Download as pdf or txt
Download as pdf or txt
You are on page 1of 4

ಓ.ಎಸ್‍.

ನಂ- 44/2018

ಡಿ ಡಬ್ಲೂ 1

ಸಾಕ್ಷಿಯನ್ನು ಕರೆಯಿಸಿ ಪ್ರಮಾಣ ವಚನ ಭೋದಿಸಲಾಯಿತು.

ದಿನಾಂಕಃ 30-06-2023

ಪಾಟೀ ಸವಾಲುಃ- ವಾದಿಯರ ಪರ ವಕೀಲರಾದ ಎಮ್‍. ಎಸ್‍. ಎ ವಕೀಲರಿಂದಃ-

ನಾನು ದಿಃ 28-01-2023 ರಿಂದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು

(ಪ್ರಭಾರ) ಎಂದು ಕೆಲಸ ಮಾಡುತ್ತಿರುತ್ತೇನೆ. ಈ ಮೊದಲು ನಾನು ಸಹಾಯಕ ಅಭಿಯಂತರ

ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಅದರೊಂದಿಗೆ ಸಹಾಯಕ

ಕಾರ್ಯನಿರ್ವಾಹಕ ಅಭಿಯಂತರರು ( ಪ್ರಭಾರ) ಎಂದು ಕೆಲಸ ಮಾಡುತ್ತಿರುತ್ತೇನೆ.

ಹೀರೂರ ಗ್ರಾಮ ನನ್ನ ಕಾರ್ಯ ವ್ಯಾಪ್ತಿಯಲ್ಲಿ ಬರುತ್ತದೆ. ದಿಃ 10-03-2017 ರಂದು

ವಾದಿಯರ ಜಮೀನಿನ ಕಬ್ಬು ಸುಟ್ಟ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ ಹೀಗಾಗಿ ನಾವು

ಭೇಟಿ ನೀಡಿರುವುದಿಲ್ಲ . ಸದರಿ ಜಮೀನನಲ್ಲಿ ಕಬ್ಬು ಸುಟ್ಟ ಬಗ್ಗೆ ನಮಗೆ ನ್ಯಾಯಾಲಯದಿಂದ

ನೋಟಿಸ ಬಂದಾಗಿನಿಂದ ಗೊತ್ತಾಗಿರುತ್ತದೆ, ನೋಟಿಸ ಬಂದ ದಿನಾಂಕ ನನಗೆ ಗೊತ್ತಿಲ್ಲ .

