Download as pdf or txt
Download as pdf or txt
You are on page 1of 10

ಹಣಕಾಸು ಸಚಿವಾಲಯ

2022-23 ನೇ ಸಾಲಿನ ಕೇಂದ್ರ ಬಜೆಟ್ ಮುಖ್ಯಾಂಶಗಳು


Posted On: 01 FEB 2022 1:18PM by PIB Bengaluru

ಕೇಂದ್ರ ಬಜೆಟ್ ಸೂಕ್ಷ್ಮ-ಆರ್ಥಿಕ ಮಟ್ಟದ ಅಂತರ್ಗತ ಕಲ್ಯಾಣಕ್ಕೆ ಗಮನ ಕೇಂದ್ರೀಕರಿಸುವ ಮೂಲಕ ಸ್ಥೂಲ-ಆರ್ಥಿಕ
ಬೆಳವಣಿಗೆಗೆ ಪೂರಕವಾಗಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ
ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2022-23 ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದರು.

ಬಜೆಟ್‌ನ ಪ್ರಮುಖ ಅಂಶಗಳು ಹೀಗಿವೆ:

ಭಾಗ- ಎ
ಭಾರತದ ಆರ್ಥಿಕ ಬೆಳವಣಿಗೆಯು ಶೇ.9.2 ಎಂದು ಅಂದಾಜಿಸಲಾಗಿದ್ದು, ಇದು ಎಲ್ಲಾ ದೊಡ್ಡ ಆರ್ಥಿಕತೆಗಳ ಪೈಕಿ
ಅತ್ಯಧಿಕವಾಗಲಿದೆ.
14 ವಲಯಗಳಲ್ಲಿ ಉತ್ಪಾದಕತೆ ಆಧಾರಿತ ಪ್ರೋತ್ಸಾಹ ಯೋಜನೆಯಡಿಯಲ್ಲಿ 60 ಲಕ್ಷ ಹೊಸ ಉದ್ಯೋಗಗಳನ್ನು
ಸೃಷ್ಟಿಸಲಾಗುವುದು.
ಪಿಎಲ್ಐ ಯೋಜನೆಗಳು 30 ಲಕ್ಷ ಕೋಟಿ ರೂ. ಹೆಚ್ಚುವರಿ ಉತ್ಪಾದನೆಯನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿವೆ.
ಭಾರತ @100 ಕ್ಕೆ 25 ವರ್ಷಗಳ ದೀರ್ಘಾವಧಿಯ ಅಮೃತ್ ಕಾಲವನ್ನು ಪ್ರವೇಶಿಸುತ್ತಿದ್ದು, ಬಜೆಟ್ ನಾಲ್ಕು ಆದ್ಯತೆಗಳ ಜೊತೆಗೆ
ಬೆಳವಣಿಗೆಗೆ ಉತ್ತೇಜನವನ್ನು ನೀಡುತ್ತದೆ:

ಪಿಎಂ ಗತಿಶಕ್ತಿ
ಅಂತರ್ಗತ ಅಭಿವೃದ್ಧಿ
ಉತ್ಪಾದಕತೆ ವರ್ಧನೆ ಮತ್ತು ಹೂಡಿಕೆ, ವಿನೂತನ ಉದ್ಯಮಗಳು, ಇಂಧನ ಪರಿವರ್ತನೆ ಮತ್ತು ಹವಾಮಾನ ಕ್ರಿಯೆ.
ಹೂಡಿಕೆಗಳ ಹಣಕಾಸು

ಪಿಎಂ ಗತಿಶಕ್ತಿ

ಪಿಎಂ ಗತಿಶಕ್ತಿಗೆ ರಸ್ತೆಗಳು, ರೈಲ್ವೆ, ವಿಮಾನ ನಿಲ್ದಾಣಗಳು, ಬಂದರುಗಳು, ಸಮೂಹ ಸಾರಿಗೆ, ಜಲಮಾರ್ಗಗಳು ಮತ್ತು ಲಾಜಿಸ್ಟಿಕ್ಸ್
ಮೂಲಸೌಕರ್ಯಗಳು ಏಳು ಚಾಲಕ ಎಂಜಿನ್‌ಗಳಾಗಿವೆ.

ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್

ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ನ ವ್ಯಾಪ್ತಿಯು ಆರ್ಥಿಕ ಪರಿವರ್ತನೆ, ತಡೆರಹಿತ ಬಹುಮಾದರಿ ಸಂಪರ್ಕ ಮತ್ತು
ಲಾಜಿಸ್ಟಿಕ್ಸ್ ದಕ್ಷತೆಗಾಗಿ ಏಳು ಎಂಜಿನ್‌ಗಳನ್ನು ಒಳಗೊಂಡಿದೆ.
ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್‌ನಲ್ಲಿ ಈ 7 ಎಂಜಿನ್‌ಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಪಿಎಂ ಗತಿಶಕ್ತಿ
ಚೌಕಟ್ಟಿನೊಂದಿಗೆ ರೂಪಿಸಲಾಗುತ್ತದೆ.

ರಸ್ತೆ ಸಾರಿಗೆ
ರಾಷ್ಟ್ರೀಯ ಹೆದ್ದಾರಿಗಳ ಜಾಲವನ್ನು 2022-23 ರಲ್ಲಿ 25,000 ಕಿಮೀ ವಿಸ್ತರಿಸಲಾಗುವುದು.
ರಾಷ್ಟ್ರೀಯ ಹೆದ್ದಾರಿಗಳ ಜಾಲ ವಿಸ್ತರಣೆಗೆ 20000 ಕೋಟಿ ರೂ.

ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ಸ್

2022-23 ರಲ್ಲಿ ನಾಲ್ಕು ಸ್ಥಳಗಳಲ್ಲಿ ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್‌ಗಳ ಅನುಷ್ಠಾನಕ್ಕಾಗಿ ಪಿಪಿಪಿ ಮಾದರಿಯಲ್ಲಿ ಗುತ್ತಿಗೆ
ನೀಡಲಾಗುವುದು.

ರೈಲ್ವೆ

ಸ್ಥಳೀಯ ವ್ಯವಹಾರಗಳು ಮತ್ತು ಪೂರೈಕೆ ಸರಪಳಿಗಳಿಗೆ ಸಹಾಯ ಮಾಡಲು ಒಂದು ನಿಲ್ದಾಣ ಒಂದು ಉತ್ಪನ್ನದ ಪರಿಕಲ್ಪನೆ.
2022-23 ರಲ್ಲಿ ದೇಶೀಯ ವಿಶ್ವ ದರ್ಜೆಯ ತಂತ್ರಜ್ಞಾನ ಮತ್ತು ಸಾಮರ್ಥ್ಯ ವರ್ಧನೆಗಾಗಿ 2000 ಕಿಮೀ ರೈಲ್ವೆ ಜಾಲವನ್ನು
‘ಕವಚ್’ ಅಡಿಯಲ್ಲಿ ತರಲಾಗುವುದು.
ಮುಂದಿನ ಮೂರು ವರ್ಷಗಳಲ್ಲಿ 400 ಹೊಸ ಪೀಳಿಗೆಯ ವಂದೇ ಭಾರತ್ ರೈಲುಗಳನ್ನು ತಯಾರಿಸಲಾಗುವುದು.
ಮಲ್ಟಿಮೋಡಲ್ ಲಾಜಿಸ್ಟಿಕ್ಸ್‌ಗಾಗಿ 100 ಪಿಎಂ ಗತಿಶಕ್ತಿ ಕಾರ್ಗೋ ಟರ್ಮಿನಲ್‌ಗಳನ್ನು ಮುಂದಿನ ಮೂರು ವರ್ಷಗಳಲ್ಲಿ
ಅಭಿವೃದ್ಧಿಪಡಿಸಲಾಗುವುದು.

ಪರ್ವತಮಾಲಾ

ರಾಷ್ಟ್ರೀಯ ರೋಪ್‌ವೇಸ್ ಅಭಿವೃದ್ಧಿ ಕಾರ್ಯಕ್ರಮ, ಪರ್ವತಮಾಲಾವನ್ನು ಪಿಪಿಪಿ ಮಾದರಿಯಲ್ಲಿ


ಅನುಷ್ಠಾನಗೊಳಿಸಲಾಗುವುದು.
2022-23 ರಲ್ಲಿ 60 ಕಿಮೀ ಉದ್ದದ 8 ರೋಪ್‌ವೇ ಯೋಜನೆಗಳಿಗೆ ಕಾಮಗಾರಿ ಗುತ್ತಿಗೆ ನೀಡಲಾಗುವುದು.

