Download as pdf or txt
Download as pdf or txt
You are on page 1of 5

ದೀಪಾವಳಿಯ ಮಹಿಮೆ

ಜನಪದ ಕಥೆ

1. ಸಾಹಿತ್ಯದಲ್ಲಿ ಜನಪದ ಕಥೆಗಳಿಗೆ ಇರುವ ಸ್ಥಾನವೇನು? ಜನಪದ ಕಥೆಗಳು


ಯಾವುದರ ಮೇಲೆ ಬೆಳಕನ್ನು ಚೆಲ್ಲುತ್ತವೆ?
ಉತ್ತರ : ಮಾನವನ ಪುರಾತನ ಸಂಸ್ಕೃತಿಯ ಹಾಗೂ ಸಂಪ್ರದಾಯದ ಮೇಲೆ
ಜನಪದ ಕಥೆಗಳು ಬೆಳಕನ್ನು ಚೆಲ್ಲುತ್ತವೆ. ಇವು ಬಾಯಿಂದ ಬಾಯಿಗೆ ಹರಿದುಬಂದಿರುವ
ಸಾಹಿತ್ಯ ಪ್ರಕಾರವಾಗಿದೆ. ಜನಪದ ಕಥೆಗಳು ಮಾನವ ಸಮಾಜ, ಸಂಸ್ಕೃತಿ ಮತ್ತು
ನಾಗರಿಕತೆಗಳ ಬಗ್ಗೆ ಪುರಾವೆ ನೀಡುತ್ತವೆ. ಪ್ರಾಮಾಣಿಕ ವಿಜ್ಞಾನವು ಆಗಿದೆ. ಜನಪದ
ಕಥೆಗಳು ಗದ್ಯ, ಪದ್ಯ ಎರಡರಲ್ಲಿಯೂ ಇರುವುದನ್ನು ಕಾಣಬಹುದು. ಜನಪದರು ಶ್ರಮದ
ಉಪಶಮನಕ್ಕಾಗಿ, ಬಿಡುವಿನ ಸಮಯದಲ್ಲಿ ಕಥೆ, ಗೀತೆ, ನೃತ್ಯಗಳನ್ನು ಮಾಡುತ್ತಿದ್ದರು.

2. ಚಿನ್ನಾರಿ ದೇಶದ ರಾಜ ಯಾರು? ಆತನು ಹೇಗೆ ರಾಜ್ಯವನ್ನು ಆಳುತ್ತಿದ್ದನು ?


ಉತ್ತರ: ಚಿನ್ನಾರಿ ದೇಶದ ರಾಜ ಪ್ರತಾಪ. ಅವನ ರಾಜ್ಯದಲ್ಲಿ ಪ್ರಜೆಗಳು ಸುಖ-
ಸಂತೋಷ ದಿಂದ ಜೀವನ ನಡೆಸುತ್ತಿದ್ದರು. ರಾಜ್ಯದ ಭಂಡಾರದಲ್ಲಿ ಹೇರಳ ಧನವಿದ್ದು,
ಇದರಿಂದ ಪ್ರತಾಪನು ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದನು. ದೊಡ್ಡ ಸೈನ್ಯವನ್ನು
ಕಟ್ಟಿದ್ದನು. ಪ್ರತಾಪನು ಒಳ್ಳೆಯ ಗುಣದ ಜೊತೆಗೆ ಹಟಮಾರಿ, ಅಭಿಮಾನಿ ರಾಜನಾಗಿದ್ದನು.

3. ಪ್ರತಾಪನ ರಾಜ್ಯಕ್ಕೆ ಯಾರು ಬಂದರು? ಅವರಿಗೆ ಸಂತೋಷವಾಗಲು


ಕಾರಣವೇನು ?
ಉತ್ತರ : ಪ್ರತಾಪನ ರಾಜ್ಯಕ್ಕೆ ಕಾಶ್ಮೀರದಿಂದ ಕೇಸರಿ ಮಾರಲು ವ್ಯಾಪಾರಿಗಳು
ಬಂದರು. ಅವರ ಬಳಿ ಭಾರಿ ಮೊತ್ತದ ಕೇಸರಿ ಇತ್ತು. ಪ್ರತಾಪನು ವ್ಯಾಪಾರಿಗಳ ಬಳಿಯಿಂದ
ಕೇಸರಿಯನ್ನು ಭಾರಿ ಮೊತ್ತವನ್ನು ಕೊಟ್ಟು ಖರೀದಿಸಿದನು. ಇದರಿಂದ ಕೇಸರಿ
ವ್ಯಾಪಾರಿಗಳಿಗೆ ಸಂತೋಷವಾಯಿತು.

