Download as docx, pdf, or txt
Download as docx, pdf, or txt
You are on page 1of 12

ಪರಿವಿಡಿ

ಕ್ರ.ಸಂ ವಿಷಯ

.
1. ಪೀಠಿಕೆ

2. ಮೂಲ ಸೌಕರ್ಯಗಳ ಪ್ರಕಾರಗಳು

3. ಭೌತಿಕ ಮೂಲ ಸೌಕರ್ಯದ ಪ್ರಮುಖಾಂಶಗಳು

4. ಇಂಧನ ಮತ್ತು ವಿದ್ಯುಚ್ಛಕ್ತಿ

5. ಸಾರಿಗೆ ವ್ಯವಸ್ಥೆ

6. ಸಾರಿಗೆಯ ವಿಧಗಳು

7. ಸಂಪರ್ಕ ವ್ಯವಸ್ಥೆ

8. ದೂರಸಂಪರ್ಕ ಸಾಧನಗಳ ರಚನೆ

9. ಉಪಸಂಹಾರ

10. ಗ್ರಂಥಋಣ

1
ಭೌತಿಕ ಮೂಲ ಸೌಕರ್ಯಗಳು[Physical Infrastructure]

ಪೀಠಿಕೆ:

ಮೂಲ ಸೌಕರ್ಯಗಳು ಆರ್ಥಿಕಾಭಿವೃದ್ಧಿಯ ಜೀವಾಳವಿದ್ದಂತೆ. ಅವುಗಳ ಕೊರತೆ

ಆರ್ಥಿಕಾಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ. ಮಾನವನ ಬದುಕು ಸುಲಲಿತವಾಗಿ

ನಡೆದುಕೊಂಡು ಹೋಗಲು ಈ ಸೌಕರ್ಯಗಳು ಬೇಕೇಬೇಕು. ಮೂಲ ಸೌಕರ್ಯಗಳನ್ನು

ನಿರ್ಮಿಸದೇ ಯಾವುದೇ ದೇಶದ ಅಭಿವೃದ್ಧಿ. ಏಕೆಂದರೆ, ಆರ್ಥಿಕತೆಯ ವಿವಿಧ ವಲಯಗಳ ಅಭಿವೃದ್ಧಿ

ಈ ಸೌಕರ್ಯಗಳ ಲಭ್ಯತೆಯನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಕೃಷಿ ಅಭಿವೃದ್ಧಿ, ನೀರಾವರಿ,

ಸಾರಿಗೆ-ಸಂಪರ್ಕ, ಮಾರುಕಟ್ಟೆ ವ್ಯವಸ್ಥೆ, ವಿದ್ಯುಚ್ಛಕ್ತಿ ಉತ್ಪಾದನೆ ಮುಂತಾದುವನ್ನು ಅವಲಂಬಿಸಿದ್ದರೆ

ಕೈಗಾರಿಕೆ ಕ್ಷೇತ್ರದ ಬೆಳವಣಿಗೆ ಇಂಧನ ಮತ್ತು ವಿದ್ಯುಚ್ಛಕ್ತಿಯ ಪೂರೈಕೆ, ಸಾರಿಗೆ ಮತ್ತು ಸಂಪರ್ಕ,

ಶಿಕ್ಷಣ, ತರಭೇತಿ, ಸಂಶೋಧನೆ ಮುಂತಾದ ಮೂಲ ಸೌಕರ್ಯಗಳನ್ನು ಅವಲಂಬಿಸಿರುತ್ತದೆ.

ಅಂದರೆ ಮೂಲ ಸೌಕರ್ಯಗಳಿಲ್ಲದೆ ಆರ್ಥಿಕಾಭಿವೃದ್ಧಿ ಸಾಧ್ಯವಿಲ್ಲದ ಮಾತು ಆರ್ಥಿಕಾಭಿವೃದ್ಧಿ

ಸಾಧನೆಯ ಮಹತ್ವದ ಉದ್ದೇಶ ಹೊಂದಿರುವ ಯಾವುದೇ ದೇಶವಾದರೂ ಮೊದಲು ಮೂಲ

ಸೌಕರ್ಯಗಳ ನಿರ್ಮಾಣದತ್ತ ಗಮನಹರಿಸಬೇಕಾಗುತ್ತದೆ. ಭಾರತ ಇಂದು ಅಭಿವೃದ್ಧಿ ಸಾಧನೆಯ

ಮಹತ್ವಪೂರ್ಣ ಕಾರ್ಯದಲ್ಲಿ ಹಿಂದುಳಿದಿರುವುದಕ್ಕೆ ಬಹುಪಾಲು ಈ ಸೌಲಭ್ಯಗಳ ಕೊರತೆಯೇ

ಕಾರಣ.

