Download as docx, pdf, or txt
Download as docx, pdf, or txt
You are on page 1of 1

ಈ ಭೂಮಂಡಲ ಕಂಡಂತಹ ಅನೇಕಾನೇಕ ಅಧ್ಯಾತ್ಮಿಕ ಸಾಧನಗಳಲ್ಲಿ ಅತ್ಯಂಥಹ ಪ್ರಾಚೀನ, ಗೂಢ, ನಿಗೂಢ, ಅತಿಂದ್ರೀಯ

ಹಾಗು ಅತೀ ಪವಿತ್ರವಾದ ವಿಧ್ಯೆ ಅಂದರೆ ಅದು ಶ್ರೀವಿದ್ಯಾ


ಈ ದೇಶ ಹಾಗು ಇಲ್ಲಿಯ ವಿಧ್ಯೆಗಳು ಅತೀ ಗೂಢ ನಿಗೂಢ ವ್ಯಜ್ಞಾನಿಕ ತಳಹದಿ ಇರುವ ವ್ಯಜ್ಞಾನಿಕ ಯೋಗ ಸಾಧನೆಗಳು

ಸಾಧಕನ ಇಚ್ಛೆಗನುಸಾರವಾಗಿ, ಯೋಗ್ಯತೆಗನುಸಾರವಾಗಿ ಮತ್ತು ಪೂರ್ವ ಸಂಸ್ಕಾರಕನುಸಾರವಾಗಿ ಅವನ ಆಯ್ಕೆ ಶೈವ,


ಶಾಕ್ತ, ವೈಷ್ಣವ, ಸೌರ ಅಥವಾ ಗಾಣಪತ್ಯ ವೆಂಬ ಸಂಪ್ರದಾಯಗಳಿಗೆ ಬದ್ಧನಾಗಿ ಅದರದರ ನೀತಿ ರೀತಿ ನಿಯಮಗಳ
ಪಾಲನೆಯನ್ನು ಪಾಲಿಸುತ್ತ ಸಾಧನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ

ಮೇಲೆ ಹೇಳಿದ ಸಾಧನೆಗಳು ತಂತ್ರ, ಮಂತ್ರ, ಯಂತ್ರ ವನ್ನು ಒಳಗೊಂಡ ಕೌಲ, ಮಿಶ್ರ ಹಾಗು ಸಮಯ ವೆಂಬ ಯೋಗ
ಸಾಧನೆಯನ್ನು ವಾಮ, ದಕ್ಷಿಣ ಮತ್ತು ಮಧ್ಯಮ ಎಂದು ಉಪ ವಿಭಾಗಗಳನ್ನೂ ಹೊಂದಿದೆ

ಈಗ ಪ್ರಸ್ತುತ ವೈಧಿಕ ಸಂಪ್ರದಾಯ ಬಹಳವಾಗಿ ಪ್ರಚಲಿತದಲ್ಲಿ ಇರುವುದರಿಂದ ಕೇವಲ ಕೆಲವೇ ಕೆಲವು ಇಂತಹ ಆಚಾರಗಳು
ಸಾಂಪ್ರದಾಯಿಕ ಆಚಾರಗಳಾಗಿ ಉಳಿದುಕೊಂಡಿವೆ, ಸ್ವಾತಂತ್ರ ಪೂರ್ವದ ಮುಸಲ್ಮಾನ ಮತ್ತು ಕ್ರೈಸ್ತರ ಧಾಳಿ, ಅವರ
ನಿರ್ದಾಕ್ಷಣ್ಯ ಆಡಳಿತ, ಧರ್ಮ ಪರಿವರ್ತನೆ ಹಾಗು ವ್ಯವಸ್ಥಿತ ಧರ್ಮ ನಾಶದ ಸಂಚಿನಿಂದ ಶೋಷಣೆಗೆ ಒಳಗಾಗಿದ್ದರೂ, ಇನ್ನು
ಜೀವಂತವಾಗಿ ಉಳಿದುಕೊಂಡಿವೆ ಇದು ನಮ್ಮ ಕರ್ನಾಟಕ, ಕೇರಳ, ಕೋಲ್ಕತ್ತಾ, ಆಂಧ್ರ, ತಮಿಳುನಾಡಿನ ಕೆಲವು ಭಾಗ,
ಗೋಹಾಟಿ ಹಾಗು ಕಾಶ್ಮೀರದ ಕೆಲವು ಭಾಗಗಳಲ್ಲಿ ನಾಶದ ಅಂಚಿನಲ್ಲಿ ಇದ್ದರೂ ಉಳಿದುಕೊಂಡಿದೆ

