Download as txt, pdf, or txt
Download as txt, pdf, or txt
You are on page 1of 1

೦೧ ಎಪ್ರಿಲ್ ೨೦೨೩

ಶ್ರೀಗುರುಭ್ಯೋನ್ನಮ: ಹರಿ:
~~~~~ ಸರ್ವಂ ಖಲ್ವಿದಂ ಬ್ರಹ್ಮ ~~~~~

ಸರ್ವಂ ಖಲ್ವಿದಂ ಬ್ರಹ್ಮ | ತಜ್ಜಲಾನಿತಿ ಶಾಂತ ಉಪಾಸೀತ | ಅಥ ಖಲು ಕ್ರತುಮಯಃ ಪುರುಷ: | ಯಥಾಕ್ರತುರಸ್ಮಿಲ್ಲೋಕೇ
ಪುರುಷೋ ಭವತಿ ತಥೇತಃ ಪ್ರೇತ್ಯ ಭವತಿ | ಸ ಕ್ರತುಂ ಕುರ್ವೀತ ||
ಮನೋಮಯಃ ಪ್ರಾಣಶರೀರೋ ಭಾರೂಪಃ ಸತ್ಯಸಂಕಲ್ಪ ಆಕಾಶಾತ್ಮಾ ಸರ್ವಕರ್ಮಾ ಸರ್ವಕಾಮಃ ಸರ್ವಗಂಧಃ ಸರ್ವರಸಃ
ಸರ್ವಮಿದಮಭ್ಯತ್ತೋಽವಾಕ್ಯನಾದರಃ ||

ಜೀವರ ಹೃದಯದಲ್ಲಿರುವುದರಿಂದ ಬ್ರಹ್ಮನು ಎಲ್ಲರಿಗೂ ಅತಿಸಮೀಪದಲ್ಲಿರುವವನು. ಅವನೇ ಗುಣಪೂರ್ಣನು, ಪ್ರಳಯ ಜಲದಲ್ಲಿ ಮಲಗಿಯೂ
ಪ್ರವೃತ್ತಿ ಉಳ್ಲವನು, ಎಂದು ಬ್ರಹ್ಮನನ್ನು ನಿಷ್ಠೆಯಿಂದ ಉಪಾಸನೆ ಮಾಡಬೇಕು.

ಜೀವನು ಜ್ಞಾನಪ್ರಧಾನ, ಉಪಾಸನೆಗನುಗುಣವಾಗಿ ಫಲಹೊಂದುವನು. ಅವನು ಎಂಥಹ ಉಪಾಸನೆ ಮಾಡುವನೋ ಮರಣ ಹೊಂದಿದ
ಮೇಲೆ ಮುಕ್ತಿಯಲ್ಲಿ ಅಂತಹ ಉಪಾಸನೆಗೆ ಯೋಗ್ಯವಾದ ಫಲವನ್ನೇ ಪಡೆಯುತ್ತಾನೆ. ಆದ್ದರಿಂದ ಅವನು ಇನ್ನೊಂದು ಬಗೆಯ
ಉಪಾಸನೆಯನ್ನೂ ಮಾಡಬೇಕು.

ಅದು ಹೇಗೆಂದರೆ, ಬ್ರಹ್ಮನು ಪೂರ್ಣವಾದ ಜ್ಞಾನವುಳ್ಳವನೂ, ಬಲರೂಪವಾದ ಶರೀರಉಳ್ಳವನೂ, ಪ್ರಕಾಶ ಸ್ವರೂಪನೂ, ಸತ್ಯಕಾಮನೂ,
ಸತ್ಯ ಸಂಕಲ್ಪನೂ, ಸರ್ವಜ್ಞನೂ, ಸರ್ವೇಶ್ವರನೂ, ಚಿನ್ಮಯವಾದ ಸರ್ವಕರ್ಮ, ಸರ್ವಕಾಮ್ಯದ್ರವ್ಯ, ಸರ್ವಗಂಧ ರಸಾದಿ
ಗುಣಸ್ವರೂಪನೂ, ಸಮಸ್ತ ಜಗತ್ತನ್ನು ಪ್ರವೇಶಿಸಿರುವವನೂ, ನಿರರ್ಥಕವಾಕ್ಯ ನುಡಿಯದವನೂ, ಆತ್ಮಶ್ಲಾಘನಾರಹಿತನೂ ಆಗಿರುವನು
ಎಂದು.

ಗ್ರಂಥಋಣ : ಸರ್ವಮೂಲ ಗ್ರಂಥಗಳು, ಛಾಂದೋಗ್ಯೋಪನಿಷದ್ಭಾಷ್ಯ : ೩.೧೪.೧/೨

🙏🙇 ಓಂ ತತ್ ಸತ್ 🙇🙏
... ಮುದ್ರಾರಾಕ್ಷಸನ ಹಾವಳಿಗಾಗಿ ( Typographical errors) ಕ್ಷಮೆ ಕೋರುತ್ತೇನೆ ...
ಶ್ರೀಹರಿ ಪ್ರೀಯತಾಂ | ಶ್ರೀಮನ್ಮಧ್ವಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು o

You might also like