01. ಗಾಂಧಿ Notes

You might also like

Download as pdf or txt
Download as pdf or txt
You are on page 1of 6

01. ಗಾಂಧಿ ನೋಟ್ಸ್ - KannadaPdf.

com

ತರಗತಿ : ಪ್ರಥಮ ಪಿ.ಯು.ಸಿ


ವಿಷಯ : ಕನ್ನಡ
ಪಾಠದ ಹೆಸರು : ಗಾಂಧಿ
ಕೃತಿಕಾರರ ಹೆಸರು: ಡಾ || ಬೆಸಗರಹಳ್ಳಿ ರಾಮಣ್ಣ

ಕತೆ – ಕತೆಗಾರರು : ಡಾ || ಬೆಸಗರಹಳ್ಳಿ ರಾಮಣ್ಣ ( ೧೯೩೮-೧೯೯೯)


ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಬೆಸಗರಹಳ್ಳಿ ರಾಮಣ್ಣನವರು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ
ಬೆಸಗರಹಳ್ಳಿಯವರು . ವೈದ್ಯರಾಗಿದ್ದ ಇವರು ಬಂಡಾಯ ಸಾಹಿತ್ಯದ ಪ್ರಮುಖ ಲೇಖಕರು . ಹಳ್ಳಿಯ ಬಡ
ಜನರ ಮುಗ್ಧತೆ , ಅಸಹಾಯಕತೆ , ನೋವು , ನಲಿವುಗಳನ್ನು ತುಂಬ ಹತ್ತಿರದಿಂದ ಗಮನಿಸಿದವರು .

ಜೀವನವನ್ನು ಬಲು ಪ್ರೀತಿಯಿಂದ ತಮ್ಮ ಕತೆಗಳಲ್ಲಿ ಚಿತ್ರಿಸಿದ್ದಾರೆ . ‘ ನೆಲದ ಪ್ರಸ್ತುತ ಕಥೆಯನ್ನು ‘ ಕಣಜ ‘
ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ . ಒಡಲು ‘ , ‘ ಗರ್ಜನೆ ‘ , ‘ ನೆಲದಸಿರಿ ‘ , ‘ ಹರಕೆಯಹಣ ‘ , ‘ ಒಂದು
ಹುಡುಗನಿಗೆ ಬಿದ್ದ ಕನಸು ‘ ಹಾಗೂ ‘ ಕೊಳಲು ಮತ್ತು ಖಡ್ಗ ‘ ಇವರ ಕಥಾ ಸಂಕಲನಗಳು .

‘ ತೋಳಗಳ ‘ ಗರ್ಜನೆ ‘ ಕಥಾ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ನಡುವೆ ‘ ಕಿರು ಕಾದಂಬರಿ , ಅಕಾಡೆಮಿ
ಬಹುಮಾನ ದೊರೆತಿದೆ . ಬಡ ಕುಟುಂಬದ ರೋಗಿಷ್ಠ ಹುಡುಗನೊಬ್ಬನ ದಾರುಣ ಸ್ಥಿತಿಯ ಮೇಲೆ ಕತೆಯು
ಬೆಳಕು ಚೆಲ್ಲುತ್ತದೆ . ಬಡವರಿಗೆ ಸರಿಯಾಗಿ ಸಿಗದ ವೈದ್ಯಕೀಯ ಸೌಲಭ್ಯಗಳು , ಅದನ್ನು ಪಡೆಯುವಲ್ಲಿ
ಅವರು ಪಡುವ ಪರಿಪಾಟಲನ್ನು ಕತೆ ತೆರೆದಿಡುತ್ತದೆ .

ಪದಕೋಶ :
ವರಾಂಡ – ಮನೆಯ ಮುಂಭಾಗದ ಕೈಸಾಲೆ , ಮೊಗಸಾಲೆ , ಅಂಗಳ ; ಹೋಗ್ಯ – ಹೋಗೋಣ ;
ಮೂಸೆ- ಚಿನ್ನಬೆಳ್ಳಿ ಮುಂತಾದ ಲೋಹಗಳನ್ನು ಕರಗಿಸಲು ಬಳಸುವ ಉಪಕರಣ ; ನರಪೇತಲ- ತೆಳ್ಳನೆ
ಮನುಷ್ಯ ; ಅವ್ಯಕ್ತ- ಕಾಣದ ; ವಸಿ – ಸ್ವಲ್ಪ : ಗೋಗರೆ – ಬೇಡಿಕೊಳ್ಳು ; ಕಾಕತಾಳ – ಒಂದು
ಲೋಕನ್ಯಾಯ , ಅನಿರೀಕ್ಷಿತ ಘಟನೆ ; ಮಿಡ್‌ವೈಫ್ – ಸೂಲಗಿತ್ತಿ , ನರ್ಸ್ , ಆರೋಗ್ಯ ಸಹಾಯಕಿ ; ಎಕ
– ಚಪ್ಪಲಿ ; ನಾಳಾಕೆ – ನಾಳೆಗೆ ; ಮೊರ ಕಾಳು , ರಾಗಿ ಮೊದಲಾದ ಧಾನ್ಯಗಳನ್ನು ಹಸನು ಮಾಡಲು
ಬಳಸುವ ಸಾಧನ ; ಪುಡಿಗಂಟು – ಚಿಲ್ಲರೆ ಹಣ ; ತೊಂಟೆ – ಕಫ ; ಸರೋತ್ತು – ಮಧ್ಯರಾತ್ರಿ : ಗಿರವಿ –
ಅಡ ( ಒತ್ತೆ ) ಇಡುವುದು ; ಮಂತೆ – ಮತ್ತೆ .

