Download as docx, pdf, or txt
Download as docx, pdf, or txt
You are on page 1of 15

ಕುಲಶೇಖರ ಆೞ್ವಾರ್ ತಿರುವಡಿಹಳೇ ಶರಣಂ

ಮುಕುಂದಮಾಲಾ

1. ವಂದಿಪೆನು ಶಿರಬಾಗಿ ಅನುದಿನವು ರಂಗಯಾತ್ರೆ

ಘೋಷಿಸುವ ನಗರದಧಿಪತಿ ಕುಲಶೇಖರಗೆ

2. ಹೇ ಮುಕುಂದನೇ! ಲಕ್ಷ್ಮೀವಲ್ಲ ಭ! ವರಪ್ರದ!

ದಯಾಪರ! ಭಕ್ತಪ್ರಿಯ! ಸಂಸಾರದು:ಖನಾಶಕ

ಜಗನ್ನಾಥ! ಶೇಷಶಯನ! ಜಗನ್ನಿವಾಸ ಎಂಬೆಲ್ಲ

ನಿನ್ನ ವೈಭವ ನಾಮ ಸ್ಮ ರಣೆಯಲಿ ಸಲಹೆನ್ನ ನು

3. ಜಯವಿಜಯವು ದೇವಕಿಯ ದೈವೀಕ ಕಣ್ಮ ಣಿಗೆ

ಜಯವಿಜಯವು ಯದುವಂಶದ ಜ್ಯೊ ತಿ ಕೃಷ್ಣ ನಿಗೆ

ಜಯವಿಜಯವು ಆ ಮೇಘಶ್ಯಾಮಲ ಸುಂದರನಿಗೆ

ಜಯವಿಜಯವು ಭೂಭಾರನಾಶಕ ಮುಕುಂದನಿಗೆ

4. ಎಲೈ ಮುಕುಂದನೇ! ನಿನ್ನ ಪಾದಕೆರಗಿ ಯಾಚಿಸುವೆ

ನಿನ್ನ ಲಿದು ಹಾಗೂ ಇದೊಂದೇ ಮಹದೈಶ್ವ ರ್ಯವನು

1
ಜನುಮಜನುಮಾಂತರದಿ ನಿನ್ನ ಪಾದಾರವಿಂದಗಳಲಿ

ಸ್ಮ ರಣೆಯು ನಿನ್ನ ನುಗ್ರಹದಿ ಎನಗೆ ಮರೆಯದಿರಲಿ

5. ಹರಿನಿನ್ನ ಪಾದಯುಗಳವು ಮೋಕ್ಷಹೇತುವೆಂದು ಪೂಜಿಸೆನು ನಾನು

ಭಯಂಕರ ನರಕದಿ ಕುಂಭೀಪಾಕ ತಪ್ಪಿಸಲು

ಪೂಜಿಸೆನು ನಾನು

ಮೃದುಲತೆಯಂತಿಹ ಅಪ್ಸ ರೆಯರೊಡನಾಟಕೂ

ಪೂಜಿಸೆನು ನಾನು

ಆದರೆನ್ನ ಜನ್ಮ ಜನ್ಮ ಕೂ ಹೃದಯದೇಗುಲದಿ ನಿನ್ನ

ಭಜಿಸಲು