*ಮೂಲ ಸೌಕರ್ಯಗಳ ಪ್ರಕಾರಗಳು:

2
ಮೂಲ ಸೌಕರ್ಯಗಳಲ್ಲಿ ಮುಖ್ಯವಾಗಿ ಎರಡು ಪ್ರಕಾರಗಳಿವೆ,

1. ಭೌತಿಕ ಮೂಲ ಸೌಕರ್ಯಗಳು(Physical Infrastructure)

2. ಸಾಮಾಜಿಕ ಮೂಲ ಸೌಕರ್ಯಗಳು(Social Infrastructure).

ಭೌತಿಕ ಮೂಲ ಸೌಕರ್ಯಗಳಲ್ಲಿ ಪ್ರಮುಖವಾಗಿ ಇಂಧನ ಮತ್ತು ವಿದ್ಯುಚ್ಛಕ್ತಿ, ಸಾರಿಗೆ ಮತ್ತು

ಸಂಪರ್ಕ ಹಾಗೂ ನೀರಾವರಿ ಸೌಲಭ್ಯಗಳಿವೆ. ಸಾಮಾಜಿಕ ಮೂಲ ಸೌಕರ್ಯಗಳಲ್ಲಿ ಪ್ರಮುಖವಾಗಿ

ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ, ವಸತಿ, ಕುಡಿಯುವ ನೀರು, ತರಬೇತಿ ಮುಂತಾದುವುಗಳಿವೆ.

*ಭೌತಿಕ ಮೂಲ ಸೌಕರ್ಯದ ಪ್ರಮುಖಾಂಶಗಳು:

1. ಇಂಧನ ಮತ್ತು ವಿದ್ಯುಚ್ಛಕ್ತಿ:-

ಇಂಧನ ಮತ್ತು ವಿದ್ಯುಚ್ಛಕ್ತಿ ಉತ್ಪಾದನೆಯು ಆರ್ಥಿಕಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರ

ವಹಿಸುತ್ತದೆ. ಇಂಧನ ಮತ್ತು ವಿದ್ಯುಚ್ಛಕ್ತಿ ಅಭಿವೃದ್ಧಿ ಚಟುವಟಿಕೆಯ ಪ್ರಾಣವಾಯು ಇದ್ದಂತಾಗಿದ್ದು

ಅದಿಲ್ಲದೆ ಪ್ರಗತಿಯ ಚಕ್ರಗಳು ತಿರುಗಲಾಗದು. ಭಾರತ ಇತರ ಅನೇಕ ದೇಶಗಳಂತೆ ವಿವಿಧ

ರೀತಿಯ ಶಕ್ತಿ ಸಂಪನ್ಮೂಲಗಳನ್ನು ಬಳಸುತ್ತಿದೆ. ಅವುಗಳನ್ನು ಒಟ್ಟಾರೆಯಾಗಿ ಎರಡು

ಗುಂಪುಗಳನ್ನಾಗಿ ವರ್ಗೀಕರಿಸಬಹುದು.

a) ವಾಣಿಜ್ಯ ಮೂಲಗಳು:- ಈ ಮೂಲಗಳಲ್ಲಿ ಕಲ್ಲಿದ್ದಲು, ಪೆಟ್ರೋಲಿಯಂ, ಜಲ ವಿದ್ಯುತ್,

ಅಣುವಿದ್ಯುತ್ ಮುಂತಾದವಾಗಿದೆ.

b) ವಾಣಿಜ್ಯೇತರ ಮೂಲಗಳು:- ಈ ಮೂಲಗಳಲ್ಲಿ ಮುಖ್ಯವಾಗಿ ಉರುವಲು ಕಟ್ಟಿಗೆ, ಗೋಬರ್

ಗ್ಯಾಸ್, ಸೌರಶಕ್ತಿ, ಗಾಳಿಶಕ್ತಿ, ನೈಸರ್ಗಿಕ ಅನಿಲ, ಭೂಶಾಖೋತ್ಪನ್ನ ಶಕ್ತಿ ಮುಂತಾದ ಪ್ರಕಾರಳಿವೆ.

2. ಸಾರಿಗೆ(Transport):-

3
ಆಧುನಿಕ ಪ್ರಪಂಚದಲ್ಲಿ ಇಂಧನ ಮತ್ತು ವಿದ್ಯುಚ್ಛಕ್ತಿಯಂತೆ ಸಾರಿಗೆಯೂ ಸಹ ಒಂದು

ಪ್ರಮುಖ ಮೂಲ ಸೌಕರ್ಯವಾಗಿದ್ದು ಅದು ಕೈಗಾರಿಕಾ ಬೆಳವಣಿಗೆ ಹಾಗೂ ಒಟ್ಟಾರೆ ಪ್ರಗತಿಗೆ

ತನ್ನದೇ ಆದ ಕಾಣಿಕೆಯನ್ನು ಸಲ್ಲಿಸುತ್ತಿದ್ದು ಸಾರಿಗೆ ಒಂದು ಪ್ರಮುಖ ಸೇವಾ ಚಟುವಟಿಕೆಯಾಗಿದೆ.

