Kannada Project (Shivalik) Xi

You might also like

Download as pptx, pdf, or txt
Download as pptx, pdf, or txt
You are on page 1of 18

ಜವಾಹರ ನವೋದಯ ವಿದ್ಯಾಲಯ,

ಬಾಗಲಕೋಟೆ

ಕನ್ನಡ ಕಲಾರಚಾನಾತ್ಮಕ ಕಾರ್ಯ

ವಿಷಯ:
ಕನ್ನಡ ಸಂಧಿಗಳು
ಸಂಧಿ ಎಂದರೇನು?
 ಎರಡು ವರ್ಣಗಳು (ಅಕ್ಷರಗಳು) ಕಾಲವಿಳಂಬವಿಲ್ಲ ದಂತೆ ಸೇರುವುದೇ
ಸಂಧಿಯೆನಿಸುವುದು.
(i) ಸ್ವ ರದ ಮುಂದೆ ಸ್ವ ರ ಬಂದು ಹೀಗೆ ಸಂಧಿಯಾದರೆ ಸ್ವ ರಸಂಧಿಯೆನ್ನು ತ್ತೇವೆ.
(ii) ಸ್ವ ರದ ಮುಂದೆ ವ್ಯಂಜನ ಬಂದು ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದು
ಸಂಧಿಯಾದರೆ ವ್ಯಂಜನಸಂಧಿಯೆನ್ನು ತ್ತೇವೆ.
(iii) ಹೀಗೆ ಸಂಧಿಯಾಗುವಾಗ ಹಲಕೆಲವು ವ್ಯ ತ್ಯಾಸಗಳು ಆ ಸಂಧಿಸಿದ ಅಕ್ಷರಗಳಲ್ಲಿ
ಉಂಟಾಗುವುವು. ಅವನ್ನೇ ಸಂಧಿಕಾರ‍್ಯ ಗಳು ಎನ್ನು ತ್ತೇವೆ.  ಅವುಗಳನ್ನು ಈ ಮುಂದೆ
ತಿಳಿಯೋಣ.
ಕನ್ನಡ ಸಂಧಿಗಳು
೧.ಲೋಪ ಸಂಧಿ
 ಸ್ವ ರದ ಮುಂದೆ ಸ್ವ ರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವ ರವು ಅರ್ಥವು
ಕೆಡದಿದ್ದ ಪಕ್ಷದಲ್ಲಿ ಮಾತ್ರಲೋಪವಾಗುವುದು. ಇದಕ್ಕೆ ಲೋಪಸಂಧಿಯೆಂದು ಹೆಸರು.

ಉದಾಃ
ಮಾತು + ಇಲ್ಲ = ಮಾತಿಲ್ಲ (ಉಕಾರ ಇಲ್ಲ ದಾಯಿತು)
(ಉ + ಇ)
ಆಡು + ಇಸು = ಆಡಿಸು (ಉಕಾರ ಇಲ್ಲ ದಾಯಿತು)
(ಉ + ಇ)
ಬೇರೆ + ಒಬ್ಬ = ಬೇರೊಬ್ಬ (ಎಕಾರ ಇಲ್ಲ ದಾಯಿತು)
(ಎ + ಒ)
ನಿನಗೆ + ಅಲ್ಲ ದೆ = ನಿನಗಲ್ಲ ದೆ (ಎಕಾರ ಇಲ್ಲ ದಾಯಿತು)
(ಎ + ಅ)
ನಾವು + ಎಲ್ಲಾ = ನಾವೆಲ್ಲಾ (ಉಕಾರ ಬಿಟ್ಟು ಹೋಯಿತು)
(ಉ + ಎ)
೨.ಆಗಮ ಸಂಧಿ:
ಸ್ವ ರದ ಮುಂದೆ ಸ್ವ ರವು ಬಂದಾಗ ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದ ಲ್ಲಿ ಆ ಎರಡು ಸ್ವ ರಗಳ ಮಧ್ಯ ದಲ್ಲಿ
ಯಕಾರವನ್ನೋ ಅಥವಾ ವಕಾರವನ್ನೋ ಹೊಸದಾಗಿ ಸೇರಿಸಿ ಹೇಳುತ್ತೇವೆ. ಇದಕ್ಕೆ ಆಗಮ ಸಂಧಿ ಎನ್ನು ವರು.
ಯಕಾರಾಗಮ ವಕಾರಾಗಮ ಎಲ್ಲೆಲ್ಲಿ ಬರುತ್ತವೆಂಬುದನ್ನು ತೀಳಿಯೋಣ:-

