varaLakshmi-Habba Kannada

You might also like

Download as docx, pdf, or txt
Download as docx, pdf, or txt
You are on page 1of 14

ವರಪ್ರದಾಯಿನಿ ವರಮಹಾಲಕ್ಷ್ಮೀ ಹಬ್ಬ

ಶ್ರಾವಣ ಮಾಸದ ಪೂರ್ಣಿಮೆಗೆ ಸಮೀಪದ ಶುಕ್ರವಾರ ವರಪ್ರದಾಯಿನಿ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸುತ್ತಾರೆ.


‘ಶುಕ್ಲೇ ಶ್ರಾವಣಿಕೇ ಮಾಸೇ ಪೂರ್ಣಿಮೋ ಪಾಂತ್ಯ ಭಾರ್ಗವೇ ವಟಲಕ್ಷ್ಮಯಾ ವ್ರತ ಕಾರ್ಯಂ’
ಎಂಬಂತೆ ಈ ವ್ರತವನ್ನು ಪೂರ್ಣಿಮೆಗೆ ಸಮೀಪದ ಶುಕ್ರವಾರದಂದು ಮಾಡಬೇಕು. ಲಕ್ಷ್ಮೀ ಶ್ರೇಷ್ಠಳೂ ಹೌದು ವರ
ಪ್ರದಾಯಕಳು ಹೌದು. ಲಕ್ಷ್ಮೀ ನೆಲೆಸಿದ ಮನೆ ಸುಖ ಶಾಂತಿ ಸಮೃದ್ಧಿಯಿಂದ ನೆಲೆಸಿರುತ್ತದೆ. ಜಗನ್ಮಾತೆ ಲಕ್ಷ್ಮೀಯನ್ನು
ಶೃದ್ಧಾಭಕ್ತಿಯಿಂದ ಪೂಜಿಸಿ ಸ್ಮರಿಸಿ ಲಕ್ಷ್ಮೀ ರೂಪದಲ್ಲಿ ಆರಾಧಿಸುವ ದಿನವೇ ಶ್ರೀ ವರಮಹಾಲಕ್ಷ್ಮೀ ವ್ರತ. ಕೆಲವರ ಮನೆಯಲ್ಲಿ
ವ್ರತ ಮಾಡುವ ಪದ್ದತಿ ಇದ್ದರೆ ಕೆಲವರು ಲಕ್ಷ್ಮೀಯ ಫೋ ಼ ಟೋಗೆ ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿ ಹಬ್ಬವನ್ನು ಆಚರಿಸುತ್ತಾರೆ.
ಶ್ರಾವಣ ಮಾಸದ ಶುಕ್ರವಾರಗಳನ್ನು ಸಂಪತ್ ಶುಕ್ರವಾರ ವೆಂದು ಕರೆಯುತ್ತಾರೆ. ಲಕ್ಷ್ಮೀ ಸಂಪತ್ತಿನ ಅಧಿದೇವತೆ. ಮನೆಯಲ್ಲಿ
ಸಮೃದ್ದಿಗಾಗಿ, ಮುತ್ತೈದೆತನಕ್ಕಾಗಿ, ಐಶ್ವರ್ಯ ಪ್ರಾಪ್ತಿಗಾಗಿ ಲಕ್ಷ್ಮೀಯನ್ನು ಈ ದಿನ ಪೂಜಿಸಬೇಕು.

ಪೂಜಾ ವಿಧಾನ: ಸಾಮಾನ್ಯವಾಗಿ ಸುಮಂಗಲಿಯರು ಈ ವ್ರತವನ್ನು ಮಾಡುತ್ತಾರೆ. ಕೆಲವರು ದಂಪತಿ ಸಮೇತ ಕುಳಿತು
ವ್ರತವನ್ನಾಚರಿಸುವ ಪದ್ದತಿಯೂ ಇದೆ. ಕೆಲವರು ಸಂಜೆಯವರೆಗೂ ಉಪವಾಸವಿದ್ದು, ಗೋಧೂಳಿ ಲಗ್ನದಲ್ಲಿ ಪೂಜಿಸುವುದು
ರೂಡಿಯಲ್ಲಿದೆ. ಈ ದಿನ ಮನೆಯನ್ನು ಶುಭ್ರಗೊಳಿಸಿ, ಲಕ್ಷ್ಮೀಗೆ ಆಸನ(ಮರದ ಪೀಠ:ಮಣೆ/ಕುರ್ಚಿ)ವನ್ನು ಸಿದ್ಧಪಡಿಸಿ, ಒಂದು
ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ, ಅದರ ಮೇಲೆ ಕಲಶ ಪ್ರತಿಷ್ಠಾಪನೆ ಮಾಡಬೇಕು. ಮರದ ಪೀಠದ ಬದಲಿಗೆ ಪ್ಲಾಸ್ಟಿಕ್ ಪೀಠ
ಸಲ್ಲದು. ಹೀಗೆ ಲಕ್ಷ್ಮೀಯ ಮೂರ್ತಿಯನ್ನಿಟ್ಟು ಪ್ರಾಣ ಪ್ರತಿಷ್ಠೆ, ಸಂಕಲ್ಪ, ಕಲಶ ಪೂಜೆ, ಗಣಪತಿ ಪೂಜೆ, ಧ್ಯಾನ, ಅವಾಹನ,
ಆಸನ, ಪಾಧ್ಯ, ಅರ್ಘ್ಯ, ಆಚಮನ, ಅಭಿಷೇಕ, ವಸ್ತ್ರ, ಆಭರಣ, ಅಂಗಪೂಜೆ, ಪುಷ್ಪಪೂಜೆ, ಅಷ್ಟೋತ್ತರ ಶತನಾಮ ಪೂಜೆ,
ದೂಪ, ದೀಪ, ನೈವೇದ್ಯ, ತಾಂಬೂಲ ಮಂಗಳಾರತಿ, ಮಂತ್ರ ಪುಷ್ಪ, ನಮಸ್ಕಾರ, ಪ್ರಾರ್ಥನೆ ಮಾಡಬೇಕು. ವಿಶೇಷವಾಗಿ
ಇಂದು ದೇವಿಯನ್ನು ಪೂಜಿಸಲು ಕಮಲ ಪುಷ್ಪಗಳನ್ನು ಉಪಯೋಗಿಸಬೇಕು. ಶಾಸ್ತ್ರೋಕ್ತವಾಗಿ ಪೂಜೆ ಮಾಡಿಸಿದ
ಬ್ರಾಹ್ಮಣನಿಗೆ ಉಪಾಯನ ದಾನವನ್ನು ಕೊಟ್ಟು, ಮಾತೆಗೆ ಕದಲಾರತಿ ಎತ್ತಿ, ದಾರದ ಪೂಜೆಯನ್ನು ಮಾಡಬೇಕು. ಇದೇ ಈ
ವೃತದ ಮಹತ್ವವಾದ ಭಾಗ, ಹನ್ನೆರಡು ಎಳೆಗಳಿಂದ ದಾರವನ್ನು ಸಿದ್ಧಪಡಿಸಿ, 12 ಗಂಟುಗಳನ್ನು ಹಾಕಿ ದೇವಿಯ 12
ಹೆಸರುಗಳಿಂದ ಈ ದಾರವನ್ನು ಪೂಜಿಸಬೇಕು. ಈ ದಾರಕ್ಕೆ ಹಳದಿ ಬಣ್ಣವನ್ನು ಹಚ್ಚಿರಬೇಕು. ಯಾಕೆಂದರೆ ಲಕ್ಷ್ಮೀ
ಹಿರಣ್ಯವರ್ಣಳು “ಹಿರಣ್ಯ ವರ್ಣಾಂ ಹರೀಣಿಂ ಸುವರ್ಣ ರಜತಸ್ರಜಾಂ” ಎಂದು ಆಕೆಯನ್ನು ಶ್ರೀಸೂಕ್ತದಲ್ಲಿ ಪೂಜಿಸುವುದು.

ಈ ದಾರವನ್ನು ಕಟ್ಟಿಕೊಳ್ಳುವ ಸಂದರ್ಭದಲ್ಲಿ ಇಷ್ಟಾರ್ಥಗಳನ್ನು ಅನುಗ್ರಹಿಸುವಂತೆ ಜಗನ್ಮಾತೆ ಸ್ವರೂಪಿಯಾದ ಶ್ರೀ


ವರಮಹಾಲಕ್ಷ್ಮೀಯನ್ನು ಪ್ರಾರ್ಥಿಸಿ ಬಲ ಕೈನಲ್ಲಿ ಧರಿಸಬೇಕು. ಈ ಹನ್ನೆರಡು ಸಂಖ್ಯೆಗೂ ಮಹತ್ವವಿದೆ, ಇದು ಶ್ರೀ
ವಾಸುದೇವನಿಗೆ ಪ್ರಿಯವಾದ ಸಂಖ್ಯೆ, ಕೇಶವಾದಿ ದ್ವಾದಶ ನಾಮಗಳಿಂದ ದ್ವಾದಶಾದಿತ್ಯರಿಗೆ ಪ್ರೇರಕನಾದ ವಾಸುದೇವ
ದ್ವಾದಶ ಮಾಸಗಳಿಗೂ ಅಧಿದೇವತೆಯಾಗಿದ್ದಾನೆ, ಪ್ರಣವ ಸಹಿತವಾದ ವ್ಯಾಪಕ ಮಹಾಮಂತ್ರ ಸೇರಿರುವ ವಾಸುದೇವನ
ಮಹಾಮಂತ್ರವೂ ಈ ದ್ವಾದಶಾಕ್ಷರಗಳಲ್ಲಿ ಸಮ್ಮಿಳಿತವಾಗಿದೆ, ಸದಾ ಶ್ರೀ ಹರಿಯ ಬಳಿಯಲ್ಲಿಯೇ ವಾಸಮಾಡುವ ಶ್ರೀ
ಲಕ್ಷ್ಮೀಯೂ ಕೂಡಾ ದ್ವಾದಶಾತ್ಮಕಳಾಗಿ ಈ ಹನ್ನೆರಡು ಗಂಟು ಹಾಕಿರುವ ದಾರದಲ್ಲಿ ಕುಳಿತು ದ್ವಾದಶ ನಾಮವಳಿಯ
ಪೂಜೆಯನ್ನು ಸ್ವೀಕರಿಸುತ್ತಾಳೆ. ಈಕೆ ಪಾಯಸ ಪ್ರಿಯಳು, ಅಂದು ಅಕ್ಕಿ, ಕಡಲೆ ಬೇಳೆಯ ಪಾಯಸವನ್ನು ಮಾಡಿ ದೇವಿಗೆ
ನಿವೇದಿಸಬೇಕು. “ಪಾಯಸಾನ್ನ ಪ್ರಿಯಾ ದೇವಿ” ಎಂದು ಶ್ರೀ ಲಲಿತಾ ಸಹಸ್ರನಾಮದಲ್ಲಿ ಈಕೆಯನ್ನು ಸ್ತುತಿಸಲಾಗಿದೆ. ಶ್ರದ್ಧಾ
ಭಕ್ತಿಯಿಂದ ಹಬ್ಬವನ್ನು ಆಚರಿಸಿ ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಭೋಜನವನ್ನು ಮಾಡುವುದರಿಂದ ಮನೆಯಲ್ಲಿ ಶಾಂತಿ
ಸಮೃದ್ಧಿ ನೆಲೆಸುತ್ತದೆ. ಧನ, ಧಾನ್ಯ, ವಿದ್ಯೆ, ಬುದ್ಧಿ, ಅಯುರಾರೋಗ್ಯ ಎಲ್ಲರಿಗೂ ಬೇಕು, ಇವೆಲ್ಲವನ್ನು ದಯಪಾಲಿಸುವವಳು ಶ್ರೀ
ವರಮಹಾಲಕ್ಷ್ಮೀ. ಈಕೆ ಸರ್ವ ವಂದ್ಯಳು. ಈ ದಿನ ಲಕ್ಷ್ಮೀ ಪೂಜೆ ಮಾಡಿದರೆ ದಾರಿದ್ರ್ಯ, ಸಂಕಷ್ಟ ನಿವಾರಣೆಗಾಗಿ, ಸರ್ವಾಭೀಷ್ಟ
ಸಿದ್ಧಿಗಾಗಿ, ಸಂತಾನ ಪ್ರಾಪ್ತಿಗಾಗಿ ಮುಂತಾದ ಹಲವಾರು ಕಾರಣಗಳಿಗಾಗಿ ಶ್ರದ್ಧಾ ಭಕ್ತಿಯಿಂದ ಈ ವ್ರತವನ್ನು ಆಚರಿಸುತ್ತಾರೆ.
ಹಾಗಾಗಿ, ಇಂತಹ ಸರ್ವ ಸಂರಕ್ಷಣ ವಿಚಕ್ಷಣೆಯಾದ ಜಗನ್ಮಾತೆ ಶ್ರೀ ವರಮಹಾಲಕ್ಷ್ಮೀಯನ್ನು ಆರಾಧಿಸುವ ಮೂಲಕ
ಧನ್ಯರಾಗೋಣ.