ನ್ಯಾಯಾಲಯದಿಂದ ನೋಟಿಸ ಬಂದ ನಂತರ ನಾವು ಜಮೀನಿಗೆ ಹೋಗಿ ಪರಿಶೀಲನೆ

ಮಾಡಿರುವುದಿಲ್ಲ . ನಮ್ಮ ತಪ್ಪಿನಿಂದ ವಿದ್ಯು ತ್ ಅವಘಡ ಆಗಿರುತ್ತದೆ ಎಂದರೆ ಸರಿಯಲ್ಲ . ನಾವು

ವಿದ‍್ಯು ತ್ ಅವಘಡದಿಂದ ಕಬ್ಬು ಸುಟ್ಟಾಗ ಮಾಹಿತಿ ಬಂದಾಗ ಅದೇ ದಿನ ಅಥವಾ ಮಾರನೇ

ದಿನ ಹೋಗುತ್ತೇವೆ ನಂತರದ ದಿನಗಳಲ್ಲಿ ಹೊಗುವುದಿಲ್ಲ . ನಾನು ಪ್ರಸ್ತು ತ ದಾವೆಯ

ದಾಖಲೆಗಳ ಪೈಕಿ ಬಗ್ಗೆ ನ್ಯಾಯಾಲಯದಲ್ಲಿರುವ ದಾಖಲೆಗಳ ಬಗ್ಗೆ ತಿಳಿದುಕೊಂಡಿರುವುದಿಲ್ಲ

ಆದರೆ ನಮ್ಮ ಕಚೇರಿಯಲ್ಲಿನ ದಾಖಲೆಯನ್ನು ಪರಿಶೀಲಿಸಿರುತ್ತೇನೆ. ಪ್ರಸ್ತು ತ ದಾವೆಯಲ್ಲಿ

ಕೈಪಿಯತ್ತನ್ನು ನಮ್ಮ ವಕೀಲರು ಸಲ್ಲಿಸಿರುತ್ತಾರೆ. ಸದರಿ ಕೈಪಿಯತ ಸಲ್ಲಿಸಲು ಮಾಹಿತಿಯನ್ನು

ನಮ್ಮ ಮೇಲಾಧಿಕಾರಿಗಳು ನೀಡಿರುತ್ತಾರೆ. ಸದರಿ ಕೈಪಿಯತ್ತನ್ನು ನಾನು ಓದಿರುತ್ತೇನೆ. ಕಬ್ಬು


ಸುಟ್ಟ ಅವಘಡದ ಮಾಹಿತಿಯನ್ನು ದಿಃ 14-03-2017 ರಂದು ನಮ್ಮ ಇಲಾಖೆಗೆ ಹಾಗೂ

ಮುನವಳ್ಳಿ ವಿಭಾಗ ಅಧಿಕಾರಿಗೆ ಸಲ್ಲಿಸಿರುತ್ತಾರೆ ಎಂದರೆ ನನಗೆ ಅದರ ಬಗ್ಗೆ ಮಾಹಿತಿ ಇಲ್ಲ .
ಓ.ಎಸ್‍.ನಂ- 44/2018

ಡಿ ಡಬ್ಲೂ 1

ಸದರಿ ದಾಖಲೆಗಳು ನಮ್ಮ ಕಡತದಲ್ಲಿ ಇದ್ದ ರೂ ಕೂಡಾ ಮಾಹಿತಿ ಇರುವುದಿಲ್ಲ ಎಂದು ಸುಳ್ಳು

ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ . ನಿಯಮ 3 ರ Electricity Rules 2005 ರಂತೆ

24 ಗಂಟೆಯೋಳಗೆ ಅವಘಡದ ಬಗ್ಗೆ ಮಾಹಿತಿ ನೀಡಬೇಕು ಎಂದರೆ ಸರಿ. ಸದರಿ

ಮಾಹಿತಿಯನ್ನ‍ು Electrical Inspector ಹಾಗೂ Chief Executive Engineer

ರವರಿಗೆ ತಿಳಿಸಬೇಕು ಎಂದರೆ ಸಾಕ್ಷಿಯು Electrical Inspector ಹಾಗೂ Chief

Engineer ರವರಿಗೆ ತಿಳಿಸಬೇಕು ಎಂದು ನುಡಿಯುತ್ತಾರೆ. ಸದರಿ ಮಾಹಿತಿಯನ್ನು 48

ಗಂಟೆಯೊಳಗೆ Form A ಪ್ರಕಾರ Electrical Inspector ಹಾಗೂ Chief

Engineer ರವರಿಗೆ ತಿಳಿಸಬೇಕು ಎಂದರೆ ಸರಿ. ಸದರಿ ಮಾಹಿತಿ ಕಳುಹಿಸಿದ ಬಗ್ಗೆ ನನಗೆ

ಮಾಹಿತಿ ಇರುವುದಿಲ್ಲ ಮತ್ತು ಅದರಂತೆ ದಾಖಲಾತಿ ಇರುವುದಿಲ್ಲ . ಸದರಿ ವಿಷಯಕ್ಕೆ

ಸಂಬಂಧಿಸಿದಂತೆ ವಾದಿಯರು ಬೈಲಹೊಂಗಲ ಮುಖ್ಯ ಕಾರ್ಯ ನಿರ್ವಾಹಕ ಅಭಿಯಂತರರ

ಕಚೇರಿಗೆ ಅರ್ಜಿ ಸಲ್ಲಿಸಿರುತ್ತಾರೆ ಎಂದರೆ ನನಗೆ ಮಾಹಿತಿ ಇರುವುದಿಲ್ಲ ಎಂದು ನುಡಿಯುತ್ತಾರೆ.

