Download as docx, pdf, or txt
Download as docx, pdf, or txt
You are on page 1of 2

ಗೆ, ದಿನಾಂಕ: 15/4/2024

ಎ.ಇ.ಇ,ರವರು

S.18, ಡಿವಿಜನ್ ಬೆಸ್ಕಾಂ,

ಚಿಕ್ಕಲ್ಸಂದ್ರ

#9/5B, ಉತ್ತರಹಳ್ಳಿ ಮೇನ್ ರೋಡ್,

ಫ್ರೆಂಡ್ಸ್ ಕಾಲೋನಿ, ಉತ್ತರಹಳ್ಳಿ ಹೋಬಳಿ,

ಬೆಂಗಳೂರು:560061

ಇಂಇಂ, ದ

ಜೆ.ಯದುಕುಮಾರ್

#56, ಶ್ರೀ ಭೈರವೇಶ್ವರ ನಿಲಯ,

ನಯಾರ ಪೆಟ್ರೋಲ್ ಬ್ಯಾಂಕ್ ಹಿಂಭಾಗ

ಸುಬ್ರಹ್ಮಣ್ಯಪುರ ಪೋಸ್ಟ್ ಗುಬ್ಬಲಾಳ

ಬೆಂಗಳೂರು:560061

ವಿಷಯ: ತಕರಾರು ಅರ್ಜಿ

ಮಾನ್ಯರೇ,

ಈ ಮೇಲ್ಕಂಡ ವಿಳಾಸದಲ್ಲಿ J. ಯದುಕುಮಾರ್ ಆದ ನಾನು ಸಂಸಾರ ಸಮೇತ ವಾಸವಿದ್ದು ಸರ್ವೇ ನಂಬರ್ 58/5B, 58/1B
ಮತ್ತಿತರ ಸ್ವತ್ತುಗಳು ನಮ್ಮ ಒಟ್ಟು ಕುಟುಂಬದ ಆಸ್ತಿಯಾಗಿದ್ದು ನಮ್ಮ ಜಮೀನಿನಲ್ಲಿ ನಮ್ಮಕುಟುಂಬದ ಸದಸ್ಯರುಗಳು ಓಡಾಡಲು
ಖಾಸಗಿ ರಸ್ತೆ ಮಾಡಿಕೊಂಡಿರುತ್ತೇವೆ. ಈ ರಸ್ತೆ ಸೇರಿದಂತೆ ನಮ್ಮ ಒಟ್ಟು ಕುಟುಂಬದ ಆಸ್ತಿ ವಿಭಾಗದ ವಿಚಾರವಾಗಿ ಘನ
ಉಚ್ಚನ್ಯಾಯಾಲಯದಲ್ಲಿ ಪ್ರಕರಣ ಸಂಖ್ಯೆ (RSA.1988/21) ಚಾಲ್ತಿಯಲ್ಲಿದ್ದು ಸದರಿ ಪ್ರಕರಣದಲ್ಲಿ ಮಧ್ಯಂತರ ತಡೆಯಾಗ್ನೇ
ಚಾಲ್ತಿಯಲ್ಲಿರುತ್ತದೆ ನಮ್ಮ ಜಮೀನಿನ ಎದುರು ಜಯನಗರ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಯವರು(JHCS) ನಿರ್ಮಿಸಿರುವ
ಬಡಾವಣೆಯ ಕೆಲವು ಸೈಟುಗಳಿಗೆ ಪ್ರತ್ಯೇಕ ರಸ್ತೆ ವ್ಯವಸ್ಥೆಯಿಲ್ಲದಿದ್ದು ಸದರಿ ಬಡಾವಣೆಯ ಸೈಟ್ ನಂಬರ್ 309, 318 ಮತ್ತು 320
ರವರು ಕಟ್ಟಡ ನಿರ್ಮಿಸಿಕೊಂಡಿದ್ದು ಮತ್ತು ಸೈಟ್ ನಂಬರ್ 310, 311, 312, 313, 314, 315, 316, 317, 319 ಕಟ್ಟಡ
ನಿರ್ಮಿಸಲು ಪ್ರಯತ್ನಿಸುತ್ತಿದ್ದು, ನಮ್ಮ ಖಾಸಗಿ ಜಮೀನಿನ ರಸ್ತೆಯ ಮುಖಾಂತರ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯಲು
ಪ್ರಯತ್ನಿಸುತ್ತಿರುತ್ತಾರೆ. ಈಗಾಗಲೇ ನಮ್ಮ ಖಾಸಗಿ ರಸ್ತೆ ಸೇರಿದಂತೆ ಒಟ್ಟು ಆಸ್ತಿಯ ಮೇಲೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ
ಆದೇಶವಿದ್ದು, JHCS ಬಡಾವಣೆಯ ಸೈಟ್ ನಂಬರ್ 309, 318 ಮತ್ತು 320 ಗಳಿಗೆ ವಿದ್ಯುತ್ ಸಂಪರ್ಕ ನೀಡಬಾರದೆಂದು
ಮಾನ್ಯರಾದ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ದಯವಿಟ್ಟು ಮಾನ್ಯರು ಈ ತಕರಾರು ಅರ್ಜಿಯನ್ನು ಪರಿಗಣಿಸುವಂತೆ
ಕೇಳಿಕೊಳ್ಳುತ್ತೇನೆ.

ಇಂತಿ ಇಂಮ್ಮತಿ ವಿಶ್ವಾಸಿ


You might also like