ಸಾರಿಗೆಯ ಮಹತ್ವ-

ಸಾರಿಗೆಯು ಆರ್ಥಿಕ ವ್ಯವಸ್ಥೆಯ ಜೀವನಾಡಿ ಇದ್ದಂತೆ. ಅದು ಆರ್ಥಿಕ ಮತ್ತು ನಾಗರಿಕತೆಯ

ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. "ಚಲಿಸುವ ಚಕ್ರಗಳು ನಾಗರೀಕತೆಯನ್ನು

ಸೃಷ್ಟಿಸುತ್ತವೆ" 'ಸಾರಿಗೆಯೇ ನಾಗರೀಕತೆ' ಎಂದು ಪರಿಗಣಿಸಬಹುದು. ಸಾರಿಗೆಯ

ಪ್ರಮುಖಾಂಶಗಳೆಂದರೆ,

1. ಮಾರುಕಟ್ಟೆ ಅಭಿವೃದ್ಧಿ,

2. ಬೃಹತ್ ಪ್ರಮಾಣದ ಉತ್ಪಾದನೆ,

3. ಭೌಗೋಳಿಕ ಶ್ರಮವಿಭಜನೆ,

4. ಬೆಲೆಯಲ್ಲಿ ಸ್ಥಿರತೆ,

5. ಶ್ರಮ ಮತ್ತು ಬಂಡವಾಳದ ಚಲನೆ,

6. ನಗರಗಳ ಬೆಳವಣಿಗೆ,

7. ಉದ್ಯೋಗ ಸೃಷ್ಟಿ,

8. ರಾಷ್ಟ್ರ ರಕ್ಷಣೆ, ಇತ್ಯಾದಿ.

* ಸಾರಿಗೆಯ ವಿಧಗಳು-

4
A) ಭೂ ಸಾರಿಗೆ:-

ಭೂ ಸಾರಿಗೆಯಲ್ಲಿ ಪ್ರಮುಖವಾಗಿ ಈ ಕೆಳಗಿನ ವಿವಿಧ ಸಾರಿಗೆ ವ್ಯವಸ್ಥೆಗಳನ್ನು

ಕಾಣಬಹುದಾಗಿದೆ,

1. ರಸ್ತೆ ಸಾರಿಗೆ(Road Transport):-

ರಸ್ತೆ ಸಾರಿಗೆಯು ಅತ್ಯಂತ ಪ್ರಾಚೀನವಾದ ಸಾರಿಗೆ ವ್ಯವಸ್ಥೆಯಾಗಿದೆ. ಬಸ್ಸುಗಳು, ಬೈಕ್,

ಮುಂತಾದವು ರಸ್ತೆ ಸಾರಿಗೆ ಸಾಧನಗಳ ಮೂಲಕ ಸರಕುಗಳು ಮತ್ತು ಪ್ರಯಾಣಿಕರನ್ನು ರಸ್ತೆಗಳ

ಮೂಲಕ ಸಾಗಿಸುವುದು ರಸ್ತೆ ಸಾರಿಗೆಯಾಗಿದೆ. ಭಾರತದಂತಹ ಆರ್ಥಿಕತೆಗಳಲ್ಲಿ ರಸ್ತೆ ಸಾರಿಗೆಗೆ

ಪ್ರಮುಖ ಸ್ಥಾನವಿದೆ. ಏಕೆಂದರೆ ಭಾರತ ಮೂಲತಃ ಒಂದು ಹಳ್ಳಿಗಳ ದೇಶವಾಗಿದೆ.

ರಸ್ತೆ ಸಾರಿಗೆಯ ಮಹತ್ವ-

1. ಕೃಷಿ ಅಭಿವೃದ್ಧಿ

2. ಕೈಗಾರಿಕಾಭಿವೃದ್ಧಿ

3. ವ್ಯಾಪಾರಾಭಿವೃದ್ಧಿ

4. ಸಂಪನ್ಮೂಲಗಳ ಸದ್ಬಳಕೆ

5. ಉದ್ಯೋಗ ಸೃಷ್ಟಿ

6. ಶಿಕ್ಷಣ ಮತ್ತು ಸಂಸ್ಕೃತಿಗಳ ಪ್ರಸಾರ

7. ಸರ್ಕಾರಕ್ಕೆ ಆದಾಯದ ಮೂಲ, ಮುಂತಾದವು.