ಅಂತರ್ಗತ ಅಭಿವೃದ್ಧಿ
ಕೃಷಿ

ಗೋಧಿ ಮತ್ತು ಭತ್ತದ ಖರೀದಿಗಾಗಿ 1.63 ಕೋಟಿ ರೈತರಿಗೆ 2.37 ಲಕ್ಷ ಕೋಟಿ ರೂ.ನೇರ ಪಾವತಿ.
ದೇಶದಾದ್ಯಂತ ರಾಸಾಯನಿಕ ಮುಕ್ತ ಸಹಜ ಕೃಷಿಯನ್ನು ಉತ್ತೇಜಿಸಲಾಗುವುದು. ಆರಂಭಿಕವಾಗಿ ಗಂಗಾ ನದಿಯ ಉದ್ದಕ್ಕೂ 5
ಕಿಮೀ ಅಗಲದ ಕಾರಿಡಾರ್‌ಗಳಲ್ಲಿ ರೈತರ ಜಮೀನುಗಳ ಮೇಲೆ ಗಮನವನ್ನು ಕೇಂದ್ರೀಕರಿಸಲಾಗುವುದು.
ಕೃಷಿ ಮತ್ತು ಗ್ರಾಮೀಣ ಉದ್ಯಮಗಳ ಸ್ಟಾರ್ಟಪ್‌ಗಳಿಗೆ ಹಣಕಾಸು ಒದಗಿಸಲು ಸಂಯೋಜಿತ ಬಂಡವಾಳ ನಿಧಿಯನ್ನು
ನಬಾರ್ಡ್.ಸುಗಮಗೊಳಿಸುತ್ತದೆ.
ಬೆಳೆ ಮೌಲ್ಯಮಾಪನ, ಭೂ ದಾಖಲೆಗಳ ಡಿಜಿಟಲೀಕರಣ, ಕೀಟನಾಶಕಗಳು ಮತ್ತು ಪೋಷಕಾಂಶಗಳ ಸಿಂಪರಣೆಗಾಗಿ 'ಕಿಸಾನ್
ಡ್ರೋನ್ಸ್'.

ಕೆನ್ -ಬೆಟ್ವಾ ಯೋಜನೆ

ಕೆನ್ - ಬೆಟ್ವಾ ಜೋಡಣೆ ಯೋಜನೆಯ ಅನುಷ್ಠಾನಕ್ಕೆ 1400 ಕೋಟಿ ರೂ.ವೆಚ್ಚ.


ಕೆನ್-ಬೆಟ್ವಾ ಜೋಡಣೆ ಯೋಜನೆಯಿಂದ 9.08 ಲಕ್ಷ ಹೆಕ್ಟೇರ್ ರೈತರ ಜಮೀನುಗಳಿಗೆ ನೀರಾವರಿ.

ಎಂಎಸ್ಎಂಇ

ಉದ್ಯಮ್, ಇ-ಶ್ರಮ್, ಎನ್ ಸಿ ಎಸ್ ಮತ್ತು ಅಸೀಮ್ ಪೋರ್ಟಲ್‌ಗಳನ್ನು ಪರಸ್ಪರ ಜೋಡಿಸಲಾಗಿದೆ.


130 ಲಕ್ಷ ಎಂಎಸ್ಎಂಇಗಳಿಗೆ ತುರ್ತು ಸಾಲ ಖಾತ್ರಿ ಯೋಜನೆ (ಇ ಸಿ ಎಲ್ ಜಿ ಎಸ್ ) ಅಡಿಯಲ್ಲಿ ಹೆಚ್ಚುವರಿ ಸಾಲವನ್ನು
ಒದಗಿಸಲಾಗಿದೆ.
ಇ ಸಿ ಎಲ್ ಜಿ ಎಸ್ ಅನ್ನು ಮಾರ್ಚ್ 2023 ರವರೆಗೆ ವಿಸ್ತರಿಸಲಾಗುವುದು.
ಇ ಸಿ ಎಲ್ ಜಿ ಎಸ್ ಅಡಿಯಲ್ಲಿ ಖಾತರಿ ಕವರ್ ಅನ್ನು 50000 ಕೋಟಿ ರೂ.ಗಳಿಂದ ಒಟ್ಟು 5 ಲಕ್ಷ ಕೋಟಿ ರೂ.ಗಳಿಗೆ
ವಿಸ್ತರಿಸಲಾಗುವುದು.
ಮೈಕ್ರೋ ಮತ್ತು ಸ್ಮಾಲ್ ಎಂಟರ್‌ಪ್ರೈಸಸ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್ (ಸಿಜಿಟಿಎಂಎಸ್ಇ) ಅಡಿಯಲ್ಲಿ ಕಿರು ಮತ್ತು ಸಣ್ಣ
ಉದ್ಯಮಗಳಿಗೆ 2 ಲಕ್ಷ ಕೋಟಿ ಹೆಚ್ಚುವರಿ ಸಾಲ.
6000 ಕೋಟಿ ರೂ.ಗಳ ವೆಚ್ಚದಲ್ಲಿ ಎಂಎಸ್ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮತ್ತು ವೇಗಗೊಳಿಸುವ
ಕಾರ್ಯಕ್ರಮವನ್ನು ಹೊರತರಲಾಗುವುದು.

ಕೌಶಲ್ಯ ಅಭಿವೃದ್ಧಿ

ಕೌಶಲ್ಯ ಮತ್ತು ಜೀವನೋಪಾಯಕ್ಕಾಗಿ ಡಿಜಿಟಲ್ ಪರಿಸರ ವ್ಯವಸ್ಥೆ (DESH-ಸ್ಟಾಕ್ ಇ-ಪೋರ್ಟಲ್) ಅನ್ನು ಆನ್‌ಲೈನ್
ತರಬೇತಿಯ ಮೂಲಕ ನಾಗರಿಕರಿಗೆ ಕೌಶಲ್ಯ, ಮರುಕೌಶಲ್ಯ ಅಥವಾ ಕೌಶಲ್ಯವನ್ನು ಹೆಚ್ಚಿಸಲು ಪ್ರಾರಂಭಿಸಲಾಗುವುದು.
'ಡ್ರೋನ್ ಶಕ್ತಿ' ಮತ್ತು ಡ್ರೋನ್-ಆಸ್-ಎ-ಸೇವೆಗೆ (DrAAS) ಅನುಕೂಲವಾಗುವಂತೆ ಸ್ಟಾರ್ಟ್‌ಅಪ್‌ಗಳನ್ನು
ಉತ್ತೇಜಿಸಲಾಗುತ್ತದೆ.

ಶಿಕ್ಷಣ

ಪಿಎಂ ಇ-ವಿದ್ಯಾದ ‘ಒಂದು ತರಗತಿ -ಒಂದು ಟಿವಿ ಚಾನೆಲ್’ ಕಾರ್ಯಕ್ರಮವನ್ನು 200 ಟಿವಿ ಚಾನೆಲ್‌ಗಳಿಗೆ
ವಿಸ್ತರಿಸಲಾಗುವುದು.
ವರ್ಚುವಲ್ ಲ್ಯಾಬ್‌ಗಳು ಮತ್ತು ಸ್ಕಿಲಿಂಗ್ ಇ-ಲ್ಯಾಬ್‌ಗಳನ್ನು ನಿರ್ಣಾಯಕ ಚಿಂತನಾ ಕೌಶಲ್ಯ ಮತ್ತು ಕಲಿಕೆಯ
ವಾತಾವರಣವನ್ನು ಉತ್ತೇಜಿಸಲು ಸ್ಥಾಪಿಸಲಾಗುವುದು.
ಡಿಜಿಟಲ್ ಶಿಕ್ಷಕರ ಮೂಲಕ ತಲುಪಿಸಲು ಉತ್ತಮ ಗುಣಮಟ್ಟದ ಇ-ಕಂಟೆಂಟ್ ಅಭಿವೃದ್ಧಿಪಡಿಸಲಾಗುವುದು.
ವೈಯಕ್ತಿಕ ನೆಲೆಯ ಕಲಿಕಾ ಅನುಭವದೊಂದಿಗೆ ವಿಶ್ವದರ್ಜೆಯ ಗುಣಮಟ್ಟದ ಸಾರ್ವತ್ರಿಕ ಶಿಕ್ಷಣಕ್ಕಾಗಿ ಡಿಜಿಟಲ್
ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು.

ಆರೋಗ್ಯ

ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಗಾಗಿ ಮುಕ್ತ ವೇದಿಕೆಯನ್ನು ಆರಂಭಿಸಲಾಗುವುದು.


