Download as docx, pdf, or txt
Download as docx, pdf, or txt
You are on page 1of 10

ಪರಿವಿಡಿ

ಕ್ರ.ಸಂ. ವಿಷಯ

1. ಪೀಠಿಕೆ

2. ಸಾರ್ವಜನಿಕ ವಲಯ

3. ಸಾರ್ವಜನಿಕ ವಲಯದ ಅನುಕೂಲತೆಗಳು

4. ಸಾರ್ವಜನಿಕ ವಲಯದ ಅನಾನುಕೂಲತೆಗಳು

5. ಖಾಸಗಿ ವಲಯ

6. ಖಾಸಗಿ ವಲಯದ ಅನುಕೂಲತೆಗಳು

7. ಖಾಸಗಿ ವಲಯದ ಅನಾನುಕೂಲತೆಗಳು

8. ಉಪಸಂಹಾರ

ಕೈಗಾರಿಕೆಯಲ್ಲಿ ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯದ ಪಾತ್ರ

ಪೀಠಿಕೆ:

1
ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲಿ ವಿಭಿನ್ನ ವಲಯಗಳಲ್ಲಿ ಕೈಗಾರಿಕೆಗಳ ಅಸ್ತಿತ್ವವನ್ನು

ಗುರುತಿಸಬಹುದಾಗಿರುತ್ತದೆ. ಅಂತಹ ಬಹು ಮುಖ್ಯ ವಲಯಗಳಲ್ಲಿ ಸಾರ್ವಜನಿಕ ವಲಯ ಮತ್ತು

ಖಾಸಗಿ ವಲಯವೂ ಮುಖ್ಯ ಪಾತ್ರ ವಹಿಸುತ್ತದೆ.

A) ಸಾರ್ವಜನಿಕ ವಲಯ[Public Sector]-

ಸರ್ಕಾರಿ ವಲಯ ಎಂಬುದು ಸಾರ್ವಜನಿಕ ವಲಯಕ್ಕೆ ಇನ್ನೊಂದು ಹೆಸರು. ರಾಷ್ಟ್ರೀಯ,

ಪ್ರಾಂತೀಯ ಮತ್ತು ಸ್ಥಳೀಯ ಮಟ್ಟಗಳಲ್ಲಿ ಸರ್ಕಾರವೇ ಉದ್ಯಮದ ಒಡೆತನವನ್ನು ಹೊಂದಿರುವುದು

ಸಾರ್ವಜನಿಕ ವಲಯದ ವಿಶಿಷ್ಟ ಲಕ್ಷಣವಾಗಿರುತ್ತದೆ. ಸಾರ್ವಜನಿಕ ವಲಯದಲ್ಲಿ ವ್ಯಕ್ತಿಗಳು, ಸ್ವಯಂ

ಸೇವಾ ಸಂಸ್ಥೆಗಳ ಮತ್ತು ಖಾಸಗಿ ಕಂಪನಿಗಳು ನಿಯಂತ್ರಣವಿರುವುದಿಲ್ಲ. ಆ ಪ್ರಕಾರ, ವ್ಯಕ್ತಿಗಳ,

ಸ್ವಯಂ ಸೇವಾ ಸಂಸ್ಥೆಗಳ ಮತ್ತು ಖಾಸಗಿ ಕಂಪನಿ ಮಾಲೀಕರ ಒಡೆತನ ಮತ್ತು ನಿಯಂತ್ರಣಕ್ಕೆ

ಒಳಪಟ್ಟಿರದ ಅರ್ಥವ್ಯವಸ್ಥೆಯ ಭಾಗವೇ ಸಾರ್ವಜನಿಕ ವಲಯ.

ಸಾರ್ವಜನಿಕ ವಲಯದ ಅನುಕೂಲತೆಗಳು:

ಕೈಗಾರಿಕ ಕ್ಷೇತ್ರಕ್ಕೆ ಸಾರ್ವಜನಿಕ ವಲಯದಿಂದಾಗುವ ಅನುಕೂಲತೆಗಳನ್ನು ಅಥವಾ

ಪ್ರಯೋಜನಗಳನ್ನು ಮುಂದಿನಂತೆ ವಿವರಿಸಬಹುದು.