6. ಎಲೈ ನರಕಾಂತಕನೆ! ಭುವಿಯೊಳಾಗಲಿ ಬಾನಲಾಗಲಿ

ನರಕದಲೇ ಆಗಲಿ ನನ ಜೀವವಿರಲು ಸಂತಸದಲಿ

ಶರತ್ಕಾಲದಿ ವಿಕಸಿಸುವ ತಾವರೆಗೆ ಮಿಗಿಲಾದ ನಿನ್ನ

ಪಾದಯುಗಳವನು ಸ್ಮ ರಿಸುವೆನು ನಾ ಅಂತ್ಯ ಕಾಲದಲೂ

7. ಓ ಕೃಷ್ಣ ! ನಿನ್ನ ಚರಣಕಮಲ ಪಂಜರದೊಳು

ನನ್ನ ರಾಜಹಂಸದ ಮನಸು ಪ್ರವೇಶಿಸಲೀಗಲೇ

ದೇಹಾಂತ್ಯ ಕಾಲದಿ ಕಫವಾತಪಿತ್ತಗಳು ಉಸಿರ

ಅಡಗಿಸಲು ಸಾಧ್ಯ ವಾದೀತು ಹೇಗೆ ನಿನ್ನ ಸ್ಮ ರಣೆ


2
8. ಅನುಗಾಲವೂ ಆ ಹರಿಯನೇ ಸ್ಮ ರಿಸುವೆನು

ವಿಕಸಿತ ಕಮಲ ಮಂದಹಾಸದವನವನು

ನಂದಗೋಪಸುತ ಆ ಪರಮಪುರುಷನು

ನಾರದಾದಿ ಮುನಿಗಳಿಂದ ಸೇವಿಪನು

9. ಕಮಲದಂತಹ ಕರಚರಣಗಳ ಹೊಳೆವ ಮೀನನೇತ್ರಗಳ ಕಾಂತಿಯುಳ್ಳ

ಚೇತೋಹಾರಿ ತರಂಗಗಳಂತಹ ಬಾಹುಗಳ

ವಿಶಾಲಮಯ ಮಾರ್ಗವುಳ್ಳ

ಹರಿಸರೋವರದಲ್ಲಿಳಿದು ಹರಿತೇಜಸ್ಸೆಂಬ

ಶೀತಲಜಲಪಾನದಿ

ಪರಿಹರಿಸಿಕೊಳ್ಳು ವೆನು ಸಂಸಾರಬಂಧನದಲಿ

ಬೆಂದಾದ ತಾಪವನು ||೯||

10. ಮನಸೇ ಸರಸಿಜಾಕ್ಷ ಶಂಖಚಕ್ರಧರ

ಮುರಾರಿ ಬಾಂದವ್ಯ ವನೆಂದು ಬಿಡದಿರು ನೀ

ಹರಿಚರಣಾಮೃತಕೆ ಮೀರಿದ

ಆನಂದ ತಿಳಿದಿಲ್ಲ ಎನಗೆ ಎಂದೆಂದಿಗೂ

11. ಯಮಯಾತನೆಯು ವಿಧವಿಧದಿ ಪೀಡಿಸಲು ಚಿಂತಿಸಿ ಭಯಪಡಬೇಡ

3
ವೈರಿಗಳು ಆಗುವರು ಬಲಹೀನರು ಶ್ರೀಧರನು ನಮ್ಮ

ಸ್ವಾಮಿಯಲ್ಲ ವೆ?