ದಿಃ 21-10-2017 ರಂದು ವಾದಿಯರು ವಕೀಲರ ಮೂಲಕ ಪ್ರತಿವಾದಿ ನಂ.3 ರವರಿಗೆ

ಕಾನೂನು ತಿಳುವಳಿಕೆ ಪತ್ರ ಸಲ್ಲಿಸಿರುತ್ತಾರೆ ಎಂದರೆ ನನಗೆ ಗೂತ್ತಿಲ್ಲ . ಎಲ್ಲಾ ದಾಖಲೆಗಳು ನನ್ನ

ಗಮನಕ್ಕೆ ಇದ್ದ ರೂ ಕೂಡಾ ಮಾಹಿತಿ ಇರುವುದಿಲ್ಲ ಎಂದು ಸುಳ್ಳು ಹೇಳುತ್ತಿದ್ದೇನೆ ಎಂದರೆ

ಸರಿಯಲ್ಲ . ಪ್ರಸ್ತು ತ ದಾವೆಯಲ್ಲಿ ನಾನು ಕೈಪಿಯತ ಹಾಕಿರುವುದಿಲ್ಲ ಮತ್ತು ಮೇಲಾಧಿಕಾರಿಗಳ

ಮಾತು ಕೇಳಿ ಸುಳ್ಳು ಸಾಕ್ಷ್ಯ‍ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ .


ಸುಟ್ಟ ಕಬ್ಬ ನ್ನು ವಾದಿಯರು ಪ್ಯಾಕ್ಟ ರಿಗೆ ಕಳುಹಿಸಿ ಬಗ್ಗೆ ನಾನು ದಾಖಲೆಯನ್ನು

ನೋಡಿರುವುದಿಲ್ಲ . ಯಾವುದೇ ದಾಖಲಾತಿಗಳನ್ನು ಪರಿಶೀಲಿಸದೆ ಸುಳ್ಳು ಪ್ರಮಾಣ ಪತ್ರ

ಸಲ್ಲಿಸಿರುತ್ತೇನೆ ಎಂದರೆ ಸರಿಯಲ್ಲ . ನಾನು ಸಾಕ್ಷವನ್ನು ನುಡಿಯಲು ಮೇಲಾಧಿಕಾರಿಗಳ

ಗಮನಕ್ಕೆ ತಂದು ಬಂದಿರುತ್ತೇನೆ. ಸದರಿ ಮೇಲಾಧಿಕಾರಿಗಳು ಬೈಲಹೊಂಗಲದ ಕಚೇರಿಗೆ

ಸಂಬಂಧಿಸಿದವರಾಗಿರುತ್ತಾರೆ. ಪ್ರಸ್ತು ತ ದಾವೆಗೆ ಸಂಬಂಧಿಸಿದ ದಾಖಲೆಯನ್ನು ನಮ್ಮ

ಕಚೇರಿಯಲ್ಲಿ ಹುಡುಕಿರುತ್ತೇನೆ ಆದರೆ ಸಿಕ್ಕಿ ರುವುದಿಲ್ಲ . ನಾನು ಮೇಲಾಧಿಕಾರಿಗಳು


ಓ.ಎಸ್‍.ನಂ- 44/2018

ಡಿ ಡಬ್ಲೂ 1

ಬೈಲಹೊಂಗಲ ರವರ ಪರವಾಗಿ ಸಾಕ್ಷ್ಯಯನ್ನು ನುಡಿಯುತ್ತಿಲ್ಲ . ನಮ್ಮ ಇಲಾಖೆ ತಪ್ಪಿನಿಂದ

ಅವಗಡ ಸಂಬಂಧಿಸಿದ್ದ ರಿಂದ ಪ್ರತಿವಾದಿ ನಂ.1 ಹಾಗೂ ಪ್ರತಿವಾದಿ ನಂ.3 ರವರು ಲಿಖಿತ

ಹೇಳಿಕೆ ಸಲ್ಲಿಸಿರುವುದಿಲ್ಲ ಎಂದರೆ ಸರಿಯಲ್ಲ . ವಾದಿಯರಿಗೆ ತೊಂದರೆ ಕೊಡುವ

ಉದ್ದೇಶದಿಂದ ತಪ್ಪು ಲಿಖಿತ ಹೇಳಿಕೆ ಸಲ್ಲಿಸಿ ಸುಳ್ಳು ಸಾಕ್ಷ ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ .

