Grade-8 PA-3 Revision Worksheet

You might also like

Download as pdf or txt
Download as pdf or txt
You are on page 1of 20

ದಿನಾಂಕ - ೨.೧೧.

೨೦೨೨
ದಿನ - ಬುಧವಾರ ಯಶೋಧರೆ
ಅಭ್ಯಾಸ ಹಾಳೆ - ೧

೧. ಯಶೋಧರೆ ಪಾಠದ ಲೇಖಕರು ಯಾರು ?


೨. ಲೇಖಕರಿಗೆ ಇರುವ ಬಿರುದು ಯಾವುದು ?
೩. ಗೌತಮ ಬುದ್ಧನ ಮೊದಲ ಹೆಸರೇನು ?
೪. ಯಶೋಧರೆ ಯಾರು ?
೫. ತಂದೆಯನ್ನು ಕರೆತರಲು ಹೋಗುವೆನೆಂದು ಹೇಳಿದವರಾರು ?
೬. ರಾಜನಿಗೆ ಕನಸಿನ ವಿಚಾರವನ್ನು ತಿಳಿಸಿದವರು ಯಾರು ?
೭. ಆಣ್ಮ , ಕವಿ - ಪದದ ಅರ್ಥ ಬರೆದು ಸ್ವಂತ ವಾಕ್ಯ ರಚಿಸಿರಿ.
೮. ವಿನೋದ , ರಾಜ , ಕವಿ - ತತ್ಸಮ - ತದ್ಭವ ರೂಪ ಬರೆಯಿರಿ.
೯. ಸಿದ್ಧಾರ್ಥನ ತಂದೆ ಹಾಗೂ ಮಗನ ಹೆಸರನ್ನು ಬರೆಯಿರಿ .
೧೦. ನಿದ್ದೆಯಲಿ ಮುಳುಗಲಿ ಇನ್ನಾವ ಕನಸಿನ ಮೊಸಳೆ
ಹಿಡಿಯುವುದೋ - ಸಂದರ್ಭ ಸಹಿತ ಸ್ವಾರಸ್ಯ ಬರೆಯಿರಿ .
೧. ಯಶೋಧರೆ ಮಂಡಿಯುರಿ ನಮಸ್ಕರಿಸುತ್ತಾ ಏನು
ಹೇಳುತ್ತಾಳೆ. ?
೨. ಯಶೋಧರೆಯ ಆಂತರ್ಯದಲ್ಲಿರುವ ಸಂದೇಹವೇನು ?
೩. ಬೇಹಿನವರನ್ನು ಕಳಿಸುವ ವಿಚಾರದಲ್ಲಿ ರಾಹುಲನ
ಅಭಿಪ್ರಾಯವೇನು.?
೪. “ ನಿನ್ನ ವಿಧಿ ಕೆಟ್ಟುದೆಂದಿಣಿಸದಿರು ಅಮ್ಮಾಜಿ” - ಸಂದರ್ಭ ಸಹಿತ
ಸ್ವಾರಸ್ಯ ವಿವರಿಸಿರಿ.
೫. “ ಸೋದರಿಯ ಸುತೆಯೆಂದು ಎಳೆತನದಲ್ಲೇ ನನ್ನ ಕರೆ ತಂದು
ಸಾಕಿದಿರಿ” - ಸಂದರ್ಭ ಸಹಿತ ಸ್ವಾರಸ್ಯ ವಿವರಿಸಿರಿ.
೬. ವಿನೋದ , ದು:ಖ , ರಾಜ , ಕಾರ್ಯ - ತತ್ಸಮ - ತದ್ಭವ ರೂಪ
೭. ನಿನ್ನಾಣ್ಮ , ಇಂದಳುತ , ಚಕ್ರಾಧಿಪತಿ - ಬಿಡಿಸಿ ಸಂಧಿ ಹೆಸರಿಸಿರಿ.
ದಿನಾಂಕ - ೨.೧೧.೨೦೨೨
ದಿನ - ಬುಧವಾರ
ಭೂ ಕೈಲಾಸ ( ಪೂರಕ ಪಾಠ )
ಅಭ್ಯಾಸ ಹಾಳೆ - 2

ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ .


೧. ಆತ್ಮಲಿಂಗವನ್ನು ಪಡೆದು ರಾವಣ ಬಂದು ನಿಂತ ಸ್ಥಳ ಹೇಗಿದೆ ?
ಉತ್ತರ: ಚಿಲಿಪಿಲಿಗುಟ್ಟುವ ಪಕ್ಷಿಗಳ ಗುಂಪು, ತಣ್ಣನೆ ತೀಡಿ ಬರುವ
ತಂಗಾಳಿ, ಪಶ್ಚಿಮ ಸಮುದ್ರ ತೀರದಲ್ಲಿ ಮುಳುಗುತ್ತಿರುವ ಸೂರ್ಯ
ಕಾಣುತ್ತಿತ್ತು. ಈ ರೀತಿ ಆತ್ಮಲಿಂಗವನ್ನು ಪಡೆದು ರಾವಣ ಬಂದು ನಿಂತ
ಸ್ಥಳ ಹೀಗಿತ್ತು.
೨. ರಾವಣ ವಟುವನ್ನು ಏಕೆ ಕರೆದನು ?
ಉತ್ತರ: ರಾವಣ ವಟುವನ್ನು ಕರೆದು ನೋಡು ಗಣಪ, ನಾನು
ಸಂಧ್ಯಾವಂದನೆ ಮಾಡಬೇಕಾಗಿದೆ ನನ್ನ ಕೈಯಲ್ಲಿರುವ ಈ ಲಿಂಗವನ್ನು
ನೆಲದಲ್ಲಿ ಇಡುವಂತಿಲ್ಲ . ಸಂಧ್ಯಾವಂದನೆ ಮುಗಿಯುವವರೆಗೆ ಇದನ್ನು
ಹಿಡಿದುಕೊಂಡಿರುವೆಯಾ ಎಂದು ಕರೆದನು.
೩. ವಟುವಿನ ತಂದೆ – ತಾಯಿಯರು ಯಾರು ?
ಉತ್ತರ: ವಟುವಿನ ತಂದೆ ಪರಮೇಶ್ವರ , ತಾಯಿ ಶಾಂಭವಿ.
೪. ಆತ್ಮಲಿಂಗವನ್ನು ಹಿಡಿದುಕೊಂಡಿರಲು ವಟು ಹಾಕಿದ ನಿಬಂಧನೆ ಏನು
?
ಉತ್ತರ: ಆತ್ಮಲಿಂಗವನ್ನು ಹಿಡಿದುಕೊಂಡಿರಲು ವಟು ಹಾಕಿದ ನಿಬಂಧನೆ
ಏನೆಂದರೆ ನನ್ನ ಕೈಲಾಗದಿದ್ದರೆ ನಿನ್ನ ಕರೆಯುತ್ತೇನೆ, ಮೂರುಬಾರಿ
ಕರೆದಾಗಲೂ ಬಾರದಿದ್ದರೆ ಈ ಲಿಂಗವನ್ನು ನೆಲದ ಮೇಲೆ
ಇಟ್ಟುಬಿಡುತ್ತೇನೆ ಎಂದು ಹೇಳಿದ.
೫. ರಾವಣನಿಗೆ ಶಿವನಿಂದ ದೊರಕಿದ ಅಭಯ ವಚನವೇನು ?
ಉತ್ತರ: ಮಾತೆ ಕೈಕಸಾದೇವಿಗೆ ಶಿವನ ಆತ್ಮಲಿಂಗವನ್ನು
ಧರೆಗಿಳಿಸುತ್ತೇನೆ ಎಂದು ನೀನು ನೀಡಿದ ವಚನವೂ ಕೈಗೂಡಿದಂತಾಯ್ತು.
ಚಿಂತಿಸಬೇಡ.