I . ಒಂದು ವಾಕ್ಯದಲ್ಲಿ ಉತ್ತರಿಸಿ .

1. ವೈದ್ಯಾಧಿಕಾರಿ ಇಲ್ಲಿಯವರೆಗೆ ಯಾವ ರೀತಿಯ ನ್ಯಾಯವನ್ನು ಕಂಡಿರಲಿಲ್ಲ ?


ವೈದ್ಯಾಧಿಕಾರಿ ಇಲ್ಲಿಯವರೆಗೆ ಕಾಕತಾಳೀಯ ನ್ಯಾಯವನ್ನು ಅವನು ಕಂಡಿರಲಿಲ್ಲ .

Download: KannadaPDF.com https://KannadaPdf.com/


01. ಗಾಂಧಿ ನೋಟ್ಸ್ - KannadaPdf.com
2. ಕುಟುಂಬ ಯೋಜನಾ ವಿಸ್ತರಣಾಧಿಕಾರಿಯ ಹೆಸರೇನು ?
ಕುಟುಂಬ ಯೋಜನಾ ವಿಸ್ತರಣಾಧಿಕಾರಿಯ ಹೆಸರು ನರಸಿಂಹಮೂರ್ತಿ ,

3. ಮೊಮ್ಮಗನ ಅಗಲವಾದ ಕಿವಿಗಳ ಕಂಡ ಕರಿಸಿದ್ದೇಗೌಡ ಯಾರ ಮನೆಗೆ ಹೋದನು ?


ಮೊಮ್ಮಗನ ಅಗಲವಾದ ಕಿವಿಗಳ ಕಂಡ ಕರಿಸಿದ್ದೇಗೌಡ ಜೋಯಿಸರ ಮನೆಗೆ ಹೋದನು

4. ವೈದ್ಯಾಧಿಕಾರಿಯ ಜ್ಞಾಪಕಕ್ಕೆ ಬಂದದ್ದು ಏನು ?


ವೈದ್ಯಾಧಿಕಾರಿಯ ಜ್ಞಾಪಕಕ್ಕೆ ಬಂದದ್ದು ಇತರ ವ್ಯಕ್ತಿಗಳು ತನ್ನಂತೆ ಮನುಷ್ಯ ವರ್ಗಕ್ಕೆ ಸೇರಿದವರು
ಅಂತಲೋ ಅಥವಾ ವೈದ್ಯಾರಾಗಬೇಕಾದವರಿಗೆ ಅನುಕಂಪದಿಂದ ಕೂಡಿದ ಹೃದಯ ಇರಬೇಕು ಎಂಬುದು
.
5. ಹುಡುಗನಿಗೆ ಮಹಾತ್ಮಗಾಂಧಿ ಎಂಬ ಹೆಸರಿನ್ನು ಇಟ್ಟವರು ಯಾರು ?
ಹುಡುಗನಿಗೆ ಮಹಾತ್ಮಗಾಂಧಿ ಎಂಬ ಹೆಸರಿನ್ನು ಇಟ್ಟವರು ಅವರ ತಾತ ಕರಿಸಿದ್ದೇಗೌಡ

6 . ಹಲಸಿನ ಮರ ಮಾರಿದ್ದರಿಂದ ಕರಿಸಿದ್ದೇಗೌಡನಿಗೆ ಸಿಕ್ಕ ಹಣವೆಷ್ಟು ?


ಹಲಸಿನ ಮರ ಮಾರಿದ್ದರಿಂದ ಕರಿಸಿದ್ದೇಗೌಡನಿಗೆ ಹಣ 50 ರೂ ಸಿಕ್ಕಿತು .

7. ಗಾಂಧಿಯನ್ನು ಹೆಚ್ಚಿನ ಪರೀಕ್ಷೆಗಳಿಗೆ ಯಾವ ಆಸ್ಪತ್ರೆಗೆ ಸೇರಿಸಬೇಕೆಂದು ವೈದ್ಯಾಧಿಕಾರಿ ಸೂಚಿಸಿದರು


?
ಗಾಂಧಿಯನ್ನು ಹೆಚ್ಚಿನ ಪರೀಕ್ಷೆಗಳಿಗೆ ಡಿಸ್ಟ್ರಿಕ್ಟ್ ಆಸ್ಪತ್ರೆಗೆ ಸೇರಿಸಬೇಕೆಂದು ವೈದ್ಯಾಧಿಕಾರಿಗಳು
ಸೂಚಿಸಿದರು .

II ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .


1. ಹುಡುಗನ ಯಾವ ಮಾತಿಗೆ ವೈದ್ಯಾಧಿಕಾರಿ ಬೆಪ್ಪಾಗಿ ಹೋದನು ?

ಹುಡುಗನ ಕಿವಿ ಗಾಂಧೀಜಿಯವ ಕಿವಿಯಂತೆ ಇದ್ದವು , ಅಷ್ಟೆ ಅಲ್ಲದೆ ಆ ಹುಡುಗನ ಹೆಸರು ಕೂಡ ಮಹಾತ್ಮ
ಗಾಂಧೀ ಎಂದು ಕೇಳಿ ಹಾಗೂ ಈ ರೀತಿ ಕಾಕತಾಳೀಯವನ್ನು ಕಂಡು ಅಪರೂಪ ಈ ಘಟನೆಯಿಂದಾಗಿ
ಹಾಗೂ ಆ ಹುಡುಗನು ಧೈರ್ಯವಾಗಿ , ದೃಢ , ನಿಲುವಿನಿಂದ ನುಡಿದು – ನನ್ನ ಹೆಸರು ನಿಜವಾಗಲೂ
ಮಹಾತ್ಮಾಗಾಂದೀ ಎಂಬ ಮಾತನ್ನು ಕೇಳಿ ವೈದ್ಯಾಧಿಕಾರಿ ಬೆಪ್ಪಾಗಿ ಹೋದನು .

2. ವೈದ್ಯಾಧಿಕಾರಿ ಹುಡುಗನನ್ನು ನೋಡಿ ಏನೆಂದು ಕುಚೇಷ್ಟೆ ಮಾಡಿದನು ?

ವೈದ್ಯಾಧಿಕಾರಿ , ಹುಡುಗನನ್ನು ನೋಡಿ , ‘ ವಸಿ ಏನೋ ಚೆನ್ನಾಗಿ ನೋಡೋ , ನಿನ್ನ ಹೊಟ್ಟೆ ದಪ್ಪ
ಕೈಕಾಲು ಸಣ್ಣ ಕಿವಿಗಳು ಮಾತ್ರ ಗಾಂಧಿ ಕವಿಗಳು ಇದ್ಯಾಗಿದೆಯಪ್ಪಾ ‘ ಎಂದು ಕುಚೇಷ್ಟೆ ಮಡಿದನು .

3. ವೈದ್ಯಾಧಿಕಾರಿಗೆ ಹುಡುಗ ಹೇಗೆ ಕಂಡನು ?

ಸುಮಾರು ಎತ್ತರ , ನರಪೇತಲ , ಅಗಲ ಕಿವಿಗಳ ಹೊಟ್ಟೆ ಡುಬ್ಬಣ , ಅವನ ಮುಖದಲ್ಲಿ ಅವ್ಯಕ್ತ ನೋವಿನ
ರೋಷ ಅವನ ಮುಖದ ಮೇಲೆ ಆವರಸಿದ ಹುಡುಗನೊಬ್ಬ ವೈದ್ಯಾಧಿಕಾರಿಗೆ ಅಪರೂಪದ ವ್ಯಕ್ತಿಯಂತೆ
ಕಂಡನು .

Download: KannadaPDF.com https://KannadaPdf.com/


01. ಗಾಂಧಿ ನೋಟ್ಸ್ - KannadaPdf.com
4. ನಿಂಗಮ್ಮನ ಗಂಡ ಪ್ರಾಣ ಕಳೆದುಕೊಂಡಿದ್ದು ಹೇಗೆ ?

ನಿಂಗಮ್ಮನ ಗಂಡ ಆ ಊರಿನ ಸಾಹುಕಾರನ ಬಳಿ ಕೆಲಸಕ್ಕೆ ಇದ್ದ . ಮರ ಹತ್ತಿ ಸೇಂದಿ ಇಳಿಸೋ ಕೆಲ್ಸ
ಮಾಡುತ್ತಿದ್ದ . ಒಮ್ಮೆ ಸೇಂದಿ ಇಳಿಸೋಕೆ ಮರ ಹತ್ತಿದ್ದ ಮರದಿಂದ ಬಿದ್ದು ಪಕ್ಕನೆ ಅವನ ಪ್ರಾಣ ಹೊಡಲು
ಹೋಗಿತ್ತು . ಹೀಗೆ ನಿಂಗಮ್ಮನ ಗಂಡ ಪ್ರಾಣ ಕಳೆದುಕೊಂಡಿದ್ದ .

5. ಗಾಂಧೀ ಎಂಬ ಹುಡುಗನ ಕೊನೆಯ ಆಸೆ ಯಾವುದು ?