ದಿಃ 26-07-2015 ರಂದು ನಮ್ಮ ಇಲಾಖೆ ತಪ್ಪಿನಿಂದ ಪಕ್ಕಿ ರಪ್ಪ ನವರ ಮತ್ತು ವಾದಿ

ನಂ.1 ರವರ ಜಮೀನನಲ್ಲಿ 5 ಎಕರೆ ಕಬ್ಬು ಸುಟ್ಟಿತ್ತು ಎಂದರೆ ನನಗೆ ಗೊತ್ತಿಲ್ಲ . ಫಕ್ಕಿ ರಪ್ಪ ನ

ದಾವೆಯು ಬೈಲಹೊಂಗಲ ನ್ಯಾಯಾಲಯದಲ್ಲಿ ಡಿಕ್ರಿಯಾದ ಬಗ್ಗೆ ನನಗೆ ಗೊತ್ತಿಲ್ಲ . ಸದರಿ

ಡಿಕ್ರಿಯ ಮೊತ್ತವನ್ನು ನಮ್ಮ ಇಲಾಖೆಯವರು ಬರೆಯಿಸಿದ್ದಾರೆ ಎಂದರೆ ನನಗೆ ಗೊತ್ತಿಲ್ಲ . ಸದರಿ

ಡಿಕ್ರಿಯ ಪ್ರತಿಯನ್ನು ಈ ದಾವೆಯಲ್ಲಿ ಹಾಜರು ಪಡೆಸಿದ್ದಾರೆ ಎಂದರೆ ನನಗೆ ಗೊತ್ತಿಲ್ಲ .

