ವಿಶ್ವಾಸಿ,

ಮುಖ್ಯ ಲೆಕ್ಕಾಧಿಕಾರಿ,
ಜಿಲ್ಲಾ ಪಂಚಾಯತ್‌, ತುಮಕೂರು

ಪ್ರತಿಯನ್ನು: ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್‌, ತುಮಕೂರು ಇವರಿಗೆ ಮಾಹಿತಿಗಾಗಿ

ಜಿಲ್ಲಾ ಪಂಚಾಯತ್, ತುಮಕೂರು


ಸಂ:ಜಿಪಂತು/ಮುಲೆಅ/ಲೆಅ-2/ ಲೆಕ್ಕ ತನಿಖೆ/2021-22 ದಿನಾಂಕ:22-02-2022

ಗೆ,
ಕಾರ್ಯನಿರ್ವಾಹಕ ಅಧಿಕಾರಿಗಳು,
ತಾಲ್ಲೂಕು ಪಂಚಾಯತ್‌, ಶಿರಾ

ವಿಷಯ: 2021-22 ನೇ ಸಾಲಿನ ವಾರ್ಷಿಕ ಲೆಕ್ಕ ಪರಿಶೋಧನಾ ಕಾರ್ಯಕ್ರಮದ ಬಗ್ಗೆ

ಉಲ್ಲೇಖ: ಶ್ರೀ ಮೂರ್ತಿ, ನಿವೃತ್ತ ಸಹಾಯಕ ನಿರ್ದೇಶಕರು, ತಾಲ್ಲೂಕು ಪಂಚಾಯಿತಿ, ಶಿರಾ


ರವರ ಬೇ-ಬಾಕಿ ನೀಡುವ ಕುರಿತು ಇ-ಆಫೀಸ್‌ ಕಂಡಿಕೆ-10 ರ ಮಾನ್ಯ ಮುಖ್ಯ
ಲೆಕ್ಕಾಧಿಕಾರಿಗಳವರ ಆದೇಶದಂತೆ ಹಾಗೂ ಕಂಡಿಕೆ-11 ರ ಲೆಕ್ಕಾಧಿಕಾರಿಗಳ
ಆದೇಶದಂತೆ ದಿನಾಂಕ:22-02-2022
*****
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ತಮ್ಮ ಕಛೇರಿಯ 2019-20 ರಿಂದ 2021-22 ನೇ ಸಾಲಿನವರೆಗೆ ಲೆಕ್ಕ
ಪರಿಶೋಧನಾ ಕಾರ್ಯವನ್ನು ಜಿಲ್ಲಾ ಪಂಚಾಯತ್‌ನ ಅಧಿಕಾರಿ/ಸಿಬ್ಬಂದಿ ಇವರುಗಳು ದಿನಾಂಕ:28-02-2022 ರಿಂದ 11-
03-2022 ರವರೆಗೆ ಕೈಗೊಳ್ಳುವರು.

ಲೆಕ್ಕ ಪರಿಶೋಧನಾ ಸಮಯದಲ್ಲಿ ಲೆಕ್ಕ ತನಿಖಾ ಸಿಬ್ಬಂದಿ ಕೇಳುವ ಮಾಹಿತಿಯನ್ನು ಹಾಗೂ ರಿಜಿಸ್ಟರ್‌ ಗಳು,
ಬ್ಯಾಂಕ್‌ಲೆಕ್ಕಗಳು ಹಾಗೂ ಕಡತಗಳು ಇತ್ಯಾದಿ ದಾಖಲಾತಿಗಳನ್ನು ಹಾಜರುಪಡಿಸಲು ಕ್ರಮ ತೆಗೆದುಕೊಳ್ಳುವುದಲ್ಲದೆ. ತಮ್ಮ
ಕಛೇರಿಯ ವ್ಯವಸ್ಥಾಪಕರು ಅಥವಾ ಜವಬ್ದಾರಿ ನೌಕರರೊಬ್ಬರಿಗೆ ಲೆಕ್ಕ ಪರಿಶೋಧನೆಗೆ ಅಗತ್ಯವಾಗಿ ಬೇಕಾಗುವ
ಮಾಹಿತಿ ದಾಖಲಾತಿಗಳನ್ನು ಒದಗಿಸಲು ಸೂಕ್ತ ಸೂಚನೆ ನೀಡಲು ಕೋರಲಾಗಿದೆ.

ಲೆಕ್ಕ ಪರಿಶೋಧನೆ ಕೈಗೊಳ್ಳುವ ಸಮಯದಲ್ಲಿ ಸಿಬ್ಬಂದಿಗೆ ಯಾವುದೇ ರೀತಿಯ ರಜೆ ನೀಡಬಾರದು. ಲೆಕ್ಕ ತನಿಖಾ
ಪ್ರಾರಂಭದ ದಿನ ಹಾಗೂ ಲೆಕ್ಕ ತನಿಖೆ ಮುಕ್ತಾಯದ ದಿನ ಲೆಕ್ಕ ತನಿಖಾ ತಂಡ ನೀಡುವ ಆಡಿಟ್‌ ವಿಚಾರಣಾ ಪತ್ರಗಳಿಗೆ
ಉತ್ತರಗಳೊಂದಿಗೆ ಅವರೊಂದಿಗೆ ಕಡ್ಡಾಯವಾಗಿ ಚರ್ಚಿಸಲು ಸಮಯ ಬಿಡುವು ಮಾಡಿಕೊಳ್ಳಲು ಸೂಚಿಸಿದೆ.

ಲೆಕ್ಕ ತನಿಖಾ ಸಿಬ್ಬಂದಿ:


1. ಶ್ರೀಮತಿ ಕವಿತ ಬಿ.ಎಸ್.‌ಲೆಕ್ಕಾಧೀಕ್ಷಕರು, ಜಿಲ್ಲಾ ಪಂಚಾಯತ್‌, ತುಮಕೂರು

2. ಶ್ರೀ ಶಶಿಕುಮಾರ್‌. ಕೆ, ಲೆಕ್ಕ ಪರಿಶೋಧಕರು, ಜಿಲ್ಲಾ ಪಂಚಾಯತ್‌, ತುಮಕೂರು

3. ಶ್ರೀ ರಾಜೇಶ್ ಎಲ್‌, ಲೆಕ್ಕ ಪರಿಶೋಧಕರು, ಜಿಲ್ಲಾ ಪಂಚಾಯತ್‌, ತುಮಕೂರು

ಲೆಕ್ಕ ತನಿಖಾ ವರದಿಯ ಪುನರ್‌ಪರಿಶೀಲನಾ ದಿನಾಂಕ:-

ಮುಖ್ಯ ಲೆಕ್ಕಾಧಿಕಾರಿಗಳು,

ಜಿಲ್ಲಾ ಪಂಚಾಯತ್‌, ತುಮಕೂರು

ಪ್ರತಿಯನ್ನು:
1. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್‌, ತುಮಕೂರು ರವರ ಆಪ್ತ ಶಾಖೆಗೆ

2. ಉಪಕಾರ್ಯದರ್ಶಿ(ಆಡಳಿತ), ಜಿಲ್ಲಾ ಪಂಚಾಯತ್‌, ತುಮಕೂರು ರವರ ಮಾಹಿತಿಗಾಗಿ

3. ಸಂಬಂಧಪಟ್ಟ ಅಧಿಕಾರಿ/ಸಿಬ್ಬಂದಿಯವರಿಗೆ ಸೂಕ್ತ ಕ್ರಮಕ್ಕಾಗಿ

4. ಕಛೇರಿ ಪ್ರತಿ

You might also like