* ರಸ್ತೆಗಳ ವರ್ಗೀಕರಣ-

5
1943 ರ ನಾಗಪುರ ಯೋಜನೆ ಭಾರತದ ರಸ್ತೆಗಳನ್ನು ನಾಲ್ಕು ಪ್ರಕಾರಗಳನ್ನಾಗಿ

ವರ್ಗೀಕರಿಸಿತು ಅವುಗಳೆಂದರೆ,

1. ರಾಷ್ಟ್ರೀಯ ಹೆದ್ದಾರಿಗಳು:-

ರಾಷ್ಟ್ರೀಯ ಹೆದ್ದಾರಿಗಳು ರಾಷ್ಟ್ರದ ರಾಜಧಾನಿಯಾದ ದೆಹಲಿ ಮತ್ತು ರಾಜ್ಯಗಳ

ರಾಜಧಾನಿಗಳು, ಮುಖ್ಯ ಪಟ್ಟಣಗಳು ಮತ್ತು ಬಂದರುಗಳನ್ನು ಸಂಪರ್ಕಿಸುತ್ತವೆ. ಈ ರಸ್ತೆಗಳ

ನಿರ್ಮಾಣ, ದುರಸ್ತಿ ಮತ್ತು ಆಡಳಿತಗಳು ಸಂಪೂರ್ಣವಾಗಿ ಕೇಂದ್ರ ಸರ್ಕಾರಕ್ಕೆ ಸೇರಿವೆ.

2. ರಾಜ್ಯ ಹೆದ್ದಾರಿಗಳು:-

ರಾಜ್ಯ ಹೆದ್ದಾರುಗಳು ರಾಜ್ಯದಲ್ಲಿನ ಮುಖ್ಯ ಪಟ್ಟಣಗಳು, ಜಿಲ್ಲಾ ಕೇಂದ್ರಗಳ ಮತ್ತು ರಾಷ್ಟ್ರೀಯ

ಹೆದ್ದಾರಿಗಳನ್ನು ಸಂಪರ್ಕಿಸುತ್ತವೆ. ಈ ರಸ್ತೆಗಳ ನಿರ್ಮಾಣ, ದುರಸ್ತಿ ಮತ್ತು ಆಡಳಿತ ರಾಜ್ಯ

ಸರ್ಕಾರಗಳ ಜವಾಬ್ದಾರಿಯಾಗಿದೆ.

3. ಜಿಲ್ಲಾ ರಸ್ತೆಗಳು:-

ಜಿಲ್ಲೆಯ ತಾಲ್ಲೂಕು ಕೇಂದ್ರಗಳು, ಪ್ರಮುಖ ಸ್ಥಳಗಳು, ರಾಜ್ಯ ಹೆದ್ದಾರಿಗಳು ಮತ್ತು ರಾಷ್ಟ್ರೀಯ

ಹೆದ್ದಾರಿಗಳನ್ನು ಸಂಪರ್ಕಿಸುವ ರಸ್ತೆಗಳು ಜಿಲ್ಲಾ ರಸ್ತೆಗಳಾಗಿವೆ. ಈ ರಸ್ತೆಗಳ ನಿರ್ಮಾಣ, ದುರಸ್ತಿ

ಮತ್ತು ಆಡಳಿತ ಸ್ಥಳೀಯ ಸಂಸ್ಥೆಗಳದ್ದಾಗಿದೆ.

4. ಗ್ರಾಮೀಣ ರಸ್ತೆಗಳು:-

ತಾಲ್ಲೂಕು ಕೇಂದ್ರ ಮತ್ತು ವಿವಿಧ ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗಳು ಗ್ರಾಮೀಣ

ರಸ್ತೆಗಳಾಗಿವೆ. ಈ ರಸ್ತೆಗಳು ಹೆಚ್ಚಾಗಿ ಕಚ್ಚಾ ರಸ್ತೆಗಳಾಗಿವೆ. ಭಾರತದಲ್ಲಿ ರಸ್ತೆಗಳನ್ನು ಪಕ್ಕಾ

ರಸ್ತೆಗಳು ಮತ್ತು ಕಚ್ಚಾ ರಸ್ತೆಗಳು ಎಂದು ಎರಡು ಭಾಗಗಳಾಗಿ ವರ್ಗೀಕರಿಸಲಾಗಿದೆ. ಪಕ್ಕಾ

6
ರಸ್ತೆಗಳು ವರ್ಷಕಾಲ ಪೂರ್ತಿ ಪ್ರಯಾಣಕ್ಕೆ ಯೋಗ್ಯವಾಗಿರುತ್ತವೆ. ಕಚ್ಚಾ ರಸ್ತೆಗಳು ಸಾಮಾನ್ಯ

ಮಣ್ಣಿನ ರಸ್ತೆಗಳಾಗಿದ್ದು, ಈ ರಸ್ತೆಗಳು ವರ್ಷವೆಲ್ಲಾ ಪ್ರಯಾಣಕ್ಕೆ ಯೋಗ್ಯವಾಗಿರುವುದಿಲ್ಲ.