ತ್ಯ ಜಿಸಿ ಆಲಸ್ಯ ವ ಭಜಿಸೆ ನಾರಾಯಣನ ಸುಲಭದಿ

ಭಕ್ತಿಮಾರ್ಗದಿ

ಲೋಕರಕ್ಷಕ ದು:ಖನಾಶಕ ದಾಸಭಕ್ತರ ಕ್ಷಮಿಸದಿರಲು

ಸಾಧ್ಯ ವೇ?||೧೧||

12. ಸಂಸಾರಸಾಗರದಿ ಮುಳುಗಿ ದ್ವಂದ್ವ ಗಳ ಬಿರುಗಾಳಿಯಲಿ ಸಿಲುಕಿ

ಮಡದಿಮಕ್ಕ ಳಾದಿಗಳೆಂಬುವರಾಶ್ರಯವ ನಂಬಿ

ಅದರಲೇ ತೊಡಗಿ

ಕಾಮಭೋಗಗಳಲಿ ಮುಳುಗಿಹ ಆಸರೆಯಿಲ್ಲ ದ ಜನರ

ವಿಷ್ಣು ವೆಂಬ ಏಕೈಕ ಆಸರೆಯು ಆಗಲೆನಗೆ

ಶ್ರೀರಕ್ಷೆ

13. ಅಗಾಧವೂ ಕ್ಲಿ ಷ್ಟ ವೂ ಆದ ಸಂಸಾರಸಾಗರವನು

ಮನಸೇ! ಕಾತುರಗೊಳ್ಳ ಬೇಡ ದಾಟುವುದು ಹೇಗೆಂದು

ಕಮಲನಯನನು ನರಕಾಂತಕನು ನಿನ್ನ ಚಲ

ಭಕ್ತಿಯಿಂದಲೇ ದಾಟಿಸುವ ಸಾಗರವ ನಿಶ್ಚ ಯವು

4
14. ಕಾಮವೆಂಬ ಬಿರುಗಾಳಿಯಲಿ ಸಿಲುಕಿ ದುರಾಸೆಯ ದಾಹದಲಿ

ಮುಳುಗಿಹ

ಮಡದಿಯೆಂಬ ಸುಂಟರಸುಳಿಯಲಿ ಸಹಜಸುತರಾದಿ

ಮೊಸಳೆಗಳಂತೆ

ತ್ರಿಲೋಕವಾಸಿಯೇ! ಸಂಸಾರವೆಂಬ

ಮಹಾಸಾಗರದಲಿ ಮುಳುಗಿಹ ನಮಗೆ

ವರಪ್ರದನೇ! ನಿನ್ನ ಪಾದಕಮಲದೆಡೆಗೆ ನೀಡೆಮಗೆ

ಭಕ್ತಿನಾವೆಯನು

15. ನಿನ್ನ ದಿವ್ಯ ಪಾದಗಳಲಿ ಭಕ್ತಿಹೀನರನು ಪುಣ್ಯ ರಹಿತರನು

ಗಮನಿಸದಂತಾಗಲಿ

ಸಂತಸದಿ ಸುಳಿವ ನಿನ್ನ ಮಹಿಮೆಯನಲ್ಲ ದೆ ಬೇರಾವ

ನುಡಿ ಕೇಳದಿರುವಂತಾಗಲಿ

ಓ ಜಗನ್ನಾಥನೇ! ಮನಸಿನಲ್ಲೂ ನಿನ್ನ

ನಿರಾಕರಿಸುವವರ ನೆನೆಯದಿರುವಂತಾಗಲಿ

ಆದರೆನಗೆ ನಿನ್ನ ಪೂಜಿಪ ಅವಕಾಶ ಜನ್ಮ ಜನ್ಮ ದಲೂ

ಇಲ್ಲ ದಿರುವಂತಾಗದಿರಲಿ

5
16. ಹಾಡು ಕೇಶವನ ನಾಲಿಗೆಯೇ! ಭಜಿಸು ಮನಸೇ! ಮುರಾರಿಯ

ಅರ್ಚಿಸಿ ಕರಯುಗಳಗಳೇ ಶ್ರೀಧರನ

ಕೇಳಿ ಕರ್ಣದ್ವ ಯಗಳೇ ಅಚ್ಯು ತನ ವೈಭವೋಪೇತ ಲೀಲೆಗಳ

ಕರ್ಣಾಮೃತ ಕಥೆಗಳನು

ಆಸ್ವಾದಿಸಿ ಕೃಷ್ಣ ಸೌಂದರ್ಯವನಕ್ಷಿಜೋಡಿಗಳೇ ನಡೆಯಿರಿ

ಅವನಾಲಯಕೆ ಪಾದಯುಗ್ಮ ಗಳೇ

ಮುಕುಂದಪಾದತುಳಸಿಯ ಘಮ ಸೇವಿಸು ನಾಸಿಕವೇ ನಮಿಸು ಶಿರವೇ

ಆ ಪರಮಪುರುಷನ