1. ನಾಯಕತ್ವದ ಪಾತ್ರ:-

ಯಾವುದೇ ಅರ್ಥವ್ಯವಸ್ಥೆಯಲ್ಲಿ ಸಾರ್ವಜನಿಕ ವಲಯವು ಪ್ರಮುಖವಾದ ಸ್ಥಾನವನ್ನು

ಪಡೆದಿರುತ್ತದೆ. ರಾಷ್ಟ್ರಾಭಿವೃದ್ಧಿಗೆ ಅದು ಅನಿವಾರ್ಯವಾದುದೆಂದು ಪರಿಗಣಿಸಲ್ಪಟ್ಟಿರುತ್ತದೆ.

ಸಾರ್ವಜನಿಕ ವಲಯವು ಇತರ ಎಲ್ಲ ವಲಯಗಳಿಗೆ ಮಾರ್ಗದರ್ಶಕನಂತೆ ಹಾಗೂ

ನಾಯಕನಂತಿರುತ್ತದೆ. ಆರ್ಥಿಕಾಭಿವೃದ್ಧಿ ಕ್ರಿಯೆಯಲ್ಲಿ ಸರ್ಕಾರವು ಮುಂಚೂಣಿಯಲ್ಲಿದ್ದುಕೊಂಡು

ಇತರ ವಲಯಗಳನ್ನು ಉತ್ತೇಜಿಸಬೇಕಾಗಿರುತ್ತದೆ. ಅದರಲ್ಲಿಯೂ ಅಭಿವೃದ್ಧಿಶೀಲ ದೇಶಗಳಲ್ಲಿ

2
ಸಾರ್ವಜನಿಕ ವಲಯವು ಉದ್ಯಮಗಳ ಸ್ಥಾಪನೆಯಲ್ಲಿ ಮುಂದಾಳತ್ವವನ್ನು ವಹಿಸುವುದು

ಅತ್ಯಾವಶ್ಯಕವಾಗಿರುತ್ತದೆ.

2. ಸುಲಭ ದರದಲ್ಲಿ ಸೇವೆಗಳು:-

ಸಾರ್ವಜನಿಕ ಉದ್ಯಮಗಳು ಸೇವೆಗಳನ್ನು ಒದಗಿಸುವುದರಲ್ಲಿ ಆಸಕ್ತಿ ಹೊಂದಿರುತ್ತವೆಯೇ

ಹೊರತು ಲಾಭ ಗಳಿಕೆಯಲ್ಲಲ್ಲ ಹೀಗಾಗಿ ನಾಗರಿಕರಿಗೆ ಸುಲಭ ದರದಲ್ಲಿ ಸೇವೆಗಳು ಒದಗುತ್ತವೆ.

3. ಬೃಹತ್ ಉದ್ಯಮಗಳ ನಿರ್ವಹಣೆ:-

ಕೈಗಾರಿಕೆ, ಸಾರಿಗೆ, ನೀರಾವರಿ ಮುಂತಾದ ಬೃಹತ್ ಉದ್ಯಮಗಳಲ್ಲಿ ಲಾಭಗಳು ಬೇಗ

ದೊರೆಯದಿರುವುದರಿಂದ, ಖಾಸಗಿ ವ್ಯಕ್ತಿಗಳು ಇವುಗಳ ಸ್ಥಾಪನೆಗೆ ಮುಂದಾಗುವುದಿಲ್ಲ. ಈ

ಕಾರ್ಯಕ್ಕೆ ಸಾರ್ವಜನಿಕ ಕ್ಷೇತ್ರ ಅನಿವಾರ್ಯವಾಗಿದೆ.