4. ಲಕ್ಷ್ಮಿ ದೇವಿಗೆ ಅಪಮಾನ ಮಾಗಲು ಕಾರಣವೇನು ?


ಉತ್ತರ : ಲಕ್ಷ್ಮಿ ದೇವಿಗೆ ಅಪಮಾನ ವಾಗಲು ಕಾರಣವೇನೆಂದರೆ, ಚಿನ್ನಾರಿ ರಾಜ್ಯದ
ರಾಜ ಪ್ರತಾಪನು ಕಾಶ್ಮೀರದ ವ್ಯಾಪಾರಿಗಳ ಕೇಸರಿಯನ್ನು ಖರೀದಿಸಿ, ಅವರ ಎದುರೇ
ಎಲ್ಲಾ ಕೇಸರಿಯನ್ನು ಗೊಬ್ಬರದ ಗುಂಡಿಗೆ ಸುರಿಸಿದನು. ಅದನ್ನು ಕಂಡು ಲಕ್ಷ್ಮೀ ದೇವಿಗೆ
ಅಪಮಾನ ವಾಯಿತು. ಶ್ರೀಮಂತನಾಗಿ ಮೆರೆಯುತ್ತಿರುವ ಪ್ರತಾಪನ ಇಳಿಸಬೇಕೆಂದು
ನಿರ್ಧರಿಸಿದಳು.

1
5. ಲಕ್ಷ್ಮಿ ದೇವತೆ ರಾಜಾ ಪ್ರತಾಪನ ಸೊಕ್ಕನ್ನು ಇಳಿಸಲು ಏನು ಮಾಡಿದಳು ?
ಉತ್ತರ : ಲಕ್ಷ್ಮಿ ದೇವತೆ ಪ್ರತಾಪನ ಸೊಕ್ಕನ್ನು ಇಳಿಸಲು ನಿರ್ಧರಿಸಿದ ನಂತರ,
ಪ್ರತಾಪನು ಕೆಲವೇ ದಿನಗಳಲ್ಲಿ ಜೂಜಾಡುವುದು ಕಲಿತ. ತನ್ನ ಎಲ್ಲಾ ಸಂಪತ್ತನ್ನು
ಜೂಜಿನಲ್ಲಿ ಸೋತು ನಿರ್ಗತಿಕ ನಾದನು. ಶತ್ರುಗಳು ಅವನ ರಾಜ್ಯದ ಮೇಲೆ ಆಕ್ರಮಣ
ಮಾಡಿದ ಕಾರಣ ರಾಜ್ಯ ಕೈತಪ್ಪಿತು.

6. ರಾಜ್ಯವನ್ನು ಕಳೆದುಕೊಂಡ ಪ್ರತಾಪ ಏನು ಮಾಡಿದ? ಜೀವನವನ್ನು ಹೇಗೆ


ನಡೆಸಿದ?
ರಾಜ್ಯವನ್ನು ಕಳೆದುಕೊಂಡ ಪ್ರತಾಪ ತನ್ನ ಮಗ ಮತ್ತು ಸೊಸೆಯೊಂದಿಗೆ ರಾಜ್ಯವನ್ನು ಬಿಟ್ಟು
3 ರಾತ್ರಿ ಹಗಲು ಪ್ರಯಾಣ ಮಾಡುತ್ತಾ ದೂರದ ರಾಜ್ಯದ ಹೊರಗೆ ಒಂದು ಗುಡಿಸಲು
ಕಟ್ಟಿಕೊಂಡು ಜೀವನ ನಡೆಸತೊಡಗಿದ. ಪ್ರತಾಪ ಮತ್ತು ಅವನ ಮಗ ಬೆಳಗ್ಗೆ ಎದ್ದು
ಕೆಲಸಕ್ಕೆ ಹೋಗುತ್ತಿದ್ದರು. ಕಟ್ಟಿಗೆ ಒಡೆಯುವುದು, ಬಂಡೆ ಸೀಳುವುದು, ಪೈರು ನಾಟಿ
ಮಾಡುವುದು ಹೀಗೆ ಕೆಲಸಗಳನ್ನು ಮಾಡಿ ಜೀವನವನ್ನು ಸಾಗಿಸುತ್ತಿದ್ದನು.