17. ಲೋಕಜನರೇ!ಕೇಳಿ! ಜನನಮರಣವ್ಯಾಧಿಗೆ

ಚಿಕಿತ್ಸೆ ಇದು

ಯೋಗಶ್ರೇಷ್ಠ ಯಾಜ್ಞ ವಲ್ಕ್ಯಾದಿ ಮುನಿಗಳ ಉಲ್ಲೇಖವಿದು

ಅಪರಿಮಿತ ಅಂತರ್ಜ್ಯೋತಿಯ ಕೃಷ್ಣ ನಾಮಾಮೃತವಿದು

ಇದ ಸೇವಿಪರು ಪಡೆವರು ಪರಮಾನಂದ

ಸೌಖ್ಯ ವನು

18. ಸಂಸಾರಸಾಗರದ ಗೊಂದಲದಿ ಮಿಂದು ಮುಳುಗಿಹ ನಿಮಗೆ

ಹೇಳುವೆನು ಕೇಳಿ! ಸಂಕ್ಷೇಪದಿ ಆದರೂ

ಪರಮಹಿತವನು

6
ಜ್ಞಾನಾಜ್ಞಾನವ ಬದಿಗಿಟ್ಟು ಪ್ರಣವಸಹಿತ ನಮೋ

ನಾರಾಯಣಾಯ

ಪವಿತ್ರ ಮಂತ್ರವ ಪ್ರಣಾಮಪೂರ್ವಕ ಜಪಿಸಿರಿ ಮತ್ತೆ

ಮತ್ತೆ

19. ನಿನ್ನ ಶಕ್ತಿ ಅಪರಿಮಿತ ಪ್ರಕಟಿಸಲು ಕಾಣುವುದು

ಭೂಮಿ ಅಣುಮಾತ್ರ ಅಗ್ನಿ ಸಣ್ಣ ಕಿಡಿಯಂತೆ

ವಾಯು ಮಂದದುಸಿರು ಆಕಾಶ ಪುಟ್ಟ ರಂಧ್ರದಂತೆ

ಬ್ರಹ್ಮ ರುದ್ರಾದಿ ದೇವತೆಗಳು ಚಿಕ್ಕ ಚಿಕ್ಕ ಜಂತುಗಳಂತೆ

||೧೯||

20. ಕೈಮುಗಿದು ತಲೆಬಾಗಿ ರೋಮಾಂಚನದಿ ನಡುಗಲು ಕಾಲು

ಅಡಗಿ ಗಂಟಲು ಸ್ವ ರ ಕಣ್ಣೀರು ಧಾರೆಯಲಿ

ಹರಿಯಲು

ನಿನ್ನ ಚರಣದ ಧ್ಯಾನಾಮೃತಾಸ್ವಾದನೆಯಿಂದ

ಜೀವಿಸಲು

ಸರಸಿಜಾಕ್ಷ! ನೀಡೆಮಗೆ ಆಶ್ರಯ ಸಂಪದವ

ಅನುಗಾಲವೂ

7
21. ಎಲೈ ಗೋಪಾಲಕನೇ ಎಲೈ ದಯಾಸಾಗರನೇ

ಎಲೈ ಲಕ್ಷ್ಮೀಪತಿಯೇ

ಕಂಸನಾಶಕನೇ ಗಜೇಂದ್ರಗೆ ಕರುಣಾಪೂರಿತನೇ ಮಾಧವನೇ

ಎಲೈ ರಾಮಾನುಜನೇ, ತ್ರಿಲೋಕನಾಯಕನೇ ಪುಂಡರಿಕಾಕ್ಷನೇ

ಗೋಪಿಯರ ದೊರೆಯೇ ಕಾಪಾಡು ನೀಎನ್ನ ನು ನಾನರಿಯೆ

ಬೇರಾರನು

22. ಗರುಡವಾಹನದಿ ಕುಳಿತು ಭಕ್ತರ ರೆಕ್ಕೆಯಲಿರಿಸಿ ಕೊಂಡೊಯ್ಯು ವ

ಗಾರುಡಮಣಿ

ತ್ರಿಲೋಕಗಳ ರಕ್ಷಾಮಣಿ ಚಾತಕಪಕ್ಷಿಯು ಮೋಡಕಾಯುವಂತಹ

ಅಂದದ ಕಣ್ಮ ಣಿ ಗೋಪಿಯರ ಮುದ್ದು ಮಣಿ ಸೊಬಗಿನ ಮಣಿ

ರಾಣಿ ರುಕ್ಮಿ ಣಿಯ ಘನಕುಚದೈಕೈಕಮಣಿ ಮಹಿಷಿಯರೊಳು

ಅವಳೇ ಕಣ್ಮ ಣಿ

ದೈವಶಿಖಾಮಣಿಯಾದ ಈ ಗೋಪಾಲಚೂಡಾಮಣಿಯು

ನೀಡಲೆಮಗೆ ಪರಮ ಶ್ರೇಯಸ್ಸ ನು