4. ಬೃಹತ್ ಪ್ರಮಾಣದ ಸಂಪನ್ಮೂಲಗಳು:-

ಸರ್ಕಾರವು ಬೃಹತ್ ಪ್ರಮಾಣದ ಸಂಪನ್ಮೂಲಗಳನ್ನು ಸಂಗ್ರಹಿಸುವ ಶಕ್ತಿ

ಹೊಂದಿರುವುದರಿಂದ ದೊಡ್ಡ ಪ್ರಮಾಣದ ಉತ್ಪಾದನೆ ಸಾಧ್ಯವಾಗುತ್ತದೆ.

5. ಅನುಭೋಗಿಗಳ ಶೋಷಣೆಯನ್ನು ತಪ್ಪಿಸುವಿಕೆ:-

ಶಿಕ್ಷಣ, ಆರೋಗ್ಯ, ವಿದ್ಯುಚ್ಛಕ್ತಿ, ಸಾರಿಗೆ ಮುಂತಾದ ಸೇವೆಗಳನ್ನು ಖಾಸಗಿ ಉದ್ಯಮಕ್ಕೆ

ಒಪ್ಪಿಸಿದರೆ, ಗರಿಷ್ಟ ಮಟ್ಟದಲ್ಲಿ ಅನುಭೋಗಿಗಳ ಶೋಷಣೆ ನಡೆಯುತ್ತದೆ. ಈ ಸೇವೆಗಳ ಕಲ್ಪನೆಗೆ

ಸಾರ್ವಜನಿಕ ಉದ್ಯಮವೇ ಅವಶ್ಯಕವಾಗಿದೆ.

6. ಅನಾರೋಗ್ಯಕರ ಸ್ಪರ್ಧೆಯ ನಿವಾರಣೆ:-

ಖಾಸಗಿ ಉದ್ಯಮಿಗಳಲ್ಲಿ ಅನಾರೋಗ್ಯಕರವಾದ ಸ್ಪರ್ಧೆ ಬೆಳೆಯುತ್ತದೆ. ಉದ್ಯಮದ ವಿನಾಶಕ್ಕೆ

ಕಾರಣವಾಗಬಹುದಾದ ಇಂತಹ ಸ್ಪರ್ಧೆಯನ್ನು ಸಾರ್ವಜನಿಕ ಉದ್ಯಮವು ತಪ್ಪಿಸುತ್ತದೆ.

3
ಸಾರ್ವಜನಿಕ ಉದ್ಯಮದ ಅನಾನುಕೂಲಗಳು:

1. ಆಡಳಿತ ದಕ್ಷತೆಯ ಕೊರತೆ:-

ಸಾರ್ವಜನಿಕ ಉದ್ಯಮಗಳಲ್ಲಿ ಆಡಳಿತ ದಕ್ಷೆಯ ಕೊರತೆ ಇರುತ್ತದೆ. ಇದರಿಂದ ಉತ್ಪಾದನ

ವೆಚ್ಚ ಜಾಸ್ತಿಯಾಗುವುದಲ್ಲದೆ, ಸೇವೆಗಳ ಕಲ್ಪನೆಯೂ ಅತೃಪ್ತಿಕರವಾಗಿರುತ್ತದೆ.

2. ಸ್ವಜನ ಪಕ್ಷಪಾತ:-

ಸಾರ್ವಜನಿಕ ಉದ್ಯಮಗಳಲ್ಲಿ ಅರ್ಹತೆಗೆ ಬದಲಾಗಿ ಜೇಷ್ಠತೆ ಮತ್ತು ಸ್ವಜನ ಪಕ್ಷಪಾತದ

ಮೇಲೆ ಬಡ್ತಿ ನೀಡಲು ಹೆಚ್ಚು ವ್ಯಾಪ್ತಿ ಇರುವುದರಿಂದ ಉದ್ಯಮಶೀಲತೆ ಮತ್ತು ಉಪಕ್ರಮದ ಸ್ಫೂರ್ತಿ

ಮಾಯವಾಗುತ್ತದೆ.