ದಿನಾಂಕ - ೧೪ .೧೧.೨೦೨೨
ದಿನ - ಸೋಮವಾರ

ಅಭ್ಯಾಸ ಹಾಳೆ - ೩
ವಚನಾಮೃತ

೧. ಕಾಗೆಯು ಏನಾಗಲು ಸಾಧ್ಯವಿಲ್ಲ ?


೨. ಆಯ್ದಕ್ಕಿ ಮಾರಯ್ಯನ ಪ್ರಕಾರ ಕೈಲಾಸ ಯಾವುದು?
೩. ಶ್ರೀ ಗುರುವು ಶಿಷ್ಯರಿಗೆ ಬುದ್ದಿ ಕಲಿಸುವುದು ಕಾಲ ಕಟ್ಟಳ ೆಗೆ ಹೇಗೆ
ಒಳ ಪಟ್ಟಿದೆ ?
೪.ಶರಣರು ಕೆಡಿಸುವ ನಿದ್ದೆಯನ್ನು ಹೇಗೆ ಗೆದ್ದಿದ್ದಾರೆ ?
೫. ಬುದ್ದಿ ಹೀನರು ಹೇಗೆ ವಿದ್ಯೆಯನ್ನು ಸಂಪಾದಿಸುತ್ತಾರೆ?
೬. ಆಯ್ದಕ್ಕಿ ಮಾರಯ್ಯನು ಕಾಯಕದ ಮಹತ್ವವನ್ನು ಹೇಗೆ
ನಿರೂಪಿಸಿದ್ದಾನೆ?
೭. ‘ಕಾಯಕವೇ ಕೈಲಾಸ’ - ಗಾದೆ ಮಾತು ಉದಾಹರಣೆಯೊಂದಿಗೆ
ವಿವರಿಸಿರಿ.

ದಿನಾಂಕ - ೧೫ .೧೧.೨೦೨೨
ದಿನ - ಮಂಗಳವಾರ

ಅಭ್ಯಾಸ ಹಾಳೆ - 4
ವಚನಾಮೃತ

೧. ಕಾಗೆಯು ಏನಾಗಲು ಸಾಧ್ಯವಿಲ್ಲ ?


೨. ಆಯ್ದಕ್ಕಿ ಮಾರಯ್ಯನ ಪ್ರಕಾರ ಕೈಲಾಸ ಯಾವುದು?
೩. ಶ್ರೀ ಗುರುವು ಶಿಷ್ಯರಿಗೆ ಬುದ್ದಿ ಕಲಿಸುವುದು ಕಾಲ ಕಟ್ಟಳ ೆಗೆ ಹೇಗೆ
ಒಳ ಪಟ್ಟಿದೆ ?
೪. ಬುದ್ದಿ ಹೀನರು ಹೇಗೆ ವಿದ್ಯೆಯನ್ನು ಸಂಪಾದಿಸುತ್ತಾರೆ?
೫. ‘ಕಾಯಕವೇ ಕೈಲಾಸ’ - ಗಾದೆ ಮಾತು ಉದಾಹರಣೆಯೊಂದಿಗೆ
ವಿವರಿಸಿರಿ.
೬. ವಚನಾಮೃತ ಪದ್ಯದಲ್ಲಿ ನಿರೂಪಿತವಾಗಿರುವ ಕಾಯಕತತ್ವದ
ಬಗ್ಗೆ ನಿಮ್ಮ ಮಾತುಗಳಲ್ಲಿ ಬರೆಯಿರಿ‌.
೭. ವಚನಾಮೃತ ಪದ್ಯದ ಸಂದರ್ಭ ಸಹಿತ ಸ್ವಾರಸ್ಯಗಳನ್ನು
ಅಭ್ಯಾಸ ಮಾಡಿರಿ.

ದಿನಾಂಕ- ೧೬.೧೧.೨೨
ದಿನ - ಬುಧವಾರ

ಘಟಕ ಪರೀಕ್ಷೆ - ೨

೧. ನಿದ್ದೆಯಲಿ ಮುಳುಗಲಿನ್ನಾವ ಕನಸಿನ ಮೊಸಳೆ


ಹಿಡಿಯುವುದೋ - ಸಂದರ್ಭ ಸಹಿತ ಸ್ವಾರಸ್ಯ
೨. ಯಶೋಧರೆಯ ಆಂತರ್ಯದಲ್ಲಿರುವ ಸಂದೇಹವೇನು?
೩. ಯಶೋಧರೆಯ ವಿಧಿಯ ಬಗ್ಗೆ ರಾಜನೂ ಏನೆಂದು ಹೇಳಿದನು?
೪. ಅಮ್ಮಾಜಿ , ನಿನಗೆ ಭಯ ಬೇಡಮ್ಮ ನಾ ಮರಳಿ ಬಹೇನಮ್ಮ -
ಸಂದರ್ಭ ಸಹಿತ ಸ್ವಾರಸ್ಯ
೫. ಧ್ಯಾನ ಮಾಡು , ಉಡುಗೊರೆ - ಸ್ವಂತ ವಾಕ್ಯ ರಚನೆ
೬. ದೊರೆಯ ಕಿರಿಯ ಮಗಳು ತನ್ನ ಅತ್ತಿಗೆಗೆ ಮಾಡಿದ
ದ್ರೋಹವೇನು ?
೭. ದೊರೆಯ ಮಗ ದೇಶಾಂತರ ಹೋಗಲು ಕಾರಣವೇನು ?
೮. “ ಕಾಯಕವನೆ ಪ್ರಸಾದ ಕಾಯಕ ಮಾಡಿ ಸಲಹಿದರು -
ಸಂದರ್ಭ ಸಹಿತ ಸ್ವಾರಸ್ಯ
೯. ಬುದ್ದಿ ಹೀನರು ಹೇಗೆ ವಿದ್ಯೆಯನ್ನು ಸಂಪಾದಿಸುತ್ತಾರೆ?
೧೦. ನಿಮ್ಮ ಕಾಲದ ಕಟ್ಟಳ ೆಯ ಕಲಿತನಕ್ಕೆ ನಾ ಬೆರಗಾದೆ
-ಸಂದರ್ಭ ಸಹಿತ ಸ್ವಾರಸ್ಯ
೧೧. ಆತ್ಮ ಲಿಂಗವನ್ನು ಪಡೆದು ರಾವಣ ಬಂದು ನಿಂತ ಸ್ಥಳ ಹೇಗಿದೆ
?
೧೨. ಆತ್ಮ ಲಿಂಗವನ್ನು ಹಿಡಿದು ಕೊಂಡಿರಳು ವಟು ಹಾಕಿದ
ನಿಬಂಧನೆ ಏನು ?
೧೩. ವಟುವಿನ ತಂದೆ - ತಾಯಿ ಯಾರು ?