“ ತಾನು ಸತ್ತರೆ ತನ್ನನ್ನು ಹಲಸಿನ ಮರದ ಬುಡದಲ್ಲಿ ಮಣ್ಣು ಮಾಡಬೇಕೆಂಬುದು ಗಾಂಧೀ ಎಂಬ
ಹುಡುಗನ ಕೊನೆಯ ಆಸೆಯಾಗಿತ್ತು .

6 ಗಾಂಧೀಯನ್ನು ಪರೀಕ್ಷೆ ಮಾಡಲು ವೈದ್ಯರು ನಿಂಗಮ್ಮನಿಗೆ ಹೇಳಿದ ಮಾತುಗಳೇನು ?

ಗಾಂಧೀಯನ್ನು ಪಕೀಕ್ಷೆ ಮಾಡಿದ ವೈದ್ಯರು ನಿಂಗಮ್ಮನಿಗೆ – “ ನಿಮ್ಮ ಹುಡುಗನಿಗೆ ಎಕ್ಸರೇ ಆಗಬೇಕು .


ಹೃದಯದ ಪರೀಕ್ಷೆ ಮಾಡಿಬೇಕು . ರಕ್ತ , ಮೂತ್ರ ಪರೀಕ್ಷೆ ಮಾಡಬೇಕು . ಇಲ್ಲಾಗುವ ವಿಷಯವಲ್ಲ ಇದು ,
ಹೊಟ್ಟೆಯಲ್ಲಿ ನೀರು ಸೇರಿಕೊಂಡಿದೆ . ಇದು ಹೃದಯಕ್ಕೆ ಸಂಬಂಧಿಸಿದ ಖಾಯಿಲೆ . ದೊಡ್ಡಾಸ್ಪತ್ರೆಗೆ (
ಡಿಸ್ಟಿಕ್ಸ್ ಆಸ್ಪತ್ರೆಗೆ ) ಕರೆದುಕೊಂಡು ಹೋಗುವಂತೆ ” ಹೇಳಿದರು .

IV ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .


1. ಮೊಮ್ಮಗನ ಪ್ರಾಣ ಉಳಿಸಿಕೊಳ್ಳಲು ಕರಿಸಿದ್ದೇಗೌಡ ಪಟ್ಟ ಪಾಡೇನು ?

ಕರಿಸಿದ್ದೇಗೌಡ ದೊಡ್ಡಾಸ್ಪತ್ರೆಗೆ ಮೊಮ್ಮಗನನ್ನು ಕರೆದುಕೊಂಡು ಬಂದನು . ವೈದ್ಯರು ` ಪರೀಕ್ಷೆ ಮಾಡಿ


ಆತನಿಗೆ ಹೃದಯ ಹಾಗೂ ಮೂತ್ರಪಿಂಡ ಖಾಯಿಲೆ ಇದೆ ಎಂದಾಗ ಮಕ್ಕಳಂತೆ ಅತ್ತನು .
ವೈದ್ಯಾಧಿಕಾರಿಗಳು ಚೌಷದಿ ಬರೆದುಕೊಟ್ಟು ಕಳುಹಿಸಿದಾಗ , ಕರಿಸಿದ್ದೇಗೌಡ ಕೈಮುಗಿದು ನಿಂದಮ್ಮಯ್ಯ ,
ಇವಗೆ ಮಾಡೋ ಉಪಕಾರ ಈ ಅಪ್ಪನಿಗೆ ಮಾಡಿದ್ದು ಅಂದುಕೊಳ್ಳಿ ‘ ಎಂದು ಗಾಂಧೀಜಿ ಪೋಟೋ
ಮುಂದೆ ನಿಂತು ಗೋಳೂ ಎಂದು ಅತ್ತನು , ನಂತರ ಚೌಷಧಿಗಾಗಿ ದುಡ್ಡು ಇಲ್ಲದಿದ್ದಾಗ ಮಗಳ ಮೊಮ್ಮಗಳ
ಕಿವಿ ಓಲೆ ಗಿರಿವಿ ಇಡಲು ಪ್ರಯತ್ನಿಸಿದರು ಆಗಲಿಲ್ಲ . ಸಾಲ ಕೇಳಿದರೂ ಕೊಡುವವರಿಲ್ಲ , ಕೊನೆಗೆ ಹಲಸಿನ
ಮರವನ್ನು 50 ರೂಪಾಯಿಗೆ ಮರಿ ಹಣ ಒದಗಿಸಿಕೊಂಡು ಬಂದ ಮೊಮ್ಮಗನ ಪ್ರಾಣ ಉಳಿಸಿಕೊಳ್ಳಲು
ಎಷ್ಟು ಪಾಡುಪಟ್ಟರು ಸಾಧ್ಯವೇ ಆಗಲಿಲ್ಲ .

2. ವೈದ್ಯಾಧಿಕಾರಿ ಮತ್ತು ಆಸ್ಪತ್ರೆಯ ಸಬ್ಬಂದಿಳು ಗಾಂಧಿಯನ್ನು ನಡೆಸಿಕೊಂಡ ರೀತಿಯನ್ನು ವಿವರಿಸಿ .

