Download as pptx, pdf, or txt
Download as pptx, pdf, or txt
You are on page 1of 10

KANNADA ASSIGNMENT 2

SUNEET LIONEL
DSOUZA
1HK19CS157
4C
ರಾಷ್ಟ್ರಕವಿ ಕುವೆಂಪು
ಜನನ: ಡಿಸೆಂಬರ್ ೨೯, ೧೯೦೪
ಹಿರೇಕೊಡಿಗೆ, ಕೊಪ್ಪ ತಾಲ್ಲೂ ಕು, ಚಿಕ್ಕ ಮಗಳೂರು ಜಿಲ್ಲೆ

ಕಾವ್ಯ ನಾಮ: ಕುವೆಂಪು

ವೃತ್ತಿ: ಕವಿ, ಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿ

ಕಾಲ: 20ನೆಯ ಶತಮಾನ


ಕುವೆಂಪು, ಕುಪ್ಪ ಳಿ ವೆಂಕಟಪ್ಪ ಪುಟ್ಟ ಪ್ಪ ಕನ್ನ ಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು
ಚಿಂತಕರಾಗಿದ್ದ ರು.

ಇಪ್ಪ ತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು.
ವಿಶ್ವ ಮಾನವ ಸಂದೇಶ ನೀಡಿದವರು. ಕನ್ನ ಡದ ಎರಡನೆಯ 'ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ , ಕೇಂದ್ರ ಸಾಹಿತ್ಯ
ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನ ಡಕ್ಕೆ ತಂದುಕೊಟ್ಟ ವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ
ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು.

ಪ್ರಮುಖ ಪ್ರಶಸ್ತಿಗಳು: ಜ್ಞಾನಪೀಠ ಪ್ರಶಸ್ತಿ, ಪದ್ಮ ವಿಭೂಷಣ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಪಂಪ ಪ್ರಶಸ್ತಿ

ಕುವೆಂಪು ಅವರ ಆರಂಭಿಕ ವಿದ್ಯಾಭ್ಯಾಸ ಕೂಲಿಮಠದಲ್ಲಿ ಆಯಿತು. ಮಾಧ್ಯ ಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ
ನಡೆಯಿತು. ನಂತರ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂ ಲಿನಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು. ಮೈಸೂರಿನ
ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನೂ , ಕನ್ನ ಡದಲ್ಲಿ ಎಂ. ಎ. ಪದವಿಯನ್ನೂ ಪಡೆದರು. ಟಿ. ಎಸ್.
ವೆಂಕಣ್ಣ ಯ್ಯ ನವರು ಇವರಿಗೆ ಗುರುಗಳಾಗಿದ್ದ ರು.
ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆಗಿದ್ದ ರು. ನಂತರ ಉಪಕುಲಪತಿಗಳಾದರು ತಮ್ಮ
ಕಲ್ಪ ನೆಯ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದರು. ವಿಶ್ವ ವಿದ್ಯಾನಿಲಯವನ್ನು ಅಧ್ಯ ಯನಾಂಗ, ಸಂಶೋಧನಾಂಗ ಹಾಗೂ
ಪ್ರಸಾರಾಂಗ ಎಂಬುದಾಗಿ ವಿಭಾಗಿಸಿದರು. ಕಡಿಮೆ ಅವಧಿಯಲ್ಲಿ ಕನ್ನ ಡದಲ್ಲಿ ಪಠ್ಯ ಪುಸ್ತಕಗಳನ್ನು ಬರೆಸಿ ಕನ್ನ ಡ ಮಾಧ್ಯ ಮದ ತರಗತಿಗಳನ್ನು
ಆರಂಭಿಸಿದರು.

