ML No. 2642.

You might also like

Download as docx, pdf, or txt
Download as docx, pdf, or txt
You are on page 1of 2

ಇವರಿಗೆ,

ಉಪ ನಿರ್ದೇಶಕರು,
ಗಣಿ ಮತ್ತು ಭೂ ವಿಜ್ಞಾನ ಇಲಾಖೆ,
ಬಾಗಲಕೋಟೆ

ರವರಿಂದ,
ರವಿಸಂಗಪ್ಪ ಸರದೇಸಾಯಿ,
ಅಮೀನಗಡ ಐರನ್‌ಓರ್‌ಮೈನ್‌,
ಅಮೀನಗಡ ML No. 2642.

ಮಾನ್ಯರೇ,

ವಿಷಯ: ಗಣಿ ಗುತ್ತಿಗೆ ಸಂಖ್ಯೆ:2642 ಕ್ಕೆ ಕಬ್ಬಿಣದ ಅದಿರು ಪರವಾನಗಿ


(ಬಲ್ಕ್‌ಪರ್ಮಿಟ್‌) ನೀಡುವ ಕುರಿತು.

ಉಲ್ಲೇಖ ನನ್ನ ಅರ್ಜಿ ದಿನಾಂಕ:19.12.2023


---- :

ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ 15.12.2023 ರಂದು ರಾಜ್ಯದಲ್ಲಿ DMF,


NMET, TCS ಗಳನ್ನು ಜಮಾ ಮಾಡಿದ ಪಾವತಿಗಳನ್ನು ಲಗತ್ತಿಸಿ ಪರವಾನಗಿಗಾಗಿ ಅರ್ಜಿಯನ್ನು
ನೀಡಿರುತ್ತೇನೆ, ಹಾಗೂ ದಿನಾಂಕ: 19.12.2023 ರಂದು ಬಲ್ಕ್ ‌ ಪರ್ಮಿಟ್ ‌ ಪರವಾನಗಿಯನ್ನು ನೀಡಲು
ಅರ್ಜಿ ಸಲ್ಲಿಸಿ ಸ್ವೀಕೃತಿಯನ್ನು ಪಡೆದಿರುತ್ತೇನೆ.

ಪರವಾನಗಿಯನ್ನು ನೀಡುವಲ್ಲಿ ವಿಳಂಬವಾಗಿದ್ದು, Prospective Buyer Purchase Invoice ಅನ್ನು


ರದ್ದುಗೊಳಿಸುವ ಸಂಭವವಿದೆ. ಇದರಿಂದ ನನಗೆ ನಷ್ಟ ಉಂಟಾಗುತ್ತದೆ. ಗಣಿ ಗುತ್ತಿಗೆ ಪ್ರದೇಶದಲ್ಲಿ
ದೊರಕುವ ಅದಿರು ಕಡಿಮೆ ದರ್ಜೆಯದ್ದಾಗಿದ್ದು, Low tumbler ನಿಂದ ಕೂಡಿದ್ದು Market ಮಾಡುವುದು
ತುಂಬಾ ಕಷ್ಟಕರವಾದ ಕೆಲಸವಾಗಿದೆ.

ತಾವುಗಳು ತಮ್ಮ ವಾರ್ಷಿಕ ಲೆಕ್ಕ ತಪಾಸಣೆ ವರ್ಷ 20223 ರನ್ವಯ ರಾಜಧನ ಬಾಕಿ
ಇರುವುದು ಎಂದು ತಿಳಿಸಿರುತ್ತೀರಿ, ಅದಕ್ಕೆ ನಾವು ನಮ್ಮ ವಿವರಣೆಯನ್ನು ಸಲ್ಲಿಸಿರುತ್ತೇವೆ.
ನಿಯಮಾನುಸಾರ ವ್ಯತ್ಯಾಸದ ರಾಜಧನ ಪಾವತಿಸುವ ಸಂದರ್ಭ ಒದಗಿದಲ್ಲಿ ಕಂತಿನ ರೂಪದಲ್ಲಿ
ಪಾವತಿಸಿ ಬಾಕಿಯನ್ನು ಚುಕ್ತಾ ಮಾಡುತ್ತೇನೆ. ಆದ್ದರಿಂದ ಪರವಾನಗಿ (ಬಲ್ಕ್‌ಪರ್ಮಿಟ್‌) ನ್ನು ಶೀಘ್ರವಾಗಿ
ಇಂದೇ ಮಂಜೂರು ಮಾಡಲು ವಿನಂತಿಸಿಕೊಳ್ಳುತ್ತಿದ್ದೇನೆ.

ಧನ್ಯವಾದಗಳು

ಸ್ಥಳ: ಬಾಗಲಕೋಟೆ ತಮ್ಮ ವಿಶ್ವಾಸಿ,


ದಿನಾಂಕ:28.12.2023
(ರವಿಸಂಗಪ್ಪ ಸರದೇಸಾಯಿ)

You might also like