7. ಸುಮಂಗಳ ಯಾರು? ಆಕೆ ತನ್ನ ಮಾವ ಮತ್ತು ಗಂಡನಿಗೆ ಹೇಳಿದ್ದೇನು ?


ಉತ್ತರ : ಸುಮಂಗಳ ಪ್ರತಾಪನ ಸೊಸೆ.
ಇವಳು ಬುದ್ಧಿವಂತೆ. ಅಚ್ಚುಕಟ್ಟಾಗಿ ಸಂಸಾರ ನಡೆಸುತ್ತಾ ಗಂಡ ಮತ್ತು ಮಾವನಿಗೆ
ಧೈರ್ಯ ತುಂಬುತ್ತಿದ್ದಳು. ಅವಳು ಅವರಿಗೆ “ ನೀವು ಕೆಲಸದಿಂದ ಹಿಂದಿರುಗುವಾಗ
ಏನಾದರೂ ಒಂದು ವಸ್ತುವನ್ನು ಮರೆಯದೆ ತನ್ನಿ” ಎಂದು ಹೇಳಿದ್ದಳು.

8. ಪ್ರತಾಪ ಮತ್ತು ಅವನ ಮಗ ಕೆಲಸದಿಂದ ಗುಡಿಸಿಲಿಗೆ ಹಿಂದಿರುಗುವಾಗ ಯಾವ


ವಸ್ತುಗಳನ್ನು ತರುತ್ತಿದ್ದರು ?
ಉತ್ತರ : ಪ್ರತಾಪ ಮತ್ತು ಅವನ ಮಗ ಕೆಲಸದಿಂದ ಹಿಂದಿರುಗುವಾಗ ಪ್ರತಿದಿನ
ಏನಾದರೊಂದು ವಸ್ತು, ಇಟ್ಟಿಗೆ, ಕಲ್ಲು, ಕಟ್ಟಿಗೆ ಇತ್ಯಾದಿ ತರುತ್ತಿದ್ದರು. ಒಂದು ದಿನ
ಬೇರೇನೂ ವಸ್ತು ಸಿಗದಿದ್ದಾಗ, ಮರದ ಬುಡದಲ್ಲಿದ್ದ ಒಂದು ಸತ್ತ ಹಾವನ್ನು ಎತ್ತಿಕೊಂಡು
ಬಂದು ಸುಮಂಗಳೆ ಗೆ ನೀಡಿದರು.

9. ರಾಜ್ಯದಲ್ಲಿ ಕೋಲಾಹಲ ಉಂಟಾಗಲು ಕಾರಣವೇನು? ಅದಕ್ಕೆ ಸುಮಂಗಳ


ಉತ್ತರಿಸಿದ್ದೇನು ?
ಉತ್ತರ : ಒಂದು ದಿನ ನಗರದಲ್ಲಿ ಕೋಲಾಹಲ ಎದ್ದಿತ್ತು. ಪ್ರತಾಪನು ಜನರ ಬಳಿ
ಕಾರಣವೇನೆಂದು ಕೇಳಿದಾಗ, “ ಮಹಾರಾಣಿಯ ವಜ್ರದ ಹಾರ ಕಳುವಾಗಿದೆ. ಹಾರದಲ್ಲಿನ
ವಜ್ರಗಳು ತುಂಬಾ ಬೆಲೆ ಬಾಳುವಂತ ವು. ಮಹಾರಾಣಿ ಸ್ನಾನ ಮಾಡುವ ಮೊದಲು ವಜ್ರದ