2. ರೈಲು ಸಾರಿಗೆ(Railway Transport)-

ರೈಲು ಸಾರಿಗೆಯ ಅಭಿವೃದ್ಧಿ ಮತ್ತು ವಿಸ್ತರಣೆಯಿಂದಾಗಿ ಜಗತ್ತಿನಾದ್ಯಂತ ಸಾರಿಗೆ

ವ್ಯವಸ್ಥೆಯಲ್ಲಿ ಕ್ರಾಂತಿ ಸಂಭವಿಸಿದೆ. ಭಾರತದಲ್ಲಿ ರೈಲು ಮಾರ್ಗ ನಿರ್ಮಾಣ ಕಾರ್ಯ 1844 ರಲ್ಲಿ

ಪ್ರಾರಂಭವಾಯಿತು. ಭಾರತದ ಮೊಟ್ಟ ಮೊದಲ ರೈಲು 1853 ರ ಏಪ್ರಿಲ್ ನಲ್ಲಿ ಬಾಂಬೆ ಮತ್ತು

ಠಾಣಾಗಳ ನಡುವೆ 34 ಕಿ.ಮೀ ಗಳ ದೂರ ಕ್ರಮಿಸಿತು. ಇದರೊಂದಿಗೆ ಭಾರತ ರೈಲುಗಳ ಯುಗಕ್ಕೆ

ಕಾಲಿರಿಸಿತು .

3. ಜಲ ಸಾರಿಗೆ(Water Transport)-

ಕಾಲುವೆ, ನದಿ, ಸಮುದ್ರ/ಸಾಗರಗಳ ಮೂಲಕ ಸರಕು ಮತ್ತು ಪ್ರಯಾಣಿಕರ ಸಾಗಾಟ

ಮಾಡುವುದನ್ನು ಜಲಸಾರಿಗೆ ಎನ್ನಲಾಗುತ್ತದೆ. ದೋಣಿಗಳು ಮತ್ತು ಹಡಗುಗಳು ಜಲಸಾರಿಗೆಯ

ಪ್ರಮುಖ ಪರಿಕರಗಳು. ಜಲಮಾರ್ಗ ನಿಸರ್ಗ ದತ್ತವಾದುದರಿಂದ ನಿರ್ಮಾಣ ಮತ್ತು ನಿರ್ವಹಣೆಗೆ

ವೆಚ್ಚ ತಗಲುವುದಿಲ್ಲ. ಆದ್ದರಿಂದ ಜಲಸಾರಿಗೆ ಅತ್ಯಂತ ಕಡಿಮೆ ವೆಚ್ಚದ ಸಾರಿಗೆ ಮೂಲವಾಗಿದೆ.

ಅತ್ಯಂತ ಭಾರದ ವಸ್ತುಗಳನ್ನು ಈ ಸಾರಿಗೆ ವ್ಯವಸ್ಥೆಯ ಮೂಲಕ ಅಧಿಕ ಪ್ರಮಾಣದಲ್ಲಿ

ಸಾಗಿಸಬಹುದಾಗಿದೆ.

ಭಾರತದ ಜಲಸಾರಿಗೆಯನ್ನು a)ಆಂತರಿಕ ಜಲಸಾರಿಗೆ:- ಸಣ್ಣ ಸಣ್ಣ ದೋಣಿಗಳು ಮತ್ತು

ಸ್ಟೀಮರುಗಳ ಮೂಲಕ ನದಿ ಹಾಗೂ ಕಾಲುವೆಗಳಲ್ಲಿ ಸರಕು ಮತ್ತು ಪ್ರಯಾಣಿಕರನ್ನು ಸಾಗಿಸುವ

ಕಾರ್ಯಕ್ಕೆ ಆಂತರಿಕ/ಒಳನಾಡು ಜಲಸಾರಿಗೆ ಎಂದು ಹೆಸರು.

7
b)ಸಮುದ್ರ/ಸಾಗರೋತ್ತರ ಸಾರಿಗೆ:-

ಹಡಗುಗಳ ಮೂಲಕ ಸಮುದ್ರ ಹಾಗೂ ಸಾಗರಗಳಲ್ಲಿ ಪ್ರಯಾಣಿಕರು ಮತ್ತು ಸರಕುಗಳನ್ನು

ಸಾಗಾಟ ಮಾಡುವುದಕ್ಕೆ ಸಾಗರೋತ್ತರ ಜಲಸಾರಿಗೆ ಎಂದು ಕರೆಯಲಾಗುತ್ತದೆ. ಸಾಗರಗಳು

ಮತ್ತು ಸಮುದ್ರಗಳು ಪ್ರಕೃತಿಯ ಕೊಡುಗೆಗಳಾಗಿದ್ದು, ಇವು ನೈಸರ್ಗಿಕ ಜಲಮಾರ್ಗಗಳನ್ನು

ಒದಗಿಸುತ್ತವೆ. ಸಮುದ್ರ ಸಾರಿಗೆ ಅತ್ಯಂತ ಕಡಿಮೆ ವೆಚ್ಚದ ಸಾರಿಗೆ ಮೂಲವಾಗಿದೆ.

4. ವಾಯುಸಾರಿಗೆ(Air Transport)-

ವಾಯುಸಾರಿಗೆಯು ತೀರಾ ಇತ್ತೀಚಿನ ಬೆಳೆವಣಿಗೆಯಾಗಿದೆ. ಸರಕುಗಳು ಮತ್ತು

ಪ್ರಯಾಣಿಕರನ್ನು ವಿಮಾನಗಳ ಮೂಲಕ ಸಾಗಿಸುವುದಕ್ಕೆ ವಾಯುಸಾರಿಗೆ ಎಂದು ಹೆಸರು.