ದಿನಾಂಕ - 17.11.22
ದಿನ - ಮಂಗಳವಾರ
ಅಭ್ಯಾಸ ಹಾಳೆ - 5
ಅಪಠಿತ ಗದ್ಯ

ಆಧುನಿಕ ಕನ್ನಡ ಸಾಹಿತ್ಯದ ಮೊದಲ ಸಮಕಾಲೀನ ಸಂವೇದನಾಶೀಲ ಲೇಖಕಿಯರಾದ


ನಂಜನಗೂಡು ತಿರುಮಲಾಂಬ, ಬೆಂಗಳೂರಿನ ಆರ್. ಕಲ್ಯಾಣಮ್ಮ, ದಕ್ಷಿಣ ಕನ್ನಡದ
ಸರಸ್ವತಿಬಾಯಿ ರಾಜವಾಡೆ, ಬೆಂಗಳೂರಿನ ತಿರುಮಲೆ ರಾಜಮ್ಮ ಮುಂತಾದವರಲ್ಲಿ
ಕೊಡಗಿನ ಗೌರಮ್ಮ ಸಹ ಒಬ್ಬರಾಗಿದ್ದಾರೆ. ಸಣ್ಣಕತೆಗಳ ಮೂಲಕ ನಾಡಿನ ಜನರಿಗೆ
ಪರಿಚಿತರಾದ ಕೊಡಗಿನ ಗೌರಮ್ಮ ಬದುಕಿದ್ದು ಕೇವಲ ಇಪ್ಪತ್ತಾರು ವರ್ಷಗಳು ಮಾತ್ರ 1931
ರಲ್ಲಿ 'ಪುನರ್ವಿವಾಹ' ಎಂಬ ಕತೆಯ ಮೂಲಕ ಸಾಹಿತ್ಯಕ್ಷೇತ್ರ ಪ್ರವೇಶಿಸಿದಾಗ ಅವರ
ವಯಸ್ಸು ಹತ್ತೊಂಬತ್ತು ವರ್ಷ. ಗೌರಮ್ಮನವರ ಪೂರ್ವಜರು ಮೂಲತಃ ವಿಟ್ಲ
ಸೀಮೆಯವರಾಗಿದ್ದು ಕ್ರಮೇಣ ಕುಕ್ಕೆ ಸುಬ್ರಹ್ಮಣ್ಯ ಭಾಗದಿಂದ ಘಟ್ಟದ ಮೇಲಿನ ಮಲೆನಾಡು
ಪ್ರದೇಶವಾದ ಕೊಡಗಿಗೆ ಬಂದು ನೆಲೆಸಿದ್ದರು. ಮಡಿಕೇರಿಯಲ್ಲಿ ವಕೀಲರು ಮತ್ತು ಪ್ಲಾಂಟರ್
ಆಗಿದ್ದ ಎನ್. ಎಸ್. ರಾಮಯ್ಯ ಮತ್ತು ನಂಜಕ್ಕ ಎಂಬ ದಂಪತಿಗಳ ಕೊನೆಯ ಮಗಳಾಗಿ
ಹುಟ್ಟಿದವರು ಗೌರಮ್ಮ.
ಗೌರಮ್ಮನ ಹದಿಹರೆಯದ ದಿನಗಳು ಮಡಿಕೇರಿಯ ಸುಂದರ ವಾತಾವರಣದಲ್ಲಿ
ಆಹ್ಲಾದಕರವಾಗಿ ಕಳೆದವು. ಆಗರ್ಭ ಶ್ರೀಮಂತ ಜಿ. ಎಂ ಮಂಜುನಾಥಯ್ಯ ಎಂಬುವರಲ್ಲಿ
ಮ್ಯಾನೇಜರ್ ಆಗಿ ಕಾಫಿ ಎಸ್ಟೇಟ್ ನೋಡಿಕೊಳ್ಳುತ್ತಿದ್ದ ಶುಂಠಿಕೊಪ್ಪದ ಶ್ರೀ ಬಿ. ಟಿ.
ಗೋಪಾಲಕೃಷ್ಣಯ್ಯನವರೊಡನೆ 1925 ರಲ್ಲಿ ಇವರ ವಿವಾಹವಾಯಿತು. ಶಿವರಾಮ ಕಾರಂತ,
ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ. ರಾ. ಬೇಂದ್ರೆ ಮುಂತಾದ ಹೆಸರಾಂತ ಲೇಖಕರು
ಮಂಜುನಾಥಯ್ಯನವರ ಮನೆಯಲ್ಲಿ ಆಗಾಗ್ಗೆ ಮೊಕ್ಕಾಂ ಹೂಡುತ್ತಿದ್ದುದು ಉಂಟು. ಹೀಗಾಗಿ
ಇವರೆಲ್ಲರ ಪರಿಚಯ ಗೌರಮ್ಮನವರಿಗಿತ್ತು. ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ ಮತ್ತು
ಲೇಖಕಿಯಾಗಿದ್ದ ಆರ್. ಕಲ್ಯಾಣಮ್ಮ ಅವರೊಡನೆ ಸಂಪರ್ಕವನ್ನು ಇವರು ಇಟ್ಟುಕೊಂಡಿದ್ದರು.
ಹೀಗಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಚರ್ಚೆ, ಬದಲಾವಣೆಗಳು ಮತ್ತು ಹೊಸ
ಬರವಣಿಗೆಯ ಸಂಪರ್ಕ ಈ ಲೇಖಕಿಯ ಬರವಣಿಗೆಗೆ ಪೂರಕವಾಗಿದ್ದವು. ಯಕ್ಷಗಾನ,
ತಾಳಮದ್ದಲೆ, ಕುಮಾರವ್ಯಾಸ ಮತ್ತು ಉಮರ್ ಖಯಾಮನ ಕಾವ್ಯ ಇವುಗಳ ಬಗೆಗೆ
ಆಸಕ್ತಿಯನ್ನು ಇವರು ಬೆಳೆಸಿಕೊಂಡಿದ್ದರು. ಜಾನಪದದ ಬಗ್ಗೆ ಕುತೂಹಲ ಇದ್ದ ಇವರು ಕೆಲವು
ಜನಪದ ಗೀತೆಗಳನ್ನು ಸಹ ಸಂಗ್ರಹಿಸಿದ್ದರು.