ಗುಣಮಟ್ಟದ ಮಾನಸಿಕ ಆರೋಗ್ಯ ಸಮಾಲೋಚನೆ ಮತ್ತು ಆರೈಕೆ ಸೇವೆಗಳಿಗಾಗಿ 'ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ
ಕಾರ್ಯಕ್ರಮ’ ಪ್ರಾರಂಭಿಸಲಾಗುವುದು.
23 ಟೆಲಿ- ಮಾನಸಿಕ ಆರೋಗ್ಯ ಕೇಂದ್ರಗಳ ನೆಟ್‌ವರ್ಕ್ ಅನ್ನು ಸ್ಥಾಪಿಸಲಾಗುವುದು, ಇದಕ್ಕೆ ನಿಮ್ಹಾನ್ಸ್ ನೋಡಲ್
ಕೇಂದ್ರವಾಗಿರುತ್ತದೆ ಮತ್ತು ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ-ಬೆಂಗಳೂರು (ಐಐಐಟಿಬಿ)
ತಂತ್ರಜ್ಞಾನ ಬೆಂಬಲವನ್ನು ಒದಗಿಸುತ್ತದೆ.

ಸಕ್ಷಮ್ ಅಂಗನವಾಡಿ
ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ, ಸಕ್ಷಮ್ ಅಂಗನವಾಡಿ ಮತ್ತು ಪೋಶಣ್ 2.0 ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ
ಸಮಗ್ರ ಪ್ರಯೋಜನಗಳು.
ಎರಡು ಲಕ್ಷ ಅಂಗನವಾಡಿಗಳನ್ನು ಸಕ್ಷಮ್ ಅಂಗನವಾಡಿಗಳಾಗಿ ಮೇಲ್ದರ್ಜೆಗೇರಿಸಲಾಗುವುದು.

ಹರ್ ಘರ್, ನಲ್ ಸೇ ಜಲ್

ಹರ್ ಘರ್, ನಲ್ ಸೇ ಜಲ್ ಅಡಿಯಲ್ಲಿ 2022-23ರಲ್ಲಿ 3.8 ಕೋಟಿ ಮನೆಗಳಿಗೆ ನಲ್ಲಿ ನೀರು ಒದಗಿಸಲು 60,000 ಕೋಟಿ
ರೂ. ಮೀಸಲಿಡಲಾಗಿದೆ.
ಎಲ್ಲರಿಗೂ ವಸತಿ

ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 2022-23ರಲ್ಲಿ 80 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು 48,000 ಕೋಟಿ
ರೂ. ಮೀಸಲಿಡಲಾಗಿದೆ.

ಈಶಾನ್ಯ ಪ್ರದೇಶದ ಪ್ರಧಾನ ಮಂತ್ರಿಯವರ ಅಭಿವೃದ್ಧಿ ಉಪಕ್ರಮ (PM-DevINE)

ಹೊಸ ಯೋಜನೆ PM-DevINE ಈಶಾನ್ಯದಲ್ಲಿ ಮೂಲಸೌಕರ್ಯ ಮತ್ತು ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗೆ


ಧನಸಹಾಯ ಒದಗಿಸಲು ಪ್ರಾರಂಭಿಸಲಾಗಿದೆ.
ಯೋಜನೆಯಡಿಯಲ್ಲಿ ಯುವಕರು ಮತ್ತು ಮಹಿಳೆಯರಿಗೆ ಜೀವನೋಪಾಯ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು 1,500
ಕೋಟಿ ರೂ.ಗಳ ಆರಂಭಿಕ ಹಂಚಿಕೆ ಮಾಡಲಾಗಿದೆ.

ರೋಮಾಂಚಕ ಗ್ರಾಮಗಳ ಕಾರ್ಯಕ್ರಮ

ವಿರಳ ಜನಸಂಖ್ಯೆ, ಸೀಮಿತ ಸಂಪರ್ಕ ಮತ್ತು ಮೂಲಸೌಕರ್ಯ ಹೊಂದಿರುವ ಉತ್ತರದ ಗಡಿಯಲ್ಲಿ ಗಡಿ ಗ್ರಾಮಗಳ
ಅಭಿವೃದ್ಧಿಗಾಗಿ ರೋಮಾಂಚಕ ಗ್ರಾಮಗಳ ಕಾರ್ಯಕ್ರಮ.

ಬ್ಯಾಂಕಿಂಗ್

1.5 ಲಕ್ಷ ಅಂಚೆ ಕಛೇರಿಗಳಲ್ಲಿ ಶೇಕಡಾ 100 ರಷ್ಟು ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಬರಲಿದೆ.
75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕ (ಡಿಬಿಯು) ಗಳನ್ನುವಾಣಿಜ್ಯ ಬ್ಯಾಂಕ್‌ಗಳು ಸ್ಥಾಪಿಸಲಿವೆ.

ಇ- ಪಾಸ್‌ಪೋರ್ಟ್‌

ಎಂಬೆಡೆಡ್ ಚಿಪ್ ಮತ್ತು ಫ್ಯೂಚರಿಸ್ಟಿಕ್ ತಂತ್ರಜ್ಞಾನದೊಂದಿಗೆ ಇ-ಪಾಸ್‌ಪೋರ್ಟ್‌ಗಳನ್ನು ಹೊರತರಲಾಗುವುದು.

ನಗರ ಯೋಜನೆ

ಕಟ್ಟಡದ ಬೈಲಾಗಳ ಆಧುನೀಕರಣ, ಟೌನ್ ಪ್ಲಾನಿಂಗ್ ಸ್ಕೀಮ್‌ಗಳು (ಟಿಪಿಎಸ್), ಮತ್ತು ಟ್ರಾನ್ಸಿಟ್ ಓರಿಯೆಂಟೆಡ್
ಡೆವಲಪ್‌ಮೆಂಟ್ (ಟಿಒಡಿ) ಅನುಷ್ಠಾನಗೊಳಿಸಲಾಗುವುದು.
ನಗರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಬ್ಯಾಟರಿ ವಿನಿಮಯ ನೀತಿಯನ್ನು
ಹೊರತರಲಾಗುವುದು.

ಭೂ ದಾಖಲೆಗಳ ನಿರ್ವಹಣೆ

ಭೂ ದಾಖಲೆಗಳ ಐಟಿ-ಆಧಾರಿತ ನಿರ್ವಹಣೆಗಾಗಿ ವಿಶಿಷ್ಟ ಭೂಮಿ ಗುರುತಿನ ಸಂಖ್ಯೆ.

ವೇಗವರ್ಧಿತ ಕಾರ್ಪೊರೇಟ್ ನಿರ್ಗಮನ

ಸೆಂಟರ್ ಫಾರ್ ಪ್ರೊಸೆಸಿಂಗ್ ಆಕ್ಸಿಲರೇಟೆಡ್ ಕಾರ್ಪೊರೇಟ್ ಎಕ್ಸಿಟ್ (ಸಿ-ಪಿಎಸಿಇ) ಅನ್ನು ಕಂಪನಿಗಳ ತ್ವರಿತ ಮುಚ್ಚುವಿಕೆಗಾಗಿ
ಸ್ಥಾಪಿಸಲಾಗುವುದು.

ಎವಿಜಿಸಿ ಉತ್ತೇಜನಾ ಕಾರ್ಯಪಡೆ

ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್ ಮತ್ತು ಕಾಮಿಕ್ (ಎವಿಜಿಸಿ) ವಲಯದ ಸಾಮರ್ಥ್ಯವನ್ನು ಅರಿತುಕೊಳ್ಳಲು
ಉತ್ತೇಜನಾ ಕಾರ್ಯಪಡೆಯನ್ನು ರಚಿಸಲಾಗುವುದು.
ಟೆಲಿಕಾಂ ವಲಯ

ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆ ಭಾಗವಾಗಿ 5G ಗಾಗಿ ಬಲವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ವಿನ್ಯಾಸ-
ನೇತೃತ್ವದ ಉತ್ಪಾದನೆ ಯೋಜನೆಯನ್ನು ಪ್ರಾರಂಭಿಸಲಾಗುವುದು.

ರಫ್ತು ಉತ್ತೇಜನ

'ಉದ್ಯಮ ಮತ್ತು ಸೇವಾ ಕೇಂದ್ರಗಳ ಅಭಿವೃದ್ಧಿ'ಯಲ್ಲಿ ಪಾಲುದಾರರಾಗಲು ರಾಜ್ಯಗಳನ್ನು ಸಕ್ರಿಯಗೊಳಿಸಲು ವಿಶೇಷ ಆರ್ಥಿಕ
ವಲಯಗಳ ಕಾಯಿದೆಯನ್ನು ಹೊಸ ಕಾಯ್ದೆಯ ಮೂಲಕ ಬದಲಾಯಿಸಲಾಗುವುದು.