ಕುವೆಂಪು ಅವರು 20ನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ಅವರೊಬ್ಬ ರಸಋಷಿ. ತಮ್ಮ ಮೇರು ಕೃತಿ 'ಶ್ರೀ ರಾಮಾಯಣ ದರ್ಶನಂ'ನಲ್ಲಿ ಈ ಕಾಲಕ್ಕೆ
ಅಗತ್ಯ ವಾದ ದರ್ಶನವನ್ನು ನೀಡಿದ್ದಾರೆ. ಅವರ ಎರಡು ಬೃಹತ್ ಕಾದಂಬರಿಗಳಾದ 'ಕಾನೂರು ಹೆಗ್ಗ ಡತಿ' ಹಾಗೂ 'ಮಲೆಗಳಲ್ಲಿ ಮದುಮಗಳು'
ಅವರನ್ನು ಜಗತ್ತಿನ ಮಹಾನ್ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲು ವಂತೆ ಮಾಡಿವೆ. ಅವರ ನಾಟಕಗಳಿಗೆ ವೈಚಾರಿಕತೆಯ ಸ್ಪ ರ್ಶವಿದೆ

ವೈವಾಹಿಕ ಜೀವನ: ಕುವೆಂಪು ಅವರು ಹೇಮಾವತಿ ಅವರನ್ನು ವಿವಾಹವಾದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ,
ಇಂದುಕಲಾ ಹಾಗೂ ತಾರಿಣಿ ಅವರ ಮಕ್ಕ ಳು. ಪೂರ್ಣಚಂದ್ರ ತೇಜಸ್ವಿ ಅವರು ಕನ್ನ ಡದ ಅಗ್ರಮಾನ್ಯ ಸಾಹಿತಿಗಳಲ್ಲಿ
ಒಬ್ಬ ರಾಗಿದ್ದಾರೆ. ಕೋಕಿಲೋದಯ ಚೈತ್ರಅವರು ಇಂಜಿನಿಯರ್ ಆಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ.
ಚಿದಾನಂದಗೌಡ ಅವರು ಕುವೆಂಪು ಅವರ ಅಳಿಯ.
ಮಹಾಕಾವ್ಯ : ಶ್ರೀ ರಾಮಾಯಣ ದರ್ಶನಂ

"ಶ್ರೀ ರಾಮಾಯಣ ದರ್ಶನಂ"ವು ಮಹಾಕಾವ್ಯ ವಾದ ರಾಮಾಯಣವನ್ನು ಆಧರಿಸಿ ಕುವೆಂಪುರವರು ರಚಿಸಿದ ಆಧುನಿಕ ಕನ್ನ ಡ ಸಾಹಿತ್ಯ ದ ಮೇರು
ಕೃತಿಯಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ೧೯೬೮ ರಲ್ಲಿ 'ಜ್ಞಾನಪೀಠ ಪ್ರಶಸ್ತಿ'ಯನ್ನು ಕುವೆಂಪುರವರಿಗೆ ತಂದೊದಗಿಸಿದೆ.