ಪ್ರಶ್ನೆಗಳು :-
1. ಆಧುನಿಕ ಕನ್ನಡ ಸಾಹಿತ್ಯದ ಸಂವೇದನಾ ಶೀಲ ಲೇಖಕಿಯರು ಯಾರು ?
2. ಕೊಡಗಿನ ಗೌರಮ್ಮ ಯಾವುದರ ಮೂಲಕ ಜನರಿಗೆ ಚಿರಪರಿಚಿತ ?
3. ಕೊಡಗಿನ ಗೌರಮ್ಮರ ತಂದೆ - ತಾಯಿ ಯಾರು?
4. ಕೊಡಗಿನ ಗೌರಮ್ಮನ ಕಿರು ಪರಿಚಯ ಮಾಡಿರಿ
2. ಐನ್‌ಸ್ಟೀನ್ ಅವರು ಅತಿಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರು ಮಾತ್ರವಲ್ಲ, ನಿಜವಾದ ಮಾನವತಾವಾದಿಯೂ ಹೌದು.
ವಿಜ್ಞಾನ ಮತ್ತು ಧರ್ಮ ಹಾಗೂ ಧರ್ಮಸಂಬಂಧಿ ವಿಷಯಗಳ ನಡುವೆ ವಾಗ್ವಾದಗಳು ಹುಟ್ಟಿಕೊಂಡಾಗಲೆಲ್ಲ, ಕಟ್ಟಾ
ಧಾರ್ಮಿಕರು ಕೂಡ ವಿಜ್ಞಾನವು ಅಪರಿಪೂರ್ಣವೆಂಬ ತಮ್ಮ ನಿಲುವಿನ ಸಮರ್ಥನೆಗೆಂದು ಅವರ ಹೆಸರನ್ನು ಎಳೆದು
ತರುತ್ತಾರೆ. ಅವರ ಹೇಳಿಕೆಗಳನ್ನು ಉದ್ಧರಿಸುವುದರ ಮೂಲಕ, ಅವರು ಆಳವಾದ ಧಾರ್ಮಿಕ ನಂಬಿಕೆಗಳಿದ್ದ
ವ್ಯಕ್ತಿಯೆನ್ನುವುದನ್ನು ಸ್ಥಾಪಿಸಲು ಪ್ರಯತ್ನಿಸುತ್ತಾರೆ. ಹಾಗೆ, ಪದೇಪದೇ ಉದ್ಧರಿಸಲಾಗುವ ಒಂದು ಮಾತೆಂದರೆ
'ಧರ್ಮವಿಲ್ಲದ ವಿಜ್ಞಾನ ಕುಂಟುಬ ಮತ್ತು ವಿಜ್ಞಾನವಿಲ್ಲದ ಧರ್ಮ ಕುರುಡು' ಎನ್ನುವುದು. ಆದರೆ ಧರ್ಮ ಎಂದರೇನು?
ಐನ್‌ಸ್ಟೀನ್‌ರ ಪ್ರಕಾರ ಧರ್ಮದ ಪರಿಕಲ್ಪನೆ ಯಾವ ರೀತಿಯದು? ನಮಗೆ ಈ ವಿಷಯಗಳ ತಿಳಿವಳಿಕೆ
ಅಗತ್ಯವಾದುದು. ಏಕೆಂದರೆ ಧರ್ಮವನ್ನು ಕುರಿತ ಹಲವು ನಿರ್ವಚನಗಳಿವೆ. ಅಷ್ಟೇ ಅಲ್ಲ, ಧರ್ಮದ ಬಗ್ಗೆ ಪರಸ್ಪರ
ವಿಭಿನ್ನವಾದ ಸಿದ್ಧಾಂತಗಳೂ ಇವೆ. ನಮಗೆ ತಿಳಿದಿರುವಂತೆ ಎಲ್ಲ ಸಾಂಪ್ರದಾಯಿಕವಾದ ಧರ್ಮಗಳ ಕೇಂದ್ರದಲ್ಲಿ
ದೇವರ ಪರಿಕಲ್ಪನೆಯಿದೆ. ದೇವರು ಮತ್ತು ಅದರ ಮುಂದುವರಿಕೆಯಾಗಿ ಧರ್ಮವನ್ನು ಕುರಿತಂತೆ ಐನ್‌ಸ್ಟೀನ್ ಅವರ
ವಿಚಾರಗಳು ಈ ಹೇಳಿಕೆಯಿಂದ ಸಾಕಷ್ಟು ಸ್ಪಷ್ಟವಾಗುತ್ತವೆ.
'ಕೆಟ್ಟದಕ್ಕೆ ಶಿಕ್ಷೆ ಕೊಟ್ಟು, ಒಳ್ಳೆಯದಕ್ಕೆ ಪ್ರತಿಫಲ ನೀಡುವ ಮತಧರ್ಮ ಶಾಸ್ತ್ರಗಳ ದೇವರಲ್ಲಿ ನನಗೆ ನಂಬಿಕೆಯಿಲ್ಲ.
ನಾನು ಜಗತ್ತಿನಲ್ಲಿರುವ ಎಲ್ಲ ವಸ್ತುಗಳ ಕ್ರಮಬದ್ಧ ಸಂಯೋಜನೆ ಹಾಗೂ ಸಮನ್ವಯಗಳ ಮೂಲಕವೇ ತನ್ನ
ಇರುವಿಕೆಯನ್ನು ತೋರಿಸಿಕೊಳ್ಳುವ ಸ್ಪಿನೋಜಾನ ದೇವರನ್ನು ನಂಬುತ್ತೇನೆ. ಮನುಷ್ಯ ಜೀವಿಗಳ ವರ್ತನೆ ಹಾಗೂ
ಭವಿಷ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುವ ದೇವರನ್ನು ನಾನು ನಂಬುವುದಿಲ್ಲ.' ಸ್ಪಿನೋಜಾ ಒಬ್ಬ ಡಚ್ ತತ್ತ್ವಜ್ಞಾನಿ, ದೇವರು
ಮತ್ತು ಧರ್ಮಕ್ಕೆ ಸಂಬಂಧಿಸಿದಂತೆ ಅವನ ಅಸಾಂಪ್ರದಾಯಿಕ ದೃಷ್ಟಿಕೋನಕ್ಕಾಗಿ ಆಮಸ್ಟರ್‌ಡಂನ ಸಿನಗಾಗ್‌ರವರು
ಅವನಿಗೆ ಹಿಂಸೆ ಕೊಟ್ಟು ಅವನನ್ನು ಮತದಿಂದ ಹೊರಹಾಕಿದ್ದರು. ಜೀವಮಾನ ಪರ್ಯಂತ ಅವನನ್ನು ಪೀಡಿಸಿದರು.
ಐನ್‌ಸ್ಟೀನ್‌ಅವರ ಮೇಲಿನ ಹೇಳಿಕೆಯಿಂದ ಅವರ ಕಲ್ಪನೆಯ ದೇವರಿಗೂ ಮನುಷ್ಯನ ವ್ಯವಹಾರಗಳಿಗೂ ಯಾವುದೇ
ಸಂಬಂಧವಿಲ್ಲವೆಂಬ ಸಂಗತಿಯು ಸ್ಪಷ್ಟವಾಗಿ ಮನದಟ್ಟಾಗುತ್ತದೆ. ಅವರ ಪ್ರಕಾರ ಧರ್ಮವು ಯಾವುದೇ ದೈವೀ
ಅಧಿಕಾರವನ್ನು ಅವಲಂಬಿಸದೆ ಸಂಪೂರ್ಣವಾಗಿ ನೈತಿಕವಾಗಿತ್ತು. ಸಹಜವಾಗಿಯೇ ಈ ಮಾತುಗಳು ಬಹಳ
ಮುಖ್ಯವಾದವು. ದೇವರನ್ನು ಒಂದೇ ಸಮನೆ ತಮ್ಮ ವಾಣಿಜ್ಯ ವ್ಯವಹಾರಗಳಿಗೆ ಬಳಸುತ್ತಾ ಬಂದಿರುವ ಜನರಿಗೆ
ಐನ್‌ಸ್ಟೀನ್‌ರ ಹೆಸರೆತ್ತುವ ಯಾವ ಅಧಿಕಾರವೂ ಇಲ್ಲ. ದೇವರ, ಧರ್ಮಗಳನ್ನು ಕುರಿತು ತಮ್ಮ ಒರಟು ಒರಟಾದ,
ಅಪಾಯಕಾರಿ ಸಿದ್ಧಾಂತಗಳ ಸಮರ್ಥನೆಗೆ, ಆ ಮಹಾವಿಜ್ಞಾನಿಯ ಹೆಸರನ್ನು ಉಪಯೋಗಿಸಿಕೊಳ್ಳುವುದು
ಅನ್ಯಾಯವೂ ಹೌದು.