ರಕ್ಷಣೆಯಲ್ಲಿ ಆತ್ಮನಿರ್ಭರತೆ

2022-23 ರಲ್ಲಿ ದೇಶೀಯ ಉದ್ಯಮಕ್ಕಾಗಿ ಶೇ.68 ಬಂಡವಾಳ ಖರೀದಿ ಬಜೆಟ್ ಅನ್ನು ಮೀಸಲಿಡಲಾಗಿದೆ. 2021-22ರಲ್ಲಿ
ಇದು ಶೇ.58 ಇತ್ತು.
ರಕ್ಷಣಾ ಆರ್ ಮತ್ತು ಡಿ ಅನ್ನು ಉದ್ಯಮಗಳಿಗೆ ಮುಕ್ತಗೊಳಿಸಲಾಗುವುದು, ಸ್ಟಾರ್ಟ್‌ಅಪ್‌ಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಶೇ.25
ರಕ್ಷಣಾ ಆರ್ ಮತ್ತು ಡಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ.
ಪರೀಕ್ಷೆ ಮತ್ತು ಪ್ರಮಾಣೀಕರಣದ ಅವಶ್ಯಕತೆಗಳನ್ನು ಪೂರೈಸಲು ಸ್ವತಂತ್ರ ನೋಡಲ್ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು.

ವಿನೂತನ ಅವಕಾಶಗಳು

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಜಿಯೋಸ್ಪೇಷಿಯಲ್ ಸಿಸ್ಟಮ್ಸ್ ಮತ್ತು ಡ್ರೋನ್‌ಗಳು, ಸೆಮಿಕಂಡಕ್ಟರ್ ಮತ್ತು ಅದರ ಪರಿಸರ
ವ್ಯವಸ್ಥೆ, ಬಾಹ್ಯಾಕಾಶ ಆರ್ಥಿಕತೆ, ಜಿನೋಮಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್, ಗ್ರೀನ್ ಎನರ್ಜಿ ಮತ್ತು ಕ್ಲೀನ್ ಮೊಬಿಲಿಟಿ
ಸಿಸ್ಟಮ್‌ಗಳಂತಹ ವಿನೂತನ ಅವಕಾಶಗಳಲ್ಲಿ ಆರ್&ಡಿಗಾಗಿ ಸರ್ಕಾರದ ಬೆಂಬಲವನ್ನು ಒದಗಿಸಲಾಗುವುದು.

ಇಂಧನ ಪರಿವರ್ತನೆ ಮತ್ತು ಹವಾಮಾನ ಕ್ರಿಯೆ

2030 ರ ವೇಳೆಗೆ 280 ಗಿಗಾವ್ಯಾಟ್ ಸ್ಥಾಪಿತ ಸೌರಶಕ್ತಿಯ ಗುರಿಯನ್ನು ಪೂರೈಸಲು ಹೆಚ್ಚಿನ ದಕ್ಷತೆಯ ಸೌರ ಮಾಡ್ಯೂಲ್‌ಗಳ
ತಯಾರಿಕೆಗಾಗಿ ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆಗಾಗಿ 19,500 ಕೋಟಿ ರೂ. ಹೆಚ್ಚುವರಿ ಹಂಚಿಕೆ.
ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಶೇ. ಐದರಿಂದ ಏಳರಷ್ಟು ಬಯೋಮಾಸ್ ಉಂಡೆಗಳನ್ನು ಉರಿಸಲಾಗುವುದು.

ವಾರ್ಷಿಕವಾಗಿ 38 ಎಂಎಂಟಿ CO2 ಉಳಿತಾಯ

ರೈತರಿಗೆ ಹೆಚ್ಚುವರಿ ಆದಾಯ ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶಗಳು,


ಕೃಷಿ ಕ್ಷೇತ್ರಗಳಲ್ಲಿ ಹುಲ್ಲು ಸುಡುವುದನ್ನು ತಪ್ಪಿಸಲು ಸಹಾಯ.
ಕಲ್ಲಿದ್ದಲು ಅನಿಲೀಕರಣ ಮತ್ತು ಕಲ್ಲಿದ್ದಲನ್ನು ಉದ್ಯಮಕ್ಕೆ ರಾಸಾಯನಿಕಗಳಾಗಿ ಪರಿವರ್ತಿಸಲು ನಾಲ್ಕು ಪ್ರಾಯೋಗಿಕ
ಯೋಜನೆಗಳನ್ನು ಸ್ಥಾಪಿಸಲಾಗುವುದು
ಕೃಷಿ-ಅರಣ್ಯವನ್ನು ಕೈಗೊಳ್ಳಲು ಬಯಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ರೈತರಿಗೆ ಆರ್ಥಿಕ ಬೆಂಬಲ.

ಸಾರ್ವಜನಿಕ ಬಂಡವಾಳ ಹೂಡಿಕೆ

2022-23 ರಲ್ಲಿ ಖಾಸಗಿ ಹೂಡಿಕೆ ಮತ್ತು ಬೇಡಿಕೆಯನ್ನು ಹೆಚ್ಚಿಸಲು ಸಾರ್ವಜನಿಕ ಹೂಡಿಕೆಉ ಮುಂದುವರಿಕೆ.
ಬಂಡವಾಳ ವೆಚ್ಚವು ಪ್ರಸಕ್ತ ವರ್ಷದಲ್ಲಿರುವ 5.54 ಲಕ್ಷ ಕೋಟಿ ರೂ.ಗಳಿಂದ 2022-23 ರಲ್ಲಿ 7.50 ಲಕ್ಷ ಕೋಟಿ ರೂ.ಗೆ
ಶೇ.35.4 ರಷ್ಟು ತೀವ್ರವಾಗಿ ಏರಿದೆ.
2022-23 ರಲ್ಲಿ ಜಿಡಿಪಿಯ ಶೇ.2.9 ರಷ್ಟಿರಲಿದೆ.
ಕೇಂದ್ರ ಸರ್ಕಾರದ 'ಪರಿಣಾಮಕಾರಿ ಬಂಡವಾಳ ವೆಚ್ಚ' 2022-23ರಲ್ಲಿ 10.68 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಇದು ಜಿಡಿಪಿಯ ಸುಮಾರು ಶೇ.4.1.

ಗಿಫ್ಟ್-ಐ ಎಫ್ ಎಸ್ ಸಿ

ಗಿಫ್ಟ್ ನಗರದಲ್ಲಿ ವಿಶ್ವದರ್ಜೆಯ ವಿದೇಶಿ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳನ್ನು ಆರಂಭಿಸಲು ಅನುಮತಿಸಲಾಗಿದೆ.

ಅಂತರಾಷ್ಟ್ರೀಯ ಮಧ್ಯಸ್ಥಿಕೆ ಮಂಡಳಿ ಅಡಿಯಲ್ಲಿ ವಿವಾದಗಳನ್ನು ಸಕಾಲಿಕವಾಗಿ ಇತ್ಯರ್ಥಪಡಿಸಲು ಅಂತರರಾಷ್ಟ್ರೀಯ


ಮಧ್ಯಸ್ಥಿಕೆ ಕೇಂದ್ರವನ್ನು ಸ್ಥಾಪಿಸಲಾಗುವುದು.

ಸಂಪನ್ಮೂಲಗಳ ಕ್ರೋಢೀಕರಣ

ಡೇಟಾ ಸೆಂಟರ್‌ಗಳು ಮತ್ತು ಎನರ್ಜಿ ಸ್ಟೋರೇಜ್ ಸಿಸ್ಟಮ್‌ಗಳಿಗೆ ಮೂಲಸೌಕರ್ಯ ಸ್ಥಾನಮಾನ ನೀಡಲಾಗುವುದು.


ವೆಂಚರ್ ಕ್ಯಾಪಿಟಲ್ ಮತ್ತು ಪ್ರೈವೇಟ್ ಇಕ್ವಿಟಿ ಕಳೆದ ವರ್ಷ 5.5 ಲಕ್ಷ ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡಿದ್ದು, ಇದು ಅತಿ
ದೊಡ್ಡ ಸ್ಟಾರ್ಟ್ ಅಪ್ ಮತ್ತು ಬೆಳವಣಿಗೆಯ ಪರಿಸರ ವ್ಯವಸ್ಥೆಗೆ ಅನುಕೂಲ ಮಾಡಿಕೊಟ್ಟಿದೆ. ಈ ಹೂಡಿಕೆಯನ್ನು ಹೆಚ್ಚಿಸಲು
ಸಹಾಯ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
ಸಂಯೋಜಿತ ನಿಧಿಗಳ ಮೂಲಕ ವಿನೂತನ ವಲಯಗಳಿಗೆ ಉತ್ತೇಜನ.
ಹಸಿರು ಮೂಲಸೌಕರ್ಯಕ್ಕಾಗಿ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಸಾರ್ವಭೌಮ ಹಸಿರು ಬಾಂಡ್‌ಗಳನ್ನು ತರಲಾಗುವುದು.

ಡಿಜಿಟಲ್ ರೂಪಾಯಿ

2022-23 ರಿಂದ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಡಿಜಿಟಲ್ ರೂಪಾಯಿಯ ಪರಿಚಯ.