22. ಶತ್ರು ನಾಶನಕೇಕಮಂತ್ರ ಸಕಲ

ಉಪನಿಷದ್ವಾಕ್ಯ ಗಳಿಂದ ಪೂಜಿಪ ಮಂತ್ರ

8
ಸಂಸಾರಬಂಧನ ಛೇಧನಕೇಕ ಕೂಡಿರುವ ಅಜ್ಞಾನ

ನಿರ್ಮೂಲನಕೇಕ ಮಂತ್ರ

ಸಕಲೈಶ್ವ ರ್ಯ ಪ್ರಾಪ್ತಿಗೇಕ ಮಂತ್ರ ಸರ್ಪವಿಷದಂತಹ

ಸಂಸಾರಚಿಕಿತ್ಸೆಗೇಕಮಂತ್ರ

ಜನ್ಮ ಸಾಫಲ್ಯ ಕೆ ಭಜಿಸು ಮನಸೇ ಸರ್ವದಾ ಸ್ರೀಕೃಷ್ಣ ಮಂತ್ರವಾ

23. ವ್ಯಾಮೋಹ ನಿಗ್ರಹಿಸಲೌಷಧವು ಋಷಿಮುನಿಗಳ ಚಿತ್ತದ

ಧ್ಯಾನಪ್ರವೃತ್ತಿಗೆ ಸ್ಫೂ ರ್ತಿಯು

ದೈತ್ಯ ರಾಕ್ಷಸರ ಪೀಡಿತಕೆ ಔಷಧವು ತ್ರಿಲೋಕಸೌಖ್ಯ ಕಿದು

ಸಂಜೀವಿನಿಯು

ಭಕ್ತರಹಿತಕಿದು ಪರಮೌಷಧಿಯು ಭವಭಯನಾಶನಕೇಕೈಕ

ಔಷಧಿಯು

ಎಲೈ ಮನಸೇ ಸಕಲ ಸನ್ಮಂಗಳ ಪ್ರಾಪ್ತಿಗೆ ಸೇವಿಸು

ಶ್ರೀಕೃಷ್ಣ ದಿವ್ಯೌಷಧಿಯನು

25. ಹರಿಪಾದ ಸ್ಮ ರಣೆಯಿಲ್ಲ ದ ವ್ರತಾಚರಣೆಗಳು ಅರಣ್ಯ ರೋಧನದಂತೆ

ವೇದಶಾಸ್ತ್ರ ಪರಿಪಾಲನೆಯ ಫಲ ತೂಕ ಇಳಿಸುವಂತೆ

ಸಾತ್ವಿಕ ಕರ್ಮ ತ್ಯಾಗ ಸಮರ್ಪಣೆಗಳು ಬೂದಿಗೆ ತುಪ್ಪ ಸುರಿದಂತೆ

9
ದಿವ್ಯ ಸನ್ನಿಧಿಗಳ ಸ್ನಾನ ಮಾಡುವುದು ಆನೆ ಸ್ನಾನದಂತೆ

26. ಪರಮಪಾಪಿಯು ಭಜಿಸಲು ನಾರಾಯಣನ ದಿವ್ಯ ನಾಮವ

ದೊರಕಲಿಲ್ಲ ವೆ ಅವನಿಗಾಶಿಸಿದ ಫಲ

ಆದರೆ ನಾವು ಉಪಯೋಗಿಸದೆ ವಾಕ್ ಶಕ್ತಿಯ

ಅನುಭವಿಸುವೆವು ಗರ್ಭವಾಸ ದು:ಖವ

27. ಮಧುಕೈಟಬರಂತ್ಯ ಕನೇ ನನ್ನ ಜನ್ಮ ದ ಫಲವು

ನಿನ್ನ ನುಗ್ರಹದಿ ಪ್ರಾರ್ಥಿಸುವೆ ನಾ ಇದ ಮಾತ್ರವನು

ನಿನ್ನ ದಾಸಾನುದಾಸರ ದಾಸದಾಸರ ಸರಣಿಯಲಿ

ಹೇ ಲೋಕನಾಥ! ಅಂತಿಮವಾಗಿ ಬರಲಿ ನಾನಿನ್ನ ಚಿಂತೆಯಲಿ

28. ಪುರುಷೋತ್ತಮನಾದ ನಮ್ಮ ತ್ರಿಲೋಕಾಧಿಪತಿಯ ಮನದಿ

ಸೇವಿಸಲು ನೀಡುವನು

ಸಕಲೈಶ್ವ ರ್ಯವನು ತನ್ನ ನೂ ತನ್ನ ನಾರಾಯಣ ಲೋಕವನೂ

ಬದಲು ಕಿವುಡುಮೂಕರು ನಾವು ಹಲವು ಗ್ರಾಮಗಳೊಡೆಯ

ಪುರುಷಾಧಮನ

ದುರಂತವೇ! ಅಲ್ಪೈಶ್ವ ರ್ಯದಾಸೆಯಲಿ ಜಿಗಿದು ಸೇವಿಸುವೆವು.