ದಿನಾಂಕ - ೧೮.೧೧.೨೦೨೨
ದಿನ - ಶುಕ್ರವಾರ

ಘಟಕ ಪರೀಕ್ಷೆ - ೩
ವಚನಾಮೃತ
೧. ಕಲಿಯುಗದಲ್ಲಿ ಗುರುವು ಶಿಷ್ಯನಿಗೆ ಹೇಗೆ ಬುದ್ಧಿಯನ್ನು
ಹೇಳಬೇಕಿದೆ ?
೨. ಶ್ರೀ ಗುರುವು ಶಿಷ್ಯನಿಗೆ ಬುದ್ದಿ ಕಲಿಸುವುದು ಕಾಲ ಕಟ್ಟಳ ೆಗೆ ಹೇಗೆ
ಒಳ ಪಟ್ಟಿದೆ ? ವಿವರಿಸಿರಿ.
೩.ಶಿವ ಶರಣರು ಜಗವನ್ನೇ ಗೆದ್ದಿಹ ವಿಚಾರದಲ್ಲಿ ಲಿಂಗಮ್ಮನ
ಅನಿಸಿಕೆಯೇನು?
೪.“ನಾಮವನೊತ್ತುಕೊಂಡು ತಿರುಗುವ ಗಾವಿಲರ ಮುಖವ
ನೋಡಲಾಗದು” - ಸಂದರ್ಭ ಸಹಿತ ಸ್ವಾರಸ್ಯ ಬರೆಯಿರಿ.
೫. “ ಜಂಗಮನ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು” -
ಸಂದರ್ಭ ಸಹಿತ ಸ್ವಾರಸ್ಯ ಬರೆಯಿರಿ.

ದಿನಾಂಕ - 21.11.22
ದಿನ - ಸೋಮವಾರ ಘಟಕ ಪರೀಕ್ಷೆ - ೪

೧. ಮಹಿಳಾ ಸಬಲಿಕರಣ
೨. ಗ್ರಾಮ ಸ್ವರಾಜ್ಯ
೩. ಬಡತನ
೪. ಸಾಮಾಜಿಕ ಪಿಡುಗುಗಳು

ಅಭ್ಯಾಸ ಹಾಳೆ - ೬ , ಅಪಠಿತ ಪದ್ಯ

೧. ಈ ಕೆಳಗಿನ ಪದ್ಯ ಭಾಗವನ್ನು ಓದಿ , ಪ್ರಶ್ನೆಗಳನ್ನು ರಚಿಸಿರಿ.


ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ ;
ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು
ಮಕ್ಕೊಳೊದ್ದರೆ ಅವಳ ಅಂಗಾಂಗ ಪುಲಕ ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ.
ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳಬಂದಿಯ ಗೆದ್ದು ,
ಹೆಂಟೆಗೊಂದು ಮೊಗೆ ನೀರು ಹಿಗ್ಗಿ ;
ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು ,
ಹೂವಲ್ಲಿ ಗದ್ದೆಯ ನೋಡಿಕೊಂಡು,
ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.
ಸತ್ತಳು ಈಕೆ :
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ ?
ಎಷ್ಟು ಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ ?
ಎಷ್ಟು ಸಲ ಈ ಮುದುಕಿ ಅತ್ತಳು
ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ;
ಎಷ್ಟು ಸಲ ಹುಡುಕುತ್ತ ಊರೂರು ಅಲೆದಳು
ತಪ್ಪಿಸಿಕೊಂಡ ಮುದಿಯ ಎಮ್ಮೆಗೆ ?
ಸತಿ ಸಾವಿತ್ರಿ, ಜಾನಕಿ, ಊರ್ಮಿಳೆಯಲ್ಲ ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ ;
ಗಾಂಧೀಜಿ , ರಾಮಕೃಷ್ಣರ ಸತಿಯರಂತಲ್ಲ ;
ಮುತ್ತೆೈದೆಯಾಗಿ ಕುಂಕುಮ ಕೂಡ ಇಡಲಿಲ್ಲ .
ಬನದ ಕರಡಿಯ ಹಾಗೆ
ಚಿಕ್ಕ ಮಕ್ಕಳ ಹೊತ್ತು
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು
ನೊಂದ ನಾಯಿಯ ಹಾಗೆ ಬೈದು, ಗೊಣಗಿ, ಗುದ್ದಾಡಿದಳು ;
ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ :
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.
ಈಕೆ ಉರೆದೆದ್ದಾಳು
ಮಗ ಕೆಟ್ಟರೆ, ಗಂಡ ಬೇರೆ ಕಡೆ ಹೋದಾಗ ಮಾತ್ರ.
ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ ;
ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ ;
ಮೇಲೊಂದು ಸೂರು, ಅನ್ನ , ರೊಟ್ಟಿ , ಹಚಡಕ್ಕೆ ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.
ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು :
ಹೆತ್ತದ್ದಕ್ಕೆ ಸಾಕಿದ್ದಕ್ಕೆ ; ಮಣ್ಣಲ್ಲಿ ಬದುಕಿ
ಮನೆಯಿಂದ ಹೊಲಕ್ಕೆ ಹೋದಂತೆ
ತಣ್ಣಗೆ ಮಾತಾಡುತ್ತಲೇ ಹೊರಟು ಹೋದದ್ದಕ್ಕೆ.

- ರಚನೆ: ಲಂಕೇಶ್
ಪ್ರಬಂಧ - ಗ್ರಾಮ ಸ್ವರಾಜ್ಯ
ಪೀಠಿಕೆ-
ಗ್ರಾಮ ಎಂದರೆ ಗ್ರಾಮ ಮತ್ತು ಸ್ವರಾಜ್ ಎಂದರೆ ವೈದಿಕ ಪದ ಎಂದರೆ ಸ್ವಯಂ ಸಂಯಮ ಮತ್ತು ಸ್ವಯಂ ಆಡಳಿತ.
ಆದ್ದರಿಂದ, ಸರಳ ಗ್ರಾಮ ಸ್ವರಾಜ್‌ನಲ್ಲಿ, ಸ್ವರಾಜ್ಯವನ್ನು ಸಾಧಿಸುವುದು ಮತ್ತು ಹಳ್ಳಿಗಳಿಂದ ನಿಯಂತ್ರಣವನ್ನು
ಸಾಧಿಸುವುದು ಎಂದರ್ಥ.
ಗ್ರಾಮಗಳ ಸ್ವಯಂ ಆಡಳಿತ ಕೇಂದ್ರಗಳಾಗಿ ಕಾರ್ಯನಿರ್ವಹಿಸಿ , ತಮ್ಮ ಗ್ರಾಮದ ಅಭಿವೃದ್ಧಿಗೆ ಬೇಕಾದ ಕಾರ್ಯವನ್ನು
ಸ್ವತಃ ಗ್ರಾಮಸ್ಥರೇ ನಿರ್ಧಾರ ಕೈಗೊಳ್ಳುವ ಒಂದು ಸ್ಥಳೀಯ ಆಡಳಿತ ಸಂಸ್ಥೆ ,ಗ್ರಾಮ ಸ್ವರಾಜ್ಯದ ಕಲ್ಪನೆಗೆ ಹೆಚ್ಚು
ಮಹತ್ತ್ವವನ್ನು ನೀಡಿದವರು ಗಾಂಧೀಜಿ , ‘ ಗ್ರಾಮಗಳ ಅಭಿವೃದ್ಧಿಯೇ ಭಾರತದ ಅಭಿವೃದ್ಧಿ ‘ ಎಂಬುದು ಗಾಂಧೀಜಿ ಅವರ
ನಂಬಿಕೆಯಾಗಿತ್ತು . ಆದ್ದರಿಂದ ಅವರು ಅಧಿಕಾರ ವಿಕೇಂದ್ರೀಕರಣದ ಕಡೆಗೆ ಹೆಚ್ಚು ಗಮನಹರಿಸಿದರು .ಸ್ವಾವಲಂಬಿ
ಗ್ರಾಮದ ಕಲ್ಪನೆಯು ಮಹಾತ್ಮ ಗಾಂಧಿಯವರು ಭಾರತದ ಸ್ವಾತಂತ್ರ್ಯಕ್ಕೆ ಮುಂಚೆಯೇ ಪ್ರಸ್ತಾಪಿಸಿದ ಗ್ರಾಮೀಣ
ಪುನರ್ನಿರ್ಮಾಣದ ಒಂದು ಅನನ್ಯ ಪರಿಕಲ್ಪನೆಯಾಗಿದ್ದು, ಅವರು ಕಾಲಕಾಲಕ್ಕೆ ಅಭಿವೃದ್ಧಿಪಡಿಸಿದರು.