ವಾಯುಸಾರಿಗೆಯು ಅತ್ಯಂತ ವೇಗದ ಮತ್ತು ದುಬಾರಿ ವೆಚ್ಚದ ಸಾರಿಗೆ ಮೂಲವಾಗಿದ್ದು, ಇದರಲ್ಲಿ

ಬೃಹತ್ ಪ್ರಮಾಣದ ಮತ್ತು ಭಾರವಾದ ಸರಕುಗಳ ಸಾಗಾಟ ಅಸಾಧ್ಯ. ವಾಯುಸಾರಿಗೆಯಲ್ಲಿ

ಎರಡು ಪ್ರಕಾರಗಳಿವೆ,

a)ಅಂತರರಾಷ್ಟ್ರೀಯ ವಾಯುಸಾರಿಗೆ:- ಭಾರತದಲ್ಲಿರುವ ಪ್ರಮುಖ ಅಂತರರಾಷ್ಟ್ರೀಯ ವಿಮಾನ

ನಿಲ್ದಾಣಗಳೆಂದರೆ ದೆಹಲಿ, ಮುಂಬಯಿ, ಕೋಲ್ಕತಾ, ಅಮೃತಸರ, ಚೆನೈ ಇದಲ್ಲದೆ ದೇಶದಲ್ಲಿ 90

ಕ್ಕಿಂತಲೂ ಅಧಿಕ ವಿಮಾನಾಂಗಣಗಳಿವೆ.

b)ಆಂತರಿಕ ವಾಯುಸಾರಿಗೆ:- ಆಂತರಿಕ ವಾಯು ಸೇವೆಯನ್ನು ಇಂಡಿಯನ್ ಏರ್ ಲೈನ್ಸ್

ಖಾಸಗಿಯವರು ಒದಗಿಸುತ್ತಿದ್ದಾರೆ. ಅಂತರರಾಷ್ಟ್ರೀಯ ವಾಯು ಸೇವೆಯನ್ನು ಏರ್ ಇಂಡಿಯಾ

ಮತ್ತು ಇಂಡಿಯನ್ ಏರ್ ಲೈನ್ಸ್ ಮತ್ತು ಇತರೆ ಖಾಸಗಿ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು

ಒದಗಿಸುತ್ತಿವೆ.

8
3. ಸಂಪರ್ಕ ವ್ಯವಸ್ಥೆ(Communication)-

ಸುದ್ದಿ ಮಾಹಿತಿಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ/ಒಂದು ಪ್ರದೇಶದಿಂದ ಇನ್ನೊಂದು

ಪ್ರದೇಶಕ್ಕೆ ರವಾನಿಸುವ ವ್ಯವಸ್ಥೆಯನ್ನು ಸಂಪರ್ಕ ವ್ಯವಸ್ಥೆ ಎಂದು ಕರೆಯುತ್ತೇವೆ. ಸಂಪರ್ಕ

ವ್ಯವಸ್ಥೆಯು ಬೇರೆ ಬೇರೆ ರಾಷ್ಟ್ರಗಳ ನಡುವೆ ಅಭಿಪ್ರಾಯ , ಮಾಹಿತಿಗಳ ವಿನಿಮಯಕ್ಕೆ

ಸಹಕಾರಿಯಾಗಿದೆ.

*ದೂರಸಂಪರ್ಕ ಸಾಧನಗಳ ರಚನೆ:

ಪ್ರಾಚೀನ ಕಾಲದಲ್ಲಿ ಕುದುರೆ, ಒಂಟೆ, ಪಾರಿವಾಳ ಮೊದಲಾದ ಪ್ರಾಣಿ, ಪಕ್ಷಿಗಳನ್ನು ಸಂಪರ್ಕ

ಮಾಧ್ಯಮಗಳನ್ನಾಗಿ ಬಳಸಲಾಗುತ್ತಿದ್ದು ಪ್ರಸ್ತುತ ಅತ್ಯಾಧುನಿಕ, ವಿಸ್ಮಯಕಾರು ಸಂಪರ್ಕ

ಸಾಧನಗಳನ್ನು ಬಳಸುತ್ತಿದ್ದು ಅವುಗಳೆಂದರೆ,

1. ಅಂಚೆ ವ್ಯವಸ್ಥೆ:-

ಅಂಚೆ ವ್ಯವಸ್ಥೆಯು ಅತ್ಯಂತ ಕಡಿಮೆ ವೆಚ್ಚದ ಸಂಪರ್ಕ ವ್ಯವಸ್ಥೆಯಾಗಿದೆ. ಭಾರತದ ಅಂಚೆ

ವ್ಯವಸ್ಥೆಯು ವಿಶ್ವದ ಅತಿದೊಡ್ಡ ಅಂಚೆ ವ್ಯವಸ್ಥೆಯ ಜಾಲ ಎಂಬ ಕೀರ್ತಿಗೆ ಪಾತ್ರವಾಗಿದೆ. 1837 ರಲ್ಲಿ