ರಾಜ್ಯಗಳಿಗೆ ಹೆಚ್ಚಿನ ಹಣಕಾಸು ಅವಕಾಶ ಒದಗಿಸುವುದು

ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ಹಣಕಾಸು ನೆರವು ಯೋಜನೆಗಾಗಿ ವರ್ಧಿತ ವೆಚ್ಚ.


ಬಜೆಟ್ ಅಂದಾಜುಗಳಲ್ಲಿ 10,000 ಕೋಟಿ ರೂ.ಗಳಿಂದ ಪ್ರಸಕ್ತ ವರ್ಷಕ್ಕೆ 15,000 ಕೋಟಿ ರೂ.ಪರಿಷ್ಕೃತ ಅಂದಾಜು.
ಆರ್ಥಿಕತೆಯಲ್ಲಿ ಒಟ್ಟಾರೆ ಹೂಡಿಕೆಗಳನ್ನು ವೇಗಗೊಳಿಸಲು ರಾಜ್ಯಗಳಿಗೆ ಸಹಾಯ ಮಾಡಲು 2022-23 ರಲ್ಲಿ 1 ಲಕ್ಷ ಕೋಟಿ
ರೂ.ಹಂಚಿಕೆ: ಐವತ್ತು ವರ್ಷಗಳ ಬಡ್ಡಿ ರಹಿತ ಸಾಲಗಳು.
2022-23 ರಲ್ಲಿ, ರಾಜ್ಯಗಳಿಗೆ ಜಿ ಎಸ್ ಡಿ ಪಿಯ ಶೇ.4 ರಷ್ಟು ವಿತ್ತೀಯ ಕೊರತೆಯನ್ನು ಅನುಮತಿಸಲಾಗುವುದು, ಅದರಲ್ಲಿ
ಶೇ.0.5 ವಿದ್ಯುತ್ ವಲಯದ ಸುಧಾರಣೆಗಳಿಗೆ ಸಂಬಂಧಿಸಿರುತ್ತದೆ.

ವಿತ್ತೀಯ ನಿರ್ವಹಣೆ

2021-22ರ ಬಜೆಟ್ ಅಂದಾಜುಗಳು: 34.83 ಲಕ್ಷ ಕೋಟಿ ರೂ.


2021-22ರ ಪರಿಷ್ಕೃತ ಅಂದಾಜುಗಳು: 37.70 ಲಕ್ಷ ಕೋಟಿ ರೂ.
2022-23 ರಲ್ಲಿ ಒಟ್ಟು ವೆಚ್ಚ 39.45 ಲಕ್ಷ ಕೋಟಿ ರೂ.ಎಂದು ಅಂದಾಜಿಸಲಾಗಿದೆ
2022-23 ರಲ್ಲಿ ಸಾಲವನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿಗಳು 22.84 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಪ್ರಸಕ್ತ ವರ್ಷದಲ್ಲಿ ವಿತ್ತೀಯ ಕೊರತೆ: ಜಿಡಿಪಿಯ ಶೇ.6.9 (ಬಜೆಟ್ ಅಂದಾಜುಗಳಲ್ಲಿ ಶೇ.6.8 ಇತ್ತು).
2022-23 ರಲ್ಲಿ ವಿತ್ತೀಯ ಕೊರತೆಯು ಜಿಡಿಪಿಯ ಶೇ.6.4 ಎಂದು ಅಂದಾಜಿಸಲಾಗಿದೆ.

ಭಾಗ - ಬಿ

ನೇರ ತೆರಿಗೆಗಳು

ಸ್ಥಿರ ಮತ್ತು ಉತ್ತಮ ತೆರಿಗೆ ಪದ್ಧತಿಯ ನೀತಿಯನ್ನು ಮುಂದುವರೆಸಲು


ನಂಬಲರ್ಹ ತೆರಿಗೆ ಪದ್ಧತಿಯನ್ನು ಸ್ಥಾಪಿಸುವ ದೃಷ್ಟಿಕೋನ.
ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಲು ಮತ್ತು ದಾವೆಗಳನ್ನು ಕಡಿಮೆ ಮಾಡಲು.

ಹೊಸ 'ಅಪ್ ಡೇಟೆಡ್ ರಿಟರ್ನ್' ಅನ್ನು ಪರಿಚಯಿಸಲಾಗುತ್ತಿದೆ

ಹೆಚ್ಚುವರಿ ತೆರಿಗೆ ಪಾವತಿಯ ಮೇಲೆ ಅಪ್ ಡೇಟೆಡ್ ರಿಟರ್ನ್ ಅನ್ನು ಸಲ್ಲಿಸಲು ಅವಕಾಶ.
ಮೌಲ್ಯಮಾಪಕನಿಗೆ ಆದಾಯ ತಪ್ಪಿಹೋಗಿರುವ ಆದಾಯವನ್ನು ಘೋಷಿಸಲು ಅನುವು ಮಾಡಿಕೊಡುತ್ತದೆ.
ಇದನ್ನು ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದಿಂದ ಎರಡು ವರ್ಷಗಳಲ್ಲಿ ಸಲ್ಲಿಸಬಹುದು.

ಸಹಕಾರ ಸಂಘಗಳು

ಸಹಕಾರಿ ಸಂಘಗಳು ಪಾವತಿಸುವ ಪರ್ಯಾಯ ಕನಿಷ್ಠ ತೆರಿಗೆಯನ್ನು ಶೇಕಡಾ 18.5 ರಿಂದ ಶೇಕಡಾ 15 ಕ್ಕೆ ಇಳಿಸಲಾಗಿದೆ.
ಸಹಕಾರ ಸಂಘಗಳು ಮತ್ತು ಕಂಪನಿಗಳಿಗೆ ಸಮಾನ ಅವಕಾಶ ನೀಡುತ್ತದೆ.
1 ಕೋಟಿ ರೂ.ಗಿಂತ ಹೆಚ್ಚು ಮತ್ತು 10 ಕೋಟಿ ರೂ.ವರೆಗಿನ ಒಟ್ಟು ಆದಾಯ ಹೊಂದಿರುವ ಸಹಕಾರಿ ಸಂಘಗಳ ಮೇಲಿನ
ಸರ್ಚಾರ್ಜ್ ಅನ್ನು ಶೇಕಡಾ 12 ರಿಂದ ಶೇಕಡಾ 7 ಕ್ಕೆ ಇಳಿಸಲಾಗಿದೆ.

ವಿಕಲಾಂಗ ವ್ಯಕ್ತಿಗಳಿಗೆ ತೆರಿಗೆ ವಿನಾಯಿತಿ

ವಿಮಾ ಯೋಜನೆಯಿಂದ ಬರುವ ವರ್ಷಾಶನ ಮತ್ತು ಒಟ್ಟು ಮೊತ್ತದ ಪಾವತಿಯನ್ನು ಪೋಷಕರು/ಪಾಲಕರ


ಜೀವಿತಾವಧಿಯಲ್ಲಿ ಅಂದರೆ, 60 ವರ್ಷ ವಯಸ್ಸಿನ ಪೋಷಕರು/ಪಾಲಕರ ಮೇಲೆ ಅಂಗವಿಕಲ ಅವಲಂಬಿತರಿಗೆ
ಅನುಮತಿಸಲಾಗುವುದು.

ರಾಷ್ಟ್ರೀಯ ಪಿಂಚಣಿ ಯೋಜನೆ ಕೊಡುಗೆಯಲ್ಲಿ ಸಮಾನತೆ

ರಾಜ್ಯ ಸರ್ಕಾರಿ ನೌಕರರ ಎನ್ ಪಿ ಎಸ್ ಖಾತೆಗೆ ಉದ್ಯೋಗದಾತರ ಕೊಡುಗೆಯ ಮೇಲೆ ತೆರಿಗೆ ಕಡಿತದ ಮಿತಿಯನ್ನು ಶೇ.10
ರಿಂದ ಶೇ.14 ಕ್ಕೆ ಹೆಚ್ಚಿಸಲಾಗಿದೆ.
ಅವರನ್ನು ಕೇಂದ್ರ ಸರ್ಕಾರಿ ನೌಕರರಿಗೆ ಸಮನಾಗಿ ತರುತ್ತದೆ.
ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.

ಸ್ಟಾರ್ಟ್-ಅಪ್‌ಗಳಿಗೆ ಪ್ರೋತ್ಸಾಹ

ಅರ್ಹ ಸ್ಟಾರ್ಟ್-ಅಪ್‌ಗಳು ತೆರಿಗೆ ಪ್ರಯೋಜನವನ್ನು ಪಡೆಯಲು ಒಂದು ವರ್ಷದವರೆಗೆ ಅಂದರೆ, 31.03.2023 ರವರೆಗೆ
ಸ್ಥಾಪನೆಯ ಅವಧಿಯನ್ನು ವಿಸ್ತರಿಸಲಾಗಿದೆ.
ಈ ಹಿಂದೆ ಇದು 31.03.2022 ವರೆಗೆ ಮಾತ್ರ ಇತ್ತು.