ವ್ರತದ ಹಿನ್ನಲೆ: ಈ ವ್ರತಕ್ಕೆ ಸಂಬಂಧಪಟ್ಟಂತೆ ಒಂದು ಸುಂದರ ಕಥೆಯಿದೆ. ಕುಂಡಿನ ಎಂಬ ಪುರದಲ್ಲಿ ಚಾರುಮತಿ ಎಂಬ
ಬ್ರಾಹ್ಮಣ ಸ್ತ್ರೀಯೊಬ್ಬಳು ಇದ್ದಳು. ಅವಳು ಪತಿ ಭಕ್ತಿಪರಾಯಣಿಯಾಗಿಯೂ, ಅತ್ತೆಮಾವಂದಿರ ಶುಶ್ರೂಷೆ ಮಾಡುವುದರಲ್ಲಿ
ನಿರತಳಾಗಿಯೂ, ಸಕಲ ಶಾಸ್ತ್ರ ಪಾರಂಗತಳಾಗಿಯೂ ಇದ್ದಳು. ಅವಳಿಗೆ ಸ್ವಪ್ನದಲ್ಲಿ ಮಹಾಲಕ್ಷ್ಮಿ ದೇವಿಯು ಪ್ರಸನ್ನಳಾಗಿ
‘ಎಲೈ ಮಂಗಳ ತಾಯಿಯೇ ನಿನಗೆ ಶುಭವನ್ನುಂಟುಮಾಡಲು ವರಲಕ್ಷ್ಮೀ ಎಂಬ ನಾನು ಬಂದಿರುವೆನು. ಶ್ರಾವಣ ಹುಣ್ಣಿಮೆಗೆ
ಮುಂದಾಗಿ ಬರುವ ಶುಕ್ರವಾರದಂದು ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳನ್ನು ಸಲ್ಲಿಸುವೆನು’ ಎಂದು ಹೇಳಿದಳು. ಆಗ
ಚಾರುಮತಿಯು ‘ಓ ಹರಿ ಪ್ರಿಯೇ! ಹಿಂದಿನ ಜನ್ಮದಲ್ಲಿ ನಾನು ಅನೇಕ ಧರ್ಮ ರಕ್ಷಣೆಯ ಪುಣ್ಯ ಕಾರ್ಯ ಮಾಡಿರುವುದರಿಂದಲೇ
ನಿನ್ನ ದರ್ಶನವು ಲಭಿಸಿತು’ ಎಂದು ಹೇಳಿದಳು. ಆಗ ವರಮಹಾಲಕ್ಷ್ಮಿಯು ಸಂತುಷ್ಟಳಾಗಿ ಆಕೆಗೆ ವರಗಳನ್ನು ಕೊಟ್ಟು
ಅಂತರ್ಧಾನಳಾದಳು. ಅನಂತರ ಚಾರುಮತಿಯು ತಮ್ಮ ಬಂಧುಗಳೊಡಗೂಡಿ, ಶ್ರಾವಣ ಮಾಸದ ಈ ಪರ್ವ ದಿನ
ಪ್ರಾಪ್ತವಾದಾಗ ಹೊಸದಾದ ಅಕ್ಕಿಯಿಂದಲೂ, ಆಲದ ಬಳ್ಳಿಯಿಂದಲೂ ಪರಿವೃತವಾದ ಕಲಶದಲ್ಲಿ ವರಲಕ್ಷ್ಮೀಯನ್ನು ಆವಾಹನೆ
ಮಾಡಿ, ಕಲ್ಪೋಕ್ತ ಪ್ರಕಾರ ಅರ್ಚಿಸಿ, ಬಲಹಸ್ತದಲ್ಲಿ ದಾರವನ್ನು ಕಟ್ಟಿಕೊಂಡು ತುಪ್ಪದಿಂದ ಮಾಡಿದ ಭಕ್ಷ್ಯಗಳನ್ನು ನಿವೇದನೆ
ಮಾಡಿ, ವೇದಶಾಸ್ತ್ರ ಪಾರಂಗತನಾದ ಮತ್ತು ಸದಾಚಾರನಾಗಿರುವ ಒಬ್ಬ ಬ್ರಾಹ್ಮಣನಿಗೆ ಹನ್ನೆರೆಡು ಭಕ್ಷ್ಯಗಳನ್ನು ದಕ್ಷಿಣೆ
ತಾಂಬೂಲಗಳೊಡನೆ ಬಾಗಿನವನ್ನು ಕೊಟ್ಟು, ದೇವಿಯ ಸನ್ನಿಧಿಯಲ್ಲಿ ತಾವು ಮಾಡಿದ ಭಕ್ಷ್ಯ, ಭೋಜ್ಯಗಳನ್ನು ಭಂಜಿಸಿದರು.
ನಂತರ ವರಲಕ್ಷ್ಮೀ ದೇವಿಯ ಪ್ರಭಾವದಿಂದ ಚಾರುಮತಿ ಮೊದಲಾದ ಸ್ತ್ರೀಯರು ಐಶ್ವರ್ಯವಲ್ಲದೇ ಪುತ್ರ ಪೌತ್ರಾದಿ, ಧನ,
ಧಾನ್ಯ ಸಂಮೃದ್ಧಿಯನ್ನು ಪಡೆದು, ಸದಾಕಾಲ ಧರ್ಮದಾನವನ್ನು ಮಾಡುತ್ತಾ, ಬಂಧು ಬಾಂಧವರನ್ನು ರಕ್ಷಿಸುತ್ತಾ, ಅತ್ಯಂತ
ಧರ್ಮ ಶ್ರದ್ಧೆಯುಳ್ಳವರಾಗಿ ಚದುರಂಗ ಬಲಯುತ ತಮ್ಮ ಮನೆಯಲ್ಲಿ ಸುಖವಾಗಿದ್ದರು. ಇದರಿಂದ ಈ ವ್ರತವು ಸಾಮೂಹಿಕವಾಗಿ
ಆಚರಿಸುವಾಗ ‘ವರಮಹಾಲಕ್ಷ್ಮಿ ವ್ರತ’ವೆಂದು ಲೋಕದಲ್ಲಿ ಪ್ರಸಿದ್ಧಿಯನ್ನು ಪಡೆಯಿತು. ಇದು ವ್ರತಗಳಲ್ಲಿಯೇ ಅತ್ಯಂತ
ಶ್ರೇಷ್ಠವಾದ ವ್ರತವಾದುದು. ಯಾರು ಈ ವ್ರತವನ್ನು ಹೇಳುತ್ತಾರೋ ಅಥವಾ ಇತರರಿಂದ ಹೇಳಿಸಿ ನಿರ್ಮಲವಾದ
ಮನಸ್ಸಿನಿಂದ ತ್ರಿಕರಣ ಶುದ್ಧರಾಗಿ ಕೇಳುತ್ತಾರೋ ಅವರಿಗೆ ವರಮಹಾಲಕ್ಷ್ಮಿದೇವಿಯ ಅನುಗ್ರಹದಿಂದ ಸಕಲ ಕಾರ್ಯಗಳೂ
ಸಿದ್ಧಿಯಾಗುವವು ಎಂದು ಪಾರ್ವತಿ ದೇವಿಗೆ ಈಶ್ವರನು ಹೇಳಿದನು’ ಎಂದು ಭವಿಷೋತ್ತರ ಪುರಾಣ ಪಾರ್ವತಿ ಪರಮೇಶ್ವರರ
ಸಂವಾದ ದಲ್ಲಿ ತಿಳಿಯುತ್ತದೆ.

ವರಮಹಾಲಕ್ಷ್ಮಿ ಹಬ್ಬದ ದಿನ ಈ ತಪ್ಪುಗಳನ್ನು ಮಾಡಬೇಡಿ: ಕೆಲವರು ಕಲಶದಲ್ಲಿ ಹಲವಾರು ವಸ್ತುಗಳನ್ನು ಹಾಕುತ್ತಾರೆ. ಇದು
ಸಮ್ಮತವಲ್ಲ.
ಕಲಶಸ್ಯ ಮುಖೇ ವಿಷ್ಣುಃ ಕಂಠೇ ರುದ್ರಃ ಸಮಾಶ್ರಿತಃ ।
ಮೂಲೇ ತ್ವಸ್ಯ ಸ್ಥಿತೋ ಬ್ರಹ್ಮ ಮಧ್ಯೇ ಮಾತೃಗಣಾಃ ಸ್ಮೃತಾಃ ||
ಎಂದು ಪಠಿಸುತ್ತಾರೆ, ಅಂದರೆ ಕಲಶದ ಮುಖ ಭಾಗದಲ್ಲಿ ಶ್ರೀ ವಿಷ್ಣು, ಕಂಠ ಭಾಗದಲ್ಲಿ ಶ್ರೀ ಪರಮೇಶ್ವರ ಹಾಗೂ ಮೂಲದಲ್ಲಿ ಶ್ರೀ
ಬ್ರಹ್ಮ ದೇವರ ಸಾನಿಧ್ಯವಿರುತ್ತವೆ. ಹಾಗಾಗಿ ಈ ಕಲಶಕ್ಕೆ ವಿಶೇಷ ಶಕ್ತಿ ಇರುತ್ತದೆ. ಕಲಶದಲ್ಲಿ ಶುದ್ಧ ಜಲ, ಅರಿಶಿನ, ಕುಂಕುಮ,
ವೀಳಯದೆಲೆ, ಅಡಕೆ ಹಾಗೂ ನಾಣ್ಯವನ್ನು ಮಾತ್ರ ಹಾಕಬೇಕು. ಕೆಲವರು ಕಲಶದಲ್ಲಿ ಧಾನ್ಯವನ್ನು ತುಂಬುತ್ತಾರೆ, ಇದು ಸರಿ
ಆದರೆ ಶುದ್ಧ ಜಲ ತುಂಬಿದ ಕಲಶವೇ ಪೂಜೆಗೆ ಶ್ರೇಷ್ಠವಾದದ್ದು. ಈ ಕಲಶದಲ್ಲೇ ಶ್ರೀ ಲಕ್ಷ್ಮೀಯನ್ನು ಆವಾಹನೆ ಮಾಡಿ
ಪೂಜಿಸಬೇಕು.

ಕೆಲವರಿಗೆ ವರಮಹಾಲಕ್ಷ್ಮಿ ಹಬ್ಬವನ್ನು ಶ್ರಾವಣ ಮಾಸದ ಯಾವ ಶುಕ್ರವಾರವಾದರೂ ಮಾಡಬಹುದೆಂಬ ತಪ್ಪು ತಿಳುವಳಿಕೆ
ಇದೆ. ಇದು ಶಾಸ್ತ್ರ ಸಮ್ಮತವಲ್ಲ. ಪ್ರಾರಂಭದಲ್ಲೇ ತಿಳಿಸಿದಂತೆ ಶ್ರಾವಣ ಮಾಸದಲ್ಲಿ ಬರುವ ಹುಣ್ಣಿಮೆಯ ಹಿಂದಿನ
ಶುಕ್ರವಾರವೇ ವರಮಹಾಲಕ್ಷ್ಮಿ ಹಬ್ಬಕ್ಕೆ ಶ್ರೇಷ್ಠ ಹಾಗೂ ಅಂದೇ ಆಚರಿಸಬೇಕು. ವ್ರತ ಮಾಡುವವರು ಹಬ್ಬದ ದಿನವೇ
ಮಾಡಬೇಕು. ಹಬ್ಬದ ದಿನವೇ ಯೋಗ ಇರುವುದರಿಂದ ಅಂದೇ ಹಬ್ಬವನ್ನು ಮಾಡಿದರೆ ಪೂರ್ಣ ಫಲ ಸಿಗುತ್ತದೆ. ಶ್ರಾವಣ
ಮಾಸದ ಯಾವ ಶುಕ್ರವಾದರೂ ಮಾಡಬಹುದೆಂಬ ಕಲ್ಪನೆಯನ್ನು ನಿಮ್ಮಮನಸ್ಸಿನಿಂದ ತೆಗೆದು ಹಾಕಿ.