3. ರಾಜಕೀಯ ಹಸ್ತಕ್ಷೇಪ:-

ಸಾರ್ವಜನಿಕ ಉದ್ಯಮಗಳಲ್ಲಿ ರಾಜಕೀಯ ಹಸ್ತಕ್ಷೇಪ ಅಸಾಧಾರಣ ಮಟ್ಟದಲ್ಲಿರುವುದರಿಂದ

ಉದ್ಯಮದ ಧ್ಯೇಯ ಸರಿಯಾಗಿ ಈಡೇರುವುದಿಲ್ಲ.

4. ಮಂದಗತಿಯ ಕೆಲಸ:-

ಇದು ಲಂಚಗುಳಿತನ ಮತ್ತು ಮಂದಗತಿಯ ಕೆಲಸಕ್ಕೆ ಹೆಸರಾಗಿದೆ. ಇದರಿಂದಾಗಿ ಉತ್ಪಾದನೆ,

ವಿತರಣೆ ಮೊದಲಾದ ಕಾರ್ಯಗಳು ನಿಧಾನಗತಿಯಲ್ಲಿ ಜರುಗುತ್ತವೆ.

5. ಆಶಿಸ್ತು:-

ಸಾರ್ವಜನಿಕ ಉದ್ಯಮಗಳಲ್ಲಿ ಆಶಿಸ್ತು ತಾಂಡವವಾಡುತ್ತಿರುತ್ತದೆ. ಆದ್ದರಿಂದ ಉದ್ಯಮದ

ಲಾಭದಾಯಕ ಕಾರ್ಯಚರಣೆ ಕಷ್ಟಕರವಾಗುತ್ತದೆ.

4
ಖಾಸಗಿ ವಲಯ[Private Sector]-

ಸರ್ಕಾರದ ನಿರ್ವಹಣೆಗೆ ಒಳಪಟ್ಟಿರದ ಅರ್ಥವ್ಯವಸ್ಥೆಯ ಭಾಗವೇ ಖಾಸಗಿ ವಲಯ. ಇದು

ಕುಟುಂಬಗಳು, ಏಕಮಾತ್ರ ವ್ಯಾಪಾರಿಗಳು, ಪಾಲುದಾರಿಕೆ, ಸಂಸ್ಥೆಗಳು, ಕಂಪನಿಗಳು ಮತ್ತು

ದಾನಶೀಲ ಸಂಸ್ಥೆಗಳಂತಹ ಸ್ವಯಂಪ್ರೇರಿತ ಸಂಸ್ಥೆಗಳನ್ನು ಒಳಗೊಳ್ಳುತ್ತದೆ. ಈ ವಲಯದಲ್ಲಿ

ವ್ಯಕ್ತಿಗಳು ಹಣವನ್ನು ತೊಡಗಿಸಿ ಉದ್ಯಮವನ್ನು ಸ್ಥಾಪಿಸುವರು. ಆ ಉದ್ಯಮವು ಚಿಕ್ಕ

ಪ್ರಮಾಣದಲ್ಲಿರಬಹುದು/ ದೊಡ್ಡ ಪ್ರಮಾಣದಲ್ಲಿರಬಹುದು. ಉದ್ಯಮದ ಒಡೆತನವು ಖಾಸಗಿ ವ್ಯಕ್ತಿಗೆ

ಸೇರಿದ್ದರೂ ಸಹ ಅದರ ನಿರ್ವಹಣೆಯು ಕಾನೂನಿಗೆ ಒಳಪಟ್ಟಿರುತ್ತದೆ. ಅಂದರೆ ಸರ್ಕಾರದ

ನಿಯಮಗಳಿಗೆ ಅನುಗುಣವಾಗಿ ಉದ್ಯಮವನ್ನು ನಡೆಸಿಕೊಂಡು ಹೋಗಬೇಕಾಗಿರುತ್ತದೆ.