(೧) ಯಕಾರಾಗಮ ಸಂಧಿ:-
ಆ, ಇ, ಈ, ಎ, ಏ, ಐ ಗಳ ಮುಂದೆ ಸ್ವ ರ ಬಂದರೆ ಆ ಎರಡೂ ಸ್ವ ರಗಳ ಮಧ್ಯ ದಲ್ಲಿ ಯ್ ಕಾರವು ಆಗಮವಾಗುವುದು.
ಉದಾಹರಣೆಗೆ:-
[1]ಕಾ+ಅದೆ=ಕಾ+ಯ್+ಅದೆ=ಕಾಯದೆ
(ಆ+ಅ)
ಗಿರಿ+ಅನ್ನು =ಗಿರಿ+ಯ್+ಅನ್ನು =ಗಿರಿಯನ್ನು
(ಇ+ಅ)
[2]ಮೀ+ಅಲು=ಮೀ+ಯ್+ಅಲು=ಮೀಯಲು
(ಈ+ಅ)
ಕೆರೆ+ಅನ್ನು =ಕೆರೆ+ಯ್+ಅನ್ನು =ಕೆರೆಯನ್ನು
(ಎ+ಅ)
[3]ಮೇ+ಇಸು=ಮೇ+ಯ್+ಇಸು=ಮೇಯಿಸು
(೨) ವಕಾರಾಗಮ ಸಂಧಿ:-

 ಅಕಾರದ ಮುಂದೆ ಅಕಾರವೇ ಬಂದರೆ ವ್ ಕಾರಾಗಮವಾಗುವುದು. (ಪ್ರಕೃತಿ ಪ್ರತ್ಯ ಯ


ಸೇರುವಾಗ
ಮಾತ್ರಈ ಸಂಧಿಯಾಗುವುದು)

ಉದಾಹರಣೆಗೆ:-
ಹೊಲ+ಅನ್ನು =ಹೊಲ+ವ್+ಅನ್ನು =ಹೊಲವನ್ನು
ನೆಲ+ಅನ್ನು = ನೆಲ+ವ್+ಅನ್ನು =ನೆಲವನ್ನು
ಕುಲ+ಅನ್ನು =ಕುಲ+ವ್+ಅನ್ನು =ಕುಲವನ್ನು
ತಿಲ+ಅನ್ನು =ತಿಲ+ವ್+ಅನ್ನು =ತಿಲವನ್ನು
ಮನ+ಅನ್ನು =ಮನ+ವ್+ಅನ್ನು =ಮನವನ್ನು
೩.ಆದೇಶ ಸಂಧಿ:
ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ (ಸ್ಥ ಳದಲ್ಲಿ) ಬೇರೊಂದು ಅಕ್ಷರವು ಬರುವುದೇ ಆದೇಶಸಂಧಿಯೆನಿಸುವುದು