ವಾಲ್ಮೀಕಿಯ ಕಥಾ ಹಂದರದ ಮೇಲೆ ಸರ್ವೋದಯ ಸಮನ್ವ ಯ ತತ್ವ ಗಳನ್ನು ಪ್ರತಿಪಾದಿಸಿ ರಚಿತವಾದ ಈ ಕೃತಿ ’ಕುವೆಂಪುವ ಸೃಜಿಸಿದ’ ಮಹಾಕೃತಿಯೂ
ಹೌದು. 'ಬಹಿರ್ಘಟನೆಯಂ ಪ್ರತಿಕೃತಿಸುವ ಲೌಕಿಕ ಚರಿತ್ರೆ ಮಾತ್ರವಲ್ಲ ದೆ, ಅಲೌಕಿಕ ನಿತ್ಯ ಸತ್ಯಂಗಳಂ ಪ್ರತಿಮಿಸುವ ಸತ್ಯ ಸ್ಯ ಸತ್ಯ ಕಥನ’ವೂ ಹೌದು. ಸುಮಾರು
ಒಂಭತ್ತು ವರ್ಷಗಳ ಸುದೀರ್ಘ ಕಾಲಾವಧಿಯಲ್ಲಿ ಈ ಕಾವ್ಯ ರಚಿತವಾಗಿದೆ. 1949ರಲ್ಲಿ ಮೊದಲ ಭಾಗ ಮತ್ತು 1951ರಲ್ಲಿ ಎರಡನೆಯ ಭಾಗ
ಪ್ರಕಟವಾದವು. ನಂತರ, ಎರಡೂ ಭಾಗಗಳನ್ನು ಸೇರಿಸಿ ಒಂದೇ ಗ್ರಂಥವನ್ನಾಗಿಸಿ ಪ್ರಕಟಿಸಲಾಯಿತು. ಇದುವರೆಗೆ ಸುಮಾರು 20ಕ್ಕು ಹೆಚ್ಚಿನ
ಮರುಮುದ್ರಣಗಳಾಗಿವೆ. ಕಾವ್ಯ ದ ವಾಚನ, ವ್ಯಾಖ್ಯಾನಗಳಿಗೆ ಸಂಬಂದಿಸಿದಂತೆ ಹಲವಾರು ಧ್ವ ನಿಮುದ್ರಿಕೆಗಳು ಹೊರಬಂದಿವೆ. ಸಂಸ್ಕೃತ, ಇಂಗ್ಲಿಷ್‌ಮತ್ತು
ಹಿಂದಿ ಭಾಷೆಗಳಿಗೆ ಅನುವಾದಗೊಂಡು ಸಹೃದಯ ಓದುಗರನ್ನು ಸಂಪಾದಿಸಿದೆ. ಕನ್ನ ಡಕ್ಕೆ ಮೊದಲ ಜ್ಞಾನಪೀಠ ಪುರಸ್ಕಾರವನ್ನೂ , ಕೇಂದ್ರ ಸಾಹಿತ್ಯ
ಅಕಾಡೆಮಿಯ ಸಾಹಿತ್ಯ ಪುರಸ್ಕಾರವನ್ನೂ ಒದಗಿಸಿಕೊಟ್ಟ ಕೃತಿರತ್ನ ವೂ ಇದಾಗಿದೆ. ಮಹಾಕಾವ್ಯ ದ ನಡೆಗೆ ಅನ್ವ ಯವಾಗುವಂತೆ ಸರಳರಗಳೆಯನ್ನು ಪುನರ್
ರೂಪಿಸಿಕೊಂಡ ಮಹಾಛಂದಸ್ಸಿನಲ್ಲಿ ರಚಿತವಾಗಿದೆ. ಲಲಿತ ರಗಳೆಯ ಬಂಧದಲ್ಲಿ ಅಂತ್ಯ ಪ್ರಾಸವನ್ನು ತ್ಯ ಜಿಸಿ ಸರಳ ರಗಳೆಯಾಗಿ ಪರಿವರ್ತಿಸಿ
ಮಹಾಛಂದಸ್ಸ ನ್ನು ಕವಿ ನಿರ್ಮಿಸಿಕೊಂಡಿದ್ದಾರೆ. ಕಾವ್ಯ ದ ನಡೆಗೆ ಹಲವಾರು ಮಹೋಪಮೆಗಳನ್ನೂ ಕವಿ ಬಳಸಿದ್ದಾರೆ. ಹೀಗೆ, ಪ್ರಸ್ತು ತಿ, ಛಂದಸ್ಸು ,
ಅಲಂಕಾರ, ಯುಗ ಧರ್ಮ ಹೀಗೆ ಎಲ್ಲಾ ವಿಷಯಗಳಲ್ಲೂ ಇದೊಂದು ಆಚಾರ್ಯ ಕೃತಿಯೆನಿಸಿದೆ. ಅಯೋಧ್ಯಾ ಸಂಪುಟಂ, ಕಿಷ್ಕಿಂಧಾ ಸಂಪುಟಂ,
ಲಂಕಾ ಸಂಪುಟಂ ಮತ್ತು ಶ್ರೀ ಸಂಪುಟಂ ಎಂಬ ನಾಲ್ಕು ಸಂಪುಟಗಳ ಅಡಿಯಲ್ಲಿ ವಿಸ್ತರಿಸಿರುವ, ಒಟ್ಟು ಐವತ್ತು ಸಂಚಿಕೆಗಳಲ್ಲಿ, ಒಟ್ಟು ೨೨೨೯೧ ಸಾಲುಗಳ
ಮಹಾಕಾವ್ಯ ಅಡಕವಾಗಿದೆ. ಕೃತಿಯ ಆರಂಭದಲ್ಲೇ, ಕವಿಯು ತಮ್ಮ ನೆಚ್ಚಿನ ಗುರುಗಳಾದ ಶ್ರೀ ವೆಂಕಣ್ಣ ಯ್ಯ ನವರಿಗೆ ಕಾವ್ಯ ವನ್ನು ಅರ್ಪಣೆ ಮಾಡಿದ್ದಾರೆ
ಕಾದಂಬರಿ: ಕಾನೂರು ಹೆಗ್ಗ ಡತಿ