ಈ ಶ್ರೀವಿದ್ಯಾ ಸಾಧನದಲ್ಲಿ ಎರಡು ಭಾಗಗಳು ಅದು ಶಿಷ್ಯನ ಯೋಗ್ಯತೆಗನುಸಾರವಾಗಿ ಗುರುವು ದೀಕ್ಷೆಯನ್ನು ಕೊಡುತ್ತಾನೆ,
ಅವು ಹಲವು ಕಾವಲುಗಳ್ಳನ್ನು ಒಳಗೊಂಡ ವಿಧ್ಯೆಗಳು ಅದನ್ನು ಶುದ್ಧ ವಿದ್ಯಾ ಹಾಗು ಸೌಭಾಗ್ಯ ವಿದ್ಯಾ ವೆಂದು ಕರೆಯುತ್ತಾರೆ,
ಇಲ್ಲಿ ಉಪಾಸನೆ ಪ್ರಧಾನ ಹಾದಿ ಮತ್ತು ಸಾಧನ ಪ್ರಧಾನವಾದ ಹಾದಿ ಮತ್ತೊಂದು ಮಿಶ್ರ ಹಾದಿ ಈ ರೀತಿ ಮೂರು ವಿಧದ
ಹಾದಿ ಗಳಿವೆ

ನಾನೂ ಶ್ರೀ ವಿದ್ಯಾ ಸಾಧಕನೇ?

ನೀವು ಶಿವ, ಭ್ಯರವ, ದೇವಿ ಅಥವಾ ಕಾಳಿಯಂತಹ ರೂಪಾಂತರಗಳನ್ನು ಇಷ್ಟಪಡುವವರಾಗಿದ್ದರೆ, ಈ ರೂಪಗಳು ನಿಮ್ಮನ್ನು
ಆಕರ್ಷಿಸುತ್ತವೆ ಎಂದರೆ ನಿಮ್ಮಲ್ಲಿ ಇನ್ನು ನಿಮ್ಮ ಪೂರ್ವ ಜನ್ಮದ ಸಂಸ್ಕಾರ ಜೀವಂತವಾಗಿದೆ ಎಂದು ನೀವು ಅರ್ಥ ಮಾಡಿಕೊಳ್ಳ
ಬೇಕು, ನೀವು ಯಾವುದೋ ಪೂರ್ವಜನ್ಮದಲ್ಲಿ ಶ್ರೀ ವಿದ್ಯಾ ಸಾಧಕನಾಗಿ ಸಾಧನ ಹಾದಿಯಲ್ಲಿ ಇದ್ದವರು ಎಂದು
ತಿಳಿದುಕೊಳ್ಳಬೇಕು

ನನಗೆ ಈ ಆಧ್ಯಾತ್ಮಿಕ ಸಾಧನೆ ಸಿದ್ದಿಸುವುದೇ ?

ಕಂಡಿತವಾಗಿವು ಸಿದ್ಧಿಸುತ್ತದೆ, ಸಂಶಯವಿಲ್ಲ! ಇದು ಪ್ರಾಪಂಚಿಕ ಹಾಗು ಆಧ್ಯಾತ್ಮಿಕ ಸಿದ್ಧಿಗಾಗಿರುವ ಸಾಧನೆ

ಈ ಶ್ರೀ ವಿದ್ಯಾ ಸಾಧನ, ವ್ಯಜ್ಞಾನಿಕ ಆಚಾರ ವಿಚಾರವನ್ನ ಯೋಗ ವಿಜ್ಞಾನದ ಸಹಾಯದಿಂದ ಜೀವನದಲ್ಲಿ ಅಳವಡಿಸಿಕೊಂಡು
ಉತ್ತಮ ವ್ಯಕ್ತಿಯಾಗಿ, ಆರೋಗ್ಯವಾಗಿ, ಸಂತೋಷವಾಗಿ, ಸಂಪತ್ಭರಿತವಾಗಿ, ಶಾಂತಿ, ನೆಮ್ಮದಿಯ, ಸಮೃದ್ಧ, ಯಶಸ್ಸಿನ ಹಾಗು
ಜೀವನ್ಮುಕ್ತನಾದ ಜೀವನ ನಿರ್ವಹಿಸಲು ಅಥವಾ ಸಮಗ್ರ ಜೀವನದ ಉತ್ಸವ ವನ್ನ ಆಚರಿಸಲು ಇರುವ ಮಾರ್ಗವಾಗಿವೆ

ನಾನು ಸನ್ಯಾಸಿಯಾಗ ಬೇಕೇ?

ಇಲ್ಲ, ಈ ಸಾಧನೆಯಿಂದ ನೀವು ಉತ್ತಮ ಸಾಂಸಾರಿಕ ಜೀವನವನ್ನು ನಡೆಸ ಬಹುದು

ಇಲ್ಲಿ ಸನ್ಯಾಸದ ಪರಿಕಲ್ಪನೆ ಬೌದ್ಧ ಅಥವಾ ಜೈನಕ್ಕಿಂತ ಭಿನ್ನವಾಗಿ, ಸಾಂಸಾರಿಕ ಜೀವನದ ಸುಖ ಸಂತೋಷದ, ನಿಮ್ಮ
ವಯುಕ್ತಿಕ ಯಶಸ್ಸಿನ ನಂತರ, ಜ್ಞಾನ ಪಕ್ವವಾದ ಅನಂತರ ಆಚರಿಸುವ ಸಾಧನ ಮಾರ್ಗವಾಗಿದೆ, ಅಂದರೆ ನೀವು
ಯುವಕರಾಗಿದ್ದಾಗಲೇ ಪ್ರಾರಂಭಿಸಬೇಕಾದ ಸಾಧನೆ

You might also like