ಮೈ + ತೊಳೆ = ಮೈ + ದ್ ಒಳೆ = ಮೈದೊಳೆ

ಹುಲ್ಲು + ಕಾವಲು = *ಹುಲ್ಲು + ಗ್ ಆವಲು = ಹುಲ್ಲು ಗಾವಲು


ಕಳೆ + ಕೂಡಿ = ಕಳೆ + ಗ್ ಊಡಿ = ಕಳೆಗೂಡಿ
ಎಳೆ + ಕರು = ಎಳೆ + ಗ್ ಅರು = ಎಳೆಗರು
ಮನೆ + ಕೆಲಸ = ಮನೆ + ಗ್ ಎಲಸ = ಮನೆಗೆಲಸ
ಸಂಸ್ಕ್ರತ ಸಂಧಿಗಳು.
 ಸಂಸ್ಕೃತ ಸ್ವ ರ ಸಂಧಿಗಳು
(೧) ರಾಮಾಯಣವು ಮಹೋನ್ನ ತ ಗ್ರಂಥ.
(೨) ಸೂರ್ಯೋದಯ ಸಮಯವು ಅತ್ಯಂತ ಮನೋಹರವಾದುದು.

ಮೇಲಿನ ಈ ಎರಡೂ ವಾಕ್ಯ ಗಳು ಕನ್ನ ಡ ವಾಕ್ಯ ಗಳೇ ಅಲ್ಲ ವೆ?  ಆದರೆ ಇದರಲ್ಲಿ ಸಂಸ್ಕೃತದಿಂದ ಬಂದ ಶಬ್ದ ಗಳೇ ಹೆಚ್ಚಾಗಿವೆ. 
ರಾಮಾಯಣ  ಮಹೋನ್ನ ತ  ಗ್ರಂಥ  ಸೂರ‍್ವೋದಯ ಸಮಯ ಅತ್ಯಂತ ಮನೋಹರ -ಹೀಗೆ ಈ ಏಳೂ ಶಬ್ದ ಗಳು
ಸಂಸ್ಕೃತ ಶಬ್ದ ಗಳೇ ಆಗಿವೆ. 
ಹೀಗೆ ನಮ್ಮ ಭಾಷೆಯಲ್ಲಿ ಸಾವಿರಾರು ವರ್ಷಗಳಿಂದ ಸಂಸ್ಕೃತದ ಅನೇಕ ಶಬ್ದ ಗಳು ಬಂದು ಸೇರಿವೆ.
  ನಮ್ಮ ಕವಿಗಳು ತಮ್ಮ ಕಾವ್ಯ ಗಳಲ್ಲಿ ಲೆಕ್ಕ ವಿಲ್ಲ ದಷ್ಟು ಸಂಸ್ಕೃತ ಶಬ್ದ ಗಳನ್ನು ಸೇರಿಸಿ ಕಾವ್ಯ ಬರೆದಿದ್ದಾರೆ.
ಆದ್ದ ರಿಂದ ಸಂಸ್ಕೃತದಿಂದ ಕನ್ನ ಡಕ್ಕೆ ಬಂದು ಬಳಸಲ್ಪ ಡುತ್ತಿರುವ ಶಬ್ದ ಗಳ ಸಂಧಿಕಾರ‍್ಯ ಗಳೇನೆಂಬುದನ್ನು
ಕನ್ನ ಡ ಭಾಷಾಜ್ಞಾನದ ದೃಷ್ಟಿಯಿಂದ ತಿಳಿಯುವುದು ಉಪಯುಕ್ತವಾದುದು.
ಎರಡು ಸಂಸ್ಕೃತ ಶಬ್ದ ಗಳು ಸೇರಿ ಸಂಧಿಯಾದರೆ ಸಂಸ್ಕೃತ ಸಂಧಿಯೇ ಆಗುತ್ತದೆ. 
ಒಂದು ಸಂಸ್ಕೃತ ಶಬ್ದ ವು ಕನ್ನ ಡ ಶಬ್ದ ದೊಡನೆ ಸೇರಿ ಸಂಧಿಯಾದರೆ ಕನ್ನ ಡ ಸಂಧಿಯೇ ಆಗುತ್ತದೆ.
ಸಂಸ್ಕೃತದಲ್ಲಿ ಸ್ವ ರಕ್ಕೆ ಸ್ವ ರ ಪರವಾಗಿ ಸ್ವ ರಸಂಧಿಗಳೂ, ವ್ಯಂಜನಕ್ಕೆ ವ್ಯಂಜನ ಪರವಾಗಿ ವ್ಯಂಜನ ಸಂಧಿಗಳೂ ಆಗುವುವು.
  ಮೊದಲು ಸ್ವ ರಸಂಧಿಗಳ ವಿಚಾರ ತಿಳಿಯೋಣ.
(೧) ಸವರ್ಣ ದೀರ್ಘ ಸಂಧಿ