ಕಲಶಕ್ಕೆ ಬೆಳ್ಳಿ, ಕಂಚು ಅಥವಾ ಮಣ್ಣಿನ ಲಕ್ಷ್ಮಿಯ ಮುಖವಾಡವನ್ನು ಉಪಯೋಗಿಸುವುದು ಶ್ರೇಷ್ಠ. ನಮ್ಮ ಶಕ್ತ್ಯಾನುಸಾರ
ಮುಖವಾಡವನ್ನು ಬಳಸಬಹುದು. ಪ್ಲಾಸ್ಟಿಕ್ ಮುಖವಾಡ ಸಮ್ಮತವಲ್ಲ. ಕೆಲವರು ಅಂಗಡಿಯಲ್ಲಿ ಸಿಗುವ ರೆಡಿಮೇಡ್
ವರಲಕ್ಷ್ಮೀಯನ್ನು ತಂದು ಪೂಜಿಸುತ್ತಾರೆ. ಹೀಗೆ ಮಾಡಬೇಡಿ. ಯಾಕೆಂದರೆ ಅಂಗಡಿಯವರು ಕತ್ತರಿಸಿದ ಸೀರೆಯನ್ನು ದೇವಿಗೆ
ಉಡಿಸಿರುತ್ತಾರೆ. ಇದು ಶಾಸ್ತ್ರ ಸಮ್ಮತವಲ್ಲ. ಕತ್ತರಿಸಿದ ಸೀರೆಯನ್ನು ನೀವು ಉಡಲು ಸಾಧ್ಯವೇ? ದೇವಿಗೆ ಯಾವಾಗಲೂ
ಅಖಂಡ ಸೀರೆಯನ್ನೇ ಉಡಿಸಬೇಕು. ಉಡಿಸಲು ಸಾಧ್ಯವಾಗದಿದ್ದರೆ ಕಲಶದ ಮುಂದೆ ಇಟ್ಟು, ಉಡಿ ತುಂಬಿ, ಪೂಜೆಯ ನಂತರ
ಹಬ್ಬವಾದ ಮೇಲೆ ಮನೆಯ ಸುಮಂಗಲಿಯರು ಉಟ್ಟುಕೊಳ್ಳಬಹುದು.

ಕೆಲವರು ದೇವಿಗೆ ಅಲಂಕಾರ ಮಾಡುವುದಕ್ಕೊಸ್ಕರ ತಮ್ಮ ಒಡವೆಯನ್ನೇಲ್ಲ ಹಾಕಿ ಅಲಂಕಾರ ಮಾಡುತ್ತಾರೆ. ಹೀಗೆ
ಮಾಡಬೇಡಿ. ನಾವು ಹಾಕಿಕೊಂಡ ವಸ್ತುಗಳನ್ನು ದೇವರಿಗೆ ಹಾಕಬಾರದು. ದೇವರಿಗೆ ಹಾಕಿದ್ದನ್ನು ನಾವು ಪ್ರಸಾದವಾಗಿ
ಸ್ವೀಕರಿಸಬಹುದೇ ಹೊರತು ನಾವು ಬಳಸಿದ ವಸ್ತುಗಳನ್ನು ದೇವರಿಗೆ ಹಾಕಬಾರದು. ಒಡವೆಗಳನ್ನು ಹಾಕಬೇಕೆಂದೆನೂ ಇಲ್ಲ,
ಹೂವಿನಿಂದಲೂ ಅಲಂಕರಿಸಬಹುದು ಅಲ್ಲವೇ? ಆರ್ಥಿಕವಾಗಿ ಸಶಕ್ತರಾಗಿದ್ದರೇ ದೇವಿಗೊಸ್ಕರವಾಗಿಯೇ ಬೆಳ್ಳಿಯ
ಆಭರಣಗಳನ್ನು ಖರೀದಿಸಿ ಅಲಂಕಾರ ಮಾಡಿ. ನೀವು ಧರಿಸಿದ ಒಡವೆಗಳನ್ನು ದಯವಿಟ್ಟು ಹಾಕಬೇಡಿ.

ಪೂಜೆಗೆ ಒಂದೇ ಕಲಶವನ್ನು ಇಡಿ. ಕೆಲವರು ಮೇಲೊಂದು ಕೆಳಗೊಂದು ಎಂದು ಎರಡು ಕಲಶಗಳನ್ನು ಇಡುತ್ತಾರೆ. ಇದು ಶಾಸ್ತ್ರ
ಸಮ್ಮತವಲ್ಲ, ಏಕೆಂದರೆ ಲಕ್ಷ್ಮೀ ಸಹಿತ ನಾರಾಯಣ ದೇವತಾಭ್ಯೋ ನಮಃ ಎಂದು ಲಕ್ಷ್ಮೀ ಸಹಿತ ನಾರಾಯಣನನ್ನು ಒಂದೇ
ಕಲಶದಲ್ಲಿ ಆವಾಹಿಸಿ ಪೂಜಿಸಬೇಕು. ನಾರಾಯಣ ಎಲ್ಲಿರುತ್ತಾನೋ, ಲಕ್ಷ್ಮೀ ಅಲ್ಲಿರುತ್ತಾಳೆ. ಹಾಗಾಗಿ ಎರಡು ಕಲಶ ಸ್ಥಾಪನೆ
ನಿಷಿದ್ಧ.

ಮನೆಯಲ್ಲಿ ಅಂದು ಏನೇನು ಆಡುಗೆ ಮಾಡಿರುತ್ತೇವೋ, ಅದೆಲ್ಲವನ್ನು ದೇವರ ಮುಂದೆ ರಂಗೋಲಿ ಹಾಕಿ, ಬಾಳೆ ಎಲೆ ಹಾಕಿ
ಅದರ ಮೇಲೆ ಬಡಿಸಿ ದೇವರಿಗೆ ನೈವೇದ್ಯ ಮಾಡಿ.

ಕಲಶವನ್ನು ಕದಲಿಸುವವರೆಗೂ ದೇವರ ಮುಂದೆ ಎರಡು ದೀಪಗಳು ಉರಿಯುತ್ತಿರಲಿ. ಶುಕ್ರವಾರ ಸಂಜೆ ಕಲಶವನ್ನು
ಕದಲಿಸಬೇಡಿ, ಹೀಗೆ ಮಾಡಿದರೆ ಲಕ್ಷ್ಮೀಯನ್ನು ಶುಕ್ರವಾರ ಮನೆಯಿಂದ ಹೊರಗೆ ಕಳಿಸಿದಂತೆ ಆಗುತ್ತದೆ. ಶನಿವಾರ ಸಂಜೆ
ಕದಲಿಸಬಹುದು ಅಥವಾ ೩ನೇ ದಿನ ಅಥವಾ ಮನೆಯಲ್ಲಿ ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ದತಿಯನ್ನು ಅನುಸರಿಸಿ.
ಹಬ್ಬದ ಆಚರಣೆಗೆ ಮಹತ್ವ ಕೊಡಿ, ಆಡಂಬರಕ್ಕಲ್ಲ.
ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
ಡಾ. ಪ್ರಕಾಶ್ ಕೆ. ನಾಡಿಗ್, ತುಮಕೂರು.
Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

Goravanahalli Sri Mahalakshmi Temple

Goravanahalli Sri Mahalakshmi Temple is located in Goravanahalli, a village in Tumkur district in the
state of Karnataka.
Goravanahalli Mahalakshmi Temple is also known as Karnataka's Kolhapur Mahalakshmi.
As the name suggests, this temple is dedicated to Goddess Mahalakshmi, the wife of Lord Vishnu
and the Goddess of prosperity and wealth.

The Temple also has deities of Goddess Marikamba and Manchala Nagappa, the snake god in
Goravanahalli.The main idol of Sri Mahalakshmi is believed to be self manifested and the temple is a
beautiful example of the typical South Indian architecture having a large, multicoloured Gopuram
with smaller arches on both sides.

Temple History

According to local historians, in the early 1900s, a villager named Abbayya came into possession of
this idol. He worshipped the idol at home and was blessed with wealth and prosperity. His home
soon came to be known as Lakshmi Nivas in honour of his charity work. Abbayya brother’s
Thotadappa also worked alongside Abbayya and worshipped the Goddess Mahalakshmi. One night
the Goddess visited him in his dreams and asked him to build her a temple. Thus Thotadappa built a
temple for the Goddess and began worshipping the idol in this shrine. After Thotadappa’s death,
Chowdayya began performing the poojas for Goddess Mahalakshmi.

Little is known about what happened next but for fifteen years between 1910 and 1925, the temple
was abandoned.

In 1925, a pious devotee, Kamalamma arrived in Goravanahalli and found the temple in a deserted
state. She brought the temple back to life and started performing poojas once again for the Goddess
but for some reason, left the place after a year. It was around 26 years before she came back to the
Temple and re-established it in 1952. From then on, the temple became a pilgrimage spot for
Goddess Mahalakshmi’s devotees.

The devotees who visited this temple seem to find changes in health, wealth, social status which
resulted in increase of devotees in Goravanahalli Mahalakshmi temple.

The festivals celebrated in Goravanahalli Mahalakshmi Temple are Laksha deepotsava,


Varamahalakshmi festival, Amavasya Vaibhava Lakshmi Pooja & Pournima Sathya Narayana Swamy
Pooja.

25.08.2023...........Manoj Inamd

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx
ದು ಶೃಂಗೇರಿ ಶರದಾಂಬಾ ದೇವಸ್ಥಾನ ಮತ್ತು ಶೃಂಗೇರಿ ಪೀಠದಲ್ಲಿರುವ ದೇವಾಲಯ

ನನಗೂ ಪ್ರಾರಂಭದಲ್ಲಿ ಹಾಗೆ ಅನ್ನಿಸ್ತು. ಆದರೆ ದೇವಸ್ಥಾನದ ಎದುರುಗಡೆಯೇ KSRTC ಬಸ್ ಹೋದದ್ದು ನೋಡಿ
ಸಂಶಯವಾಯ್ತು (ಶೃಂಗೇರಿಯಲ್ಲಿ ದೇವಸ್ಥಾನ ರಸ್ತೆಯಿಂದ ಒಳಗಡೆ,ದೂರ ಇದೆ)
ಈಗ ಹೌದೆನ್ನಿಸುತ್ತಿದೆ.
ಧನ್ಯವಾದಗಳು 🙏

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

ವರಮಹಾಲಕ್ಷ್ಮಿ ಪೂಜಾ ವಿಧಿ ವಿಧಾನ ಹಾಗೂ ಮಹತ್ವ ಹಿಂದೂ ಧರ್ಮದಲ್ಲಿ, ಮಹಿಳೆಯರಿಗೆ ಅನೇಕ ವ್ರತಗಳಿವೆ. ಈ
ವ್ರತಗಳನ್ನು ಆಚರಿಸುವುದರಿಂದ, ವೈವಾಹಿಕ ಜೀವನದಲ್ಲಿ ದುಃಖಗಳನ್ನು ಕಳೆದುಕೊಂಡು, ಸಂತೋಷವನ್ನು
ಪಡೆಯಲಾಗುತ್ತದೆ. ಅವುಗಳಲ್ಲಿ ವರಮಹಾಲಕ್ಷ್ಮಿ ವ್ರತ ಒಂದು. ಈ ಬಾರಿ ವರಮಹಾಲಕ್ಷ್ಮೀ ಹಬ್ಬ ಯಾವಾಗ? ಏನು ವಿಶೇಷ?
ಎಂಬುವುದನ್ನು ಅರಿಯೋಣ. ಸುಮಂಗಲಿಯರ ಹಬ್ಬ, ವರಮಹಾಲಕ್ಷ್ಮಿ ಪೂಜೆ ಮಾಡುವ ರೀತಿ ಹಾಗೂ ನಿಯಮ :--
ವರಮಹಾಲಕ್ಷ್ಮೀ ವರಮಹಾಲಕ್ಷ್ಮಿ ದಿನ ಪೂಜೆ ಹೆಸರೇ ಸೂಚಿಸುವಂತೆ ಇದು ಲಕ್ಷ್ಮಿದೇವಿಯನ್ನು ಪೂಜಿಸುವ ದಿನ. ಶ್ರಾವಣ
ಮಾಸದ ಶುಕ್ಷ ಪಕ್ಷದ ಶುಕ್ರವಾರನ್ನು ವರಮಹಾಲಕ್ಷ್ಮಿ ದಿನ ಎಂದು ಕರೆಯುವುದುಂಟು. ವರಮಹಾಲಕ್ಷ್ಮಿ ದಿನ ಆಚರಣೆ
ಇತ್ತೀಚಿನ ದಿನಗಳಲ್ಲಿ ಹೆಚ್ಚು ಶ್ರೇಷ್ಠತೆ... https://kutumbapp.page.link/HTUK4U8ve858bAmS6

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx
ಮುಂಜಾನೆಗೊಂದು ಮಾತು💐

ಎಲ್ಲರೊಂದಿಗೆ ಪ್ರೀತಿಯಿಂದ ಇರಲು ಪ್ರಾರಂಭ ಮಾಡಿ, ಆಗ ನಿಮ್ಮಿಂದ ಆದ ತಪ್ಪನ್ನು ದೂರ ಮಾಡಿಕೊಳ್ಳಬಹುದು.

ಅದೃಷ್ಟ ನಿಮ್ಮ ಕೈಯಲ್ಲಿದ್ದರೂ, ಆಶೀರ್ವಾದ ಮಾತ್ರ ಬೇರೆಯವರ ಕೈಯಿಂದಲೇ ಪಡೆಯಬೇಕು.