10
29. ಮನ್ಮ ಥನೇ ತೊಲಗು ಈಗಲೆ ಮನದಿ

ನೆಲೆಸಿದೆ ಮನ ಮುಕುಂದ ಪಾದಾರವಿಂದದಲಿ

ರುದ್ರನಗ್ನಿನೇತ್ರದಗ್ನಿಯಿಂದ ನೀ ಶರೀರರಹಿತ ಈಗಲೇ

ನೆನಪಿದೆಯೋ ಮುರಾರಿಯ ಚಕ್ರಪರಾಕ್ರಮ

30. ಎಲೈ ನಾಲಿಗೆಯೇ ಜೋಡಿಸಿ ಕರಗಳ

ಫಕ್ವ ಫಲ ಎಡಬಿಡದೆ ಮಧುಸೂಸುವಂತೆ

ನಾರಾಯಣನ ನಾಮ ಮಹಿಮೆಯ ಸೂಸುವ

ನಾಮಗಳ ನುಡಿಯುತಲಿರು ಅನವರತ

31. ಶರೀರವಿದು ಆಕರ್ಷಕ ಕ್ಷೀಣಿಸುವುದು ಮುಪ್ಪ ಲಿ

ನೂರಾರು ಮೂಳೆಗಳು ಹಿಂಡುವುವು ನೋವಲಿ

ಎಲೈ ಮೂರ್ಖನೇ ಇದಕೇಕೆ ಅಲೆವೆ ಔಷಧಿಯ ಹುಡುಕುತಲಿ

ಸರ್ವರೋಗಕಮೃತವು ಅದ ಹೀರು ಕೄಷ್ಣ ರಸಾಯನದಲಿ

32. ಸಮುದ್ರರಾಜನಕುವರಿ ಆಗಿಹಳು ನಿನ್ನ ಮಹಿಷಿ

ಚತುರ್ಮುಖಬ್ರಹ್ಮ ಸುತ

11
ಕೊಂಡಾಡುವುವು ವೇದಗಳು ನಿನ್ನ ಮಹಿಮೆಯ ಸ್ಮ ರಿಸುವುವು

ದೇವಗಣ

ದೇವಕಿಯು ಮಾತೆ ಅರ್ಜುನ ಮಿತ್ರ ಜಗತ್ತೇ ನಿನ್ನ

ಮಾಯಾಲೀಲರಂಗ

ಮುಕ್ತಿಯೇ ಆಶೀರ್ವಾದ ಇದಕಾಗಿ ನಿನ್ನ ಬಿಟ್ಟು ಬೇರಾರ ನಾ

ನೆನೆಯೆನು

33. ತ್ರಿಲೋಕಗುರು ಶ್ರೀಕೃಷ್ಣ ಕಾಪಾಡಲೆಲ್ಲ ರನು

ತಲೆಬಾಗಿ ನಮಿಸಿರೆಲ್ಲ ರು ಕೃಷ್ಣ ನನ್ನು

ಸರ್ವಶತ್ರು ಗಳು ನಶಿಸಲಿ ಕೃಷ್ಣ ನಿಂದ

ನಮಿಪೆ ಆ ದೈವ ಕೃಷ್ಣ ನಿಗೆ

ಜಗದೋದ್ದಾರ ಸಾಧ್ಯ

ಶ್ರೀಕೃಷ್ಣ ನ ದೆಸೆಯಿಂದ

ಕೃಷ್ಣ ದಾಸಾನುದಾಸನು ನಾನು

ಹೇ ಕೃಷ್ಣ ಕಾಪಾಡು ನೀ ಎನ್ನ ನು

34. ಸರ್ವೇಶ್ವ ರ ನೀನು ಅನಾಥ ನಾನು

ಕರುಣೆ ತೋರೆನಗೆ

12
ಪರಮಕಾರುಣಿಕನಲ್ಲ ವೇ ಕರುಣಿಸು

ದಯೆ ಎನಗೆ