"ಖಾಸಗೀಕರಣ ದಿಂದಲೂ ಖಾಸಗಿ ಒಡೆತನ ಮತ್ತು ನಿಯಂತ್ರಣಕ್ಕೆ ವ್ಯಾಪ್ತಿ ಲಭಿಸುತ್ತದೆ. ಹಿಂದೆ

ಸರ್ಕಾರದ ಒಡೆತನದಲ್ಲಿದ್ದ ಉದ್ಯಮಗಳ ಮತ್ತು ಆಸ್ತಿಗಳ ಒಡೆತನ ಮತ್ತು ನಿಯಂತ್ರಣವನ್ನು

ಖಾಸಗಿಯವರಿಗೆ ವರ್ಗಾಯಿಸುವಿಕೆಯು 'ಖಾಸಗೀಕರಣ' ಎಂದು ಪರಿಗಣಿಸಲ್ಪಡುತ್ತದೆ". ಖಾಸಗಿ

ಒಡೆತನ ಮತ್ತು ನಿಯಂತ್ರಣದಲ್ಲಿ ಈ ಉದ್ಯಮಗಳು ಮತ್ತು ಆಸ್ತಿಗಳು ದಕ್ಷತೆಯಿಂದ

ನಿರ್ವಹಿಸಲ್ಪಡುತ್ತವೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಖಾಸಗೀಕರಣವನ್ನು ಕೈಗೊಳ್ಳಲಾಗುತ್ತದೆ.

ಸರ್ಕಾರಕ್ಕೆ ವರಮಾನಗಳನ್ನು ಸಂಗ್ರಹಿಸುವ, ಕೇಂದ್ರೀಯ ಅಧಿಕಾರಿಗಳ ಅಧಿಕಾರವನ್ನು

ತಗ್ಗಿಸುವ ಮತ್ತು ಸಮಾಜದಲ್ಲಿ ಆಸ್ತಿಯ ಒಡೆತನವನ್ನು ಬಹಳ ವ್ಯಾಪಕವಾಗಿ ಹಂಚಿಕೆ ಮಾಡುವ

ಉದ್ದೇಶಗಳಿಂದಲೂ ಖಾಸಗೀಕರಣವನ್ನು ಆಶ್ರಯಿಸಲಾಗುತ್ತದೆ.

ಖಾಸಗಿ ವಲಯದ ಅನುಕೂಲತೆಗಳು :

1. ದೊಡ್ಡ ಪ್ರಮಾಣದ ಉತ್ಪಾದನೆ :-

5
ಖಾಸಗಿ ಉದ್ಯಮವು ಲಾಭದ ಆಸೆಯಿಂದ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯನ್ನು

ನೆರವೇರಿಸುತ್ತದೆ. ಅತಿ ದೊಡ್ಡ ಉದ್ಯಮಗಳು ತಮಗಿರುವ ಅನುಕೂಲತೆಗಳನ್ನು ಬಳಸಿಕೊಂಡು

ವಿವಿಧ ಸರಕುಗಳನ್ನು ಶೀಘ್ರಗತಿಯಲ್ಲಿ ಉತ್ಪಾದಿಸಬಲ್ಲವು. ಅಲ್ಲದೆ ಚಿಕ್ಕ ಉದ್ಯಮಗಳೂ ಈ

ವಿಷಯದಲ್ಲಿ ಹಿಂದೆ ಬೀಳುವುದಿಲ್ಲ. ಆದ್ದರಿಂದ ಗ್ರಾಹಕರ ಬೇಡಿಕೆಗಳನ್ನು ಈಡೇರಿಸಲು ಹಾಗೂ

ಉತ್ಪಾದನೆ ಮತ್ತು ಅನುಭೋಗ ಕ್ರಿಯಾಶೀಲವಾಗಿಡಲು ಖಾಸಾಗಿ ವಲಯವು ಸಹಾಯ

ಮಾಡುತ್ತದೆ.