2
ಹಾರವನ್ನು ಕಿಟಕಿಯ ಗೂಡಿನಲ್ಲಿ ಇಟ್ಟಿದ್ದಳು. ಅವಳು ನೋಡುನೋಡುತ್ತಿದ್ದಂತೆ, ಒಂದು ಹದ್ದು
ಹಾರಿಬಂದು ಹಾರವನ್ನು ಕಚ್ಚಿಕೊಂಡು ಹೋಯಿತು. ಅದಕ್ಕಾಗಿ ಕೋಲಾಹಲ ಉಂಟಾಗಿದೆ.”
ಎಂದು ಒಬ್ಬ ವ್ಯಕ್ತಿ ಹೇಳಿದನು.
ಈ ವಿಷಯವನ್ನು ಪ್ರತಾಪನಿಂದ ತಿಳಿದ ಸುಮಂಗಳೆ, ಮಹಾರಾಣಿಯ ವಜ್ರದ ಹಾರ
ತಂದುಕೊಟ್ಟರೆ ರಾಜನು ಏನನ್ನು ಉಡುಗೊರೆಯಾಗಿ ಕೊಡುತ್ತಾನೆ ಎಂದು ತಿಳಿದು ಬರಲು
ಕಳುಹಿಸಿದಳು.

10. ಸುಮಂಗಳೆಯ ಮಾತುಗಳು ಪ್ರತಾಪನಿಗೆ ಏಕೆ ಆಶ್ಚರ್ಯ ಉಂಟು ಮಾಡಿದವು?


ಉತ್ತರ : ಪ್ರತಾಪನು ಗುಡಿಸಲಿಗೆ ಬಂದು ರಾಜ್ಯದಲ್ಲಿ ಮುಂತಾದ ಕೋಲಾಹಲವನ್ನು
ಕುರಿತು ಸುಮಂಗಳೆ ಗೆ ಹೇಳಿದಾಗ , ಅವಳು ಸಂತೋಷಗೊಂಡು, ಈಗ ನೀವು ರಾಜನ
ಬಳಿ ಹೋಗಿ ಮಹಾರಾಣಿಯ ವಜ್ರದ ಹಾರವನ್ನು ತಂದುಕೊಟ್ಟರೆ ಏನು ಉಡುಗೊರೆ
ಕೊಡುತ್ತಾರೆಂದು ಖಚಿತಪಡಿಸಿಕೊಳ್ಳಿ ಎಂದು ಹೇಳಿದಳು.ಅವಳ ಮಾತುಗಳನ್ನು ಕೇಳಿ
ಪ್ರತಾಪ ಅಚ್ಚರಿಗೊಂಡು, “ಇದೆಂಥಾ ಮಾತು! ಮಹಾರಾಣಿಯ ವಜ್ರದ ಹಾರ ನಮ್ಮ ಬಳಿ
ಎಲ್ಲಿದೆ ?” ಎಂದು ಕೇಳಿದನು.

11. ಸುಮಂಗಳೆ ರಾಜನ ಆಸ್ತಾನಕ್ಕೆ ಹೋಗಲು ಕಾರಣವೇನು ? ಅವಳು ರಾಜನ ಬಳಿ


ಯಾವ ಕೋರಿಕೆಯನ್ನು ಇಟ್ಟಳು ?
ಉತ್ತರ : ಸುಮಂಗಳೆ ತನ್ನ ಮಾವ ಮತ್ತು ಗಂಡನೊಡನೆ ಅರಮನೆಗೆ ಹೋಗಿ, ಸೆರಗಿನಲ್ಲಿ
ಕಟ್ಟಿಕೊಂಡಿದ್ದ ವಜ್ರದ ಹಾರವನ್ನು ತೆಗೆದು ರಾಜನ ಮುಂದಿಟ್ಟಳು. ಆಗ ರಾಜ
ಸಂತೋಷದಿಂದ “ ನಿನಗೇನು ಬೇಕೆಂದು ಸಂಕೋಚ ಪಡದೆ ಕೇಳು, ಖಂಡಿತ ಕೊಡುತ್ತೇನೆ ”
ಎಂದನು.
ಆಗ ಸುಮಂಗಳೆ, “ ಪ್ರಭು, ನನಗೆ ಧನಕನಕ, ವಸ್ತು, ವಾಹನಾದಿಗಳು ಏನು ಬೇಡ.
ದೀಪಾವಳಿ ಹಬ್ಬದ ದಿನ ರಾತ್ರಿ ಇಡೀ ರಾಜ್ಯದಲ್ಲಿ ಅರಮನೆಯು ಸೇರಿದಂತೆ ಯಾವ
ಮನೆಯಲ್ಲೂ ದೀಪ ಹಚ್ಚಬಾರದು. ದೀಪಾವಳಿ ಆಚರಿಸಿ ದೀಪಗಳನ್ನು ಬೆಳಗಿ ಸಬೇಕೆಂದು
ಇರುವವರು ತನ್ನ ಗುಡಿಸಲಿನ ಸುತ್ತಲೂ ಬೆಳಗಿಸಲಿ” ಎಂದು ಕೋರಿದಳು.