ಸವರ್ಣಸ್ವ ರಗಳು ಒಂದರ ಮುಂದೊಂದು ಬಂದಾಗ ಅವೆರಡರ
ಸ್ಥಾನದಲ್ಲಿಒಂದೇ ದೀರ್ಘಸ್ವ ರವು
ಆದೇಶವಾಗಿ ಬರುವುದು.
 ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.
ಮಹಾ + ಆತ್ಮಾ = ಮಹಾತ್ಮ (ಆಕಾರಕ್ಕೆ ಆಕಾರ ಪರವಾಗಿ ಒಂದು ದೀರ್ಘಸ್ವ ರ ಆದೇಶ)
(ಆ + ಆ)
ಕವಿ + ಇಂದ್ರ = ಕವೀಂದ್ರ (ಇಕಾರಕ್ಕೆ ಇಕಾರ ಪರವಾಗಿ ಈಕಾರಾದೇಶ)
(ಇ + ಇ)
ಗಿರಿ + ಈಶ = ಗಿರೀಶ (ಇಕಾರಕ್ಕೆ ಈಕಾರ ಪರವಾಗಿ ಈಕಾರಾದೇಶ)
(ಇ + ಈ)
ಲಕ್ಷೀ + ಈಶ = ಲಕ್ಷೀಶ (ಈಕಾರಕ್ಕೆ ಈಕಾರಪರವಾಗಿ ಈಕಾರಾದೇಶ)
(ಈ + ಈ)
(೨) ಗುಣಸಂಧಿ
ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಏ ಕಾರವೂ, 
ಉ ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಓ ಕಾರವೂ,
 ಋ ಕಾರ ಪರವಾದರೆ ಅವೆರಡರ ಸ್ಥಾನದಲ್ಲಿ
ಅರ್ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಗುಣಸಂಧಿ ಎಂದು ಹೆಸರು.
ಉದಾಹರಣೆಗೆ:-
ಸುರ + ಇಂದ್ರ = ಸುರೇಂದ್ರ (ಅಕಾರಕ್ಕೆ ಇಕಾರ ಪರವಾಗಿ ಏಕಾರಾದೇಶ)
(ಅ + ಇ)
ಧರಾ + ಇಂದ್ರ = ಧರೇಂದ್ರ (ಆಕಾರಕ್ಕೆ ಇಕಾರ ಪರವಾಗಿ ಏಕಾರಾದೇಶ)
(ಆ + ಇ)
ಮಹಾ + ಈಶ್ವ ರ = ಮಹೇಶ್ವ ರ (ಆಕಾರಕ್ಕೆ ಈಕಾರ ಪರವಾಗಿ ಏಕಾರಾದೇಶ)
(ಆ + ಈ)
ಚಂದ್ರ + ಉದಯ = ಚಂದ್ರೋದಯ (ಅಕಾರಕ್ಕೆ ಉಕಾರ ಪರವಾಗಿ ಓಕಾರಾದೇಶ)
(ಅ + ಉ)
ಏಕ + ಊನ = ಏಕೋನ (ಅಕಾರಕ್ಕೆ ಊಕಾರ ಪರವಾಗಿ ಓಕಾರಾದೇಶ)
(ಅ + ಊ)
(೩) ವೃದ್ಧಿ ಸಂಧಿ
 ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ, ಓ ಔ ಕಾರಗಳು ಪರವಾದರೆ
ಅವೆರಡರ ಸ್ಥಾನದಲ್ಲಿ ಔ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿ ಯೆನ್ನು ವರು.