2. ಕೈಗಾರಿಕಾ ವಿಸ್ತರಣೆ:-

ಖಾಸಗಿ ವಲಯವು ಯಾವುದೋ ಒಂದು ಸರಕಿನ ಉತ್ಪಾದನೆಗೆ ತನ್ನನ್ನು

ಸೀಮಿತಗೊಳಿಸಿಕೊಳ್ಳುವುದಿಲ್ಲ. ಉದಾ: ಭಾರತದ ಜೆಮ್ ಷೆಡ್ ಜಿ ಟಾಟಾ, ಆದಿತ್ಯ ಬಿರ್ಲಾ,

ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಮೊದಲಾದ ಯಾವುದೇ ಉದ್ಯಮ

ಸಮೂಹವು ಹಲವಾರು ಉತ್ಪನ್ನಗಳಿಗೆ ತಮ್ಮ ಉದ್ಯಮವನ್ನು ವಿಸ್ತರಿಸಿರುವುದು ಗಮನಕ್ಕೆ

ಬರುತ್ತದೆ.

3. ದಕ್ಷತೆ:-

ಖಾಸಗಿ ವಲಯವು ದಕ್ಷತೆಗೆ ಹೆಸರಾದುದು. ಆ ಉದ್ಯಮಗಳಲ್ಲಿ ಉನ್ನತ ಮಟ್ಟದ

ವ್ಯವಸ್ಥಾಪಕರಿಂದ ಹಿಡಿದು ಕೆಳದರ್ಜೆಯ ನೌಕರರವರೆಗೆ ಸಮಯ ಪಾಲನೆ ಮತ್ತು ಕೆಲಸ ನಿರ್ವಹಣೆ

ಅನುಕರಣೀಯ ವಾದುವುಗಳಾಗಿವೆ. ಅತ್ಯಂತ ದಕ್ಷತೆಯಿಂದ ಕೆಲಸ ನಿರ್ವಹಣೆಯ ಕಾರಣದಿಂದ

ಖಾಸಗಿ ವಲಯದಲ್ಲಿ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಾಗುತ್ತದೆ.

4. ದೊಡ್ಡ ಪ್ರಮಾಣದ ಸಂಪನ್ಮೂಲಗಳು:-

6
ಖಾಸಗಿ ವಲಯವು ದೊಡ್ಡ ಪ್ರಮಾಣದಲ್ಲಿ ಸಂಪನ್ಮೂಲಗಳನ್ನು ಸಂಗ್ರಹಿಸಲು

ಶಕ್ತವಾಗಿರುತ್ತದೆ. ಅದು ಉದ್ಯಮದಲ್ಲಿ ಉನ್ನತ ಪ್ರಮಾಣದ ಲಾಭಗಳನ್ನು ಗಳಿಸುತ್ತಿರುವುದರಿಂದ ಆ

ಲಾಭಗಳನ್ನು ಮರುಹೂಡಿಕೆ ಮಾಡಬಲ್ಲದು ಹಾಗೂ ವಿವಿಧ ಹಣಕಾಸಿನ ಸಂಸ್ಥೆಗಳಿಂದ ಸುಲಭವಾಗಿ

ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಬಲ್ಲದು.

5. ವೇಗಗತಿಯ ಕಾರ್ಯನಿರ್ವಹಣೆ:-

ಖಾಸಗಿ ವಲಯವು ಚುರುಕಾದ ಕಾರ್ಯನಿರ್ವಹಣೆಯಲ್ಲಿ ತನ್ನನ್ನು ಗುರುತಿಸಿಕೊಂಡಿರುತ್ತದೆ.

ವ್ಯವಸ್ಥಾಪಕರು, ಕಛೇರಿಯ ಸಿಬ್ಬಂದಿ, ಮಾರಾಟಗಾರರು, ಕ್ಷೇತ್ರ ಸಿಬ್ಬಂದಿ ಮೊದಲಾದ ಎಲ್ಲರೂ

ಕ್ರಿಯಾಶೀಲವಾಗಿ ಮತ್ತು ಚುರುಕಾಗಿ ಕೆಲಸವನ್ನು ನಿರ್ವಹಿಸುವುದರಿಂದ ಉದ್ಯಮದ ಒಟ್ಟಾರೆ

ಆಕಾಂಕ್ಷೆಗಳು ಸುಲಭವಾಗಿ ಈಡೇರುತ್ತವೆ.