ಸಾರ್ವಜನಿಕ ಸೇವೆಗೆ ಪ್ರಾರಂಭವಾದ ಅಂಚೆ ಸೇವೆಯು, 1854 ರಲ್ಲಿ ಸ್ಥಾಪನೆಯಾದ ಅಂಚೆ

ಇಲಾಖೆಯು ಅಂಚೆ ಸೇವೆಯನ್ನು ಜನಪ್ರಿಯ ಸಂಪರ್ಕ ಸಾಧನವಾಗಿ ಬೆಳೆಸುವಲ್ಲಿ

ಯಶಸ್ವಿಯಾಗಿದೆ. 1972 ರಲ್ಲಿ ಅಂಚೆ ಸೇವೆಯ ದಕ್ಷ ನಿರ್ವಹಣೆಗಾಗಿ PIN (Postal Index

Number) ಸಂಖ್ಯೆಯನ್ನು ಜಾರಿಗೆ ತರಲಾಯಿತು. ಪಿನ್ ಸಂಖ್ಯೆಯು ದೇಶದ ವಿವಿಧ ಪ್ರದೇಶ,

ರಾಜ್ಯ, ಜಿಲ್ಲೆಗಳಿಗೆ ಪ್ರತ್ಯೇಕ ಸಂಖ್ಯೆಯನ್ನು ಒದಗಿಸುವುದರಿಂದ ಪತ್ರ ರವಾನೆ ಮತ್ತು ವಿತರಣೆ

ಕಾರ್ಯವನ್ನು ಸುಗಮಗೊಳಿಸಿದೆ. 1975 ರಲ್ಲಿ ಶೀಘ್ರ ಅಂಚೆಸೇವೆಯನ್ನು ಮತ್ತು 1986 ರಲ್ಲಿ ಅತಿ

9
ವೇಗದ ಅಂಚೆ ಸೇವೆಯನ್ನು ಪ್ರಾರಂಭಿಸುವ ಮೂಲಕ ಅಂಚೆ ಸೇವೆಯನ್ನು

ಆಧುನೀಕರಣಗೊಳಿಸಲಾಗಿದೆ.

2. ತಂತಿಸೇವೆ:-

ಭಾರತದಲ್ಲಿ 1851 ರಲ್ಲಿ ಕೊಲ್ಕತ ಮತ್ತು ಡೈಮಂಡ್ ಹರ್ಬರ್ ಗಳ ನಡುವೆ ಮೊದಲ

ತಂತಿಸೇವೆ ಪ್ರಾರಂಭಿಸುವ ಮೂಲಕ ಜಗತ್ತಿನ ಅತ್ಯಂತ ಹಳೆಯ ಸಾರ್ವಜನಿಕ ಸೇವಾಸಂಸ್ಥೆ ಎಂಬ

ಹೆಗ್ಗಳಿಕೆಗೆ ಪಾತ್ರವಾಗಿದೆ. 1951 ರಲ್ಲಿ ಕೇವಲ 8200 ತಂತಿ ಕಛೇರಿಗಳಿದ್ದು ಪ್ರಸ್ತುತ 45000 ತಂತಿ

ಕಛೇರಿಗಳ ಕಾರ್ಯನಿರ್ವಹಿಸುತ್ತಿವೆ. ಭಾರತದಲ್ಲಿ 1969 ರಲ್ಲಿ ಪ್ರಾರಂಭಿಸಲಾದ ಫೆಸಿಮೈಲ್

ಸೇವೆಯ ಮೂಲಕ ಏಕಕಾಲದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ದಿನ ಪತ್ರಿಕೆಗಳನ್ನು

ಮುದ್ರಿಸಬಹುದಾಗಿದೆ.

3. ದೂರವಾಣಿ ಸೇವೆಗಳು :-

ಬೇರೆ ಬೇರೆ ಪ್ರದೇಶಗಳಲ್ಲಿರುವ ಜನರ ನಡುವೆ ನೇರ ಸಂಭಾಷಣೆಗೆ ಲಭ್ಯವಿರುವ ಸಂಪರ್ಕ

ವ್ಯವಸ್ಥೆಯನ್ನು ದೂರವಾಣಿ ಸೇವೆ ಎಂದು ಕರೆಯುತ್ತೇವೆ. ಭಾರತದಲ್ಲಿ ಅಂಚೆ ಮತ್ತು ತಂತಿ

ಇಲಾಖೆಯು 1981 ರಲ್ಲಿ ಮೊದಲ ಬಾರಿಗೆ ದೂರವಾಣಿ ಸೌಲಭ್ಯವನ್ನು ಒದಗಿಸಿತು.