ಉದಾಹರಣೆಗೆ:-
ಲೋಕ + ಏಕವೀರ = ಲೋಕೈಕವೀರ (ಅಕಾರಕ್ಕೆ ಏಕಾರ ಪರವಾಗಿ ಐಕಾರಾದೇಶ)
(ಅ + ಏ)
ಜನ + ಐಕ್ಯ = ಜನೈಕ್ಯ (ಅಕಾರಾಕ್ಕೆ ಐಕಾರ ಪರವಾಗಿ ಐಕಾರಾದೇಶ)
(ಅ + ಐ)
ವಿದ್ಯಾ + ಐಶ್ವ ರ‍್ಯ = ವಿದ್ಯೈಶ್ವ ರ‍್ಯ (ಆಕಾರಕ್ಕೆ ಐಕಾರ ಪರವಾಗಿ ಐಕಾರಾದೇಶ)
(ಆ + ಐ)
ಜಲ + ಓಘ = ಜಲೌಘ (ಅಕಾರಕ್ಕೆ ಓಕಾರ ಪರವಾಗಿ ಔಕಾರಾದೇಶ)
(ಅ + ಓ)
ಘನ + ಔದಾರ‍್ಯ = ಘನೌದಾರ‍್ಯ (ಅಕಾರಕ್ಕೆ ಔಕಾರ ಪರವಾಗಿ ಔಕಾರಾದೇಶ)
(ಅ + ಔ)
(೪) ಯಣ್ ಸಂಧಿ
 ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲ ದ ಸ್ವ ರ ಪರವಾದರೆ ಇ ಈ ಕಾರಗಳಿಗೆ ಯ್ ಕಾರವೂ, ಉ ಊ
ಕಾರಗಳಿಗೆ ವ್ ಕಾರವೂ, ಋ ಕಾರಕ್ಕೆ ರ್ (ರೇಫ)ವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು
ಹೆಸರು.
ಉದಾಹರಣೆಗೆ:-
ಅತಿ + ಅವಸರ = ಅತ್ಯ ವಸರ    (ಇಕಾರಕ್ಕೆ ಯ್ ಕಾರಾದೇಶ)
(ಇ + ಅ)
ಜಾತಿ + ಅತೀತ = ಜಾತ್ಯಾತೀತ  (ಇಕಾರಕ್ಕೆ ಯ್ ಕಾರಾದೇಶ)
(ಇ + ಅ)
ಕೋಟಿ + ಅಧೀಷ = ಕೋಟ್ಯ ಧೀಶ (ಇಕಾರಕ್ಕೆ ಯ್ ಕಾರಾದೇಶ)
(ಇ + ಅ)
ಗುರು + ಆಜ್ಞೆ = ಗುರ‍್ವಾಜ್ಞೆ       (ಉಕಾರಕ್ಕೆ ವ್ ಕಾರಾದೇಶ)
(ಉ + ಆ)
ಮನು + ಆದಿ = ಮನ್ವಾದಿ        (ಉಕಾರಕ್ಕೆ ವ್ ಕಾರಾದೇಶ)
(ಉ + ಆ)
ವಧೂ + ಆಭರಣ = ವಧ್ವಾಭರಣ (ಊಕಾರಕ್ಕೆ ವ್ ಕಾರಾದೇಶ)
(ಊ + ಆ)
ವಧೂ + ಅನ್ವೇಷಣ = ವಧ್ವ ನ್ವೇಷಣ (ಊಕಾರಕ್ಕೆ ವ್ ಕಾರಾದೇಶ)
(ಊ + ಅ)
 ಸಂಸ್ಕೃತ ವ್ಯಂಜನ ಸಂಧಿಗಳು