ಕಾನೂರು ಹೆಗ್ಗ ಡಿತಿ ಕುವೆಂಪುರವರು ಬರೆದ ಎರಡು ಕಾದಂಬರಿಗಳಲ್ಲಿ ಮೊದಲನೇಯದು. ಈ ಕಾದಂಬರಿಯು ೧೯೩೬ರಲ್ಲಿ ಪ್ರಥಮ ಬಾರಿಗೆ
ಪ್ರದರ್ಶನ ಕಂಡಿತು. ಮತ್ತೊಬ್ಬ ಕನ್ನ ಡದ ಜ್ನಾ ನಪೀಠ ಪ್ರಶಸ್ಥಿ ಪುರಸ್ಕೃತ ಕವಿ, ನಾಟಕಕಾರ {ಗಿರೀಶ್ ಕಾರ್ನಾಡ್} ರವರು ಈ
ಕಾದಂಬರಿಯನ್ನಾಧರಿಸಿ "ಕಾನೂರು ಹೆಗ್ಗ ಡಿತಿ" ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಾದಂಬರಿಯಲ್ಲಿ ೧೮ ನೇ ಶತಮಾನದ ಮಲೆನಾಡಿನ
ಜನಜೀವನ ರಸವತ್ತಾಗಿ ನಿರೂಪಿತವಾಗಿದೆ.
 ಕೊಳಲು (1930)
ಕವನ ಸಂಕಲನಗಳು  ಪಾಂಚಜನ್ಯ (1933)
 ನವಿಲು (1934)
 ಕಲಾಸುಂದರಿ (1934)
 ಕಥನ ಕವನಗಳು (1937)
 ಕೋಗಿಲೆ ಮತ್ತು ಸೋವಿಯಟ್ ರಷ್ಯಾ (1944)
 ಪ್ರೇಮ ಕಾಶ್ಮೀರ (1946)
 ಅಗ್ನಿಹಂಸ (1946)
 ಕೃತ್ತಿಕೆ (1946)
 ಪಕ್ಷಿಕಾಶಿ (1946)
 ಕಿಂಕಿಣಿ (ವಚನ ಸಂಕಲನ) (1946)
 ಷೋಡಶಿ (1946)
 ಚಂದ್ರಮಂಚಕೆ ಬಾ ಚಕೋರಿ (1957)
 ಇಕ್ಷು ಗಂಗೋತ್ರಿ (1957)
 ಅನಿಕೇತನ (1963)
 ಜೇನಾಗುವ (1964)
 ಅನುತ್ತರಾ (1965)
ಕಥಾ ಸಂಕಲನ  ಸಂನ್ಯಾಸಿ ಮತ್ತು ಇತರ ಕಥೆಗಳು (1936)
 ನನ್ನ ದೇವರು ಮತ್ತು ಇತರ ಕಥೆಗಳು (1940)