6. ಶಿಸ್ತು:-

ಖಾಸಗಿ ವಲಯದಲ್ಲಿ ಶಿಸ್ತಿಗೆ ಮಹತ್ವ ನೀಡಲಾಗುತ್ತದೆ. ಉದ್ಯಮದ ಯಶಸ್ಸಿಗೆ ಈ ಅಂಶವು

ಗಣನೀಯವಾದ ಕೊಡುಗೆ ನೀಡುತ್ತದೆ.

7. ಕಂಪನಿ ಸಂಬಂಧ ಸಾಮಾಜಿಕ ಹೊಣೆಗಾರಿಕೆ:-

ಉದ್ಯಮವು ಲಾಭವನ್ನು ಗಳಿಸುತ್ತಲೇ ಸಮಾಜದ ಮತ್ತು ಗ್ರಾಹಕಾರ ಸದ್ಭಾವನೆ, ವಿಶ್ವಾಸ ಮತ್ತು

ನಂಬಿಕೆಯನ್ನು ಸಂಪಾದಿಸಲು ಪ್ರಯತ್ನಿಸುತ್ತಿವೆ. ತಾವು ಗಳಿಸಿದ ಲಾಭದ ಒಂದು ನಿರ್ದಿಷ್ಟ

ಪ್ರಮಾಣವನ್ನು ಸಾಮಾಜಿಕ ಉನ್ನತಿಗಾಗಿ ಅವು ವೆಚ್ಚ ಮಾಡುತ್ತಿವೆ.

ಖಾಸಗಿ ವಲಯದ ಅನಾನುಕೂಲತೆಗಳು:

1. ಲಾಭ ಧ್ಯೇಯ:-

7
ಖಾಸಗಿ ವಲಯವು ಪ್ರಬಲ ಲಾಭ ಧ್ಯೇಯದಿಂದ ಕಾರ್ಯನಿರ್ವಹಿಸುತ್ತದೆ ಎಂಬ

ಸಂಗತಿಯು ಜನಜನಿತವಾದುದು. ಸೇವಾಧ್ಯೇಯಕ್ಕೆ ಇಲ್ಲಿ ಪ್ರಾಮುಖ್ಯವಿರುವುದಿಲ್ಲ. ಲಾಭ

ಸಂಪಾದನೆಯು ಪ್ರಮುಖ ಧ್ಯೇಯವಾಗುವ ಕಾರಣದಿಂದ ಉತ್ಪನ್ನಗಳ ಬೆಲೆಗಳನ್ನು ಅಧಿಕವಾಗಿ

ನಿರ್ಧರಿಸಲಾಗುತ್ತದೆ.

2. ಲಾಭಗಳ ಮರುಹೂಡಿಕೆ ಇಲ್ಲದಿರುವಿಕೆ:-

ಖಾಸಗಿ ವಲಯವು ತಾನು ಸಂಪಾದಿಸಿದ ಲಾಭಗಳ ದೊಡ್ಡ ಮೊತ್ತವನ್ನು ಮರುಹೂಡಿಕೆ

ಮಾಡುವ ಮೂಲಕ ಉದ್ಯಮದ ವಿಸ್ತರಣೆಯನ್ನು ಕೈಗೊಳ್ಳುತ್ತದೆ ಮತ್ತು ಈ ಮಾರ್ಗವಾಗಿ

ರಾಷ್ಟ್ರಾಭಿವೃದ್ಧಿಗೆ ನೆರವಾಗುತ್ತದೆ ಎಂಬುದು ಸಾಮಾನ್ಯ ನಂಬಿಕೆ.