🙏 ನಮಸ್ಕಾರ 🙏 ಶುಭದಿನ 🙏 ಶುಭೋದಯ 🙏🌹💐

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🙏🙏🙏. ಲಕ್ಷ್ಮಿ ದೇವಿ ಎಲ್ಲರಿಗೂ ಆಯುರಾರೋಗ್ಯ


ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸುವೆ
🌷"ನಮಸ್ತೇತು ಮಹಾಮಾಯೆ ಶ್ರೀಪೀಠೆ ಸುರಪೂಜಿತೆ ಶಂಖ ಚಕ್ರ ಗದಾಹಸ್ತೆ ಮಹಾಲಕ್ಷ್ಮಿ ನಮೋಸ್ತುತೆ"🌷
ನಿಮಗೂ ನಿಮ್ಮ ಕುಟುಂಬದವರಿಗೆಲ್ಲರಿಗೂ ಶ್ರೀವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

ಅಂಗದಲ್ಲಿ ಆಚಾರವ ತೋರಿದ ಆ ಆಚಾರವೇ ಲಿಂಗವೆಂದರುಹಿದ. ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ; ಅರಿವೆ ಜಂಗಮವೆಂದು
ತೋರಿದ. ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು ಎನಗೀ ಕ್ರಮವನರುಹಿದನಯ್ಯ ಪ್ರಭುವೆ.
- ಅಕ್ಕ ಮಹಾದೇವಿ

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

ಶ್ರೀ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ನಿಮಗೂ ನಿಮ್ಮ ಕುಟುಂಬಕ್ಕೆ ಶ್ರೀ ಮಹಾಲಕ್ಷ್ಮಿ ಅಮ್ಮನವರ ಕೃಪೆ ಇರಲಿ

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

ಸಾಯಿಬಾಬಾ ನಿಜವಾಗಲೂ ಸಂತಾನ

ಇದರ ಬಗ್ಗೆ ನಿಮ್ಮಲ್ಲಿ ವಿಷಯ ಇದ್ದಾರೆ ದಯಮಾಡಿ ಕಳಿಸಿ ಕೊಡಿ

ಅವರ ಬಗ್ಗೆ ತಿಳಿದುಕೊಳ್ಳಬೇಕು

ಅವರ ಹುಟ್ಟಿನಿಂದ ಸಂತ ಆಗುವರಿಗೆ ಚರಿತ್ರೆ ತಿಳಿದುಕೊಳ್ಳಬೇಕು

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

ದಯವಿಟ್ಟು ವ್ರತದ ಬಗ್ಗೆ ಬಾಯಿಗೆ ಬಂದದ್ದನ್ನೆಲ್ಲಾ ಬರೆದು ಜನರ ದಾರಿ ತಪ್ಪಿಸಬೇಡಿ. ಈ ಲೇಖನ ನೋಡಿ ವ್ರತ ಮಾಡಿದವರ
ಪಾಪ ಕರ್ಮ ಲೇಖನ ಬರೆದವರು, ಪ್ರಚಾರ ಪಡಿಸಿದವರು ಖಂಡಿತಾ ಅನುಭವಿಸುತ್ತಾರೆ.

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx
ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ ಉಡುಪಿ❤
ಇಂದಿನ ಜಗನ್ಮಾತೆಯ ಅಲಂಕಾರ
Watch Devis eye

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

https://youtu.be/LE81D9lvRY8?si=8EFC7zPCA3qlloo0

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx
#ಎಲ್ಲರಿಗೂ #ವರಮಹಾಲಕ್ಷ್ಮಿ #ಹಬ್ಬದ #ಹಾಧಿ೯ಕ #ಶುಭಾಶಯಗಳು

ಶ್ರಾವಣ ಮಾಸದ ಶುಕ್ಲ ಪಕ್ಷ ನವಮಿ ತಿಥಿ ಶುಕ್ರವಾರ ಬರುತ್ತಿದೆ. ಅದಕ್ಕಾಗಿಯೇ ಈ ವರ್ಷ ವರಮಹಾಲಕ್ಷ್ಮಿ ಹಬ್ಬವನ್ನು
ಶುಕ್ರವಾರ 25 ಆಗಸ್ಟ್ 2023 ರಂದು ಆಚರಿಸಲಾಗುತ್ತದೆ

ವರಮಹಾಲಕ್ಷ್ಮಿ ಹಬ್ಬದ ಶುಭ ಮುಹೂರ್ತ

ಸಿಂಹ ಲಗ್ನ ಪೂಜೆ ಮುಹೂರ್ತ - ಆಗಸ್ಟ್ 25, 2023 ರಂದು ಬೆಳಿಗ್ಗೆ 6.10 ರಿಂದ 7.50 ರವರೆಗೆ
ವೃಶ್ಚಿಕ ಲಗ್ನ ಪೂಜೆ ಮುಹೂರ್ತ – ಆಗಸ್ಟ್ 25 ಮಧ್ಯಾಹ್ನ 12.15 ರಿಂದ 2.31 ರವರೆಗೆ
ಕುಂಭ ಲಗ್ನ ಪೂಜೆ ಮುಹೂರ್ತ - ಆಗಸ್ಟ್ 25, ಸಂಜೆ 6.23 ರಿಂದ 7.56 ರವರೆಗೆ
ವೃಷಭ ಲಗ್ನ ಪೂಜೆ ಮುಹೂರ್ತ - ಆಗಸ್ಟ್ 25, ರಾತ್ರಿ 11.06 ರಿಂದ ಆಗಸ್ಟ್ 26 ರ ಬೆಳಿಗ್ಗೆ 1.04 ರವರೆಗೆ

ವರಮಹಾಲಕ್ಷ್ಮಿ ಹಬ್ಬದ ಮಹತ್ವ

ವಿವಾಹಿತ ಮಹಿಳೆಯರು ವರಮಹಾಲಕ್ಷ್ಮಿ ವ್ರತವನ್ನು ಇಡೀ ಕುಟುಂಬಕ್ಕೆ, ವಿಶೇಷವಾಗಿ ಅವರ ಪತಿ ಮತ್ತು ಮಕ್ಕಳಿಗೆ
ಆಶೀರ್ವಾದವನ್ನು ಪಡೆಯಲು ಆಚರಿಸುತ್ತಾರೆ ಹಿಂದೂ ಧರ್ಮಗ್ರಂಥಗಳ ಪ್ರಕಾರ ಈ ಮಂಗಳಕರ ದಿನದಂದು ಲಕ್ಷ್ಮಿಯನ್ನು
ಆರಾಧಿಸುವುದು ಅಷ್ಟಲಕ್ಷ್ಮಿಯನ್ನು ಪೂಜಿಸುವುದಕ್ಕೆ ಸಮಾನವಾದ ಫಲಗಳನ್ನು ನೀಡುತ್ತದೆ ಎಂದು ನಂಬಲಾಗಿದೆ
ವರಮಹಾಲಕ್ಷ್ಮಿ ಹಬ್ಬದ ಪೂಜೆಯಿಂದ ಸಂಪತ್ತು, ಶಕ್ತಿ, ಶಾಂತಿ, ಕೀರ್ತಿ, ಸಂತೋಷ, ಭೂಮಿ ಮತ್ತು ಶಿಕ್ಷಣ ಲಭಿಸುತ್ತದೆ ಎಂಬ
ನಂಬಿಕೆಯಿದೆ.

ಪುರಾಣದಲ್ಲಿ ಚಾರುಮತಿ ಎಂಬ ಸ್ತ್ರೀಯೊಬ್ಬಳು ನಿಸ್ವಾರ್ಥವಾಗಿ ತನ್ನ ಅತ್ತೆ- ಮಾವಂದಿರ ಸೇವೆ ಮಾಡುತ್ತಿರುತ್ತಾಳೆ. ಇದನ್ನು
ಕಂಡು ಆಕೆಯ ಶ್ರದ್ಧೆಗೆ ಒಲಿದ ಲಕ್ಷ್ಮೀ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ
ಇಷ್ಟಾರ್ಥಗಳನ್ನು ಪೂರೈಸುತ್ತೇನೆ ಎನ್ನುತ್ತಾಳೆ. ಆ ಕಾರಣ ಈ ವ್ರತಾಚರಣೆ ಮಾಡಲಾಗುತ್ತದೆ ಎಂಬ ನಂಬಿಕೆ ಇದೆ. ಇದಕ್ಕೆ
ಹಲವಾರು ಕಥೆಗಳಿದ್ದು ಕೆಲವು ನಂಬಿಕೆಯ ಪ್ರಕಾರ, ಲಕ್ಷ್ಮೀಯು ಕ್ಷೀರ ಸಾಗರದಿಂದ ಅವತಾರ ತಾಳಿದ್ದಾಳೆ ಎನ್ನುವ ಪ್ರತೀತಿ
ಇದೆ. ಹಾಗಾಗಿ ಲಕ್ಷ್ಮೀಯ ಆರಾಧನೆ ಮಾಡಿದಲ್ಲಿ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ. ಜೊತೆಗೆ ಪ್ರತಿ ವರ್ಷವೂ ಲಕ್ಷ್ಮೀಯನ್ನು
ಶ್ರದ್ಧೆ- ಭಕ್ತಿಯಿಂದ ಆರಾಧಿಸುವುದರಿಂದ ಸಕಲ ಇಷ್ಟಾರ್ಥವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ವರಮಹಾಲಕ್ಷ್ಮೀ ಹಬ್ಬದಂದು ಯಾವ ರೀತಿ ಪೂಜೆ ಮಾಡಬೇಕು

ಶುಕ್ರವಾರ ವರಮಹಾಲಕ್ಷ್ಮೀಯನ್ನು ಬ್ರಾಹ್ಮೀ ಲಗ್ನದಲ್ಲಿ ಪ್ರತಿಷ್ಠಾಪನೆ ಮಾಡಬೇಕು, ಈ ಮುಹೂರ್ತದಲ್ಲಿ ಲಕ್ಷ್ಮೀಯನ್ನು ಕೂರಿಸಿ


ಪೂಜೆ ಮಾಡಿದರೆ ನಮ್ಮ ಪ್ರಾರ್ಥನೆ ದೇವಿಗೆ ತಲುಪಿ, ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎನ್ನುವ ನಂಬಿಕೆಯಿದೆ. ಇನ್ನು
ಲಕ್ಷ್ಮೀಗೆ ಹೂವುಗಳೆಂದರೆ ಬಹಳ ಪ್ರೀತಿ. ಅದರಲ್ಲೂ ಕಮಲದ ಹೂವುಗಳೆಂದರೆ ಲಕ್ಷ್ಮೀಗೆ ತುಂಬಾ ಇಷ್ಟ. ಹಾಗಾಗಿ
ಹೂವುಗಳನ್ನು ಪೂಜೆಗೆ ತರುವುದನ್ನು ಮರೆಯಬೇಡಿ. ಇನ್ನು ಕೆಲವರು ಹಣ, ಚಿನ್ನ, ಬಳೆ, ಹಣ್ಣು, ಅರಿಶಿಣ, ಕುಂಕುಮ, ಎಲ್ಲವನ್ನು
ಇಟ್ಟು ಪೂಜೆ ಮಾಡುತ್ತಾರೆ. ಲಕ್ಷ್ಮೀಗೆ ಪ್ರಿಯವಾದ ಧಾನ್ಯವೆಂದರೆ ಕಡಲೆಬೇಳೆ. ಆದ್ದರಿಂದ ವರಮಹಾಲಲಕ್ಷ್ಮೀ ಹಬ್ಬದ
ದಿನದಂದು ನೈವ್ಯೇದ್ಯಕ್ಕೆ ಕಡಲೆಬೇಳೆಯಿಂದ ತಯಾರಿಸಿದ ಪಾಯಸ, ಹೋಳಿಗೆ, ಕಡಲೆಮಡ್ಡಿ ಇತ್ಯಾದಿ ಸಿಹಿ ತಿನಿಸುಗಳನ್ನು
ದೇವರಿಗೆ ಅರ್ಪಿಸಬಹುದು. ಇನ್ನು ಪೂಜೆ ಮಾಡುವ ವಿಧಾನ ಕರ್ನಾಟಕದ ವಿವಿಧೆಡೆ ಬೇರೆ ಬೇರೆ ರೀತಿ ಇರಬಹುದು.
ಹಿಂದಿನಿಂದ ನಡೆದು ಕೊಂಡು ಬಂದ ಆಚಾರದಂತೆ, ಕ್ರಮದಂತೆ ಪೂಜೆ ಮಾಡಬಹುದು.