ಮೊದಲಿಗೆ ವೈದ್ಯಾಧಿಕಾರಿ ಗಾಂಧೀಯನ್ನು ಕಂಡು ಕುಚೇಷ್ಟೆ ಮಾಡಿದನು . “ ಸತ್ಯವಾಗ್ಲು ತನ್ನ ಹೆಸರು


ಗಾಂಧಿ ‘ ಎಂದು ಹೇಳುದ ಮೇಲೆ ಆಸ್ಪತ್ರೆಯ ಸಿಬ್ಬಂದಿಗಳನ್ನೇಲ್ಲಾ ಕರೆಸಿದನು . ವೈದ್ಯಾಧಿಕರಿ ಗಾಂಧೀಜಿ
ಪೋಟೋ ತೋರಿಸಿ ಈ ಫೋಟೋ ಯಾರದಯ್ಯ ? ಎಂದು ಕೇಳಿ , ನಂತರ ನಿನ್ನ ಹೆಸರೇನು ? ಎಂದು
ಕೇಳಿ ಕಾವಹರಣ ಮಾಡುತ್ತ ಕುಚೇಷ್ಟೆ ಮಾಡುತ್ತಿದ್ದನು . ದೊಡ್ಡಾಸ್ಪತ್ರೆಯಲ್ಲಿಯು ಮಹಾತ್ಮಗಾಂದೀ ಎಂದು
ಹೆಸರು ಕೂಗಿ ಆ ಹುಡುಗಿ ಗಾಂಧೀ ಬಂದು ನಿಂತಾಗ ಎಲ್ಲರೂ ಹೋಳ್ ಎಂದು ನಕ್ಕರು . ಹೀಗೆ
ವೈದ್ಯಾಧಿಕರಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಗಾಂಧಿಯನ್ನು ಅವಮಾನ ಮಾಡುವ ರೀತಿಯಲ್ಲಿ
ನಡೆಸಿಕೊಂಡರು .

Download: KannadaPDF.com https://KannadaPdf.com/


01. ಗಾಂಧಿ ನೋಟ್ಸ್ - KannadaPdf.com
3. ಗಾಂಧೀ ಎಂಬ ಹುಡುಗನ ಸಾವಿನ ಸಂದರ್ಭವನ್ನು ವಿವರಿಸಿ .

ಗಾಂಧೀಯನು ದೊಡ್ಡಾಸ್ಪತ್ರೆಗೆ ಸೇರಿಸಲಾಗಿತ್ತು . ಮೂವತ್ತು ಜನರು ಇರಬೇಕಾದ ವಾರ್ಡಿನಲ್ಲಿ ಅರವತ್ತು


ಜನರಿದ್ದ ಕಡೆ ನೆಲದ ಮೇಲೆ ಹಾಸಿಗೆ ಕೊಟ್ಟು ಹಾಕಿದರು . ಎಕ್ಸರೆ , ತೊಂಟೆ ಪರೀಕ್ಷೆಗಳ ಜೊತೆಗೆ
ಚೌಷದೋಪಚಾರವೂ ನಡೆಯ ತೊಡಗಿತು . ಬರೆದು ಕೊಟ್ಟ ಚೌಷಧಿ ತಂದು ಕೊಡುವಲ್ಲಿ ಅವರಲ್ಲಿದ್ದ
ಹಣವೆಲ್ಲಾ ಮುಗಿದು ಹೋಯಿತು . ದೊಡ್ಡ ಡಾಕ್ಟರು ಬಂದು ಪರೀಕ್ಷೆ ಮಾಡಿ ಚೌಷಧಿ ಚೀಟಿ ಬರೆದು ಕೊಟ್ಟು
ಹೋದರು . ಆದರೆ ಅವರ ಬಳಿ ದುಡ್ಡಿಲ್ಲದಿದ್ದಾಗ ಕಿವಿ ಓಲೆ ಗಿರಿವಿ ಇಡಲು ಪ್ರಯತ್ನಿಸಿದರೂ ಹಣ ಸಿಗಲಿಲ್ಲ .
ಎಲ್ಲೂ ಸಾಲವೂ ಸಿಗಲಿಲ್ಲ . ಕೊನೆಗೆ ಹಲಸಿನ ಮರ ಮಾರಿ ಹಣ ತರುವಷ್ಟರಲ್ಲಿ ಎರಡು ದಿನ
ಕಳೆದುಹೋಯ್ತು . ಅಷ್ಟರಲ್ಲಿ ಗಾಂಧೀ ಕೊನೆ ಉಸಿರೆಳೆದಿದ್ದನು .

4. ಕರಿಸಿದ್ದೇಗೌಡ ತನ್ನ ಮೊಮ್ಮಗನಿಗೆ ಗಾಂಧೀಯ ಹೆಸರಿಡಲು ಕಾರಣವೇನು ?