ರಿಯಾಯಿತಿ ತೆರಿಗೆ ವ್ಯವಸ್ಥೆ ಅಡಿಯಲ್ಲಿ ಪ್ರೋತ್ಸಾಹ

ಸೆಕ್ಷನ್ 115BAB ಅಡಿಯಲ್ಲಿ ಉತ್ಪಾದನೆ ಅಥವಾ ತಯಾರಿಕೆಯನ್ನು ಪ್ರಾರಂಭಿಸುವ ಕೊನೆಯ ದಿನಾಂಕವನ್ನು ಒಂದು
ವರ್ಷದವರೆಗೆ ಅಂದರೆ 31ನೇ ಮಾರ್ಚ್, 2023 ರಿಂದ 31ನೇ ಮಾರ್ಚ್, 2024 ರವರೆಗೆ ವಿಸ್ತರಿಸಲಾಗಿದೆ.

ವರ್ಚುವಲ್ ಡಿಜಿಟಲ್ ಸ್ವತ್ತುಗಳ ತೆರಿಗೆ ಯೋಜನೆ


ವರ್ಚುವಲ್ ಡಿಜಿಟಲ್ ಸ್ವತ್ತುಗಳಿಗೆ ನಿರ್ದಿಷ್ಟ ತೆರಿಗೆ ಪದ್ಧತಿಯನ್ನು ಪರಿಚಯಿಸಲಾಗಿದೆ.
ಯಾವುದೇ ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಯಿಂದ ಬರುವ ಆದಾಯಕ್ಕೆ ಶೇಕಡಾ 30 ರ ದರದಲ್ಲಿ ತೆರಿಗೆ
ವಿಧಿಸಲಾಗುತ್ತದೆ.
ಸ್ವಾಧೀನದ ವೆಚ್ಚವನ್ನು ಹೊರತುಪಡಿಸಿ ಅಂತಹ ಆದಾಯವನ್ನು ಲೆಕ್ಕಾಚಾರ ಮಾಡುವಾಗ ಯಾವುದೇ ಖರ್ಚು ಅಥವಾ ಭತ್ಯೆಗೆ
ಸಂಬಂಧಿಸಿದಂತೆ ಯಾವುದೇ ಕಡಿತಕ್ಕೆ ಅನುಮತಿ ಇರುವುದಿಲ್ಲ.
ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಯಿಂದ ಆದ ನಷ್ಟವನ್ನು ಯಾವುದೇ ಇತರ ಆದಾಯಕ್ಕೆ ಹೊಂದಿಸಲಾಗುವುದಿಲ್ಲ.
ವಹಿವಾಟಿನ ವಿವರಗಳನ್ನು ಪಡೆಯಲು, ವಿತ್ತೀಯ ಮಿತಿಗಿಂತ ಹೆಚ್ಚಿನ ಪರಿಗಣನೆಯ ಶೇಕಡಾ 1 ರ ದರದಲ್ಲಿ ವರ್ಚುವಲ್
ಡಿಜಿಟಲ್ ಆಸ್ತಿಯ ವರ್ಗಾವಣೆಗೆ ಸಂಬಂಧಿಸಿದಂತೆ ಮಾಡಿದ ಪಾವತಿಯ ಮೇಲೆ ಟಿಡಿಎಸ್ ಅನ್ನು ನೀಡಲಾಗುತ್ತದೆ.
ವರ್ಚುವಲ್ ಡಿಜಿಟಲ್ ಆಸ್ತಿಯ ಉಡುಗೊರೆಯನ್ನು ಸ್ವೀಕರಿಸುವವರಿಗೂ ತೆರಿಗೆ ವಿಧಿಸಲಾಗುತ್ತದೆ.

ದಾವೆ ನಿರ್ವಹಣೆ

ಕಾನೂನಿನ ಸಮಸ್ಯೆಯು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಪ್ರಕರಣಗಳಿಗೆ ಸಮಾನವಾಗಿರುವ
ಪ್ರಕರಣಗಳಲ್ಲಿ, ಅಂತಹ ಕಾನೂನಿನ ಪ್ರಶ್ನೆಯನ್ನು ನ್ಯಾಯಾಲಯವು ನಿರ್ಧರಿಸುವವರೆಗೆ ಇಲಾಖೆಯಿಂದ ಮೇಲ್ಮನವಿ
ಸಲ್ಲಿಸುವಿಕೆಯನ್ನು ಮುಂದೂಡಲಾಗುತ್ತದೆ.
ತೆರಿಗೆದಾರರು ಮತ್ತು ಇಲಾಖೆಯ ನಡುವಿನ ಪುನರಾವರ್ತಿತ ದಾವೆಗಳನ್ನು ಕಡಿಮೆ ಮಾಡಲು ಪ್ರಮುಖವಾಗಿ ಸಹಾಯ
ಮಾಡುತ್ತದೆ.

ಐಎಫ್‌ಎಸ್‌ಸಿಗೆ ತೆರಿಗೆ ಪ್ರೋತ್ಸಾಹ

ನಿರ್ದಿಷ್ಟಪಡಿಸಿದ ಷರತ್ತುಗಳಿಗೆ ಒಳಪಟ್ಟು, ಕೆಳಗಿನವುಗಳಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ


ಸಾಗರೋತ್ತರ ನಿಷ್ಪನ್ನ ಸಾಧನಗಳಿಂದ ಅನಿವಾಸಿಯ ಆದಾಯ.
ಕ ಸಾಗರೋತ್ತರ ಬ್ಯಾಂಕಿಂಗ್ ಘಟಕದಿಂದ ನೀಡಲಾದ ಕೌಂಟರ್ ಉತ್ಪನ್ನಗಳ ಮೂಲಕ ಆದಾಯ.
ಹಡಗಿನ ಗುತ್ತಿಗೆಯ ಖಾತೆಯಲ್ಲಿ ಗೌರವಧನ ಮತ್ತು ಬಡ್ಡಿಯಿಂದ ಆದಾಯ.
ಐಎಫ್‌ಎಸ್‌ಸಿಯಲ್ಲಿ ಪೋರ್ಟ್‌ಫೋಲಿಯೋ ನಿರ್ವಹಣಾ ಸೇವೆಗಳಿಂದ ಪಡೆದ ಆದಾಯ.

ಸರ್ಚಾರ್ಜ್ ತರ್ಕಬದ್ಧಗೊಳಿಸುವಿಕೆ

ಎಒಪಿ (ಒಪ್ಪಂದವನ್ನು ಕಾರ್ಯಗತಗೊಳಿಸಲು ರಚಿಸಲಾದ ಒಕ್ಕೂಟ) ಗಳ ಮೇಲಿನ ಸರ್ಚಾರ್ಜ್ ಶೇಕಡಾ 15 ಕ್ಕೆ


ಮಿತಿಗೊಳಿಸಲಾಗಿದೆ.
ಪ್ರತ್ಯೇಕ ಕಂಪನಿಗಳು ಮತ್ತು ಎಒಪಿ ಗಳ ನಡುವಿನ ಸರ್ಚಾರ್ಜ್ ನಲ್ಲಿನ ಅಸಮಾನತೆಯನ್ನು ಕಡಿಮೆ ಮಾಡುತ್ತದೆ.
15 ಪ್ರತಿಶತಕ್ಕೆ ಮಿತಿಗೊಳಿಸಲಾದ ಯಾವುದೇ ರೀತಿಯ ಸ್ವತ್ತುಗಳ ವರ್ಗಾವಣೆಯ ಮೇಲೆ ಉಂಟಾಗುವ ದೀರ್ಘಾವಧಿಯ
ಬಂಡವಾಳ ಲಾಭದ ಮೇಲೆ ಸರ್ಚಾರ್ಜ್.
ಸ್ಟಾರ್ಟ್ ಅಪ್ ಸಮುದಾಯಕ್ಕೆ ಉತ್ತೇಜನ ನೀಡುತ್ತದೆ.

ಆರೋಗ್ಯ ಮತ್ತು ಶಿಕ್ಷಣ ಸೆಸ್

ಆದಾಯ ಮತ್ತು ಲಾಭದ ಮೇಲಿನ ಯಾವುದೇ ಸರ್ಚಾರ್ಜ್ ಅಥವಾ ಸೆಸ್ ಅನ್ನು ವ್ಯಾಪಾರ ವೆಚ್ಚವಾಗಿ
ಅನುಮತಿಸಲಾಗುವುದಿಲ್ಲ.
ತೆರಿಗೆ ವಂಚನೆಯನ್ನುತಡೆಗಟ್ಟುವುದು

ಶೋಧನೆ ಮತ್ತು ಸಮೀಕ್ಷೆ ಕಾರ್ಯಾಚರಣೆಗಳ ಸಮಯದಲ್ಲಿ ಪತ್ತೆಯಾದ ಬಹಿರಂಗಪಡಿಸದ ಆದಾಯದ ವಿರುದ್ಧ ಯಾವುದೇ
ನಷ್ಟವನ್ನು ಅನುಮತಿಸಲಾಗುವುದಿಲ್ಲ.