ಒಮ್ಮೆ ಕೈಲಾಸ ಪರ್ವತದಲ್ಲಿ ಸಭೆ ನಡೆಯುತ್ತಿರುತ್ತದೆ. ಆ ಸಂದರ್ಭದಲ್ಲಿ ಪಾರ್ವತಿ ದೇವಿಯು ಶಿವನನ್ನು ಕುರಿತು ಮಹಿಳೆಯರು
ಯಾವುದಾದರೂ ವ್ರತವನ್ನು ಆಚರಿಸುವುದರಿಂದ ಅವರಿಗೆ ಅಭಿಷ್ಠೆ ಸಿದ್ಧಿ ಪ್ರಾಪ್ತವಾಗುತ್ತದೆಯೇ ಸುಮಂಗಲಿ ಭಾಗ್ಯ
ಸಿಗುತ್ತದೆಯೇ ಎಂದು ಪ್ರಶ್ನೆಯನ್ನು ಕೇಳುತ್ತಾಳೆ. ಆಗ ಶಿವನು ಪಾರ್ವತಿಯನ್ನು ಕುರಿತು.. ಮಹಿಳೆಯರಿಗೆ ಅಭಿಷ್ಠೆಯನ್ನು
ನೀಡುವ ಒಂದು ವ್ರತವಿದೆ. ಆ ವ್ರತವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಎರಡನೇ ಶುಕ್ರವಾರ ಅಥವಾ ಪೌರ್ಣಮಿಗೆ
ಮೊದಲು ಬರುವ ಶುಕ್ರವಾರದಂದು ಆಚರಿಸಬೇಕು. ಈ ವ್ರತದಿಂದ ಸೌಭಾಗ್ಯ, ಸುಮಂಗಲ್ಯ ಯೋಗವನ್ನು ಬಯಸುವ
ಸ್ತ್ರೀಯರು ಈ ವ್ರತವನ್ನು ಆಚರಿಸಿದರೆ ಉತ್ತಮ ಹಾಗೂ ನಿಶ್ಚಿತ ಫಲ ದೊರೆಯುತ್ತದೆ ಎಂದು ಶಿವನು ಉತ್ತರಿಸಿದನು.

ವರಮಹಾಲಕ್ಷ್ಮಿ ವ್ರತದಂದು ಈ 4 ವಸ್ತುಗಳನ್ನು ಮನೆಗೆ ತಂದರೆ ಆಗ ಪಾರ್ವತಿಯು ಮತ್ತೆ ಶಿವನನ್ನು ಕುರಿತು, ಈ ವ್ರತವನ್ನು
ಆಚರಿಸಿ, ಸಂತೋಷವನ್ನು ಪಡೆದ ವ್ಯಕ್ತಿ ಇದ್ದಾರೆಯೇ ಎಂದು ಕೇಳುತ್ತಾಳೆ. ಆಗ ಶಿವನು ಚಾರುಮತಿ ಎನ್ನುವ ಸಂಪನ್ನ
ಗುಣವುಳ್ಳ ಮಹಿಳೆಯ ಬಗ್ಗೆ ಹೇಳುತ್ತಾನೆ. ಒಮ್ಮೆ ಚಾರುಮತಿಯ ಕನಸಿನಲ್ಲಿ ಲಕ್ಷ್ಮಿ ದೇವಿಯು ಕಾಣಿಸಿಕೊಂಡು ನಿನಗೆ
ಶುಭವನ್ನುಂಟು ಮಾಡಲು ವರಮಹಾಲಕ್ಷ್ಮಿ ಎನ್ನುವ ನಾನು ಬಂದಿದ್ದೇನೆ. ಶ್ರಾವಣ ಮಾಸದಲ್ಲಿ ಹುಣ್ಣಿಮೆಗೆ ಮುಂದೆ ಬರುವ
ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳೆಲ್ಲಾ ಈಡೇರುತ್ತದೆ ಎಂದು ಹೇಳಿದಳು. ಚಾರುಮತಿಯು ಈ ವ್ರತವನ್ನು
ಆಚರಿಸಿ ಫಲವನ್ನು ಪಡೆದುಕೊಂಡಳು
ಬದುಕಿನ ಸಮೃದ್ಧಿ, ಏಳ್ಗೆ, ವಿದ್ಯೆ, ಬುದ್ಧಿ ಎಲ್ಲವನ್ನೂ ಕೊಡುವ ಲಕ್ಷ್ಮೀ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರವಾಗಲು ನಾಡಿನೆಲ್ಲೆಡೆ
ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ.

ಈ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸುತ್ತಾರೆ. ಆದಿ ಲಕ್ಷ್ಮಿ (ರಕ್ಷಕ), ಧನ ಲಕ್ಷ್ಮಿ (ಸಂಪತ್ತಿನ ದೇವತೆ), ಧೈರ್ಯ ಲಕ್ಷ್ಮಿ (ಧೈರ್ಯ
ದೇವತೆ), ಸೌಭಾಗ್ಯ ಲಕ್ಷ್ಮಿ (ಸಮೃದ್ಧಿಯ ದೇವತೆ), ವಿಜಯ ಲಕ್ಷ್ಮಿ (ವಿಜಯದ ದೇವತೆ), ಧಾನ್ಯ ಲಕ್ಷ್ಮಿ (ಪೋಷಣೆಯ ದೇವತೆ),
ಸಂತಾನ ಲಕ್ಷ್ಮಿ (ಸಂತಾನದ ದೇವತೆ), ವಿದ್ಯಾ ಲಕ್ಷ್ಮಿ (ಬುದ್ಧಿವಂತಿಕೆಯ ದೇವತೆ)ಯ ಕೃಪೆಗೆ ಪಾತ್ರವಾಗಲು ಈ ಹಬ್ಬವು
ಪ್ರಮುಖವಾಗಿದೆ.

ವರಮಹಾಲಕ್ಷ್ಮಿ ಮಂತ್ರ
ಪದ್ಮಾಸನೇ ಪದ್ಮಾಕರೇ ಸರ್ವ ಲೌಕೈಕ ಪೂಜಿತೇ|

ನಾರಾಯಣಾಪ್ರಿಯೇ ದೇಯಿ ಸುಪ್ರಿತಾ ಭವ ಸರ್ವದಾ

ಈ ಮಂತ್ರವನ್ನು ಪಠಿಸುವ ಮೂಲಕ ವಿವಾಹಿತ ಮಹಿಳೆಯರು ವರಮಹಾಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರವಾಗಬಹುದು.

ವರಮಹಾಲಕ್ಷ್ಮಿ ಪೂಜೆಗೆ ಲಕ್ಷ್ಮೀ ದೇವಿಯ ಮುಖವಾಡ ಬೇಕು. ಇದರ ಜತೆಗೆ ಕಲಶವೊಂದು ಇರಲಿ. ದೇವಿಗೆ ಉಡಿಸಲು ಸೀರೆ
ಬೇಕು. ದೇವಿಗೆ ಆಭರಣದಿಂದ ಅಲಂಕಾರ ಮಾಡಬೇಕು. ರೆಡಿಮೆಡ್‌ಕೂದಲು, ಒಂದಿಷ್ಟು ಪರಿಕರಗಳು ಇರಬೇಕು. ಇವೆಲ್ಲ
ಗ್ರಂಥಿಕೆ ಅಂಗಡಿ ಅಥವಾ ಮಾರುಕಟ್ಟೆಯಲ್ಲಿ ದೊರಕುತ್ತದೆ. ಕನ್ನಡಿ ಇರಲಿ. ಸಿಪ್ಪೆ ತೆಗೆದ ಮೂರು ತೆಂಗಿನಕಾಯಿಯನ್ನು ಇಡಿ.
ಇದರೊಂದಿಗೆ ಅಲಂಕಾರಕ್ಕೆ ಮತ್ತು ಪೂಜೆಗೆ ಹೂವುಗಳು ಬೇಕು.

ಮಣಿಕಟ್ಟಿಗೆ ಕಟ್ಟಲು ಹಳದಿ ದಾರ ತಂದಿಡಿ. ಮರದ ಮಣೆ, ಪೀಠ ಬೇಕು. ಹೂವಿನ ಹಾರ ಸಿದ್ಧವಾಗಿಟ್ಟುಕೊಳ್ಳಿ. ವೀಳ್ಯದೆಲೆ,
ಅಡಿಕೆ, ಹಣ್ಣುಗಳು, ಬಾಳೆಹಣ್ಣು, ಅರಶಿನ, ಚಂದನ, ಕುಂಕಮ, ಬಿಳಿರಂಗೋಲಿ ಪುಡಿ, ಅಕ್ಷತೆ ಮತ್ತು ಅಕ್ಕಿ ಇರಲಿ.
ಇವುಗಳೊಂದಿಗೆ ಎಣ್ಣೆ, ತುಪ್ಪ ಮತ್ತು ದೀಪ, ಧೂಪದ್ರವ್ಯದ ತುಂಡುಗಳು, ಕರ್ಪೂರ ಇರಲಿ. ಲೋಹದ ಅಥವಾ ಬೆಳ್ಳಿಯ
ತಟ್ಟೆಯೂ ಪೂಜೆಗೆ ಬೇಕಾಗುತ್ತದೆ.

ವರಮಹಾಲಕ್ಷ್ಮಿ ಪೂಜೆ ಮಾಡುವುದು ಹೇಗೆ

ಪೂಜೆ ಮಾಡುವ ವಿಧಾನ ಕರ್ನಾಟಕದ ವಿವಿಧೆಡೆ ಬೇರೆಬೇರೆ ರೀತಿ ಇರಬಹುದು. ತಮ್ಮ ಆಚಾರ ವಿಚಾರದಂತೆ,
ನಡೆಸಿಕೊಂಡು ಬಂದ ಕ್ರಮದಂತೆ ಮಾಡಬಹುದು. ಬೆಳಗ್ಗೆ ಉದಯಕಾಲದಲ್ಲಿ ಪೂಜೆ ಮಾಡಬೇಕು. ಹೀಗಾಗಿ ಅಂದು ಬೆಳಗ್ಗೆ
ಬೇಗ ಎದ್ದೇಳಬೇಕು. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪೂಜೆ ಅಥವಾ ಆಚರಣೆ ಇರುತ್ತದೆ. ಪೂಜಾ ಪ್ರದೇಶವನ್ನು
ನೀರಿನಿಂದ ಶುದ್ಧ ಮಾಡಿ. ಗಂಗಾಜಲವಿದ್ದರೆ ಉತ್ತಮ. ಮರದ ಪೀಠ, ಮಣೆಗೆ ಅರಸಿನ ಹಚ್ಚಿ, ರಂಗೋಲಿ ಪುಡಿ ಇರಲಿ. ಪೀಠಕ್ಕೆ
ಅಕ್ಷತೆ ಹಾಕಿ, ಲೋಹದ ತಟ್ಟೆ ಇಡಿ. ಅರಶಿನ, ಕುಂಕುಮವನ್ನು ಕಲಶಕ್ಕೆ ಹಚ್ಚಿ. ಅದನ್ನು ತಟ್ಟೆಯ ಮಧ್ಯ ಭಾಗದಲ್ಲಿ ಇಟ್ಟು,
ಕಲಶಕ್ಕೆ ಕೊಂಚ ನೀರು ಹಾಕಿ. ಕಲಶಕ್ಕೆ ಅಕ್ಷತೆ ಹಾಕಿ. ಕಲಶದ ಮೇಲೆ ತೆಂಗಿನಕಾಯಿ ಇಡಿ.

ಈ ರೀತಿ ಕಲಶ ಮತ್ತು ತೆಂಗಿನಕಾಯಿಯು ಲಕ್ಷ್ಮೀ ದೇವಿಯಾಗಬೇಕು. ಇದಕ್ಕಾಗಿ ತೆಂಗಿನಕಾಯಿಗೆ ಲಕ್ಷ್ಮೀ ದೇವಿಯ
ಮುಖವಾಡವನ್ನು ಜೋಡಿಸಿರಿ. ಬಟ್ಟೆ ಬಳಸಿ ಸೀರೆ ಉಡಿಸಿ. ಕೂದಲು, ಆಭರಣ ಇತ್ಯಾದಿಗಳಿಂದ ಅಲಂಕರಿಸಿ.ಹೂವಿನ ಹಾರ
ಹಾಕಿ.

ವರಲಕ್ಷ್ಮಿ ಮಂತ್ರಗಳು
ವರಮಹಾಲಕ್ಷ್ಮಿ ದೇವರ ಅಲಂಕಾರ ಮುಗಿದ ಬಳಿಕ ದೇವಿಯ ಹಿಂದೆ ಕನ್ನಡಿ ಇರಿಸಿ. ಎಣ್ಣೆ ಹಾಕಿ ದೀಪ ಬೆಳಗಿಸಿ. ದೇವಿಯ
ಮುಂದೆ ವೀಳ್ಯದೆಲೆ, ಅಡಿಕೆ ಇಡಿ. ಮೊದಲೊಂದಿಪೆ ಗಣನಾಥ ಎಂಬಂತೆ ಮೊದಲು ಗಣೇಶ ದೇವರಿಗೆ ಪೂಜೆ ಸಲ್ಲಿಸಿ. ದೇವಿಗೆ
ಸಂಬಂಧಪಟ್ಟ ಮಂತ್ರಗಳನ್ನು ಪಠಣ ಮಾಡಿ. ಮಹಾಲಕ್ಷ್ಮಿ ಸಹಸ್ರನಾಮ ಸ್ತೋತ್ರ ಪಠಿಸಬಹುದು. ದೇವಿಗೆ ಪೂಜೆ ಸಲ್ಲಿಸುವಾಗ
ಹೂವು ಅರ್ಪಿಸಿ, ತಾಂಬೂಲ ಅರ್ಪಿಸಿ. ದೇವಿಗೆ ನೈವೇದ್ಯ ಅರ್ಪಿಸಿ. ಕಡಲೆ ಪಾಯಸ, ಮೋದಕ, ಇಡ್ಲಿ, ಉಪ್ಪು ಇತ್ಯಾದಿಗಳನ್ನು
ನೈವೇದ್ಯವಾಗಿ ಮಹಾಲಕ್ಷ್ಮಿ ದೇವಿಗೆ ಸಮರ್ಪಿಸಬಹುದು.ಇದೆಲ್ಲ ಆದ ಬಳಿಕ ಆರತಿ ಮಾಡಿ, ಬಳಿಕ ನಿಮ್ಮ ಕೈಗೆ ದಾರವನ್ನು
ಕಟ್ಟಿ. ಲಕ್ಷ್ಮೀ ದೇವಿಯನ್ನು ಪ್ರಾರ್ಥಿಸಿ, ನಿಮ್ಮ ಕೋರಿಕೆಗಳನ್ನು ಸಲ್ಲಿಸಿ.
Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

#ನಾಳೆವರಮಹಾಲಕ್ಷ್ಮೀವ್ರತ.
ತನ್ನಿಮಿತ್ತ ವರಮಹಾಲಕ್ಷ್ಮೀ ವ್ರತದ ಕಥೆ.