12. ಧನ ಸಂಪತ್ತಿನ ದೇವತೆ ಲಕ್ಷ್ಮಿಗೆ ಆಶ್ಚರ್ಯ ವಾಗಲು ಕಾರಣವೇನು ?


ಉತ್ತರ : ದೀಪಾವಳಿಯ ಶುಭರಾತ್ರಿ ಲಕ್ಷ್ಮಿ ದೇವತೆ ರಾಜ್ಯವನ್ನು ಪ್ರವೇಶಿಸಿದಾಗ ಇಡೀ
ರಾಜ್ಯ ಕತ್ತಲಿನಿಂದ ತುಂಬಿರುವುದನ್ನು ಕಂಡು ಲಕ್ಷ್ಮಿ ಕೋಪಗೊಂಡಳು. ದೀಪಾವಳಿಯ ದಿನ
ತಾನು ಎಲ್ಲರ ಮನೆಗೆ ಬರುವುದು ತಿಳಿದರು ಸಹ ಎಲ್ಲಾ ಕಡೆ ಕತ್ತಲು ತುಂಬಿರುವುದನ್ನು
ನೋಡಿ ಧನ ಸಂಪತ್ತಿನ ದೇವತೆ ಲಕ್ಷ್ಮಿಗೆ ಆಶ್ಚರ್ಯವಾಯಿತು.

13. ಲಕ್ಷ್ಮಿ ದೇವತೆ ಸುಮಂಗಳ ಗುಡಿಸಲಿಗೆ ಬರಲು ಕಾರಣವೇನು?


ಉತ್ತರ : ದೀಪಾವಳಿಯ ರಾತ್ರಿ ಲಕ್ಷ್ಮಿ ದೇವತೆ ರಾಜ್ಯವನ್ನು ಪ್ರವೇಶಿಸಿದಾಗ ಇಡೀ ರಾಜ್ಯ
ಕತ್ತಲಿನಿಂದ ತುಂಬಿರುವುದನ್ನು ಕಂಡು ಕೋಪಗೊಂಡು ಆಶ್ಚರ್ಯದಿಂದ, ದೀಪ ಬೆಳಗಿದ

3
ಮನೆಯನ್ನು ಹುಡುಕುತ್ತ ನಗರದ ಹೊರಗೆ ಬಂದಳು. ಪ್ರತಾಪನ ಗುಡಿಸಲಿನಲ್ಲಿ ಮಾತ್ರ
ದೀಪ ಬೆಳಗುತ್ತಿತ್ತು. ಅದನ್ನು ಕಂಡು ಸಂತೋಷಗೊಂಡು ಲಕ್ಷ್ಮಿ ದೇವತೆ ಸುಮಂಗಳ
ಗುಡಿಸಲಿಗೆ ಬಂದಳು.