ಟಿಡಿಎಸ್ ನಿಬಂಧನೆಗಳನ್ನು ತರ್ಕಬದ್ಧಗೊಳಿಸುವುದು

ಏಜೆಂಟರ ಕೈಯಲ್ಲಿ ತೆರಿಗೆ ವಿಧಿಸಬಹುದಾದ ವ್ಯಾಪಾರ ಉತ್ತೇಜನ ತಂತ್ರವಾಗಿ ಏಜೆಂಟ್‌ಗಳಿಗೆ ಲಾಭಗಳು.


ಆರ್ಥಿಕ ವರ್ಷದಲ್ಲಿ ಅಂತಹ ಪ್ರಯೋಜನಗಳ ಒಟ್ಟು ಮೌಲ್ಯವು 20,000 ರೂ. ಮೀರಿದರೆ, ಪ್ರಯೋಜನಗಳನ್ನು ನೀಡುವ
ವ್ಯಕ್ತಿಗೆ ತೆರಿಗೆ ಕಡಿತವನ್ನು ನೀಡಲಾಗುತ್ತದೆ.

ಪರೋಕ್ಷ ತೆರಿಗೆಗಳು

ಜಿಎಸ್‌ಟಿಯಲ್ಲಿ ಗಮನಾರ್ಹ ಪ್ರಗತಿ

ಸಾಂಕ್ರಾಮಿಕ ರೋಗದ ಹೊರತಾಗಿಯೂ ಜಿಎಸ್‌ಟಿ ಆದಾಯಗಳು ಹೆಚ್ಚಾಗಿವೆ. ಈ ಬೆಳವಣಿಗೆಗೆ ತೆರಿಗೆದಾರರು


ಶ್ಲಾಘನಾರ್ಹರಾಗಿದ್ದಾರೆ.

ವಿಶೇಷ ಆರ್ಥಿಕ ವಲಯಗಳು

ಎಸ್ ಇ ಜಡ್ ಗಳ ಸಂಪೂರ್ಣ ಐಟಿ ಚಾಲಿತ ಕಸ್ಟಮ್ಸ್ ವ್ಯವಸ್ಥೆ ಮತ್ತು ಕಸ್ಟಮ್ಸ್ ರಾಷ್ಟ್ರೀಯ ಪೋರ್ಟಲ್‌
ಕಾರ್ಯನಿರ್ವಹಣೆಯನ್ನು 30ನೇ ಸೆಪ್ಟೆಂಬರ್ 2022 ರೊಳಗೆ ಕಾರ್ಯಗತಗೊಳಿಸಲಾಗುತ್ತದೆ.

ಕಸ್ಟಮ್ಸ್ ಸುಧಾರಣೆಗಳು ಮತ್ತು ತೆರಿಗೆ ದರ ಬದಲಾವಣೆಗಳು

ಮುಖಾಮುಖಿ ರಹಿತ ಕಸ್ಟಮ್ಸ್ ಅನ್ನು ಸಂಪೂರ್ಣವಾಗಿ ಸ್ಥಾಪಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ಕಸ್ಟಮ್ಸ್
ರಚನೆಗಳು ಅಸಾಧಾರಣವಾದ ಮುಂಚೂಣಿಯ ಕೆಲಸವನ್ನು ಮಾಡಿವೆ.

ಪ್ರಾಜೆಕ್ಟ್ ಆಮದು ಮತ್ತು ಬಂಡವಾಳ ಸರಕುಗಳು

ಬಂಡವಾಳ ಸರಕುಗಳು ಮತ್ತು ಪ್ರಾಜೆಕ್ಟ್ ಆಮದುಗಳಲ್ಲಿನ ರಿಯಾಯಿತಿ ದರಗಳನ್ನು ಕ್ರಮೇಣವಾಗಿ ತೆಗೆದುಹಾಕುವುದು ಮತ್ತು
7.5 ಪ್ರತಿಶತದಷ್ಟು ಸಾಧಾರಣ ಸುಂಕವನ್ನು ಅನ್ವಯಿಸುವುದು - ದೇಶೀಯ ವಲಯದ ಬೆಳವಣಿಗೆಗೆ ಮತ್ತು 'ಮೇಕ್ ಇನ್
ಇಂಡಿಯಾ' ಕ್ಕೆ ಅನುಕೂಲಕರವಾಗಿದೆ.
ದೇಶದೊಳಗೆ ಉತ್ಪಾದಿಸದ ಸುಧಾರಿತ ಯಂತ್ರೋಪಕರಣಗಳಿಗೆ ಕೆಲವು ವಿನಾಯಿತಿಗಳು ಮುಂದುವರೆಯುತ್ತವೆ.
ಬಂಡವಾಳ ಸರಕುಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು - ವಿಶೇಷವಾಗಿ ಎರಕಹೊಯ್ದ, ಬಾಲ್ ಸ್ಕ್ರೂ ಮತ್ತು
ಲೀನಿಯರ್ ಮೋಷನ್ ಗೈಡ್‌ನಂತಹ ಕಚ್ಚಾ ವಸ್ತುಗಳ ಮೇಲೆ ಕೆಲವು ವಿನಾಯಿತಿಗಳನ್ನು ಪರಿಚಯಿಸಲಾಗಿದೆ.

ಕಸ್ಟಮ್ಸ್ ವಿನಾಯಿತಿಗಳು ಮತ್ತು ಸುಂಕದ ಸರಳೀಕರಣದ ಪರಿಶೀಲನೆ


ಕೆಲವು ಕೃಷಿ ಉತ್ಪನ್ನಗಳು, ರಾಸಾಯನಿಕಗಳು, ಬಟ್ಟೆಗಳು, ವೈದ್ಯಕೀಯ ಸಾಧನಗಳು ಮತ್ತು ಔಷಧಿಗಳಂತಹ 350 ಕ್ಕೂ ಹೆಚ್ಚು
ವಿನಾಯಿತಿ ನಮೂದುಗಳನ್ನು ಹಂತಹಂತವಾಗಿ ತೆಗೆದುಹಾಕಲು ಪ್ರಸ್ತಾಪಿಸಲಾಗಿದೆ.
ನಿರ್ದಿಷ್ಟವಾಗಿ ರಾಸಾಯನಿಕಗಳು, ಜವಳಿ ಮತ್ತು ಲೋಹಗಳಂತಹ ವಲಯಗಳಿಗೆ ಕಸ್ಟಮ್ಸ್ ದರ ಮತ್ತು ಸುಂಕದ ರಚನೆಯನ್ನು
ಸರಳಗೊಳಿಸುವುದು ಮತ್ತು ವಿವಾದಗಳನ್ನು ಕಡಿಮೆ ಮಾಡುವುದು, 'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ'
ದೃಷ್ಟಿಕೋನಕ್ಕೆ ನುಗುಣವಾಗಿ - ಭಾರತದಲ್ಲಿ ತಯಾರಿಸಬಹುದಾದ ಅಥವಾ ತಯಾರಿಸುವ ವಸ್ತುಗಳ ಮೇಲಿನ
ವಿನಾಯಿತಿಯನ್ನು ತೆಗೆದುಹಾಕುವುದು ಮತ್ತು ಮಧ್ಯಂತರ ಉತ್ಪನ್ನಗಳ ತಯಾರಿಕೆಯ ಕಚ್ಚಾ ವಸ್ತುಗಳ ಮೇಲೆ ರಿಯಾಯಿತಿ
ಸುಂಕಗಳನ್ನು ಒದಗಿಸುವುದು.