ಸನಕಾದಿ ಋಷಿಗಳು ಸೂತಪುರಾಣಿಕರನ್ನು,


"ಸಕಲ ಸಂಪತ್ತು,
ಪುತ್ರಪೌತ್ರಾದಿ ಭಾಗ್ಯವನ್ನು ಕೊಡುವಂತಹ ವ್ರತ ಯಾವುದು? ತಿಳಿಸಿ" ಎಂದು ಪ್ರಶ್ನಿಸಿದಾಗ,
ಪರಮೇಶ್ವರನು ಪಾರ್ವತಿಗೆ ಉಪದೇಶಿಸಿದ ವ್ರತ ಮತ್ತು ಕಥೆಯನ್ನು ಸೂತರು ಹೇಳಿದರು.

ವರಮಹಾಲಕ್ಷ್ಮಿ ವ್ರತವನ್ನು ಶ್ರಾವಣ ಮಾಸದ ಪೂರ್ಣಿಮೆಯ ಹಿಂದಿನ ಶುಕ್ರವಾರ ಕಲ್ಪೋಕ್ತ ವಿಧಾನದಿಂದ ಭಕ್ತಿಯಿಂದ
ಆಚರಿಸಬೇಕು.
ಇದಕ್ಕೊಂದು ಇತಿಹಾಸವೂ ಇದೆ.

ಹಿಂದೆ ವಿದರ್ಭ ದೇಶದ ಕುಂಡಿನೀ ಎಂಬ ಸಂಪದ್ಭರಿತ ನಗರದಲ್ಲಿ ಚಾರುಮತಿ ಎಂಬ ಸ್ತ್ರೀ ಇದ್ದಳು.ಪತಿವ್ರತೆಯೂ,
ಕಡುಬಡವಳಾದರೂ ಕೋಪವಿಲ್ಲದೆ,
ಪತಿಯ ಮನಸ್ಸಿಗೆ ಇನಿತೂ ಬೇಸರವಾಗದಂತೆ ಸೇವೆ ಮಾಡುತ್ತಿದ್ದಳು.
ಇವಳ ಪತಿವ್ರತಾ ಧರ್ಮಕ್ಕೆ ಮನಸೋತ ಮಹಾಲಕ್ಷ್ಮಿಯು,ಒಂದು ರಾತ್ರಿ ಕನಸಿನಲ್ಲಿ ಕಾಣಿಸಿಕೊಂಡು,
"ಚಾರುಮತಿಯೇ,ನಾನು ಮಹಾಲಕ್ಷ್ಮಿ.ನಿನಗೆ ಒಳಿತಾಗುವ ವಿಷಯ ಹೇಳಲು ಬಂದಿದ್ದೇನೆ.
ಶ್ರಾವಣ ಮಾಸದ ಪೌರ್ಣಿಮೆಯ ಹಿಂದಿನ ಶುಕ್ರವಾರ ನನ್ನನ್ನು ಭಕ್ತಿಯಿಂದ ಆರಾಧಿಸುವವರಿಗೆ,
ಅವರ ಸಕಲ ಅಭೀಷ್ಟಗಳನ್ನೂ,
ಮುಕ್ತಿಯನ್ನೂ ಕೊಡುತ್ತೇನೆ"
ಎಂದು ಹೇಳಿ ಅದೃಶ್ಯಳಾದಳು!

ಕೂಡಲೇ ಎಚ್ಚರಗೊಂಡ ಚಾರುಮತಿಯು ಕನಸಿನ ವಿಷಯವನ್ನು ತನ್ನ ನೆಂಟರಿಷ್ಟರಿಗೆಲ್ಲ ಹೇಳಿ,ಆ ದಿನಕ್ಕಾಗಿ ಕಾಯುತ್ತಿದ್ದು,ಆ
ದಿನ ಬರುತ್ತಲೇ,
ಅವರೆಲ್ಲರೂ ಭಕ್ತಿಯಿಂದ ವ್ರತವನ್ನು ವಿಧಿಪೂರ್ವಕವಾಗಿ ಆಚರಿಸಿದರು.
ವ್ರತಮಾಡಿದವರೆಲ್ಲರಿಗೂ,
ಮಹಾಲಕ್ಷ್ಮಿಯ ಅನುಗ್ರಹದಿಂದ ಸಂಪತ್ತು ಲಭಿಸಿ ಸುಖವಾಗಿದ್ದರು.
ಚಾರುಮತಿಯು ಸಕಲೈಶ್ವರ್ಯ,
ಪುತ್ರಪೌತ್ರಾದಿ ಭಾಗ್ಯಗಳನ್ನು ಪಡೆದು,ದೀನ,ದರಿದ್ರರಿಗೆ ದಾನ ಮಾಡುತ್ತ,
ಪ್ರತಿವರ್ಷ ವ್ರತವನ್ನಾಚರಿಸಿ,
ಕೊನೆಯಲ್ಲಿ ಮುಕ್ತಿಯನ್ನು ಹೊಂದಿದಳು.

#ಈವ್ರತದವಿಧಾನ ಹೀಗಿದೆ.
ವರಮಹಾಲಕ್ಷ್ಮಿ ವ್ರತವನ್ನು ಸ್ತ್ರೀಯಾಗಲಿ,
ಪುರುಷರಾಗಲಿ ಮಾಡಬಹುದು.
ಬೆಳಿಗ್ಗೆ ಮನೆಯನ್ನೆಲ್ಲ ಶುಚಿಗೊಳಿಸಿ,
ರಂಗವಲ್ಲಿಯಿಂದ ಅಲಂಕರಿಸಿ,
ಅಭ್ಯಂಜನ ಸ್ನಾನ ಮಾಡಿ,
ಮನೆಯ ಮನೋಹರ ಪ್ರದೇಶದಲ್ಲಿ,ದಿವ್ಯ ಮಂಟಪ ನಿರ್ಮಿಸಿ,
ಅದರೊಳಗೆ ಪಂಚವರ್ಣದ ಅಷ್ಟದಳ ಪದ್ಮವನ್ನು ರಂಗೋಲಿಯಿಂದ ರಚಿಸಿ,
ತಮ್ಮ ಶಕ್ತ್ಯನುಸಾರ ಸುವರ್ಣ,ರಜತ,ತಾಮ್ರ,
ಹಿತ್ತಾಳೆ,ಅಥವಾ,ಕಂಚಿನ ಕಲಶವನ್ನು ,ಎರಡು ಕುಡಿ ಬಾಳೆಎಲೆಯನ್ನು ಉತ್ತರಕ್ಕೆ ಕುಡಿ ಇರುವಂತೆ ಇಟ್ಟು,ಅದರ ಮೇಲೆ
ಅಥವಾ ಅಗಲವಾದ ಹರಿವಾಣದಲ್ಲಿ ಸೇರಿನಷ್ಟುಅಕ್ಕಿಯನ್ನು ಹರಡಿ,ಅದರ ಮೇಲೆ ಕಲಶವನ್ನಿಟ್ಟು ಹಲಸು,
ಮಾವಿನಕುಡಿ,ಎರಡು ವೀಳೆಯದೆಲೆ ಇಟ್ಟು ಪವಿತ್ರಜಲ,ಗಂಧ,ಅಕ್ಷತೆ,
ಅರಿಶಿನ,ಕುಂಕುಮ,ಪರಿಮಳ ದ್ರವ್ಯ,
ಪಂಚಾಮೃತವನ್ನು ಸೇರಿಸಿ,ಕಲಶದ ಮೇಲೆ ಅರಿಶಿನ ಹಚ್ಚಿದ ತೆಂಗಿನಕಾಯಿಯನ್ನಿಟ್ಟು,
ಹೊಸ ವಸ್ತ್ರವನ್ನೇರಿಸಿ
ವರಲಕ್ಷ್ಮಿದೇವಿಯ ಪ್ರಾಣಪ್ರತಿಷ್ಠೆ ಮಾಡಿ,ಕಲ್ಪೋಕ್ತ ವಿಧಿಯಿಂದ ಷೋಡಶೋಪಚಾರ ಪೂಜೆ ಮಾಡಬೇಕು.
ಕೊನೆಯಲ್ಲಿ ಆಚಾರ್ಯನನ್ನು ಪೂಜಿಸಿ ಫಲ,ತಾಂಬೂಲ,ದಕ್ಷಿಣೆಯೊಂದಿಗೆ ಉಪಾಯನದಾನವನ್ನು,
ಸುವಾಸಿನಿಯರನ್ನು ಮಂಗಳದ್ರವ್ಯದಿಂದ ಸತ್ಕರಿಸಿ, ವ್ರತದ ಕಥೆಯನ್ನು ಭಕ್ತಿಯಿಂದ ಕೇಳಿ,
ಮಂಗಳಾರತಿಯ ನಂತರ ಭೋಜನವನ್ನು ಮಾಡಿಸಿ ಅವರಿಂದ ಆಶೀರ್ವಾದ ಪಡೆದರೆ ವರಮಹಾಲಕ್ಷ್ಮಿಯು ಪ್ರಸನ್ನಳಾಗಿ
ಅನುಗ್ರಹಿಸುತ್ತಾಳೆ."
ಎಂದು ಭವಿಷ್ಯೋತ್ತರ ಪುರಾಣದ ಕಥೆಯನ್ನು ಸೂತಪುರಾಣಿಕರು ಹೇಳಿ,
ಯಾರು ಈ ವ್ರತ ಆಚರಿಸುತ್ತಾರೋ,
ವ್ರತದ ಕಥೆಯನ್ನು ಭಕ್ತಿಯಿಂದ ಶ್ರವಣ ಮಾಡುತ್ತಾರೋ,
ಅವರು ಇಹದಲ್ಲಿ ಸಕಲ ಸಂಪತ್ತನ್ನು ಪಡೆದು,
ಪರದಲ್ಲಿ ಮುಕ್ತಿಯನ್ನು ಹೊಂದುತ್ತಾರೆ" ಎಂದು ಹೇಳಿದರು

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

https://youtu.be/eWFsD3ruxYk?si=k2Ff_5beLN8jopK4

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx
👌ನಾವು ಪ್ರಸಕ್ತ ಪರಿಸ್ಥಿತಿಯಲ್ಲಿ ಎಷ್ಟು ವಸ್ತುನಿಷ್ಟರಾಗಿದ್ದೇವೆ ಎಂದು ತಿಳಿಸುವ,ಕಣ್ ತೆರೆಸುವ ಅದ್ಭುತ vedeo ತುಣುಕು

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx
ಭೀಮನ ಶಂಖದ ಹೆಸರು ಸೂಚಿಸಿ
ಪ್ರಣಾಮಗಳು ಸರ್, ಪರಿಮಳ ಗ್ರಂಥ ಸಿಗುವ link ಇದ್ರೆ ದಯವಿಟ್ಟು ತಿಳಿಸಿ
Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx
🙏ನಾಳೆ ವರ ಮಹಾಲಕ್ಷ್ಮಿ ವ್ರತ.

ಲಕ್ಷ್ಮಿ ಗೆ ಏನೇನು ಇಷ್ಟ ಅದೆಲ್ಲ ದೇವರ ಮುಂದೆ ಇಟ್ಟು ಪೂಜೆ ಮಾಡಿ.

ಕಳಸಾ ಕೂಡಿಸುವವರು ಒಂದು ಬಾಳೆ ಎಲೆಯ ಮೇಲೆ ಲಕ್ಷ್ಮಿಯ ರಂಗೋಲಿ ಹಾಕಿ ಅದರ ಮೇಲೆ ಒಂದು ತಟ್ಟೆ ಇಟ್ಟು ಅದರಲ್ಲಿ
ಅಕ್ಕಿ ಹಾಕಿ ಅದರ ಮೇಲೆ ಚೊಂಬನು ಇಟ್ಟು ನೀರು ಹಾಕಿ ನೀರಿನಲ್ಲಿ ಅರಿಶಿನ ಕುಂಕುಮ ಗಂಜಲ ಹಾಕಬೇಕು.
ನಂತರ ಮಾವಿನ ಎಲೆ, ತೆಂಗಿನಕಾಯಿ ಇಟ್ಟು ಮುಖವಾಡ ಹಾಕಿ ಸೀರೆ ಉಡಿಸಿ ಅಲಂಕಾರ ಮಾಡಬೇಕು

ಹಾಲು ಮೊಸರು ತುಪ್ಪ ಸಕ್ಕರೆ ಜೇನುತುಪ್ಪ ಇದರಿಂದ ಅಭಿಷೇಕ ಮಾಡಬೇಕು.(ಚಿಕ್ಕ ಲಕ್ಷ್ಮಿಯ ಹಾಗೂ ಗಣಪತಿಯ ವಿಗ್ರಹಕ್ಕೆ)

ಕಮಲದ ಹೂ ಎಲ್ಲಿದ್ರು ಸರಿ ತಂದು ದೇವರ ಮುಂದೆ ಇಡಬೇಕು.