14. ಸುಮಂಗಳೆ ತನ್ನ ಗುಡಿಸಲಿನೊಳಗೆ ಬರದಂತೆ ಯಾರನ್ನು ತಡೆದಳು ? ಅವರಿಬ್ಬರ


ನಡುವೆ ನಡೆದ ಮಾತುಕತೆ ಏನು ?
ಉತ್ತರ : ರಾಜ್ಯದ ಹೊರಗೆ ದೀಪ ಬೆಳಗಿದ ಸುಮಂಗಳೆ ಯ ಗುಡಿಸಲನ್ನು ಪ್ರವೇಶಿಸಲು
ಲಕ್ಷ್ಮಿ ದೇವಿ ಬಂದಾಗ, ಕೈಯಲ್ಲಿ ಕೋಲು ಹಿಡಿದು ಸುಮಂಗಳೆ ಬಾಗಿಲಿನಲ್ಲಿಯೇ ಅವಳನ್ನು
ತಡೆದಳು.
ಆಗ ಲಕ್ಷ್ಮೀದೇವಿಯು “ ನನ್ನನ್ನು ತಡೆಯ ಬೇಡ. ದಯಮಾಡಿ ಈ ರಾತ್ರಿ
ಗುಡಿಸಲಿನಲ್ಲಿ ತಂಗಲು ಅವಕಾಶ ಮಾಡಿಕೊಡು” ಎಂದು ಕೇಳಿದಳು. ಅದಕ್ಕೆ ಸುಮಂಗಳ “
ಸಾಧ್ಯವಿಲ್ಲ, ಮಾವ ಮಾಡಿದ ಸಣ್ಣ ತಪ್ಪಿಗೆ ನೀನು ದೊಡ್ಡ ಶಿಕ್ಷೆ ನೀಡಿರುವೆ. ರಾಜ್ಯ,
ಸಂಪತ್ತು, ಎಲ್ಲಾ ಕಳೆದುಕೊಂಡು ನಾವು ನಿರ್ಗತಿಕ ಜೀವನ ನಡೆಸಬೇಕಾಗಿದೆ. ನೀನು
ತುಂಬಾ ಕ್ರೂರಿ” ಎಂದು ಗುಡುಗಿದಳು. ಲಕ್ಷ್ಮೀದೇವಿ, “ ಈ ರಾತ್ರಿ ದೀಪ ಬೆಳಗುತ್ತಿರುವ ಈ
ಗುಡಿಸಲಿನಲ್ಲಿ ತಂಗಲು ನನಗೆ ಅವಕಾಶ ಕೊಟ್ಟರೆ ಮತ್ತೆ ನಿನ್ನ ಮಾವ ಸಿರಿವಂತ
ನಾಗುತ್ತಾನೆ. ಅವನ ರಾಜ್ಯ ಮತ್ತೆ ಲಭಿಸುತ್ತದೆ ” ಎಂದು ಹೇಳಿದಳು.

15. ಲಕ್ಷ್ಮೀದೇವಿ ಸುಮಂಗಳೆಯ ಗುಡಿಸಲನ್ನು ಪ್ರವೇಶಿಸಿದ ನಂತರ ಆದ ಬದಲಾವಣೆಗಳು


ಏನು ?
ಉತ್ತರ: ಲಕ್ಷ್ಮೀದೇವಿ ಸುಮಂಗಳೆಯ ಗುಡಿಸಲನ್ನು ಪ್ರವೇಶಿಸಿದ ಮರು ದಿನ, ಗುಡಿಸಲು
ಇರುವ ಜಾಗದಲ್ಲಿ ಭವ್ಯವಾದ ಮಹಲು ಎದ್ದು ನಿಂತಿತ್ತು. ಸಕಲ ಸಂಪತ್ತಿನಿಂದ ಕೂಡಿದ್ದು,
ಗುಡಿಸಲು ಮುತ್ತು, ರತ್ನ ,ವಜ್ರ, ವೈಡೂರ್ಯ ಗಳ ರಾಶಿ ಹರಡಿತ್ತು. ಪ್ರತಾಪ ಹಣದ
ಸಹಾಯದಿಂದ ಮತ್ತೆ ಸೈನ್ಯ ಕಟ್ಟಿ, ಶತ್ರು ರಾಜನನ್ನು ಸೋಲಿಸಿ ಮತ್ತೆ ರಾಜ್ಯವನ್ನು
ಪಡೆದನು.