(೧) ಜಶ್ತ್ವಸಂಧಿ
 ಪೂರ್ವಶಬ್ದ ದ ಕೊನೆಯಲ್ಲಿರುವ ಕಚಟತಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ (ಎದುರಿಗೆ
ಬಂದರೂ) ಪ್ರಾಯಶಃ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು ಆದೇಶಗಳಾಗಿ ಬರುತ್ತವೆ. ಇದಕ್ಕೆ
ಜಶ್ತ್ವಸಂಧಿಯೆನ್ನು ವರು. ಪ್ರಾಯಶಃ ಎಂದು ಹೇಳಿರುವುದರಿಂದ
ಕಖ, ಚಛ, ಟಠ, ತಥ, ಪಫ, ಸ, ಷ, ಙ, ಞ, ಣ, ನ, ಮ ಅಕ್ಷರಗಳು ಪರವಾದರೆ (ಎದುರಿಗೆ ಬಂದರೆ) ಮೂರನೆಯ
ಅಕ್ಷರಗಳು ಆದೇಶವಾಗಿ ಕೆಲವು ಕಡೆ ಬರುವುದಿಲ್ಲ . ಅಂದರೆ ಜಶ್ತ್ವಸಂಧಿಯಾಗುವುದಿಲ್ಲ .

ವಾಕ್ + ದೇವಿ = ವಾಗ್‌ದೇವಿ = ವಾಗ್ದೇವಿ (ಕಕಾರಕ್ಕೆ ಗಕಾರಾದೇಶ)


ವಾಕ್ + ದಾನ = ವಾಗ್‌ದಾನ = ವಾಗ್ದಾನ (ಕಕಾರಕ್ಕೆ ಗಕಾರಾದೇಶ)
ವಾಕ್ + ಅಧಿಪ = ವಾಗ್‌ಅಧಿಪ = ವಾಗಧಿಪ (ಕಕಾರಕ್ಕೆ ಗಕಾರಾದೇಶ)
ಷಟ್ + ಆನನ = ಷಡ್‌ಆನನ = ಷಡಾನನ (ಟಕಾರಕ್ಕೆ ಡಕಾರಾದೇಶ)
ಸತ್ + ಉದ್ದೇಶ = ಸದ್‌ಉದ್ದೇಶ = ಸದುದ್ದೇಶ (ತಕಾರಕ್ಕೆ ದಕಾರಾದೇಶ)
ಅಪ್ + ಆ = ಅಬ್‌ಜ = ಅಬ್ಜ (ಪಕಾರಕ್ಕೆ ಬಕಾರಾದೇಶ)
(೨) ಶ್ಚು ತ್ವ ಸಂಧಿ
 ಸಕಾರತವರ್ಗಾಕ್ಷರಗಳಿಗೆ ಶಕಾರ ಚವರ್ಗಾಕ್ಷರಗಳು ಪರವಾದಾಗ (ಎದುರಿಗೆ ಬಂದಾಗ) ಸಕಾರಕ್ಕೆ
ಶಕಾರವೂ, ತವರ್ಗಕ್ಕೆ ಚವರ್ಗವೂ ಆದೇಶಗಳಾಗಿ ಬರುತ್ತವೆ.