ಕಮಲದ ಬೀಜದ ಹಾರ ಹಾಕ್ಬೇಕು ದೇವರಿಗೆ.
ಕವಡೆಗಳು, ಗೋಮತಿ ಚಕ್ರ, ಚಿಕ್ಕ ತೆಂಗಿನ ಕಾಯಿ, ಚಿನ್ನದ ನಾಣ್ಯಗಳನ್ನು ದೇವರ ಮುಂದೆ ಇಟ್ಟು ಪೂಜಿಸಬೇಕು.

ಕೆಂಪು ಹೂಗಳನ್ನು ದೇವರಿಗೆ ಅಲಂಕಾರಕ್ಕೆ ಅರ್ಚನೆಗೆ ಬಳಸಬೇಕು.

ಬಗೆ ಬಗೆಯ ಹಣ್ಣುಗಳನ್ನು ನೈವೇದ್ಯಕ್ಕೆ ಇಡಬೇಕು.


ಲಕ್ಷ್ಮಿ ಪಕ್ಕ ಪುಟ್ಟದಾದ ಅರಿಶಿನದ ಗೋಪುರ ಅಂದರೆ ಗಣಪತಿ ಮಾಡಿ ಇಡಬೇಕು.

16 ಎಳೆಯ ಗೆಜ್ಜೆ ವಸ್ತ್ರ ಹಾಕಬೇಕು.


ಮನೆಯಲ್ಲಿರುವ ಆಭರಣಗಳನ್ನು ತೊಳೆದು ದೇವರ ಮುಂದೆ ಇಡಬೇಕು.
ಹೊಸ ನೋಟುಗಳು ಸಿಕ್ಕಲ್ಲಿ ಅದರ ತೋರಣ ಕಟ್ಟಬೇಕು.
ನೋಟುಗಳಲ್ಲಿ ಹಾರ ಮಾಡಿ ಹಾಕಬೇಕು.

ನೃವೇದ್ಯ ಒಬ್ಬಟ್ಟು ಮಾಡಿ ಇಡಬೇಕು ತುಪ್ಪ ಹಾಕಿ.


ಚಿತ್ರಾನ್ನ ದೇವಿಗೆ ಬಹಳ ಪ್ರಿಯ ಅದನ್ನು ಮಾಡಿ ಇಡಿ.

ದೂಪ,ದೀಪ, ನೈವೇದ್ಯ ಗಳಿಂದ ದೇವಿಯ ಆರಾಧನೆ ಮಾಡಿ.ಸ್ತೋತ್ರಗಳನ್ನು ಹೇಳಿ.


ಇಡೀ ದಿನ ಲಕ್ಷ್ಮಿ ಬಾರಮ್ಮ ಹಾಡು ಹೇಳುತ್ತಿರಿ.

ಸಂಜೆ ನೈಜ ಲಕ್ಷ್ಮೀ ಯರನ್ನು ಕರೆದು ಅವರಿಗೆ ಫಲ ತಾಂಬೂಲ ನೀಡಿ ಆಶೀರ್ವಾದ ಪಡೆಯಿರಿ.🙏💐

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx
ಅಪರಾಹ್ನದ ಮಾತು
ಎಷ್ಟು ತಾಳ್ಮೆಯಿಂದ ಇರುತ್ತೇವೋ ಅಷ್ಟು ಅಗ್ರಸ್ಥಾನ.ಎಷ್ಟು ದೂರ ಇರುತ್ತೇವೊ ಅಷ್ಟು ಗೌರವ.ಎಷ್ಟು ಕಡಿಮೆ ಅಸೆ ಪಡುತ್ತೇವೋ
ಅಷ್ಟು ಪ್ರಶಾಂತತೆ.ಎಷ್ಟು ಕಡಿಮೆ ಮಾತನಾಡುತ್ತೇವೋ ಅಷ್ಟು ಬೆಲೆ.ಇದುವೇ ಜೀವನದ ರಹಸ್ಯಗಳು.
ಗುರುವಾರದ ಶುಭ ಮದ್ಯಾಹ್ನದ ವಂದನೆಗಳು🙏
Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

ಶಂಖದ ಬಗ್ಗೆ ಸ್ವಲ್ಪ ಮಾಹಿತಿ ತಿಳಿಯೋಣ..!*

ಶಂಖನಾದದಿಂದ ಬರುವ ಕಂಪನ ಭೂಮಿಯಲ್ಲಿರುವ ಅನೇಕ ಕೆಟ್ಟ ಶಕ್ತಿಗಳನ್ನು ನಾಶಪಡಿಸುತ್ತದೆ..

ಪರಿಸರ ಮಾಲಿನ್ಯದಿಂದ ಒಜೋನ್ ಪದರಗಳಲ್ಲಿ ರಂದ್ರಗಳುಂಟಾಗುವುದು ಸಹಜ…

ಶಂಖನಾದದಿಂದ ತಕ್ಕಮಟ್ಟಿಗೆ ಒಜೋನ್ ಪದರಗಳಲ್ಲಿ ರಂಧ್ರಗಳುಂಟಾಗದಂತೇ ತಡೆಯಬಹುದೆಂದು ವಿಜ್ಞಾನಿಗಳು


ತಿಳಿಸಿದ್ದಾರೆ..

ಹಾಗೇ ಶಂಖನಾದವನ್ನು ಕೇಳಿದಾಗ ನಮ್ಮ ದೇಹದಲ್ಲಿ ಸಕಾರಾತ್ಮಕ ಶಕ್ತಿಗಳ (Positive Psychological Vibrations )
ಸಂಚಾರವಾಗುತ್ತದೆ..

ಇದರಿಂದ ಧೈರ್ಯ, ನಿರ್ಣಯ, ನಂಬಿಕೆ, ಆತ್ಮವಿಶ್ವಾಸ, ಮುಂತಾದ ಗುಣಗಳು ಜಾಗೃತವಾಗುತ್ತವೆ..

ಶಂಖವನ್ನು ನಿಯಮಿತವಾಗಿ ಊದುವುದರಿಂದ ಶ್ವಾಸಕೋಶಗಳು ಬಲಿಷ್ಟಗೊಳ್ಳುತ್ತವೆ..

ಶ್ವಾಸಸಂಬಂಧಿ ಖಾಯಿಲೆಗಳು ಕಡಿಮೆಯಾಗುತ್ತವೆಂದು ಸಂಶೋಧನೆಗಳಿಂದ ತಿಳಿದು ಬಂದಿದೆ..

ನಮ್ಮ ಸನಾತನ ಸಂಸ್ಕೃತಿಯಲ್ಲಿ ಶಂಖಕ್ಕೆ ಪೂಜ್ಯಸ್ಥಾನವನ್ನು ನೀಡಲಾಗಿದೆ..

ಧಾರ್ಮಿಕಕಾರ್ಯಕ್ರಮಗಳನ್ನು ಶಂಖನಾದದ ಮೂಲಕವೇ ಪ್ರಾರಂಭಿಸಲಾಗುತ್ತದೆ..

ಜಗತ್ತಿನ ಪರಿಪಾಲಕನಾದ ಮಹಾವಿಷ್ಣುವಿನ ಕೈಯ್ಯಲ್ಲೂ ಶಂಖವನ್ನು ಕಾಣಬಹುದು.

ಮಹಾಭಾರತ ಯುದ್ಧದಲ್ಲೂ ಯುದ್ಧ ಪ್ರಾರಂಭವಾಗುವಾಗ ಶಂಖನಾದ ಮೊಳಗುತ್ತಿತ್ತು..

ಶಂಖದ ಹೆಸರುಗಳು :- ವಿಷ್ಣುವಿನ ಶಂಖದ ಹೆಸರು ಪಾಂಚಜನ್ಯ,

ಅರ್ಜುನನ ಶಂಖದ ಹೆಸರು ದೇವದತ್ತ,

ಯುಧಿಷ್ಠಿರನ ಶಂಖದ ಹೆಸರು ಅನಂತವಿಜಯ,

ನಕುಲನ ಸುಘೋಷ , ಸಹದೇವನ ಮಣಿಪುಷ್ಫಕ ಶಂಖಗಳನ್ನು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ..

ಶಂಖಗಳಲ್ಲೂ ಅನೇಕ ವಿಧಗಳಿವೆ..

ಶಂಖಗಳ ಆಕೃತಿಗೆ ಅನುಗುಣವಾಗಿ ಈ ರೀತಿ ವಿಂಗಡಿಸಲಾಗಿದೆ..

ದಕ್ಷಿಣಾವರ್ತಿ ಶಂಖ, ವಾಮವರ್ತಿ ಶಂಖ, ಗೌಮುಖಿ ಶಂಖ, ಗಣೇಶ ಶಂಖ, ಕಾವುರಿ ಶಂಖ , ಮೋತಿ ಶಂಖ , ಹೀರಾಶಂಖ
ಮುಂತಾದವುಗಳಾಗಿವೆ.

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

🕉️ಓಂ ಶ್ರೀ ಗುರುಭ್ಯೋ ನಮಃ 🕉️‌ ‌ ‌ ‌ ‌ ‌



🪷 ಶ್ರೀ ವರ ಮಹಾಲಕ್ಷ್ಮೀ ವ್ರತ ಆಚರಣೆಯ ಸರಳ ವಿಧಾನ 🪷

ವರ ಮಹಾಲಕ್ಷ್ಮೀ ಆಚರಣೆಗೆ ಇರುವ ನಿಯಮಗಳು ಏನು ?


೧. ಪೂಜೆಯನ್ನು ಒಂದೇ ಮನೆಯಲ್ಲಿರುವ ಎಲ್ಲಾ ಮಹಿಳೆಯರು
ಸೇರಿ ಮಾಡಬೇಕು.

೨. ಪೂಜೆ ಮಾಡುವ ಅಥವಾ ಪಾಲ್ಗೊಳ್ಳುವ ಯಾವುದೇ ಮಹಿಳೆಯರು ಬಹಿಷ್ಠೆಯಾಗಿರಬಾರದು.


೩. ಅಶುಭ ಹಾಗೂ ಶುಭ ಸೂತಕಗಳು
ಇರಬಾರದು.

೪. ಮದುವೆಯಾಗದ ಹೆಣ್ಣು ಮಕ್ಕಳೂ ಈ ವ್ರತದಲ್ಲಿ ಭಾಗವಹಿಸಬಹುದು.

೫. ಆದಷ್ಟೂ ಕೃತಕ ವಸ್ತುಗಳ ಬಳಕೆಯನ್ನು ಮಾಡಬಾರದು, ಮುಖ್ಯವಾಗಿ ಪ್ಲಾಸ್ಟಿಕ್ ಬಳಕೆ ಬೇಡ.

೬. ಒಮ್ಮೆ ಪೂಜಿಸಿದ ನಂತರ ವಿಸರ್ಜನೆಗೆ ಮೊದಲು ಪದೇಪದೇ ದೇವಿಯ ಕಲಶ ಅಥವಾ ವಿಗ್ರಹವನ್ನು ಸ್ಪರ್ಶಿಸಬಾರದು.

೭. ಯಾವುದೇ ಕಾರಣಕ್ಕೂ ಮಡಿಯಿಲ್ಲದೇ ಮಾಡಿದ ಆಹಾರವನ್ನು ನೈವೇದ್ಯಕ್ಕೆ ಇಡಬಾರದು.

೮. ಆಡಂಬರದ ಅಲಂಕಾರಕ್ಕಿಂತ ಆನಂದದ ಅಲಂಕಾರಕ್ಕೆ ದೇವಿ ಬಹುಬೇಗ ಒಲಿಯುತ್ತಾಳೆ.

ವರ ಮಹಾಲಕ್ಷ್ಮೀ ವ್ರತಕ್ಕೆ ಬೇಕಿರುವ ಸಾಮಗ್ರಿಗಳು ಯಾವುವು

೧. ಹಣ್ಣುಗಳು ೫ ವಿಧಗಳು: ದಾಳಿಂಬೆ, ಸೇಬುಗಳು, ಸೀತಾಫಲ, ಮೂಸಂಬಿ, ಸಪೋಟ. ಇತರೆ ಲಭ್ಯವಿರುವ ಹಣ್ಣುಗಳು.