16 ಸಂದರ್ಭ ಸಹಿತ ವಿವರಿಸಿ:


“ ನೀವು ಕೆಲಸದಿಂದ ಹಿಂದಿರುಗುವಾಗ ಏನಾದರೊಂದು ವಸ್ತುವನ್ನು ಮರೆಯದೆ ತನ್ನಿ”
ಉತ್ತರ : ಈ ವಾಕ್ಯವನ್ನು ಜನಪದ ಕಥೆ “ ದೀಪಾವಳಿಯ ಮಹಿಮೆ” ಇಂದ ಆರಿಸಲಾಗಿದೆ.
ಈ ಮಾತನ್ನು ಸುಮಂಗಳೆ ತನ್ನ ಮಾವ ಮತ್ತು ಗಂಡನಿಗೆ ಹೇಳಿದಳು.
ಪ್ರತಾಪನು ತನ್ನ ರಾಜ್ಯವನ್ನು ಬಿಟ್ಟು ನಗರದ ಹೊರಗೆ ಗುಡಿಸಿಲಿನಲ್ಲಿ ತನ್ನ ಮಗ
ಮತ್ತು ಸೊಸೆಯೊಂದಿಗೆ ಜೀವನ ನಡೆಸುತ್ತಿದ್ದನು. ಆಗ ಸೊಸೆ ಸುಮಂಗಳೆ ಕೆಲಸದಿಂದ
ಹಿಂದಿರುಗುವಾಗ ನೀವು ಏನಾದರೂ ಒಂದು ವಸ್ತುವನ್ನು ಮರೆಯದೆ ತನ್ನಿ ಎಂದು ಅವರಿಗೆ
ಹೇಳಿದಳು.

4
“ ದೀಪವನ್ನು ನನ್ನ ಗುಡಿಸಲಿನ ಸುತ್ತಲೂ ಬೆಳಗಿಸಲಿ ”
ಉತ್ತರ : ಈ ವಾಕ್ಯವನ್ನು ಜನಪದ ಕಥೆ “ ದೀಪಾವಳಿಯ ಮಹಿಮೆ ” ಇಂದ
ಆರಿಸಲಾಗಿದೆ. ಈ ಮಾತನ್ನು ರಾಜ್ಯದ ಮಾತನ್ನು ರಾಜ್ಯದ ರಾಜನಿಗೆ ಹೇಳಿದಳು.
ಸುಮಂಗಳ ತನ್ನ ಮಾವ ಮತ್ತು ಗಂಡನೊಂದಿಗೆ ರಾಜನ ಬಳಿ ಹೋಗಿ , ಸೆರಗಿನಲ್ಲಿ
ಕಟ್ಟಿಕೊಂಡಿದ್ದ ವಜ್ರದ ಹಾರವನ್ನು ರಾಜನಿಗೆ ನೀಡಿದಳು. ರಾಜ ಸಂತೋಷಗೊಂಡು
ನಿನಗೇನು ಬೇಕೆಂದು ಸಂಕೋಚ ಪಡದೇ ಕೇಳು ಖಂಡಿತ ಕೊಡುತ್ತೇನೆ ಎಂದಾಗ,
ಸುಮಂಗಳೆ “ ನನಗೆ ಧನಕನಕ ವಾಹನಗಳು ಬೇಡ, ದೀಪಾವಳಿಯ ಹಬ್ಬದ ದಿನ ರಾತ್ರಿ
ಇಡೀ ರಾಜ್ಯದಲ್ಲಿ ಅರಮನೆಯು ಒಳಗೊಂಡಂತೆ ಯಾವ ಮನೆಯಲ್ಲಿಯೂ ದೀಪ
ಹಚ್ಚಬಾರದು. ದೀಪಗಳನ್ನು ಬೆಳಗಿ ಸಬೇಕೆಂದು ಇರುವವರು ನನ್ನ ಗುಡಿಸಲಿನ ಸುತ್ತಲೂ
ಬೆಳಗಿಸಲಿ ”ಎಂದು ಕೋರಿದಳು.

ಪದಗಳ ಅರ್ಥ :
ಹೇರಳ - ವಿಪುಲ ಭಂಡಾರ - ಖಜಾನೆ
ಆಕ್ರಮಣ- ದಾಳಿ ಅಮೂಲ್ಯ- ಬೆಲೆಬಾಳುವ
ಕೋಲಾಹಲ- ಗಲಾಟೆ ಕನಕ- ಬಂಗಾರ, ಚಿನ್ನ
ವಾಗ್ದಾನ - ವಚನ ನೀಡು

****************************************************************************

You might also like