ಫಕ್ಕಿ ರಪ್ಪ ಹಾಗೂ ವಾದಿ ನಂ.1 ರವರ ಹೊಲದಲ್ಲಿ ವಿದ್ಯು ತ ತಂತಿ ಕತ್ತರಸಿ ಬಿದ್ದ ಬಗ್ಗೆ ಹಾಗೂ ಆಗ

ಇಬ್ಬ ರೂ ವ್ಯ ಕ್ತಿಗಳು ಮೃತಪಟ್ಟ ಬಗ್ಗೆ ದಿಃ 17-07-2022 ರ ವಿಜಯ ಕರ್ನಾಟಕ ದಿನ

ಪತ್ರಿಕೆಯಲ್ಲಿ ನಮೂದಾಗಿದೆ ಎಂದರೆ ಸರಿ. ಸದರಿ ದಿನ ಪತ್ರಿಯನ್ನು ನಿಪಿ-14 ಎಂದು

ಗುರುತಿಸಲಾಯಿತು. ಪಕ್ಕಿ ರಪ್ಪ ಹಾಗೂ ವಾದಿ ನಂ.1 ರವರ ಹೊಲದಲ್ಲಿ ವಿದ್ಯು ತ ತಂತಿ ಕತ್ತರಸಿ

ಬಿದ್ದ ಬಗ್ಗೆ ಹಾಗೂ ಆಗ ಇಬ್ಬ ರೂ ವ್ಯ ಕ್ತಿಗಳು ಮೃತಪಟ್ಟ ಕಾರಣ ನಮ್ಮ ಇಲಾಖೆಯವರು

ಅವರಿಬ್ಬ ರನ್ನು ತಲಾ ರೂ 5,00,000/- ಗಳನ್ನು ನೀಡಿರುತ್ತಾರೆ ಎಂದರೆ ಸರಿ. ಎರಡು ಸಲ

ಅವಗಡ ಸಂಬಂಧಿಸಿದ್ದ ರು ಕೂಡಾ ಸದರಿ ಜಮೀನನಲ್ಲಿ ಟಿಸಿ, ಡಿವಾಲ್ವ ರ ಹಾಗೂ ಸ್ಪೇಸರಗಳನ್ನು


ಅಳವಡಿಸಿರುತ್ತೇವೆ. ಸದರಿ ಕೆಲಸವನ್ನು ದಿಃ 21-07-2022 ರಿಂದ 24-07-2022 ರ ಮಧ್ಯ

ಮಾಡಿರುತ್ತೇವೆ. ಸದರಿ ಕೆಲಸದ ಸಂದರ್ಭದಲ್ಲಿ ನಾನು ಪ್ರಭಾರದಲ್ಲಿ ಇರಲಿಲ್ಲ ಆದರೆ ಗಮನಕ್ಕೆ

ಇದೆ. ದಿನಚರಿ ಡೈರಿಯನ್ನು ನಮ್ಮ ಸಿಬ್ಬಂದಿ ಹಾಗೂ ನಾವು ಬರೆಯುತ್ತೇವೆ ಎಂದರೆ ಸರಿ. ಸದರಿ

ಡೈರಿಯನ್ನು ನಾನು ನೋಡಿರುವುದಿಲ್ಲ . ಸದರಿ ಕೆಲಸವನ್ನು ನಾವು ಮಾಡಿರುವುದಿಲ್ಲ ಹೀಗಾಗಿ

ದಿನಚರಿ ಡೈರಿಯನ್ನು ಹಾಜರು ಪಡಿಸಿರುವುದಿಲ್ಲ ಎಂದರೆ ಸರಿಯಲ್ಲ . ನಮ್ಮ ಇಲಾಖೆಯ

ನಿರ್ಲಕ್ಷ್ಯದಿಂದ ಅವಗಡ ಸಂಬಂಧಿಸಿದ್ದ ರೂ ಕೂಡಾ ಇಲ್ಲ ಎಂದು ಮತ್ತು ನನಗೆ ಪ್ರಸ್ತು ತ ದಾವೆ
ಓ.ಎಸ್‍.ನಂ- 44/2018

ಡಿ ಡಬ್ಲೂ 1

ಬಗ್ಗೆ ಯಾವುದೇ ಮಾಹಿತಿ ಇಲ್ಲ ದಿದ್ದ ರೂ ಕೂಡಾ, ಇದೆ ಎಂದು ಸುಳ್ಳು ಸಾಕ್ಷ ಹೇಳುತ್ತಿದ್ದೇನೆ

ಎಂದರೆ ಸರಿಯಲ್ಲ . ಕಬ್ಬು ಕಳುಹಿಸಿದ ನಂತರ ರವದಿಗೆ ಬೆಂಕಿ ಹಚ್ಚಿ ಖೊಟ್ಟಿ ದಾವೆ ಸಲ್ಲಿಸಿದ್ದಾರೆ

ಎಂದು ಬೇರೆ ರೈತರ ಉದಾಹರಣೆಯಂತೆ ಹೇಳುತ್ತಿದ್ದೇನೆ ಎಂದರೆ ಸರಿ. ಪ್ರಸ್ತು ತ ದಾವೆಯಲ್ಲಿ

ಹಿರೂರ ಗ್ರಾಮ ಲೆಕ್ಕಾಧಿಕಾರಿ ನೀಡಿರುವ ಪ್ರಮಾಣ ಪತ್ರವನ್ನು ನಾನು ನೋಡಿರುವುದಿಲ್ಲ .

ನಾನು ಪ್ರಸ್ತು ತ ದಾವೆಗೆ ಸಂಬಂಧಿಸಿದಂತೆ ಯಾವುದೇ ದಾಖಲೆಯನ್ನು ನೋಡಿರುವುದಿಲ್ಲ

ಎಂದರೆ ಸರಿಯಲ್ಲ ಹಾಗೂ ಇವತ್ತು ನ್ಯಾಯಾಲಯದ ಮುಂದೆ ಸುಳ್ಳು ಸಾಕ್ಷ್ಯ ಹೇಳುತ್ತಿದ್ದೇನೆ

ಎಂದರೆ ಸರಿಯಲ್ಲ .

ಮರು ವಿಚಾರಣೆ

ಬೈಲಹೊಂಗಲದಲ್ಲಿ ಪ್ರತಿವಾದಿ ನಂ.3 ರವರ ಕಚೇರಿ ಇರುವುದಿಲ್ಲ ಬದಲಾಗಿ

ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ ಇರುತ್ತದೆ ಎಂದು ನುಡಿಯುತ್ತಾರೆ.

(ತೆರೆದ ನ್ಯಾಯಾಲಯದಲ್ಲಿ ಬೆರಳಚ್ಚು ಮಾಡಲಾಯಿತು)

ಓ ಹೇ ಕೇ ಸರಿ ಇದೆ.

1 ನೇ ಹೆಚ್ಚು ವರಿ ಸಿವಿಲ್‍ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ

ಸವದತ್ತಿ.

You might also like