ಮಗು ಹುಟ್ಟಿದಾಗ ಗಂಡು ಮಗು , ಅದೆ ಕಿವಿಗಳು ಅಗಲವಾಗಿದ್ದುದನ್ನು ಕಂಡ ತಕ್ಷಣ ಜೋಯಿಸರ ಬಳಿಗೆ
ಓಡಿದ , ಜೋಯಿಸರು ಸಮಯದ ಘಳಿಗೆ ಲೆಕ್ಕ ಹಾಕಿ , ಮಗುವಿನ ಕಿವಿ ಅಗಲವಾಗಿರಿವುದರಿಂದ ಹಾಗೂ
ಶಿವಪುರಕ್ಕೆ ಬಂದಿದ್ದ ಗಾಂಧೀಯು ದರ್ಶನ ಮಾಡಿದ್ದ ಏಕೈಕ ವ್ಯಕ್ತಿ ಆದ್ದರಿಂದ ಕರಿಸಿದ್ದೇಗೌಡ ತನ್ನ
ಮೊಮ್ಮಗನಿಗೆ ‘ ಮಹಾತ್ಮ ಗಾಂಧೀ ‘ ಎಂದು ಹಿಸರಿಟ್ಟರು .

ಅಭ್ಯಾಸ
I. ಸಂದರ್ಭ ಸೂಚಿಸಿ ವಿವರಿಸಿ .
1. ಇದ್ದು ನಾನು ಯಾವ ರಾಜ್ಯ ಆಳಬೇಕು ?

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ ಡಾ | ಬೆಸಗರಹಳ್ಳಿ ರಾಮಣ್ಣನವರು ರಚಿಸಿರುವ ‘ ಗಾಂಧಿ ‘ ಎಂಬ


ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನು ‘ ಕಣಜ ಎಂಬ ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ .

ಸಂದರ್ಭ : ಈ ವಾಕ್ಯವನ್ನು ಗಾಂಧೀ ತನ್ನ ದೈಹಿಕ ನೋವಿನಿಂದಾಗಿ ನಿರಾಸ ಹೊಂದಿದ್ದು , ಹಿಂತಿರುಗಿ


ಊರಿಗೆ ಹೋಗೋಣವೆಂದು ಹೇಳುವ ಸಂದರ್ಭದಲ್ಲಿ ತನ್ನ ತಾಯಿಗೆ ಹೇಳಿದನು .

ವಿವರಣೆ : ಗಾಂಧೀ ತನ್ನೊಳಿದ್ದ ಖಾಯಿಲೆಯಿಂದ ಜಿಗುಪ್ಪೆ ಹೋಂದಿದ್ದು ಈ ಮಾತನ್ನು ಹೇಳಿದನು .


ಅಂದರೆ ತಾನು ಬದುಕಿ ಸಾಧಿಸಬೇಕಾದ ಕಾರ್ಯವೇನು ಇಲ್ಲ ಎಂಬ ಅರ್ಥದಲ್ಲಿ ಹೇಳಿದನು .

ವಿಶೇಷತೆ : ಮನುಷ್ಯನಿಗೆ ಮಾನಸಿಕವಾಗಲಿ ದೈಹಿಕವಾಗಿ ಆಗಲಿ ಮುಖ್ಯವಾಗಿ ಬೇಕಾದುದು


ಆರೋಗ್ಯಭಾಗ್ಯ , ‘ ಆರೋಗ್ಯಭಾಗ್ಯ ‘ ಇಲ್ಲದಿದ್ದರೆ ಜೀವನದಲ್ಲಿ ಜಿಗುಪ್ಪೆ ತರುವುದು ಗಾಂಧೀ ಮಾತಿನಿಂದ
ತಿಳಿದು ಬರುತ್ತದೆ .

2. ಇಲ್ಲಿ ನಿನ್ನ ರಾಗವ ಯಾರು ಕೇಳ್ಯಾರು ?

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು ಡಾ || ಬೆಸಗರಹಳ್ಳಿ ರಾಮಣ್ಣನವರು ರಚಿಸಿರುವ ಗಾಂದೀ ‘


ಗದ್ಯಭಾಗದಿಂದ ಆರಿಸಲಾಗಿದ್ದು , ಇದನ್ನು ‘ ಕಣಜ ‘ ಎಂಬ ಕೃತಿ ಆಯ್ದುಕೋಳ್ಳಲಾಗಿದೆ .

Download: KannadaPDF.com https://KannadaPdf.com/


01. ಗಾಂಧಿ ನೋಟ್ಸ್ - KannadaPdf.com
ಸಂದರ್ಭ : ಈ ವಾಕ್ಯವನ್ನು ನಿಂಗಮಗಮ ತನ್ನ ಮಗ ಗಾಂಧೀಗೆ ಹೇಳಿದಳು . ಆಸ್ಪತ್ರೆಗೆ ಬಂದು ತುಂಬಾ
ಹೊತ್ತಾದರೂ ಯಾರು ಗಮನಿಸದಿದ್ದಾಗ ಗಾಂದೀಗೆ ವಾಪಸ್ ಊರಿಗೆ ಹೋಗೋ ಮಾತಾಡಿದಾಗ ಅವನ
ತಾಯಿ ನಿಂಗವ್ವ ಹೇಳಿದಳು .

