Kannada CASE BASED STUDY

You might also like

Download as docx, pdf, or txt
Download as docx, pdf, or txt
You are on page 1of 2

NEW OXFORD SCHOOL - CBSE

Doddathimmasandra, Sarjapura(P), Anekal(T) - 562125

Affiliated to CBSE New Delhi, Affiliation No. 830703

Class:VIII Sub:Kannada Marks:5

CASE BASED STUDY

I. ಈ ಕೆಳಗಿನ ಗದ್ಯ ಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿರಿ:
ಕನ್ನಡ ಕಾವ್ಯಲೋಕಕ್ಕೆ ವಿಶಿಷ್ಟ ಶೈಲಿ ಮತ್ತು ಲಯಗಳ ಮೂಲಕ ನಾದದ ಗುಂಗು ಹಿಡಿಸಿದ ‘ಶಬ್ದಗಾರುಡಿಗ’, ‘ವರಕವಿ’,
‘ಸಾಧನಕೇರಿಯ ಅನರ್ಘ್ಯರತ್ನ’, ‘ಕನ್ನಡದ ಠಾಗೋರ್’, ‘ಸಹಜ ಕವಿ’, ‘ರಸ ಋಷಿ’ಎಂದೆಲ್ಲಾ ಪ್ರಖ್ಯಾತರಾಗಿರುವ ಶ್ರೇಷ್ಠ ಕವಿ ‘ದ.
ರಾ. ಬೇಂದ್ರೆ’. ಜಾನಪದ ಧಾಟಿಯಿಂದ ಪ್ರೇರೇಪಿತರಾಗಿಜಾನಪದ ಸೊಗಡಿನ ಆಡುಭಾಷೆಯ ದೇಶೀ ಶೈಲಿಯನ್ನು ಸಮರ್ಥವಾಗಿ
ಬಳಸಿಕೊಂಡ ದೇಸೀಯ ಕವಿ.ಸುಶ್ರಾವ್ಯವಾಗಿ ಹಾಡಲು ಪೂರಕವಾಗುವಂತಹ ನಾದಮಾಧುರ್ಯವನ್ನು ತಮ್ಮ ರಚನೆಗಳಲ್ಲಿ
ತುಂಬಿದರಸಕವಿ. ‘ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ’ ಎಂದು ಜೀವನವನ್ನು ಸರಳವಾಗಿ ವ್ಯಾಖ್ಯಾನಿಸಿದ
ಧೀಮಂತ ಕವಿ.
ಇವರ ಪೂರ್ಣ ಹೆಸರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಕಾವ್ಯನಾಮ ಅಂಬಿಕಾತನಯದತ್ತ.ಜನಿಸಿದ್ದು ಮಾಘಶುದ್ಧ
'ಗುರುಪ್ರತಿಪದಾ' ಮನ್ಮಥನಾಮ ಸಂವತ್ಸರ 1896 ಜನವರಿ 31 ಧಾರವಾಡದಮಂಗಳವಾರಪೇಟೆಯ ಪೋತನೀಸ್ ಗಲ್ಲಿಯಲ್ಲಿದ್ದ
ಗುಣಾರಿಯವರ ಮನೆಯಲ್ಲಿ. ಅರ್ಥಾತ್ ಅಜ್ಜಿಗಂಗೂಬಾಯಿ ಮನೆಯಲ್ಲಿ. ತಂದೆ ರಾಮಚಂದ್ರ ಪಂತರು, ತಾಯಿ ಅಂಬೂತಾಯಿ
ಅಂಬಿಕೆ(ಅಂಬವ್ವ).

ಪ್ರಶ್ನೆಗಳು:
1 ಬೇಂದ್ರೆಯವರು ಯಾವ ಹೆಸರುಗಳಿಂದ ಪ್ರಖ್ಯಾತರಾಗಿದ್ದಾರೆ?

______________________________________________________________________

______________________________________________________________________

2. ಬೇಂದ್ರೆಯವರನ್ನು ದೇಸೀಯ ಕವಿ ಎಂದು ಏಕೆ ಕರೆಯುತ್ತಾರೆ?

______________________________________________________________________

______________________________________________________________________

3. ಬೇಂದ್ರೆಯವರು ಹುಟ್ಟಿದ್ದು ಎಂದು?

______________________________________________________________________

______________________________________________________________________

4. ಬೇಂದ್ರೆಯವರು ಜೀವನವನ್ನು ಹೇಗೆ ವ್ಯಾಖ್ಯಾನಿಸಿದ್ದಾರೆ?