ಪಯಸ್ + ಶಯನ = ಪಯಶ್ + ಶಯನ = ಪಯಶ್ಶ ಯನ


(ಸಕಾರಕ್ಕೆ ಶಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)
ಮನಸ್ + ಚಂಚಲ = ಮನಶ್ + ಚಂಚಲ = ಮನಶ್ಚಂಚಲ
(ಸಕಾರಕ್ಕೆ ಚಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)
ಮನಸ್ + ಚಾಪಲ್ಯ = ಮನಶ್ + ಚಾಪಲ್ಯ = ಮನಶ್ಚಾಪಲ್ಯ
(ಸಕಾರಕ್ಕೆ ಚಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)
ಶರತ್ + ಚಂದ್ರ   = ಶರಚ್ + ಚಂದ್ರ = ಶರಚ್ಚಂದ್ರ
(ತಕಾರಕ್ಕೆ ಚಕಾರ ಪರವಾಗಿ ತಕಾರಕ್ಕೆ ಚಕಾರಾದೇಶ)
ಜಗತ್ + ಜ್ಯೋತಿ = ಜಗಚ್ + ಜ್ಯೋತಿ = ಜಗಜ್ಜ್ಯೋತಿ
(ತಕಾರಕ್ಕೆ ಜಕಾರ ಪರವಾಗಿ ತಕಾರಕ್ಕೆ ಚಕಾರಾದೇಶ, ಅನಂತರ ಜಕಾರಾದೇಶ)
ಯಶಸ್ + ಶರೀರಿ = ಯಶಶ್ + ಶರೀರಿ = ಯಶಶ್ಶ ರೀರಿ
(೩) ಅನುನಾಸಿಕ ಸಂಧಿ
 ವರ್ಗ ಪ್ರಥಮ ವರ್ಣಗಳಿಗೆ ಯಾವ ಅನುನಾಸಿಕಾಕ್ಷರ ಪರವಾದರೂ, ಅವುಗಳಿಗೆ ಅಂದರೆ
ಕ ಚ ಟ ತ ಪ ವ್ಯಂಜನಗಳಿಗೆ ಕ್ರಮವಾಗಿ ಙ ಞ ಣ ನ ಮ ವ್ಯಂಜನಗಳು ಆದೇಶಗಳಾಗಿ
ಬರುತ್ತವೆ.
ಉದಾಹರಣೆಗೆ:-
ದಿಕ್ + ನಾಗ = ದಿಙ್ + ನಾಗ = ದಿಙ್ನಾಗ
(ಕಕಾರಕ್ಕೆ ನಕಾರ ಪರವಾಗಿ ಙಕಾರಾದೇಶ)
ಷಟ್ + ಮಾಸ = ಷಣ್ + ಮಾಸ = ಷಣ್ಮಾಸ
(ಟಕಾರಕ್ಕೆ ಮಕಾರ ಪರವಾಗಿ ಣಕಾರಾದೇಶ)
ವಾಕ್ + ಮಾಧುರ‍್ಯ = ವಾಙ್ + ಮಾಧುರ‍್ಯ = ವಾಙ್ಮಾಧುರ‍್ಯ
(ಕಕಾರಕ್ಕೆ ಮಕಾರ ಪರವಾಗಿ ಙಕಾರಾದೇಶ)
ಚಿತ್ + ಮಯ = ಚಿನ್ + ಮಯ = ಚಿನ್ಮ ಯ
(ತಕಾರಕ್ಕೆ ಮಕಾರ ಪರವಾಗಿ ನಕಾರಾದೇಶ)
ಚಿತ್ + ಮೂಲ = ಚಿನ್ + ಮೂಲ = ಚಿನ್ಮೂ ಲ
(ತಕಾರಕ್ಕೆ ಮಕಾರಪರವಾಗಿ ನಕಾರಾದೇಶ)
ಸತ್ + ಮಣಿ = ಸನ್ + ಮಣಿ = ಸನ್ಮ ಣಿ
(ತಕಾರಕ್ಕೆ ಮಕಾರ ಪರವಾಗಿ ನಕಾರಾದೇಶ)
ಇದರಂತೆ, ವಾಙ್ಮೂ ಲ, ವಾಙ್ಮಾನಸ, ಉನ್ಮಾದ, ತನ್ಮ ಯ ಇತ್ಯಾದಿ
ನಿರ್ದೇಶಕರು:
̲̲̲ಶ್ರೀ ಆನಂದ ಕಾಂಬಳೆ
ಗುರುಗಳು
ತಯಾರಕರು:
೧. ಅಭಿ ಷೇಕ.ಪಿ.ಪಿ
೨. ಭೂತಪ್ಪ.ಎಸ್‌.ಜೆ
೩. ನಾಗರಾಜ.ಎಸ್‌.ಬಿ
೪. ಪವನ.ಎಸ್‌.ಜಿ
೫. ಸಚಿನ.ಆರ್‌.ಬಿ
೬. ಸುನೀಲ.ಪಿ.ಕೆ
೭. ವಿನಾಯಕ.ಎಮ್‌.ಕೆ
೮. ಯಲ್ಲನಗೌಡ.ಎಚ್‌.ಜೆ

You might also like