ನಾಟಕಗಳು:  ಯಮನ ಸೋಲು (1928)


 ಜಲಗಾರ (1928)
 ಬಿರುಗಾಳಿ (1930)
 ವಾಲ್ಮೀಕಿಯ ಭಾಗ್ಯ (1931)
 ಮಹಾರಾತ್ರಿ (1931)
 ಸ್ಶ ಶಾನ ಕುರುಕ್ಷೇತ್ರಂ (1931)
 ರಕ್ತಾಕ್ಷಿ (1933)
 ಶೂದ್ರ ತಪಸ್ವಿ (1944)
 ಬೆರಳ್‍ಗೆ ಕೊರಳ್ (1947)

ಆತ್ಮ ಕಥೆ: ನೆನಪಿನ ದೋಣಿಯಲ್ಲಿ: ಕುವೆಂಪು ಮದುವೆ ಪ್ರಸಂಗ

ಜೀವನ ಚರಿತ್ರೆಗಳು: o ಸ್ವಾಮಿ ವಿವೇಕಾನಂದ


o ರಾಮಕೃಷ್ಣ ಪರಮಹಂಸ
ಕೊಡುಗೆ

 ಕುವೆಂಪು ಅವರು ಯುಗಪ್ರವರ್ತಕ ಕವಿ.


 ಕುವೆಂಪು ಅವರು 'ಶ್ರೀ ರಾಮಾಯಣ ದರ್ಶನಂ' ರಚಿಸುವ ಮೂಲಕ
ಆಧುನಿಕ ಕಾಲದಲ್ಲಿ ಮಹಾಕಾವ್ಯ ರಚನೆಗೆ ನಾಂದಿ ಹಾಡಿದರು.
 ಕುವೆಂಪು ಅವರು ತಮ್ಮ ಮೇರು ಕೃತಿ 'ಶ್ರೀ ರಾಮಾಯಣ ದರ್ಶನಂ'ನಲ್ಲಿ
ಹೊಸ ಕಾಲಕ್ಕೆ ಅಗತ್ಯ ವೆನ್ನಿಸಿದ ದರ್ಶನವನ್ನು ಕಟ್ಟಿಕೊಟ್ಟಿದ್ದಾರೆ.
 ಕುವೆಂಪು ಅವರು ವಿಶ್ವ ಮಾನವ ಸಂದೇಶ ನೀಡಿದ್ದಾರೆ.
 ಕುವೆಂಪು ಅವರು ಮಂತ್ರಮಾಂಗಲ್ಯ ಎಂಬ ಸರಳ ವಿವಾಹ ಪದ್ಧ ತಿಯನ್ನು
ರೂಢಿಗೆ ತಂದರು.
 ಕುವೆಂಪು ಅವರು ತಮ್ಮ ಕನಸಿನ ಕೂಸಾದ ಮಾನಸ ಗಂಗೋತ್ರಿಯನ್ನು
ಕಟ್ಟಿ ಬೆಳೆಸಿದ್ದಾರೆ.
 ಕುವೆಂಪು ಅವರು ದಲಿತ ಹಾಗೂ ಬಂಡಾಯ ಚಳವಳಿಗಳಿಗೆ
ಸ್ಫೂ ರ್ತಿಯಾಗಿದ್ದಾರೆ.
 1985ರಲ್ಲಿ ಮೈಸೂರಿನಲ್ಲಿ ನಡೆದ ವಿಶ್ವ ಕನ್ನ ಡ ಸಮ್ಮೇಳನವನ್ನು
ಉದ್ಘಾಟಿಸಿದರು.

ಮರಣ: ನವೆಂಬರ್ 11, 1994

You might also like