CASE BASED STUDY 2

I. ಈ ಕೆಳಗಿನ ಗದ್ಯ ಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿರಿ:
ಪೂಜನೀಯ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಕೃತಿಗಳು ಶ್ರವ್ಯ ಪರಂಪರೆಯಲ್ಲೂ ಉಳಿದು ಬೆಳೆದುಬಂದಿವೆ.
ಸಂಸ್ಕೃತದಲ್ಲಿರುವ ರಾಮಾಯಣ ಮತ್ತು ಮಹಾಭಾರತವನ್ನು ಎಲ್ಲಾ ಭಾಷೆಗಳಲ್ಲೂ ರಚಿಸಿದ್ದಾರೆ. ವೇದವ್ಯಾಸರು ಸಂಸ್ಕೃತದಲ್ಲಿ
ರಚಿಸಿದ ಮಹಾಭಾರತವನ್ನು ಆಧಾರವಾಗಿರಿಸಿಕೊಂಡು ಪಂಪ, ರನ್ನ, ಕುಮಾರವ್ಯಾಸ ಮೊದಲಾದವರು ಕನ್ನಡದಲ್ಲಿ ಕಾವ್ಯ
ರಚಿಸಿದರು. ರಾಮಾಯಣ ಮಹಾಭಾರತ ಕಾವ್ಯಗಳು ಉತ್ತಮಗುಣ, ಸ್ವಭಾವಗಳನ್ನು ರೂಢಿಸಿಕೊಳ್ಳದ ವ್ಯಕ್ತಿ ಎಷ್ಟೇ ರೂಪ
ಲಾವಣ್ಯ, ಸಂಪತ್ತು, ಶೌರ್ಯ, ಸಾಹಸ, ವೀರತನವನ್ನು ಪಡೆದಿದ್ದರೂ ಸ್ವತಃ ಆತನಿಗಾಗಲಿ, ಆತನ ಹಿರಿಯರಿಗಾಗಲಿ ಯಾವುದೇ
ಉಪಯೋಗವಿಲ್ಲ. ಇಂಥವರಿಂದ ಇಡೀ ವಂಶವನ್ನೇ ನಾಶಮಾಡುತ್ತವೆ ಎಂಬ ಸಂದೇಶವನ್ನು ಸಾರುತ್ತವೆ.
ನಮ್ಮವರೊಳಗಿನ ದ್ವೇಷಾಸೂಯೆಗಳು ನಮ್ಮ ಮನವನ್ನೂ ಮನೆಯನ್ನೂ ನಾಶಪಡಿಸುತ್ತವೆಎಂಬುದಕ್ಕೆ “ಮಹಾಭಾರತ” ಒಂದು
ನಿದರ್ಶನವಾಗಿದೆ ದುರ್ಯೋಧನನ ಹಠದಿಂದ ಕೃಷ್ಣಸಂಧಾನವು ಮುರಿದುಬೀಳುತ್ತದೆ. ಯುದ್ಧ ಅನಿವಾರ್ಯವಾದಾಗ
ಧರ್ಮಪಕ್ಷಪಾತಿಯಾದ ಕೃಷ್ಣನು ಭೇದತಂತ್ರವನ್ನು ಬಳಸಿ ಕರ್ಣನಿಗೆ ಜನ್ಮರಹಸ್ಯವನ್ನು ತಿಳಿಸುತ್ತಾನೆ. ಸಾಮಾನ್ಯನಿಗೆ ಅತಿಯಾದ
ಸಂತೋಷವನ್ನು ನೀಡಬಹುದಾದ ಸಂಗತಿ, ಅಸಾಮಾನ್ಯನೂ ಶೌರ್ಯಕ್ಕೆ, ದಾನಕ್ಕೆ, ಉದಾತ್ತತೆಗೆ, ಕರುಣೆಗೆ ಹೆಸರಾಗಿದ್ದ
ಕರ್ಣನಿಗೆ ಅತೀವವಾದ ಸಂಕಟವನ್ನು ಉಂಟುಮಾಡುತ್ತದೆ. ಅವನ ಸ್ವಾಮಿನಿಷ್ಠೆಯ ಮುಂದೆ ಶ್ರೀಕೃಷ್ಣನೊಡ್ಡಿದ ಪ್ರಲೋಭನೆ
ವ್ಯರ್ಥವಾಗುತ್ತದೆ.

ಪ್ರಶ್ನೆಗಳು :
1. ಮೇಲಿನ ವಾಕ್ಯವೃಂದದಲ್ಲಿ ಇರುವ ಕನ್ನಡ ಕವಿಗಳ ಹೆಸರನ್ನು ಬರೆಯಿರಿ.
________________________________________________________________

________________________________________________________________

2. ಕೃಷ್ಣನು ಕರ್ಣನಿಗೆ ಜನ್ಮರಹಸ್ಯವನ್ನು ಏಕೆ ತಿಳಿಸಿದನು?

________________________________________________________________

________________________________________________________________

3. ಕೃಷ್ಣನ ತಂತ್ರ ಏಕೆ ವ್ಯರ್ಥವಾಯಿತು?

________________________________________________________________

________________________________________________________________

4. ಮಹಾಕಾವ್ಯಗಳು ಯಾವ ಸಂದೇಶವನ್ನು ಸಾರುತ್ತವೆ?

________________________________________________________________
_______________________________________________________________
5. ಮೇಲಿನ ವಾಕ್ಯವೃಂದದಲ್ಲಿ ಇರುವ ಯಾವುದಾದರೂ ನಾಲ್ಕು ಆಗಮ ಸಂಧಿಯನ್ನು ಬಿಡಿಸಿ ಬರೆಯಿರಿ.
________________________________________________________________

________________________________________________________________

You might also like