೨. ಹೂವುಗಳು ೫ ವಿಧಗಳು: ಮಲ್ಲಿಗೆ, ತಾವರೆ, ಜಾಜಿ, ಕೇದಗೆ, ನೈದಿಲೆ,ಪಾರಿಜಾತ, ಸೇವಂತಿಗೆ, ಸುಗಂಧರಾಜ, ಸಂಪಿಗೆ,
ಕರವೀರ, ಕಣಗಿಲೆ....
೩. ಪತ್ರೆಗಳು ೫ ವಿಧಗಳು: ಮರುಗ,
ದವನ, ಬಿಲ್ವಪತ್ರೆ, ವಿಷ್ಣು ಕ್ರಾಂತಿ, ಕರವೀರ, ಇತರ...
೪. ಅರಶಿನ, ಕುಂಕುಮ, ಚಂದನ,
ಶ್ರೀಗಂಧ, ಕಾಡಿಗೆ, ಕರಿಮಣಿ ತಾಳಿ, ಕುಬುಸದ ಖಣ, ಸೀರೆ, ಒಡವೆಗಳು...

೫. ತುಪ್ಪ, ಮೊಸರು, ಎಳನೀರು, ಜೇನುತುಪ್ಪ, ಹಾಲು, ಸಕ್ಕರೆ, ಪಂಚಪಲ್ಲವ, ಕರ್ಪೂರ, ಕೇಸರಿ, ಅಕ್ಕಿ, ಬೆಲ್ಲ.

೬. ರಂಗೊಲಿ ಪುಡಿ, ಬತ್ತಿ, ತುಪ್ಪದ ಬತ್ತಿ, ಗೋಟಡಿಕೆ, ತುಂಡಡಿಕೆ.

೭. ಕಲಶ, ಮುಖವಾಡ(ಇದ್ದಲ್ಲಿ) ದೀಪಗಳು(೨,೪,೬,೮,) ತಟ್ಟೆ, ಕೌಳಿಗೆ ಸೌಟು,

೮. ಗೆಜ್ಜೆ ವಸ್ತ್ರ, ಉಪವೀತ, ಬಾಳೆ ಎಲೆಗಳು (೫) ಎಳೆಬಾಳೆ ಕಂದುಗಳು(೨) ಅರಿಶಿಣದ ಕೊಂಬುಗಳು.

೯. ತೆಂಗಿನಕಾಯಿಗಳು(೬) (ಗಣಪತಿ ನೈವೇದ್ಯ, ಮಹಾಲಕ್ಷ್ಮೀ ನೈವೇದ್ಯ, ಗಂಗಾ ನೈವೇದ್ಯ ಹಾಗೂ ಕಲಶಕ್ಕೆ, ಮಹಾಲಕ್ಷ್ಮಿ
ಕಲಶಕ್ಕೆ,) ಮುತ್ತೈದೆಯರಿಗೆ.

ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವುದು ಹೇಗೆ

ದಿಕ್ಕು: ಮೊದಲಿಗೆ ಕಲಶ ಸ್ಥಾಪನೆಗೆ ಪ್ರಶಸ್ಥವಾದ ಜಾಗ ಹಾಗೂ ದಿಕ್ಕನ್ನು ಆರಿಸಿಕೊಳ್ಳಬೇಕು.

೧.ಪೂರ್ವಾಭಿಮುಖ: ಶ್ರೀದೇವಿಯನ್ನು ಪೂರ್ವಾಭಿಮುಖವಾಗಿ ಪ್ರತಿಷ್ಠಾಪಿಸಿದಲ್ಲಿ ಹಸಿರು ಸೀರೆಯಿಂದ ಅಲಂಕರಿಸಿ.

೨.ಉತ್ತರಾಭಿಮುಖ: ಉತ್ತರಾಭಿಮುಖವಾಗಿ ಪ್ರತಿಷ್ಠಾಪಿಸಿದಲ್ಲಿ ಬಿಳಿ ಅಥವಾ ಬಂಗಾರದ ವರ್ಣದ ಸೀರೆಯಿಂದ ಅಲಂಕರಿಸಿ.


೩. ತುಂಬಿದ ಕೊಡದ ನೀರಿನಿಂದ
ನಿಗದಿಪಡಿಸಿದ ಜಾಗವನ್ನು ಶುಚಿಗೊಳಿಸಬೇಕು ಸಾಧ್ಯವಾದಲ್ಲಿ ಸ್ವಲ್ಪ ಗೋಮಯದಿಂದ ಶುಚಿಗೊಳಿಸಿ.

೪. ಸ್ವಚ್ಛವಾದ ಮೇಲೆ ನೆಲದ ಮೇಲೆ ಅಷ್ಟದಳ ರಂಗವಲ್ಲಿಯನ್ನು ಬಿಡಿಸಬೇಕು.

೫. ಆ ರಂಗವಲ್ಲಿಯ ಮೇಲೆ ಪೀಠವನ್ನು ಪ್ರತಿಷ್ಟಾಪಿಸಬೇಕು.

೬. ಈಗ ಪೀಠದ ಮೇಲೆ ತುದಿ ಬಾಳೆಯೆಲೆಯನ್ನು ಇಡಬೇಕು. ಈ ಬಾಳೆಯೆಲೆಯನ್ನು ಮನುಷ್ಯರಿಗಿಡುವಂತೆ ಇಡದೇ ವಿರುದ್ಧ


ದಿಕ್ಕಿನಲ್ಲಿಡಬೇಕು, ಇಲ್ಲವೇ ತುದಿ ಮುಂಭಾಗಕ್ಕೆ ಬರುವಂತೆ ಉದ್ದಕ್ಕೆ ಇಡಬೇಕು.

೭. ಬಾಳೆಎಲೆಯ ಮೇಲೆ ಮತ್ತೊಮ್ಮೆ ಅಷ್ಟದಳ ರಂಗವಲ್ಲಿಯನ್ನು ಬಿಡಿಸಬೇಕು.

೮. ನಂತರ ೩,೫,೬,೮,೯ ಸೇರು ಅಕ್ಕಿಯನ್ನು ಬಾಳೆಯೆಲೆಯ ಮೇಲೆ ಹರಡಬೇಕು. ಹೀಗೆ ಹರಡಿದ ಅಕ್ಕಿಯಮೇಲೆ ತಟ್ಟೆ
ಅಥವಾ ಗೋಲದ ಬಟ್ಟಲನ್ನಿಟ್ಟು ಅದರಲ್ಲಿ ಅಕ್ಕಿ ತುಂಬಬೇಕು ಇದರೊಂದಿಗೆ ಗೋಡಂಬಿ, ದ್ರಾಕ್ಷಿ, ಬಾದಾಮಿ, ಉತ್ತುತ್ತಿ ಇತ್ಯಾದಿ
ಒಣ ಹಣ್ಣುಗಳನ್ನು ಸೇರಿಸಬೇಕು

೯. ಇದರ ಮೇಲೆ ಕಲಶವನ್ನಿಟ್ಟು ಕಲಶಕ್ಕೆ ಮೊದಲಿಗೆ ನೀರನ್ನು ಹಾಕಿ (ಏಳು ಪವಿತ್ರ ಕ್ಷೇತ್ರಗಳ ಪುಷ್ಕರಣಿ ನೀರು ಅಥವಾ
ಸಮುದ್ರದ ನೀರು ಅಥವಾ ಬಾವಿಯ ಶುಧ್ಧವಾದ ನೀರು (ಅದರಲ್ಲೂ ಆಮೆಯಿರುವ ಬಾವಿ ನೀರು ಶ್ರೇಷ್ಠ) ತುಂಬಿರಿ.

೧೦. ತುಂಬಿದ ಕಲಶಕ್ಕೆ ಅರಶಿಣ, ಕುಂಕುಮ, ಶ್ರೀಗಂಧ, ಚಂದನ, ಒಂದು ಬೆಳ್ಳಿ ನಾಣ್ಯ ಒಂದು ಚಿನ್ನದ ಚೂರು, ಸ್ವಲ್ಪ ಅಕ್ಕಿ
ಸೇರಿಸಬೇಕು.

೧೧. ಹೀಗೆ ತಯಾರಾದ ಕಲಶಕ್ಕೆ ಪೂಜಿಸುವ ಮೊದಲು ತುಳಸೀ ಪೂಜೆಯನ್ನು ಮಾಡಬೇಕು. ತುಳಸಿಯನ್ನು ಪೂಜಿಸಿ
ನೈವೇದ್ಯ ಸಲ್ಲಿಸಿದ ಬಳಿಕ ಲಕ್ಷ್ಮೀ ಹೆಜ್ಜೆ ಗಳನ್ನು ರಂಗೋಲೆಯಲ್ಲಿ ಬಿಡಿಸಿ ಗಂಗೆಯನ್ನು ಪೂಜಿಸಿ ಲಕ್ಷ್ಮಿಯನ್ನು ಮನೆಯೊಳಕ್ಕೆ
ಆಹ್ವಾನಿಸಬೇಕು.

೧೨. ಹೀಗೆ ಅಹ್ವಾನಿಸಿದ ಗಂಗೆಯನ್ನು ಮಹಾಲಕ್ಷ್ಮಿಯ ಮೂಲ ಕಲಶಕ್ಕೆ ಬೆರೆಸಬೇಕು.

೧೩. ಗಣಪತಿ ಪೂಜೆಯನ್ನು ಮಾಡಿ ಲಕ್ಷ್ಮಿಗೆ ಷೋಡಶೋಪಚಾರದಿಂದ ಪೂಜಿಸಬೇಕು.

೧೪. ಶ್ರೀ ಮಹಾಲಕ್ಷ್ಮಿ ಯನ್ನು ಅಲಂಕರಿಸುವಾಗ ಜಾಗ್ರತೆಯಾಗಿರಬೇಕು. ಆಭರಣಗಳನ್ನು ಮೊದಲೇ ಸ್ವಚ್ಛವಾಗಿ ತೊಳೆದು
ನಂತರ ಅರಿಶಿಣದ ನೀರಲ್ಲಿ ಒಂದು ದಿನ ನೆನೆಯಿಸಿ ಇಟ್ಟು ನಂತರ ಶೃಂಗಾರಕ್ಕೆ ಬಳಸವುದು ಯೋಗ್ಯ. ಪ್ರತ್ಯೇಕ
ಆಭರಣ/ಮೀಸಲು ಆಭರಣ ಇಟ್ಟಿದ್ದರೆ ಅದನ್ನಷ್ಟೇ ಉಪಯೋಗಿಸಬೇಕು.
೧೫. ಪೂಜೆಯ ನಂತರ
ಬ್ರಾಹ್ಮಣರಿಗೆ ತೆಂಗಿನಕಾಯಿ ಹಾಗೂ ವಸ್ತ್ರದೊಂದಿಗೆ ತಾಂಬೂಲ ಗೌರವ/ಉಪಾಯನ ದಾನ ನೀಡಿದರೆ ಒಳ್ಳೆಯದು.

೧೬. ಮುತ್ತೈದೆಯರಿಗೆ ಮೊರದ ಬಾಗಿನ ಕೊಟ್ಟು ಕನ್ಯೆಯರಿಗೆ ತಾಂಬೂಲ ಗೌರವ ಕೊಡಬಹುದು.

೧೭. ತಾಂಬೂಲ ನೀಡುವಾಗ ಬಾಳೆಹಣ್ಣು ಹಾಗೂ ತೆಂಗಿನಕಾಯಿಯ ಜುಟ್ಟು ನೀಡುವವರ ಕಡೆಗಿರುವಂತೆ‌ನೀಡಿದರೆ


ಒಳ್ಳೆಯದು.

ಕಲಶ ವಿಸರ್ಜನೆಯ ವಿಧಾನ ಹೇಗೆ


ಪೂಜಾನಂತರ ಕಲಶವನ್ನು ಯಾವ ದಿಕ್ಕಿನಲ್ಲಿ ಸ್ಥಾಪಿಸಿರುತ್ತೀರೋ ಆ ದಿಕ್ಕಿನ ರಂಗವಲ್ಲಿ ಗೆರೆಯನ್ನು ಬಳಿದ ನಂತರ ಕಲಶದ
ಬಲಭಾಗದ ಹೂವನ್ನು ಬೀಳಿಸಬೇಕು ಆಮೇಲೆ ಕಲಶವನ್ನು ಬಲದಿಂದ ಎಡಕ್ಕೆ ಮೂರು ಸಲ ಎರಡೂ ಕೈಯಿಂದ ಸರಿಸಿ ನಂತರ
ಎತ್ತಿ ಇರಿಸ‌ಬೇಕು

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

ಕಾರ್ಕಳ ಮಹತೋಭಾರ ಶ್ರೀ ಅನಂತಪದ್ಮನಾಭ ದೇವರ ಇಂದಿನ ಅಲಂಕಾರ - ೨೪-೦೮-೨೦೨೩


Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx
Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

Xxxxxxxxxxxxxxxxxxxxxxx0xxxxxxxxxxxxxxxxxxxxxxx0xxxxxxxxxxxxxxxxxxx0xxxxxxxxxxxxxxxxxxxxxxxxx

You might also like