ವಿವರಣೆ : ಸರ್ಕಾರಿ ಆಸ್ಪತ್ರೆ ಬಡವರಿಗಾಗಿಯೇ ಇದ್ದರೂ , ಈಗಿನ ಅವ್ಯವಸ್ಥಿತ ಸ್ಥಿತಿಯಲ್ಲಿ ಈ ಬಡವರನ್ನೇ


ತಿರಸ್ಕಾರದಿಂದ ಕಡೆಗಣಿಸಿರುವುದು ಈ ವಾಕ್ಯದಿಂದ ತಿಳಿದುಬರುತ್ತದೆ

ವಿಶೇಷತೆ : ಗ್ರಾಮ್ಯ ಭಾಷೆಯ ಸೊಗಡು ಕತೆಗೆ ಪುಷ್ಟಿ ತಂದಿದೆ .

3. ‘ ಮೊದಲೇ ತೂರಾಡ್ತಿ ಬಿದ್ದುಗಿದ್ದು ಬುಟ್ಟಿಕನಪ್ಪ ‘ ,

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ ಡಾ ॥ ಬೆಸಗರಹಳ್ಳಿ ರಾಮಣ್ಣನವರು . ರಚಿಸಿರುವ ‘ ಗಾಂಧೀ ‘


ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನು ‘ ಕಣಜ ‘ ಎಂಬ ಕಥಾಸಂಕಲನದಿಂದ
ಆಯ್ದುಕೊಳ್ಳಲಾಗಿದೆ .

ಸಂದ‍ರ್ಭ : ಈ ವಾಕ್ಯವನ್ನು ನಿಂಗವ್ವ ತನ್ನ ಮಗ ಗಾಂದೀಗೆ ಹೇಳುತ್ತಾಳೆ . ಎಷ್ಟೋತ್ತಾದರೂ ಯಾರು


ವಿಚಾರಿಸದಿದ್ದಾಗ ನಿಂಗವ್ವನ ಅಸಹಾಯಕತೆಯನ್ನು ತಾನೆ ವೈದ್ಯರನ್ನು ಕಾಣಲು ಹೋದಾಗ ಹೇಳಿದ
ಮಾತು .

ವಿವರಣೆ : ಗಾಂಧಿಗೆ ದೈಹಿಕವಾಗಿ ಆರೋಗ್ಯವಿಲ್ಲದೆ ಇದ್ದುದರಿಂದ ಸಾಕಷ್ಟು ಸುಸ್ತಾಗಿದ್ದ , ಮೂರ ಮೈಲಿ


ಆಸ್ಪತ್ರೆಗೆ ನಡೆದು ಬಂದದ್ದು ಮತ್ತಷ್ಟು ಆಯಾಸವಾಗಿತ್ತು ವೈದ್ಯತನ್ನು ಕಾಣಲು ಹೋರಟಾಗ ಅವನಿಗೆ
ಸರಿಯಗಿ ನಡೆಯಲು ಆಗುತ್ತಿರಲಿಲ್ಲ . ಇದನ್ನು ಕಂಡ ತಾಯಿ ಮಗನ ಬಗ್ಗೆ ಕಾಳಜಿ ತೆಗೆದುಕೊಂಡದ್ದು
ಇದರಿಂದ ತಿಳಿಯುತ್ತದೆ .

ವಿಶೇಷತೆ : ತಾಯಿಗರ ಮಗನ ಮೇಲಿದ್ದ ಪ್ರೀತಿ , ವಾತ್ಸಲ್ಯ ಕಂಡು ಬರುತ್ತದೆ . .

4. ಓಹೋ ! ಇವನ ಹೆಸರು ಮದಂತೇಗೌಡ ಅಂತ ಅಲ್ವೆ ?

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ ಡಾ || ಬೆಸಗರಹಳ್ಳಿ ರಾಮಣ್ಣನವರು ರಚಿಸಿರುವ ‘ ಗಾಂಧೀ ‘


ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನು ‘ ಕಣಜ ಎಂಬ ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ
.

ಸಂದರ್ಭ : ಡಿಸ್ಟಿಕ್ಸ್ ಆಸ್ಪತ್ರೆಗೆ ಬಂದ ಕರಿಸಿದ್ದೇಗೌಡ ತಾಲ್ಲೂಕು ವೈದ್ಯಾಧಿಕಾರಿ ಬರೆದುಕೊಟ್ಟ ಪತ್ರವನ್ನು


ಅಲ್ಲಿನ ಗುಮಾಸ್ತನಿಗೆ ಕೊಟ್ಟಾಗ ಆತ ಪತ್ರ ಓದಿ ಮಹಾತ್ಮಗಾಂಧಿ ಎಂದು ಬರೆದಿರುವ ಬಗ್ಗೆ ಹಾಸ್ಯ
ಮಾಡುವಂತೆ ಈ ಮಾತನ್ನು ಹೇಳಿದ್ದಾನೆ .