ವಿಷಯ ನಿರೂಪಣೆ-
ಹೆಚ್ಚಿನ ಸಂಖ್ಯೆಯ ಗ್ರಾಮೀಣ ಜನಸಂಖ್ಯೆಯು ಪ್ರತಿ ವರ್ಷ ಭಾರತದ ವಿವಿಧ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದೆ.
2011 ರ ಜನಗಣತಿಯ ಪ್ರಕಾರ ಗ್ರಾಮೀಣ ಜನಸಂಖ್ಯೆಯು ನಗರ ಪ್ರದೇಶಗಳಿಗೆ ವಲಸೆ ಹೋಗುವ ಪ್ರಾಥಮಿಕ
ಕಾರಣಗಳು ಉದ್ಯೋಗ, ವ್ಯಾಪಾರ, ಶಿಕ್ಷಣ ಮತ್ತು ಮದುವೆ.ಗ್ರಾಮೀಣ ಪ್ರದೇಶದ ಜನರು ನಗರ ಪ್ರದೇಶಗಳಿಗೆ ವಲಸೆ
ಹೋಗುತ್ತಾರೆ ಏಕೆಂದರೆ ಕೃಷಿಯಂತಹ ಗ್ರಾಮೀಣ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಆದಾಯದ ಮೂಲಗಳು
ನಿರುದ್ಯೋಗ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಜೀವನ ಮಟ್ಟವನ್ನು ಹೆಚ್ಚಿಸಲು ಸಾಧ್ಯವಿಲ್ಲ.
ಗ್ರಾಮೀಣ ಪ್ರದೇಶಗಳಲ್ಲಿ ಯೋಗ್ಯವಾದ ಜೀವನಕ್ಕೆ ಅಗತ್ಯವಾದ ಆಧುನಿಕ ಸೌಕರ್ಯಗಳು ಮತ್ತು ಸೇವೆಗಳ
ಕೊರತೆಯು ಗ್ರಾಮೀಣ ಪ್ರದೇಶಗಳಿಂದ ಹೆಚ್ಚಿನ ಶೇಕಡಾವಾರು ಜನಸಂಖ್ಯೆಯನ್ನು ಈ ಸೇವೆಗಳು, ಉದ್ಯೋಗ ಮತ್ತು
ಜೀವನೋಪಾಯದ ಅವಕಾಶಗಳ ಹುಡುಕಾಟದಲ್ಲಿ ನಗರ ಪ್ರದೇಶಗಳಿಗೆ ವಲಸೆ ಹೋಗಲು ಪ್ರೇರೇಪಿಸುತ್ತದೆ.
ಹದಗೆಡುತ್ತಿರುವ ಆರ್ಥಿಕ ಸ್ಥಿತಿ ಮತ್ತು ಬೆಳೆ ವೈಫಲ್ಯಗಳಿಂದಾಗಿ ಅನೇಕ ಭಾರತೀಯ ರೈತರು ಪ್ರತಿವರ್ಷ ಆತ್ಮಹತ್ಯೆ
ಮಾಡಿಕೊಳ್ಳುತ್ತಾರೆಆದ್ದರಿಂದ, ಗ್ರಾಮೀಣ-ನಗರಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು ಮತ್ತು ಗ್ರಾಮೀಣ
ಪ್ರದೇಶಗಳಿಗೆ ಆಧುನಿಕ ಸೇವೆಗಳು ಮತ್ತು ಸೌಕರ್ಯಗಳನ್ನು ಒದಗಿಸುವ ಅವಶ್ಯಕತೆಯಿದೆ, ಜೊತೆಗೆ ಗ್ರಾಮೀಣ-ನಗರ
ವಲಸೆಯ ಸಮಸ್ಯೆಯನ್ನು ಪರಿಹರಿಸಲು ಗ್ರಾಮೀಣ ಜನರಿಗೆ ಉದ್ಯೋಗಾವಕಾಶಗಳು ಮತ್ತು ಜೀವನೋಪಾಯಗಳನ್ನು
ಸೃಷ್ಟಿಸುವ ಮೂಲಕ ಸುಸ್ಥಿರ ಅಭಿವೃದ್ಧಿಗೆ ಕಾರಣವಾಗುತ್ತದೆ.ಗ್ರಾಮ ಸ್ವರಾಜ್ಯದ ಕಲ್ಪನೆ ಋಗ್ವೆದದಲ್ಲಿಯೇ ರಾಮಾಯಣ
ಮತ್ತು ಮಹಾಭಾರತಗಳ ಕಾಲದಲ್ಲಿಯೇ ಪರಿಕಲ್ಪನೆಯನ್ನು ಕಾಣಬಹುದಾಗಿದೆ .ಭಾರತವನ್ನು ಆಳಿದ ಎಲ್ಲ
ರಾಜಮನೆತನಗಳ ಕಾಲದಿಂದಲೂ ಗ್ರಾಮಗಳ ಸ್ವಯಂ ಆಡಳಿತಕ್ಕೆ ಗ್ರಾಮಸಭಾಗಳನ್ನು ರಚಿಸಿ ಸ್ಥಳೀಯವಾದ
ಆಡಳಿತಕ್ಕೆ ಹೆಚ್ಚು ಅವಕಾಶಗಳನ್ನು ನೀಡಲಾಗುತ್ತಿತ್ತು .
ಆದರೆ ಬ್ರಿಟಿಷರ ಆಳ್ವಿಕೆ ಪ್ರಾರಂಭವಾದ ನಂತರ ಕೇಂದ್ರೀಕೃತ ಆಡಳಿತ ವ್ಯವಸ್ಥೆಗೆ ಹೆಚ್ಚು ಮಹತ್ತ್ವವು ದೊರೆಯಿತು .
ಕೇಂದ್ರೀಕೃತ ಅಧಿಕಾರಕ್ಕಿಂತ ವಿಕೇಂದ್ರೀಕೃತ ಅಧಿಕಾರ ಇರುವುದು ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರೆಯಲು
ಸಹಾಯಕವಾಗುತ್ತದೆ .ಭಾರತವು ಹಲವಾರು ಗ್ರಾಮಗಳಿಂದ ಕೂಡಿದ ದೇಶ , ಬಹುಪಾಲು ಜನರು ಗ್ರಾಮವಾಸಿಗಳೇ
ಆಗಿದ್ದಾರೆ . ಪ್ರತಿಯೊಂದು ಗ್ರಾಮವು ಸ್ವಾವಲಂಬನೆ ಹೊಂದುವುದು , ಗ್ರಾಮಸ್ಥರು ತಮ್ಮನ್ನು ತಾವೇಆಳಿಕೊಳ್ಳುವುದು ,
ನಮ್ಮ ಗ್ರಾಮ , ನಮ್ಮ
ಇಂದು ಗ್ರಾಮ ಸ್ವರಾಜ್ಯದ ಅಗತ್ಯತೆ ಹಾಗೂ ಅನಿವಾರ್ಯತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ . ಪ್ರತಿಯೊಂದು ಗ್ರಾಮವು
ಇಂದು ಪಂಚಾಯಿತಿ ಎಂಬ ಸ್ವಯಂ ಆಡಳಿತ ಸಂಸ್ಥೆಯನ್ನು ಹೊಂದಿದೆ .ಗ್ರಾಮ ನೈರ್ಮಲ್ಯ ಆರೋಗ್ಯ ಶಿಕ್ಷಣ , ನೀರು
ಸರಬರಾಜು , ವಿದ್ಯುತ್ , ರಸ್ತೆಗಳು ಇವೇ ಮೊದಲಾದ ಮೂಲಭೂತ ಸೌಕರ್ಯಗಳನ್ನು ಪ್ರತಿಯೊಂದು ಸಮರ್ಪಕವಾಗಿ
ಪಡೆದುಕೊಳ್ಳುವಂತೆ ಮಾಡಿದಾಗ ಮಾತ್ರ ಗಾಂಧೀಜಿ ಅವರ ಗ್ರಾಮಸ್ವರಾಜ್ಯದ ಕನಸು ನನಸಾಗುತ್ತದೆ