ಸಂಸಾರ ಸಾಗರದಿ ಮುಳುಗಿ ದೀನನಾಗಿಹ ನನ್ನ ನುದ್ಧ ರಿಸಲು

ಹರಿಪುರುಷೋತ್ತಮನಾದ ನೀನೆ ಆಗಿರುವೆ ಗತಿ ಎನಗೆ

35. ನಮಿಸುವೆ ನಾರಾಯಣನ ಚರಣಕಮಲಗಳ

ಮಾಡುವೆ ನಾರಾಯಣನ ಮಂಗಳ ಪೂಜೆಯ

ಹೇಳುವೆ ನಾರಾಯಣನ ನಿರ್ಮಲ ನಾಮಗಳ

ಸ್ಮ ರಿಸುವೆ ಅವ್ಯ ಯ ನಾರಾಯಣ ತತ್ವ ವ ಸರ್ವದಾ

36. ಶ್ರೀನಾಥ ನಾರಾಯಣ ವಾಸುದೇವ

ಶ್ರೀಕೃಷ್ಣ ಭಕ್ತಪ್ರಿಯ ಚಕ್ರಪಾಣೇ

ಶ್ರೀಪದ್ಮ ನಾಭಾಚ್ಯು ತ ಕೈಟಭಾರೇ

ಶ್ರೀರಾಮಪದ್ಮಾಕ್ಷ ಹರೇ ಮುರಾರೇ

37. ಅನಂತ ವೈಕುಂಠ ಮುಕುಂದ ಕೃಷ್ಣ

ಗೋವಿಂದ ದಾಮೋದರ ಮಾಧವ ಎಂದು

ಹೇಳಲೆಲ್ಲ ರು ಶಕ್ತರಾದರೂ ಹೇಳರು

ಅಯ್ಯೋ ಜನರು ದು:ಖಮಾರ್ಗದಲ್ಲಿರುವರಲ್ಲಾ

13
38. ಅವ್ಯ ಯ ಅನಂತನಾದ ವಿಷ್ಣು ವನು ಯಾರು ಧ್ಯಾನಿಸುವರೋ

ಹೃದಯ ಮಧ್ಯ ದಿ ನೆಲೆಸಿಹನ ಸರ್ವಕಾಲವು ಚಿಂತಿಸುವರೋ

ಇಂದ್ರಿಯನಿಗ್ರಹದಿ ಅನವರತ

ಸ್ಮ ರಿಸುತಲಿಹರೋ

ಪಡೆವರವರು ಮೋಕ್ಷವನು ವಿಷ್ಣು ಲೋಕಪ್ರವೇಶವನು

39. ತರಂಗಗಳ ನಡುವೆ ನಕ್ಷತ್ರಗಳಂತಿಹ

ಕ್ಷೀರಸಾಗರದಲಿ ಆದಿಶೇಷನ ಮೇಲೆ

ವಿಶ್ರಮಿಸಿ ಭೋಗಿಸುತಿಹ

ನಮಿಪೆ ಮುರಾರಿ ಶ್ರಿಯ:ಪತಿ ಮಾಧವನ

40. ಯಾರು ವೇದಶಾಸ್ತ್ರಜ್ಞ ರೂ ಕವಿದಿಗ್ಗ ಜರುಗಳಂತಿದ್ದ

ವರ ಪದ್ಮ ರೆಂಬ ವಿಪ್ರಮಿತ್ರರನು ಹೊಂದಿದ್ದ ರೋ

ಅಂಬುಜಾಕ್ಷನೆಂಬ ಕಮಲನಯನನ ಚರಣ-ಕಮಲಗಳಲಿ

ದುಂಬಿಯಂತಿದ್ದ ರೋ

ಆ ರಾಜ ಕುಲಶೇಖರನು ರಚಿಸಿದನು ಈ ಕೃತಿಯನು

ಕುಲಶೇಖರಾಳ್ವಾರ್ ತಿರುವಡಿಗಳೇ ಶರಣಂ

14
15

You might also like