ನಿರ್ದಿಷ್ಟ ವಲಯದ ಪ್ರಸ್ತಾಪಗಳು

ಎಲೆಕ್ಟ್ರಾನಿಕ್ಸ್

ಧರಿಸಬಹುದಾದ ಸಾಧನಗಳು, ಶ್ರವಣ ಸಾಧನಗಳು ಮತ್ತು ಎಲೆಕ್ಟ್ರಾನಿಕ್ ಸ್ಮಾರ್ಟ್ ಮೀಟರ್‌ಗಳ ದೇಶೀಯ ಉತ್ಪಾದನೆಯನ್ನು
ಉತ್ತೇಜಿಸಲು ಸುಲಭಗೊಳಿಸಲು, ಶ್ರೇಣೀಕೃತ ದರ ರಚನೆಯನ್ನು ಒದಗಿಸಲು ಕಸ್ಟಮ್ಸ್ ಸುಂಕದ ದರಗಳನ್ನು
ಸರಿಹೊಂದಿಸಲಾಗುವುದು.
ಹೆಚ್ಚಿನ ಬೆಳವಣಿಗೆಯ ಎಲೆಕ್ಟ್ರಾನಿಕ್ ವಸ್ತುಗಳ ದೇಶೀಯ ಉತ್ಪಾದನೆಯನ್ನು ಸಕ್ರಿಯಗೊಳಿಸಲು, ಮೊಬೈಲ್ ಫೋನ್
ಚಾರ್ಜರ್‌ಗಳ ಟ್ರಾನ್ಸ್‌ಫಾರ್ಮರ್‌ ಭಾಗಗಳಿಗೆ ಮತ್ತು ಮೊಬೈಲ್ ಕ್ಯಾಮೆರಾ ಮಾಡ್ಯೂಲ್‌ನ ಕ್ಯಾಮೆರಾ ಲೆನ್ಸ್ ಮತ್ತು ಇತರ ಕೆಲವು
ವಸ್ತುಗಳಿಗೆ ಸುಂಕ ರಿಯಾಯಿತಿಗಳು.
ರತ್ನಗಳು ಮತ್ತು ಆಭರಣಗಳು

ರತ್ನಗಳು ಮತ್ತು ಆಭರಣ ವಲಯಕ್ಕೆ ಉತ್ತೇಜನ ನೀಡಲು, ಕಟ್ ಮತ್ತು ಪಾಲಿಶ್ ಮಾಡಿದ ವಜ್ರಗಳು ಮತ್ತು ರತ್ನದ ಕಲ್ಲುಗಳ
ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 5 ಕ್ಕೆ ಇಳಿಸಲಾಗಿದೆ; ಸರಳವಾದ ಸಾನ್ ವಜ್ರಕ್ಕೆ ಕಸ್ಟಮ್ಸ್ ಸುಂಕವಿಲ್ಲ.
ಇ-ಕಾಮರ್ಸ್ ಮೂಲಕ ಆಭರಣಗಳ ರಫ್ತಿಗೆ ಅನುಕೂಲ ಕಲ್ಪಿಸಲು ಈ ವರ್ಷದ ಜೂನ್‌ನೊಳಗೆ ಸರಳೀಕೃತ ನಿಯಂತ್ರಣ
ಚೌಕಟ್ಟನ್ನು ಜಾರಿಗೆ ತರಲಾಗುವುದು.
ಕಡಿಮೆ ಮೌಲ್ಯದ ಅನುಕರಣೆ ಆಭರಣಗಳ ಆಮದನ್ನು ತಡೆಯಲು, ಅನುಕರಣೆ ಆಭರಣ ಆಮದು ಮೇಲೆ ಪ್ರತಿ ಕೆಜಿಗೆ ಕನಿಷ್ಠ
400 ರೂಪಾಯಿಗಳ ಕಸ್ಟಮ್ಸ್ ಸುಂಕ.
ರಾಸಾಯನಿಕಗಳು

ಕೆಲವು ಪ್ರಮುಖ ರಾಸಾಯನಿಕಗಳಾದ ಮೆಥನಾಲ್, ಅಸಿಟಿಕ್ ಆಸಿಡ್ ಮತ್ತು ಪೆಟ್ರೋಲಿಯಂ ಸಂಸ್ಕರಣೆಗೆ ಹೆವಿ ಫೀಡ್
ಸ್ಟಾಕ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲಾಗಿದೆ; ಸಾಕಷ್ಟು ದೇಶೀಯ ಸಾಮರ್ಥ್ಯವಿರುವ ಸೋಡಿಯಂ ಸೈನೈಡ್
ಮೇಲೆ ಸುಂಕವನ್ನು ಹೆಚ್ಚಿಸಲಾಗುತ್ತಿದೆ. ಇದು ದೇಶೀಯ ಮೌಲ್ಯವರ್ಧನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಎಂಎಸ್ಎಂಇ

ಛತ್ರಿಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 20 ಕ್ಕೆ ಏರಿಸಲಾಗಿದೆ. ಛತ್ರಿಗಳ ಬಿಡಿ ಭಾಗಗಳಿಗೆ ವಿನಾಯಿತಿಯನ್ನು
ಹಿಂತೆಗೆದುಕೊಳ್ಳಲಾಗುತ್ತಿದೆ.
ಭಾರತದಲ್ಲಿ ತಯಾರಾಗುವ ಕೃಷಿ ವಲಯದ ಉಪಕರಣಗಳು ಮತ್ತು ಉಪಕರಣಗಳ ಮೇಲೆ ವಿನಾಯಿತಿಯನ್ನು
ತರ್ಕಬದ್ಧಗೊಳಿಸಲಾಗುತ್ತದೆ
ಎಂಎಸ್ಎಂಇ ಸೆಕೆಂಡರಿ ಸ್ಟೀಲ್ ಉತ್ಪಾದಕರಿಗೆ ಪರಿಹಾರ ನೀಡಲು ಕಳೆದ ವರ್ಷ ಉಕ್ಕಿನ ಸ್ಕ್ರ್ಯಾಪ್‌ಗೆ ನೀಡಲಾದ ಕಸ್ಟಮ್ಸ್
ಸುಂಕ ವಿನಾಯಿತಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಲಾಗಿದೆ
ಪ್ರಸ್ತುತ ಚಾಲ್ತಿಯಲ್ಲಿರುವ ಲೋಹದ ಹೆಚ್ಚಿನ ಬೆಲೆಗಳನ್ನು ನಿಭಾಯಿಸಲು ಸಾರ್ವಜನಿಕ ಹಿತಾಸಕ್ತಿಯಿಂದ, ಸ್ಟೇನ್‌ಲೆಸ್ ಸ್ಟೀಲ್
ಮತ್ತು ಲೇಪಿತ ಉಕ್ಕಿನ ಫ್ಲಾಟ್ ಉತ್ಪನ್ನಗಳು, ಮಿಶ್ರಲೋಹ ಸ್ಟೀಲ್ ಮತ್ತು ಹೈ-ಸ್ಪೀಡ್ ಸ್ಟೀಲ್ ಬಾರ್‌ಗಳ ಮೇಲೆ ಕೆಲವು ಆಂಟಿ-
ಡಂಪಿಂಗ್ ಮತ್ತು ಸಿವಿಡಿ ಹಿಂತೆಗೆದುಕೊಳ್ಳಲಾಗುತ್ತಿದೆ.

ರಫ್ತುಗಳು

ರಫ್ತುಗಳನ್ನು ಉತ್ತೇಜಿಸಲು, ಅಲಂಕಾರ, ಟ್ರಿಮ್ಮಿಂಗ್, ಫಾಸ್ಟೆನರ್‌ಗಳು, ಬಟನ್‌ಗಳು, ಝಿಪ್ಪರ್, ಲೈನಿಂಗ್ ಮೆಟೀರಿಯಲ್,


ನಿರ್ದಿಷ್ಟ ಚರ್ಮ, ಪೀಠೋಪಕರಣ ಫಿಟ್ಟಿಂಗ್‌ಗಳು ಮತ್ತು ಪ್ಯಾಕೇಜಿಂಗ್ ಬಾಕ್ಸ್‌ಗಳಂತಹ ಐಟಂಗಳ ಮೇಲೆ ವಿನಾಯಿತಿಗಳನ್ನು
ಒದಗಿಸಲಾಗಿದೆ.
ಸೀಗಡಿ ರಫ್ತುಗಳನ್ನು ಉತ್ತೇಜಿಸಲು, ಸೀಗಡಿ ಕೃಷಿಗೆ ಅಗತ್ಯವಿರುವ ಕೆಲವು ವಸ್ತುಗಳ ಮೇಲಿನ ಸುಂಕವನ್ನು
ಕಡಿಮೆಗೊಳಿಸಲಾಗಿದೆ.
ಇಂಧನ ಮಿಶ್ರಣವನ್ನು ಉತ್ತೇಜಿಸಲು ತೆರಿಗೆ ಕ್ರಮ

ಇಂಧನ ಮಿಶ್ರಣವನ್ನು ಉತ್ತೇಜಿಸಲು, 1 ಅಕ್ಟೋಬರ್ 2022 ರಿಂದ ಮಿಶ್ರಣವಲ್ಲದ ಇಂಧನದ ಪ್ರತಿ ಲೀಟರ್ ಮೇಲೆ 2 ರೂ.
ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಲಾಗುವುದು.

***

(Release ID: 1794401) Visitor Counter : 9775

Read this release in: Tamil , Telugu , Malayalam , Bengali , English , Urdu , Marathi , Hindi , Assamese , Manipuri , Punjabi ,
Gujarati , Odia

You might also like