ಉಪಸಂಹಾರ
ಗ್ರಾಮ, ಅವರ ಪರಿಕಲ್ಪನೆಯ ಪ್ರಕಾರ ಗ್ರಾಮ ಸ್ವರಾಜ್ ಇತರರಿಂದ ಸ್ವತಂತ್ರವಾಗಿ ಸ್ವಾವಲಂಬಿ ಘಟಕವಾಗಿರಬೇಕು
ಆದರೆ ವ್ಯಕ್ತಿಗಳು ಪರಸ್ಪರ ಅವಲಂಬಿತರಾಗಿದ್ದಾರೆ.ಹಳ್ಳಿಯ ನಿವಾಸಿಗಳು ಸ್ಥಳೀಯ ಉತ್ಪನ್ನವನ್ನು ಬಳಸಿದಾಗ ಮತ್ತು
ಗ್ರಾಮೀಣ ಕೈಗಾರಿಕೆಗಳನ್ನು ಉತ್ತೇಜಿಸಿದಾಗ ಗ್ರಾಮವು ಸ್ವಾವಲಂಬಿಯಾಗುತ್ತದೆ.ಹೆಚ್ಚು ಸ್ಥಳೀಯ ಉತ್ಪನ್ನಗಳ ಬಳಕೆ
ಮತ್ತು ಗ್ರಾಮೀಣ ಕೈಗಾರಿಕೆಗಳ ಉತ್ತೇಜನ ಎಂದರೆ ಫಲಪ್ರದ ಉದ್ಯೋಗದ ಕಾರಣ ಆದಾಯದಲ್ಲಿ ಹೆಚ್ಚಳ ಮತ್ತು
ಸ್ಥಳೀಯ ಬೇಡಿಕೆಯ ಹೆಚ್ಚಳದಿಂದಾಗಿ ಉತ್ಪಾದನೆಯನ್ನು ಹೆಚ್ಚಿಸುವುದು.ಹಾಗಾಗಿ ಗ್ರಾಹಕರು ಸ್ಥಳೀಯ ಉತ್ಪನ್ನಗಳಿಂದ
ಮತ್ತು ಸ್ಥಳೀಯ ಉತ್ಪಾದಕರಿಂದ ತಮ್ಮ ಅವಶ್ಯಕತೆಗಳನ್ನು ಪೂರೈಸಿದಾಗ, ಅದು ನೇರವಾಗಿ ರೈತರು,
ಕುಶಲಕರ್ಮಿಗಳು, ನೇಕಾರರು ಮುಂತಾದ ಸ್ಥಳೀಯ ಉತ್ಪಾದಕರನ್ನು ಬೆಂಬಲಿಸುತ್ತದೆ ಮತ್ತು ಅದರ ಪ್ರಕಾರ, ಅದು
ನೈಸರ್ಗಿಕ ಆರ್ಥಿಕ ವ್ಯವಸ್ಥೆ ಮತ್ತು ಸಮಾಜದಲ್ಲಿ ಸಾಮರಸ್ಯವನ್ನು ಬೆಳೆಸುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಗ್ರಾಮಗಳ
ಅಭಿವೃದ್ಧಿ ನಮ್ಮ ಕೈಯಲ್ಲಿಯೇ ಇದೆ’ಎಂಬುದನ್ನು ನಾವು ಮನಗಾಣಬೇಕಾಗಿದೆ . ನಾವು ಪ್ರತಿಯೊಂದಕ್ಕೂ ಸರ್ಕಾರದ
ಮುಂದೆ ಕೈಚಾಚದೆ ನಮ್ಮ ಸೀಮಿತ ವ್ಯಾಪ್ತಿಯಲ್ಲೇ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಬಹುದಾಗಿದೆ .ಇಡೀ
ಗ್ರಾಮವನ್ನೇ ಒಂದು ಕುಟುಂಬ ಒಂದು ಭಾವಿಸಿ , ಪರಸ್ಪರ ಸಹಕಾರದಿಂದ ಸ್ವರಾಜ್ಯವನ್ನು ಸಾಕಾರಗೊಳಿಸಬಹುದಾಗಿದೆ

ದಿನಾಂಕ - ೨೨.೧೧.೨೨
ದಿನ - ಮಂಗಳವಾರ
ಘಟಕ ಪರೀಕ್ಷೆ - ೫
ಪತ್ರಲೇಖನ

೧. ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಿಮ್ಮ ಶಾಲೆಯಲ್ಲಿ


ನಡೆಯುತ್ತಿರುವ ಅಂತರ್ ಶಾಲಾ ಸ್ಪರ್ಧೆಯ ಬಗ್ಗೆ
ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಿಸುವಂತೆ ಕೋರಿ
ಸಂಪಾದಕರಿಗೆ ಒಂದು ಪತ್ರ ಬರೆಯಿರಿ

೨. ನವೆಂಬರ್ ೧ ರಂದು ನಿಮ್ಮ ಬಡಾವಣೆಯಲ್ಲಿ ಏರ್ಪಡಿಸಿದ್ದ


ರಕ್ತದಾನಶಿಬಿರ ಹಾಗೂ ಅನ್ನದಾನ ವ್ಯವಸ್ಥೆಯ ಕುರಿತು
ದೂರದಲ್ಲಿರುವ ನಿಮ್ಮ ಗೆಳೆಯರಿಗೊಂದು ಪತ್ರ ಬರೆಯಿರಿ.
ದಿನಾಂಕ - ೨೯.೧೧.೨೨
ವಚನಗಳ ಭಾವಾರ್ಥ

1. ನಾಳೆ ಬರುವದು ನಮಗಿಂದೇ ಬರಲಿ


ಇಂದು ಬರುವದು ನಮಗೀಗಲೇ ಬರಲಿ !
ಆಗೀಗಲೆನ್ನದಿರೂ ಚೆನ್ನಮಲ್ಲಿಕಾರ್ಜುನ.

2. ಬೆಟ್ಟದ ಮೇಲೊಂದು ಮನೆಯ ಮಾಡಿ


ಮೃಗಗಳಿಗಂಜಿದಡೆಂತಯ್ಯಾ ?
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆತೆರೆಗಳಿಗಂಜಿದಡೆಂತಯ್ಯಾ ?
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದಡೆಂತಯ್ಯಾ ?
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ
ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.