ವಿವರಣೆ : ಗಾಂಧೀ ಎಂದು ಹೆಸರಿಟ್ಟಿರುವುದು ಎಲ್ಲರಿಗೂ ಆಡಿಕೊಳ್ಳುವಂತಹ ಸಂದರ್ಭ ಸೃಷ್ಟಿಸುತ್ತದೆ


ಎಂಬ ಉದಾಹರಣೆ ಇದಾಗಿದೆ .

ವಿಶೇಷತೆ : ವ್ಯಂಗ್ಯಾತ್ಮಕವಾಗಿ ಈ ವಾಕ್ಯ ರಚಿಸಲಾಗಿದೆ .

Download: KannadaPDF.com https://KannadaPdf.com/


01. ಗಾಂಧಿ ನೋಟ್ಸ್ - KannadaPdf.com
4. ಲೋ ಹುಡುಗ ಈ ಫೋಟೋ ಯಾರದಯ್ಯ .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ ಡಾ || ಬೆಸಗರಹಳ್ಳಿ ರಾಮಣ್ಣನವರು ರಚಿಸಿರುವ ‘ ಗಾಂಧೀ ‘


ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನು ‘ ಕಣಜ ‘ ಎಂಬ ಕಥಾಸಂಕಲನದಿಂದ
ಆಯ್ದುಕೊಳ್ಳಲಾಗಿದೆ .

ಸಂದರ್ಭ : ಆಸ್ಪತ್ರೆಯಲ್ಲಿ ಗಾಂಧೀ ಹುಡುಗನನ್ನು ಕಂಡು ವೈದ್ಯಾಧಿಕಾರಿ ಆ ಹುಡುಗನನ್ನು ಹಂಗಿಸಿ


ವ್ಯಂಗ್ಯಾತ್ಮಕವಗಿ ಹೇಳಿದ ಸಂದರ್ಭದಲ್ಲಿ ಈ ಮಾತು ಹೇಳಲಾಗಿದೆ .

ವಿವರಣೆ : ಗಾಂಧೀ ಪೋಟೋವನ್ನು ತೋರಿಸುತ್ತ , ಗಾಂದೀ ಹುಡುಗನನ್ನು ಈ ರೀತಿ ವ್ಯಂಗ್ಯವಾಗಿ ಆಡಿದ


ಮಾತು ಇದಾಗಿದೆ .

ವಿಶೇಷತೆ : ವಿದ್ಯಾಂವತರ ಬಾಯಿಂದ ಬರುವ ಅದರಲ್ಲೂ ವೈದ್ಯರ ಬಾಯಿಂದ ಬರುವ ಮಾತು ಅವರ
ಗರ್ವವನ್ನು ವ್ಯಕ್ತಪಡಿಸುತ್ತದೆ . ವೈದ್ಯೋ ನಾರಾಯಣೋ ಹರಿಃ ‘ ಎಂಬ ವಾಕ್ಯ ಇಲ್ಲಿ ಮಾಯವಾಗಿದೆ .

5. ಇದನ್ನು ಸಾಕ್ಷಾತ್ ಗಾಂಧಿ ಅಂತ ತಿಳ್ಕೊಂಡು ಬಿಟ್ಟು .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ ಡಾ || ಬೆಸಗರಹಳ್ಳಿ ರಾಮಣ್ಣನವರು ರಚಿಸಿರುವ ‘ ಗಾಂಧೀ ‘


ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನು ‘ ಕಣಜ ‘ ಎಂಬ ಕಥಾಸಂಕಲನದಿಂದ
ಆಯ್ದುಕೊಳ್ಳಲಾಗಿದೆ .

ಸಂದರ್ಭ : ಈ ಮಾತನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ನಿಂಗಮ್ಮನಿಗೆ


ವ್ಯಂಗ್ಯಾತ್ಮಕವಾಗಿ ಆಕೆಯ ಮಗನ ಹೆಸರು ‘ ಮಹಾತ್ಮಗಾಂಧಿ ‘ ಎಂಬುದನ್ನು ಕೇಳಿ ಹೇಳಿದನು .

ವಿವರಣೆ : ಮಹಾತ್ಮಗಾಂಧಿಯ ಹೆಸರನ್ನು ಕೇಳಿದವರು ಗಾಂದೀ ಹುಡುಗನನ್ನು ವ್ಯಂಗ್ಯವಾಗಿ


ಹಂಗಿಸುವುದು ಇಲ್ಲಿ ಕಂಡು ಬರುತ್ತದೆ .

Download: KannadaPDF.com https://KannadaPdf.com/

You might also like