4. ಫ್ಯಾಕ್ಸ್:-

ಫ್ಯಾಕ್ಸ್ ಒಂದು ಯಂತ್ರವಾಗಿದ್ದು ಮುದ್ರಿತ ಮಾಹಿತಿಯ ನಕಲು ಪ್ರತಿಯನ್ನು ಕ್ಷಣ ಮಾತ್ರದಲ್ಲಿ

ಜಗತ್ತಿನ ಯಾವುದೇ ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ರವಾನಿಸುವ ಸಂಪರ್ಕ ವ್ಯವಸ್ಥೆಯನ್ನು

ಫ್ಯಾಕ್ಸ್ ಎಂದು ಕರೆಯುತ್ತೇವೆ. ಫ್ಯಾಕ್ಸ್ ಸೌಲಭ್ಯವು ರಹಸ್ಯವಾಗಿ ಮತ್ತು ಶೀಘ್ರವಾಗಿ ರವಾನಿಸಲು

ಸಹಕಾರಿಯಾಗಿದೆ.

10
5. ಅಂತರ್ಜಾಲ:-

ಜಗತ್ತಿನ ಗಣಕ ಯಂತ್ರಗಳ ನಡುವೆ ಪರಸ್ಪರ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನು

ಅಂತರ್ಜಾಲ ಎಂದು ಕರೆಯುತ್ತೇವೆ. ಗಣಕ ಯಂತ್ರಗಳ ಜಾಲದೊಂದಿಗೆ ಜಗತ್ತಿನ ಮಿಲಿಯಾಂತರ

ಜನರ ನಡುವೆ ಸಂಪರ್ಕವನ್ನುಂಟು ಮಾಡುತ್ತದೆ. ಆಧುನಿಕ ಜಗತ್ತಿನಲ್ಲಿ ಸಾವಿರಾರು

ವಿಶ್ವವಿದ್ಯಾನಿಲಯಗಳು, ಸರ್ಕಾರಿ ಇಲಾಖೆ, ಕಛೇರಿಗಳು, ಖಾಸಗಿ ಉದ್ಯಮ ಸಂಸ್ಥೆಗಳು, ವ್ಯಾಪಾರ

ಸಂಸ್ಥೆಗಳು, ಅಂತರ್ಜಾಲ ನೆರವಿನೊಂದಿಗೆ ತಮ್ಮ ಕಾರ್ಯಸಾಧನೆಯಲ್ಲಿ ತೊಡಗಿವೆ.

11
ಉಪಸಂಹಾರ:

ಆರ್ಥಿಕ ಮೂಲ ಸೌಲಭ್ಯವು ಆರ್ಥಿಕ ಅಭಿವೃದ್ಧಿಯ ಜೀವಾಳವೆಂದು ಪರಿಗಣಿಸಲಾಗಿದೆ. ಆರ್ಥಿಕ

ವ್ಯವಸ್ಥೆಯ ಸುಗಮ ಕಾರ್ಯಚರಣೆಗೆ ಮತ್ತು ಆರ್ಥಿಕ ಪ್ರಗತಿಗೆ ಅಗತ್ಯವಾದ ಎಲ್ಲಾ ರೀತಿಯ

ಅವಶ್ಯಕತೆಗಳನ್ನು ಮೂಲ ಸೌಲಭ್ಯ/ಮೂಲ ಸೌಕರ್ಯಗಳು ಎಂದು ಕರೆಯುತ್ತೇವೆ. ಜನಜೀವನ

ಸಕ್ರೀಯವಾಗಿ ಕಾರ್ಯಾಚರಣೆಯಲ್ಲಿ ತೊಡಗಲು ಮೂಲ ಸೌಕರ್ಯವು ಬುನಾದಿಯಾಗಿ

ಕಾರ್ಯನಿರ್ವಹಿಸುತ್ತದೆ. ಆರ್ಥಿಕ ಅಭಿವೃದ್ಧಿಗೆ ನೇರವಾಗಿ ಕೊಡುಗೆ ನೀಡುವ ಮೂಲ

ಸೌಲಭ್ಯಗಳನ್ನು ಆರ್ಥಿಕ ಮೂಲ ಸೌಕರ್ಯ/ ಭೌತಿಕ ಮೂಲ ಸೌಕರ್ಯಗಳೆಂದು ಕರೆಯಲಾಗಿದ್ದು

ಭೌತಿಕ ಮೂಲಸೌಕರ್ಯದ ಬಗ್ಗೆ ಈ ಮೇಲಿನಂತೆ ವಿವರಿಸಲಾಗಿದೆ.

ಗ್ರಂಥಋಣ :

 ಅರ್ಥಶಾಸ್ತ್ರ - ಆನಂದ್ ಕುಮಾರ್ ಕೆ.

 ಭಾರತದ ಆರ್ಥಿಕ ವ್ಯವಸ್ಥೆ - ಎಚ್ಚಾರ್ಕೆ.

12

You might also like