ದಿನಾಂಕ - 6.12.22
ದಿನ - ಮಂಗಳವಾರ
ಘಟಕ ಪರೀಕ್ಷೆ - 6
ಕಾಲಗಳು , ಸಂಧಿ ,

I.ಈ ಕೆಳಗಿನ ವಾಕ್ಯದಲ್ಲಿನ ಕಾಲವನ್ನು ಗುರುತಿಸಿ , ಇನ್ನಿತರ


ಕಾಲಗಳಿಗೆ ಬದಲಾಯಿಸಿರಿ.
1. ಅ. ನಾನು ಪಾಠವನ್ನು ಓದುತ್ತೇನೆ -(ಉತ್ತ )
ವರ್ತಮಾನ ಕಾಲ
ಆ. ನಾನು ಪಾಠವನ್ನು ಓದಿದೆ - ದ - ಭೂತಕಾಲ
ಇ. ನಾನು ಪಾಠವನ್ನು ಓದುವೆನು - ವ - ಭವಿಷ್ಯತ್
ಕಾಲ
2. ಅ. ನಾನು ಊಟವನ್ನು ಮಾಡುತ್ತಿದ್ದೇನೆ.- ಉತ್ತ -
ವರ್ತಮಾನ ಕಾಲ
ಆ. ನಾನು ಊಟವನ್ನು ಮಾಡಿದೆ - ದ - ಭೂತಕಾಲ
ಇ. ನಾನು ಊಟವನ್ನು ಮಾಡುವೆನು - ವ -
ಭವಿಷ್ಯತ್ ಕಾಲ
3. ಅ. ನಾವು ಸಂಗೀತವನ್ನು ಕೇಳುತ್ತಿದ್ದೇವೆ /
ಕೇಳುತ್ತೇವೆ . - ಉತ್ತ - ವರ್ತಮಾನ ಕಾಲ
ಆ. ನಾವು ಸಂಗೀತವನ್ನು ಕೇಳಿದೆವು/
ಕೇಳಿದ್ದೇವೆ - ದ - ಭೂತಕಾಲ
ಇ. ನಾವು ಸಂಗೀತವನ್ನು ಕೇಳುವೆವು - ವ -
ಭವಿಷ್ಯತ್ ಕಾಲ
4. ನೀನು ಆಟವನ್ನು ಆಡಿದೆ / ಆಡುತಿರುವೆ /
ಆಡುವೆ .
5. ಅವನು ಶಿಕ್ಷಕನಾಗುತ್ತಾನೆ / ಶಿಕ್ಷಕನಾದನು
/ ಶಿಕ್ಷಕನಾಗುವನು .
6. ಅವಳು ಊರಿಗೆ ಹೋಗುವಳು /
ಹೋಗುತ್ತಾಳೆ / ಹೋದಳು
7. ಅವನು ಆ ಕೆಲಸವನ್ನು ಸಂಪೂರ್ಣವಾಗಿ
ಮಾಡುವನು / ಮಾಡುತ್ತಾನೆ / ಮಾಡಿದನು
8. ಅದು ಮಂಗನಂತೆ ಕುಣಿಯುವುದು /
ಕುಣಿಯುತ್ತದೆ / ಕುಣಿದಿದೆ
9. ಶ್ರೇಯಾ ಪ್ರಶ್ನೆ ಕೇಳುತ್ತಾಳೆ / ಕೇಳಿದಳು /
ಕೇಳುವಳು .
10. ಅವನು ನಡೆದಾಡುತ್ತಿದ್ದ / ನಡೆದಾಡಿದ /
ನಡೆದಾಡುವನು .
11. ಸ್ಮಿತಾ ಕಟ್ಟಿಗೆಯನ್ನು ಸುಟ್ಟಳು /
ಸುಡುತ್ತಾಳೆ / ಸುಡುವಳು
II. ಈ ಕೆಳಗಿನ ಪದಗಳನ್ನು ಬಿಡಿಸಿ , ಸಂಧಿ ಹೆಸರಿಸಿರಿ.
೧. ವಚನಾಮೃತ - ವಚನ + ಅಮೃತ = ಸವರ್ಣಧೀರ್ಘ
ಸಂಧಿ
೨. ನಿನ್ನಾಣ್ಮ - ನಿನ್ನ + ಆಣ್ಮ = ಲೋಪ ಸಂಧಿ
೩. ಚಕ್ರಾಧಿಪತಿ - ಚಕ್ರ + ಅಧಿಪತಿ = ಸವರ್ಣಧೀರ್ಘ ಸಂಧಿ
೪. ಸದ್ಗತಿ - ಸತ್ + ಗತಿ = ಜಸ್ತ್ವ ಸಂಧಿ
೫. ಹರಕೆಯನ್ನು - ಹರಕೆ + ಅನ್ನು = ಆಗಮ ಸಂಧಿ
೬. ಮಂತ್ರೀಶ್ವರ - ಮಂತ್ರಿ + ಈಶ್ವರ = ಸವರ್ಣಧೀರ್ಘ
ಸಂಧಿ
೭. ಪತಿಯೊಡನೆ - ಪತಿ + ಒಡನೆ = ಆಗಮ ಸಂಧಿ
೮. ಇಂದಳುತ - ಇಂದು + ಅಳುತ = ಲೋಪ ಸಂಧಿ
೯. ಆಕಾಶಬುಟ್ಟಿ - ಆಕಾಶ + ಪುಟ್ಟಿ = ಆದೇಶ ಸಂಧಿ
೧೦. ಗುಹೇಶ್ವರ - ಗುಹ + ಈಶ್ವರ = ಗುಣ ಸಂಧಿ
ದಿನಾಂಕ - 7.12.22
ದಿನ - ಬುಧವಾರ
ಘಟಕ ಪರೀಕ್ಷೆ - ೭
೧. ಕೊಟ್ಟಿರುವ ಪದಗಳಲ್ಲಿ ರೂಢ , ಅನ್ವರ್ಥ , ಅಂಕಿತ
ನಾಮಗಳಗಿ ವಿಂಗಡಿಸಿ ಬರೆಯಿರಿ. - 2M
ಕಾಲ , ದೇವಸ್ಥಾನ , ಸೈನಿಕ , ರಾಜ , ಗಂಗಾ , ವ್ಯಾಪಾರಿ ,
ಅಡಗೂರು
೨. ಯಾರಾದರೂ ನಿನಗೆ ನೀರು ಕೊಟ್ಟರೆ ಜೀವ ಉಳಿಸಿಕೋ -
ಸಂದರ್ಭ - 2M
೩. ನಿನ್ನ ವಿಧಿ ಕೆಟ್ಟದೆಂದೆಣಿಸದಿರು ಅಮ್ಮಾಜಿ - ಸಂದರ್ಭ - 2M
೪. ಕುವರ , ಪುಣ್ಯ , ವಿನೋದ , ಯುಗ , ಕೊಕಿಲಾ , ಸಂತೋಷ
- ತತ್ಸಮ - ತದ್ಭವ - 3M
೫. ದೊರೆ , ಪತಿ , ಕಲಿ , ಅರಿ , ನವ , ಎಡೆ- ನಾನಾರ್ಥ - 3M
೬. ಅರಿವು , ಆಚಾರ , ಸಮ್ಯ ಜ್ಞಾನದ ಬಗ್ಗೆ ಅಮುಗೆರಾಯಮ್ಮನ
ಅನಿಸಿಕೆಯೇನು ? 3M
೭. ಜಂಗಮ ಮುಂದೆ ನಿಂದಿದ್ದಡು ಹಂಗ ಹರಿಯಬೇಕು-
ಸಂದರ್ಭ - 2M
೮. ಯಶೋಧರೆಯ ಆಂತರ್ಯದಲ್ಲಿರುವ ಸಂದೇಹವೇನು ?
3M

You might also like