3. ದೀರ್ಘ ಫಲಾವಧಿಯ ಹೂಡಿಕೆಯ ನಿರ್ಲಕ್ಷ್ಯ:-

ಹದಿನೈದು, ಇಪ್ಪತ್ತು/ಇನ್ನೂ ಹೆಚ್ಚಿನ ವರ್ಷಗಳ ನಂತರ ಉತ್ಪನ್ನವನ್ನು ನೀಡುವಂತಹ

ಉದ್ಯಮಗಳಲ್ಲಿ ಹೂಡಿಕೆಯನ್ನು ಕೈಗೊಳ್ಳಲು ಖಾಸಗಿ ವಲಯವು ಇಚ್ಛಿಸುವುದಿಲ್ಲ. ಏಕೆಂದರೆ ಅದು

ಶೀಘ್ರಗತಿಯ ಪ್ರತಿಫಲ ಮತ್ತು ಲಾಭ ಸಂಪಾದನೆಯನ್ನು ಆಕಾಂಕ್ಷೆಯಾಗಿ ಹೊಂದಿರುತ್ತದೆ.

4. ಅನಾರೋಗ್ಯಕರ ಸ್ಪರ್ಧೆ:-

ಖಾಸಗಿ ವಲಯವು ಅನಾರೋಗ್ಯಕರ ಹಾಗೂ ಅನಗತ್ಯ ಸ್ಪರ್ಧೆಗೆ ಹಾತೊರೆಯುತ್ತದೆ.

ಖಾಸಗಿ ಉದ್ಯಮಗಳು ಸಾರ್ವಜನಿಕ ವಲಯದ ಉದ್ಯಮಗಳೊಡನೆ ಪೈಪೋಟಿ ನಡೆಸುತ್ತವೆ,

ಮತ್ತು ದೊಡ್ಡ ಉದ್ಯಮಗಳು ಚಿಕ್ಕ ಉದ್ಯಮಗಳ ಮೇಲೆ ದಬ್ಬಾಳಿಕೆ ನಡೆಸಲು ಪ್ರಯತ್ನಿಸುತ್ತವೆ. ಈ

ರೀತಿಯ ಅನಗತ್ಯ ಹಾಗೂ ಅನಾರೋಗ್ಯಕರ ಸ್ಪರ್ಧೆಯ ಕಾರಣದಿಂದ ಉದ್ಯಮ ರಂಗವು ತನ್ನ

ಧ್ಯೇಯ ಸಾಧನೆಯಲ್ಲಿ ಹಿನ್ನಡೆಯನ್ನು ಅನುಭವಿಸಬೇಕಾಗುತ್ತದೆ.

5. ಕೈಗಾರಿಕಾ ಸಾಮ್ರಾಜ್ಯ ಮತ್ತು ಏಕಸ್ವಾಮ್ಯ ಪ್ರವೃತ್ತಿಗಳ ಬೆಳವಣಿಗೆ:-

8
ಖಾಸಗಿ ಉದ್ಯಮಗಳು ಸೇವಾ ಧ್ಯೇಯವನ್ನು ನಿರ್ಲಕ್ಷಿಸಿ ಲಾಭದ ಧ್ಯೇಯದಿಂದ ಕೆಲಸವನ್ನು

ನಿರ್ವಹಿಸುವ ಕಾರಣದಿಂದ ಏಕಸ್ವಾಮ್ಯ ಪ್ರವೃತ್ತಿಗಳು ಪ್ರಾಬಲ್ಯವನ್ನು ಸಾಧಿಸುವ

ಅಪಾಯವಿರುತ್ತದೆ.

ಉಪಸಂಹಾರ:

9
ಕೈಗಾರಿಕೆ ಎಂಬುದು ಅಭಿವೃದ್ಧಿಯ ಒಂದು ಭಾಗವಾಗಿದ್ದು ಈ ಕೈಗಾರಿಕ ಕ್ಷೇತ್ರ ಅಥವಾ

ವಲಯದಲ್ಲಿ ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯದಿಂದಾಗುವ ಪ್ರಯೋಜನಗಳು ಮತ್ತು

ಕೆಲವು ಅನಾನುಕೂಲಗಳನ್ನು ಈ ಮೇಲಿನಂತೆ ತಿಳಿಯಪಡಿಸಲಾಗಿದೆ .

ಗ್ರಂಥಋಣ:

ಕೈಗಾರಿಕ ಅರ್ಥಶಾಸ್ತ್ರ - ಕೆ. ಶಿವಚಿತ್ತಪ್ಪ

10

You might also like